ಮಹಿಳಾ ಸಂಘಗಳಿಗೆ ಟೋಲ್‌ ನಿರ್ವಹಣೆ ಹೊಣೆ : ಸರ್ಕಾರ ನಿರ್ಧಾರ

By Kannadaprabha News  |  First Published Jul 13, 2023, 12:26 PM IST

ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮತ್ತೊಂದು ಘೋಷಣೆ ಮಾಡಿದ್ದು, ವಾರ್ಷಿಕ 2 ಕೋಟಿ ರು.ಗಿಂತ ಕಡಿಮೆ ಆದಾಯ ಗಳಿಸುವ ಟೋಲ್‌ಬೂತ್‌ಗಳ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳ ನಿರ್ವಹಣೆಗೆ ನೀಡಲು ನಿರ್ಧರಿಸಲಾಗಿದೆ.


ಭೋಪಾಲ್‌: ಚುನಾವಣೆಯ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮತ್ತೊಂದು ಘೋಷಣೆ ಮಾಡಿದ್ದು, ವಾರ್ಷಿಕ 2 ಕೋಟಿ ರು.ಗಿಂತ ಕಡಿಮೆ ಆದಾಯ ಗಳಿಸುವ ಟೋಲ್‌ಬೂತ್‌ಗಳ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳ ನಿರ್ವಹಣೆಗೆ ನೀಡಲು ನಿರ್ಧರಿಸಲಾಗಿದೆ. ಟೋಲ್‌ಬೂತ್‌ಗಳನ್ನು ಮಹಿಳೆಯರ ನಿರ್ವಹಣೆಗೆ ನೀಡುತ್ತಿರುವುದು ದೇಶದಲ್ಲೇ ಮೊದಲಾಗಿದೆ. ಇದು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರವಾಗಿದೆ. ಈ ಬೂತ್‌ಗಳಲ್ಲಿ ಸಂಗ್ರಹವಾಗುವ ಹಣದಲ್ಲಿ ಶೇ.30ರಷ್ಟನ್ನು ಸ್ವಸಹಾಯ ಸಂಘಗಳಿಗೆ ನೀಡಲಾಗುವುದು. ಮೊದಲ ಟೋಲ್‌ಬೂತ್‌ ಅನ್ನು ಈ ತಿಂಗಳಲ್ಲೇ ವಹಿಸಿಕೊಡಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ. ಅಲ್ಲದೇ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್‌ನ ಪದಾಧಿಕಾರಿಗಳಿಗೆ ನೀಡುವ ವೇತನ ಮತ್ತು ಭತ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈಗ ಬಿಜೆಪಿಯಿಂದಲೂ ಫ್ರೀ ಸ್ಕೀಂ

Tap to resize

Latest Videos

ಚುನಾವಣಾ ವರ್ಷದಲ್ಲಿ ಮಹಿಳಾ ಮತದಾರರ ಸೆಳೆಯಲು ಮುಂದಾಗಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಉಚಿತ ಕೊಡುಗೆಗಳ ಜಾರಿಗೆ ಮುಂದಾಗಿದೆ. ಇದರ ಭಾಗವಾಗಿ ತನ್ನ ಮಹತ್ವಕಾಂಕ್ಷೆಯ ಲಾಡ್ಲಿ ಬೆಹೆನಾ (ಪ್ರಿಯ ಸೋದರಿ) ಯೋಜನೆಗೆ  ಜೂನ್‌ನಲ್ಲಿಯೇ ಚಾಲನೆ ನೀಡಲಾಗಿತ್ತು. ಈ ಯೋಜನೆಯನ್ವಯ ರಾಜ್ಯದ 1.25 ಕೋಟಿ ಮಹಿಳೆಯರಿಗೆ ಮಾಸಿಕ 1000 ರೂ. ಭತ್ಯೆ ಲಭಿಸಲಿದೆ. ರಾಜ್ಯದಲ್ಲಿ 2.6 ಕೋಟಿ ಮಹಿಳಾ ಮತದಾರರಿದ್ದು, ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 18ರಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರನ್ನು ಓಲೈಸುವ ಸಲುವಾಗಿ ‘ಲಾಡ್ಲಿ ಬೆಹನಾ’ ಯೋಜನೆ ಜಾರಿಗೆ ತರಲಾಗಿದ್ದು, ಇದು 23 ರಿಂದ 60 ವರ್ಷ ವಯೋಮಾನದ ಮಹಿಳೆಯರಿಗೆ (ಆದಾಯ ತೆರಿಗೆದಾರರನ್ನು ಹಾಗೂ ವಾರ್ಷಿಕ ಆದಾಯ 2.5 ಲಕ್ಷ ರೂ. ದಾಟುವವರನ್ನು ಹೊರತುಪಡಿಸಿ) ಅನ್ವಯ ಆಗಲಿದೆ.

ಕರ್ನಾಟಕದ ಪೇಸಿಎಂ ರೀತಿ ಮಧ್ಯಪ್ರದೇಶದಲ್ಲಿ ಫೋನ್‌ಪೆ ಅಭಿಯಾನ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶೇ. 50 ಲಂಚ ಆರೋಪ

ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಗೆದ್ದರೆ ತಾನು ಹಲವು ಉಚಿತ ಯೋಜನೆಗಳು ಹಾಗೂ ಜನ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಈಗಾಗಲೇ ವಿಪಕ್ಷ ಕಾಂಗ್ರೆಸ್‌ ಕೂಡಾ ಘೋಷಿಸಿದೆ. ಇದರಲ್ಲಿ ಮಹಿಳೆಯರಿಗೆ ಮಾಸಿಕ 1500 ರೂ. ಭತ್ಯೆ, 100 ಯೂನಿಟ್‌ ಉಚಿತ ವಿದ್ಯುತ್‌, 500 ರೂ. ಗೆ ಗ್ಯಾಸ್‌ ಸಿಲಿಂಡರ್‌, ರೈತ ಸಾಲ ಮನ್ನಾ, ಹಳೇ ಪಿಂಚಣಿ ಯೋಜನೆ ಸೇರಿವೆ.

ಯೋಜನೆಯ ಹೈಲೈಟ್ಸ್‌

ವರ್ಷಾಂತ್ಯಕ್ಕೆ ಮಧ್ಯ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆವ ಹಿನ್ನೆಲೆ 
ಉಚಿತ ಯೋಜನೆ ಘೋಷಣೆ ಮಾಡಿದ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್‌
2.6 ಕೋಟಿ ಮಹಿಳಾ ಮತದಾರರ ಓಲೈಕೆಗಾಗಿ ‘ಲಾಡ್ಲಿ ಬೆಹನಾ’ ಸ್ಕೀಂ
ತೆರಿಗೆದಾರರು, ವರ್ಷಕ್ಕೆ 2.5 ಲಕ್ಷಕ್ಕಿಂತ ಹೆಚ್ಚು ಆದಾಯವುಳ್ಳವರಿಗಿಲ್ಲ 

ಕನ್ಯಾವಿವಾಹ ಯೋಜನೆ ಕಿಟ್ಟಲ್ಲಿ ಕಾಂಡೋಮ್: ಕಾಂಗ್ರೆಸ್ ಟೀಕೆಗೆ ನೆಟ್ಟಿಗರು ಗರಂ!

click me!