ಮನೆ ಕೆಲಸದ ಜೊತೆ ಇದನ್ನೂ ಮಾಡಿದ್ರೆ ಹಣ ಗಳಿಸ್ಬಹುದು ಗೃಹಣಿಯರು!

By Suvarna NewsFirst Published May 2, 2023, 1:18 PM IST
Highlights

ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿಯಾಗಿರೋದು ಬಹಳ ಮುಖ್ಯ. ಸಣ್ಣ ಪುಟ್ಟ ಖರ್ಚಿಗಾದ್ರೂ ಆಕೆ ಆದಾಯ ಗಳಿಸಬೇಕು. ಮನೆಯಲ್ಲಿ ಬಿಡುವಿನ ಸಮಯದಲ್ಲಿಯೇ ಮಾಡಬಹುದಾದ ಅನೇಕ ಉದ್ಯೋಗವಿದೆ. ಅದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ್ರೆ ಸಾಕು.
 

ವಿದ್ಯಾವಂತ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ನಾನಾ ಕಾರಣಗಳಿಂದ ಮಹಿಳೆಯರಿಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ. ಮನೆ, ಮಕ್ಕಳು, ಕುಟುಂಬ ನಿರ್ವಹಣೆ ಹೀಗೆ ಅನೇಕ ಕಾರಣಗಳಿಂದ ವಿದ್ಯಾವಂತ ಮಹಿಳೆಯರು ಮನೆಯಲ್ಲೇ ಇರುವಂತಾಗಿದೆ. ಮನೆ ಕೆಲಸ ಮುಗಿಸಿದ ನಂತ್ರ ಸಿಗುವ ಬಿಡುವಿನ ಸಮಯದಲ್ಲಿ ಏನಾದ್ರೂ ಮಾಡ್ಬೇಕು, ಸಣ್ಣ ಪ್ರಮಾಣದ ದುಡಿಮೆ ನಮಗಿರಬೇಕೆಂದು ಬಯಸುವ ಮಹಿಳೆಯರಿದ್ದಾರೆ. ಆದ್ರೆ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಅವರನ್ನು ಕಾಡುತ್ತದೆ. ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಇದ್ರೆ ಸಾಕು, ಬಿಡುವಿನ ಸಮಯದಲ್ಲಿ ನೀವೂ ದುಡಿಯಬಹುದಾದ ಅನೇಕ ಉದ್ಯೋಗವಿದೆ.

ಈಗ ಜಗತ್ತು ಡಿಜಿಟಲ್ (Digital) ಆಗಿದೆ. ಭಾರತ (India) ದಲ್ಲೂ ಬಹುತೇಕ ಕಂಪನಿಗಳು ಆನ್ಲೈನ್ ಕೆಲಸಕ್ಕೆ ಆದ್ಯತೆ ನೀಡ್ತಿವೆ. ಆನ್ಲೈನ್ (Online ) ನಲ್ಲಿ ಕಲಿಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ನೀವು ಇಂಟರ್ನೆಟ್ ಸಂಪರ್ಕ ಪಡೆದು, ಆನ್ಲೈನ್ ಮೂಲಕವೇ ಕೆಲ ಉದ್ಯೋಗ ಮಾಡಿ ಹಣ ಗಳಿಸಬಹುದು. ನಾವಿಂದು ಮನೆಯಲ್ಲಿರುವ ಮಹಿಳೆಯರು ಏನೆಲ್ಲ ಮಾಡ್ಬಹುದು ಎಂಬುದನ್ನು ಹೇಳ್ತೇವೆ.

ಅರೆ..ಇದ್ಹೇಗೆ ಸಾಧ್ಯ..ತಿಂಗಳಿಗೆ ಮೂರು ಸಾರಿ ಸತ್ತು ಬದುಕುತ್ತಾಳಂತೆ ಈ ಮಹಿಳೆ!

