
ಮೇಕಪ್, ಫುಡ್, ಹಣ, ಶಾಪಿಂಗ್. ಇದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ ಎಂದರೆ ಬಹುಶಃ ಹೆಣ್ಣುಮಕ್ಕಳಿಗೆ ಸಾಧ್ಯವಾಗದು. ಯಾಕೆಂದರೆ, ಅವರ ಪಾಲಿಗೆ ಅವಿಷ್ಟು ವೆರಿ ಇಂಪಾರ್ಟೆಂಟ್ ಥಿಂಗ್ಸ್. ಅದರಲ್ಲೂ ಮೇಕಪ್ ಇಲ್ಲದೆ ಹುಡುಗಿಯರ ಲೈಫೇ ಇಲ್ಲ. ದಿನದ ಹೆಚ್ಚು ಸಮಯವನ್ನು ಮೇಕಪ್‌ನಲ್ಲೇ ಕಳೆಯುತ್ತಾರೆ. ಅದರಲ್ಲೂ ಆಫೀಸ್, ಪಾರ್ಟಿ, ಮದುವೆ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಇಂಥಹದ್ದೇ ಮೇಕಪ್ ಬೆಸ್ಟ್ ಅನ್ನೋದು ಬೇರೆ ಇದೆ. ಹೀಗಾಗಿ ಮೇಕಪ್ ಆರ್ಟಿಸ್ಟ್‌ಗಳಿಗೂ ಇವತ್ತಿನ ದಿನಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ಮೇಕಪ್ ಕಾಣೋದ್ರಿಂದ ವಯಸ್ಸಿನ ಅಂತರವೂ ಇಲ್ಲದೆ ಎಲ್ಲರೂ ಸುಂದರವಾಗಿ ಕಾಣುತ್ತಾರೆ ಅನ್ನೋದೇನೂ ನಿಜ. ಆದರೆ ಫೌಂಡೇಶನ್, ಕ್ರೀಮ್, ಲಿಪ್‌ಸ್ಟಿಕ್ ಮೊದಲಾದ ರಾಸಾಯನಿಕಯುಕ್ತ ಮೇಕಪ್ ಐಟಂಗಳನ್ನು ಧರಿಸುವುದರಿಂದ ಮುಖದ ಸಹಜ ಸೌಂದರ್ಯ ಇಲ್ಲವಾಗುತ್ತದೆ.
ಮೇಕಪ್ ಮಾಡಿಕೊಂಡಿರದ ಹುಡುಗಿಯ ಮುಖವು ಮೇಕಪ್ ((Makeup) ಮಾಡಿಕೊಂಡಿರುವವರಿಗಿಂತಲೂ ಸಹಜವಾಗಿ, ಸುಂದರವಾಗಿ ಕಾಣುತ್ತದೆ. ಪದೇ ಪದೇ ಮೇಕಪ್ ಮಾಡುವುದರಿಂದ, ದಿನವಿಡೀ ಅಧಿಕ ಸಮಯ ಮೇಕಪ್‌ನಲ್ಲಿ ಕಳೆಯುವುದರಿಂದ ಮುಖದ ತ್ವಚೆಯು ತನ್ನ ನೈಸರ್ಗಿಕ ಕಳೆಯನ್ನು ಕಳೆದುಕೊಳ್ಳುತ್ತದೆ. ದೀರ್ಘ ಸಮಯಗಳ ಕಾಲ ಮೇಕಪ್ ಧರಿಸಿರುವುದು ಒಳ್ಳೆಯದಲ್ಲ.
ರಿವರ್ಸ್ ಮೇಕಪ್ ಟ್ರೆಂಡ್ ... ನ್ಯಾಚುರಲ್ ಲುಕ್‌ಗಾಗಿ ನೀವು ಟ್ರೈ ಮಾಡಿ
ಹೀಗಾಗಿ ಕಾಲೇಜು, ಆಫೀಸಿಗೆ ಹೋಗುವವರು ಬೇಸಿಕ್ ಮೇಕಪ್ ಮಾತ್ರ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಖದ ಮೇಲೆ ಮೊಡವೆ (Pimple), ತುರಿಕೆ, ಚರ್ಮ ಸುಕ್ಕುಗಟ್ಟುವುದು ಮೊದಲಾದ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ತೀರಾ ಅಗತ್ಯವಿದ್ದಾಗ ಮಾತ್ರ ಮೇಕಪ್ ಮಾಡಿಕೊಳ್ಳುವುದು ಒಳ್ಳೆಯದು. ಉಳಿದ ಸಂದರ್ಭಗಳಲ್ಲಿ ನ್ಯಾಚುರಲ್ (Natural) ಲುಕ್‌ನಲ್ಲೇ ಸುಂದರವಾಗಿ ಕಾಣಲು ಪ್ರಯತ್ನಿಸಿ. ಹಾಗಿದ್ರೆ ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುವುದು ಹೇಗೆ..?
ಕ್ಲೆನ್ಸಿಂಗ್ ಮತ್ತು ಮಾಯ್ಚಿರೈಸಿಂಗ್ ಮಾಡಿಕೊಳ್ಳಿ
ಸ್ವಚ್ಛವಾಗಿರುವ ಮುಖ ಸುಂದರವಾಗಿ ಕಾಣುತ್ತದೆ. ಚರ್ಮ ಆರೋಗ್ಯಕರವಾಗಿ ಮತ್ತು ಸುಂದರವಾಗಿ ಹೊಳೆಯುವಂತೆ ಮಾಡಲು ಹಗಲು-ರಾತ್ರಿ ಕ್ಲೆನ್ಸಿಂಗ್ ಮತ್ತು ಮಾಯ್ಚಿರೈಸಿಂಗ್ ಮಾಡಿಕೊಳ್ಳುವ ವಿಧಾನವನ್ನು ಅನುಸರಿಸಬೇಕು. ನಿಮ್ಮ ಮುಖದಲ್ಲಿ ಮೊಡವೆ, ಕಲೆಗಳಿದ್ದರೆ ಉತ್ತಮ ಫೇಶಿಯಲ್ ಕ್ಲೀನರ್ ಬಳಸುವುದನ್ನು ರೂಢಿಸಿಕೊಳ್ಳಿ. ವಾರಕ್ಕೆ ಒಂದು ಅಥವಾ ಎರಡು ಬಾರಿ ಎಕ್ಸ್‌ಫೋಲಿಯೇಶನ್ ಮಾಡಿ. ಇದು ಮುಖದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ.
ರಾತ್ರಿ ಮೇಕಪ್ ತೆಗೆದ ನಂತರ ಮಾಡಬೇಕಾದ ಕೆಲಸಗಳಿವು
ಚರ್ಮಕ್ಕೆ ಸೂಕ್ತವಾದ ಟೋನರನ್ನು ಆರಿಸಿ
ನಿಮ್ಮ ಚರ್ಮಕ್ಕೆ ಸೂಕ್ತವಾದ ಟೋನರನ್ನು ಆರಿಸಿ ಮತ್ತು ನಿಮ್ಮ ಮುಖವನ್ನು ತೊಳೆದ ನಂತರ ಅದನ್ನು ಬಳಸಿ. ಇದು ನಿಮ್ಮ ಮುಖವನ್ನು ರಿಫ್ರೆಶ್ ಮಾಡುತ್ತದೆ. ಮಾಯಿಶ್ಚರೈಸರ್‌ಗಳು ಚರ್ಮ (Skin) ನಯವಾಗಿ ಮತ್