ಪ್ಯಾಕಿಂಗ್ ಬ್ಯುಸಿನೆಸ್ (Packing Business): ಆನ್ಲೈನ್ ಮಾರಾಟ ಹೆಚ್ಚಾಗಿದೆ. ಇ – ಕಾಮರ್ಸ್ ಕಂಪನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆನ್ಲೈನ್ ಕಂಪನಿಗಳಿಗೆ ವಸ್ತುಗಳನ್ನು ಪ್ಯಾಕಿಂಗ್ ಮಾಡಲು ಜನರ ಅಗತ್ಯವಿರುತ್ತದೆ. ಹೆಚ್ಚು ಕಲಿತಿಲ್ಲ, ಆದ್ರೆ ಕೆಲಸ ಮಾಡುವ ಆಸಕ್ತಿಯಿದೆ ಎನ್ನುವವರು ಇದನ್ನು ಸುಲಭವಾಗಿ ಮಾಡ್ಬಹುದು. ಆನ್ಲೈನ್ ನಲ್ಲಿಯೇ ಪ್ಯಾಕಿಂಗ್ ಕೆಲಸವನ್ನು ನೀವು ಹುಡುಕಬೇಕು. ನೀವು ಕಂಪನಿಗಳ ಉತ್ಪನ್ನವನ್ನು ಪ್ಯಾಕ್ ಮಾಡಿ ನೀಡಿದ್ರೆ ನಿಮ್ಮ ಕೆಲಸ ಮುಗೀತು. ಕಂಪನಿಯೇ ಉತ್ಪನ್ನ ಹಾಗೂ ಪ್ಯಾಕಿಂಗ್ ಗೆ ಅಗತ್ಯವಿರುವ ವಸ್ತುಗಳನ್ನು ನೀಡುತ್ತದೆ. ನಿಮ್ಮ ಮನೆಯಿಂದಲೇ ವಸ್ತುಗಳನ್ನು ಕೊಂಡೊಯ್ಯುತ್ತದೆ.

ಅಫಿಲಿಯೇಟ್ ಮಾರ್ಕೆಟಿಂಗ್ (Affiliate Marketing): ಮನೆಯಲ್ಲೇ ಕುಳಿತು ಇ-ಕಾಮರ್ಸ್ ಸೈಟ್‌ಗೆ ಅಫಿಲಿಯೇಟ್ ಮಾರ್ಕೆಟಿಂಗ್ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು. ಅಂಗಸಂಸ್ಥೆ ಮಾರ್ಕೆಟಿಂಗ್‌ನಲ್ಲಿ ನೀವು,  ಇ-ಕಾಮರ್ಸ್ ಸೈಟ್ ಉತ್ಪನ್ನವನ್ನು ಪ್ರಚಾರ ಮಾಡಬೇಕು. ನೀವು ಮೊದಲು ಪ್ರಚಾರದ ಲಿಂಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಕು. ಅದನ್ನು ಜನರು ಕ್ಲಿಕ್ ಮಾಡಿ, ಉತ್ಪನ್ನವನ್ನು ಖರೀದಿ ಮಾಡಿದ್ರೆ ನಿಮಗೆ ಕಮಿಷನ್ ಸಿಗುತ್ತದೆ. ನೀವು ಇ ಕಾಮರ್ಸ್ ಕಂಪನಿ ವೆಬ್ಸೈಟ್ ಗೆ ಹೋಗಿ ಅದಕ್ಕೆ ಅರ್ಜಿ ಸಲ್ಲಿಸಿ, ಕೆಲಸ ಪಡೆಯಬೇಕಾಗುತ್ತದೆ. 

ಫಾರ್ಚೂನ್ ಬ್ಯುಸಿನೆಸ್ ರಿವ್ಯೂ ಮುಖಪುಟದಲ್ಲಿ ಮಿಂಚಿದ ಕನ್ನಡತಿ; ಯಾರೀಕೆ ಶಾಂತಲಾ ಸದಾನಂದ ?

Airbnb ಹೋಸ್ಟಿಂಗ್: ನಿಮ್ಮ ಮನೆ ದೊಡ್ಡದಾಗಿದ್ದು, ಸ್ವಲ್ಪ ಜಾಗವಿದೆ ಎಂದಾದ್ರೆ ನೀವು Airbnb ಹೋಸ್ಟಿಂಗ್ ಮಾಡಬಹುದು. ನಿಮ್ಮ ಮನೆಯ ಖಾಲಿ ಜಾಗವನ್ನು ನೀವು ಬಾಡಿಗೆಗೆ ನೀಡಬೇಕಾಗುತ್ತದೆ. ಹೊಟೇಲ್ ಕೋಣೆಯಾಗಿ ಬಾಡಿಗೆಗೆ ನೀಡಬೇಕಾಗುತ್ತದೆ. ಇದಕ್ಕೆ ನೀವು Airbnb ಸೈಟ್ ಗೆ ಹೋಗಿ ಹೆಸರು ನೋಂದಾಯಿಸಬೇಕು. ನಗರಕ್ಕೆ ಬರುವ ಪ್ರವಾಸಿಗರು ನಿಮ್ಮ ಮನೆಯ ಆ ಜಾಗದಲ್ಲಿ ಉಳಿದುಕೊಳ್ಳುವುದಲ್ಲದೆ ಬಾಡಿಗೆ ಕೊಡುತ್ತಾರೆ.

ಆನ್ಲೈನ್ ಸಮಾಲೋಚನೆ (Online Counselling): ಈಗಿನ ದಿನಗಳಲ್ಲಿ ಜನರಿಗೆ ಗೊಂದಲ ಜಾಸ್ತಿ. ಯಾವ ಕೋರ್ಸ್ ಜಾಯಿನ್ ಆಗ್ಬೇಕು ಎಂಬುದರಿಂದ ಹಿಡಿದು ಯಾವ ಉದ್ಯೋಗ ಪಡೆಯಬೇಕು ಎನ್ನುವವರೆಗೆ ಎಲ್ಲ ಕಡೆ ಕನ್ಫ್ಯೂಜ್ ಇರುತ್ತದೆ. ನೀವು ಆನ್ಲೈನ್ ಮೂಲಕ ಅವರ ಸಮಸ್ಯೆ ಬಗೆಹರಿಸಬಹುದು. ಯಾವ ವ್ಯವಹಾರ ಬೆಸ್ಟ್ ಎಂಬುದು ಸೇರಿದಂತೆ ಮಾನಸಿಕ, ಕೌಟುಂಬಿಕ ಸಮಸ್ಯೆಗೆ ಸಾಂತ್ವಾನ ಹೇಳುವ ಕೆಲಸ ಮಾಡಿ ಹಣ ಗಳಿಸಬಹುದು. 

ಆನ್ಲೈನ್ ಸರ್ವೆ (Online Survey):  ಆನ್‌ಲೈನ್ ಸರ್ವೆಗೆ ಈಗ ಹೆಚ್ಚಿನ ಮಹತ್ವ ಸಿಗ್ತಿದೆ. ನೀವು ಆನ್ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ಮನೆಯಲ್ಲಿಯೇ ಕುಳಿತು ಸರ್ವೆಗಳಲ್ಲಿ ಪಾಲ್ಗೊಂಡು ಹಣ ಗಳಿಸಬಹುದು. ಹೆಚ್ಚಿನ ಕಂಪನಿಗಳು ಸಾರ್ವಜನಿಕರಿಂದ ತಮ್ಮ ಉತ್ಪನ್ನಗಳ ಪೂರ್ವವೀಕ್ಷಣೆಯನ್ನು ತೆಗೆದುಕೊಳ್ಳಲು ಬಯಸುತ್ತವೆ. ನಂತ್ರ ಅದಕ್ಕೆ ತಕ್ಕಂತೆ ಉತ್ಪನ್ನ ವಿತರಿಸಲು ಮುಂದಾಗುತ್ತವೆ. 
 

click me!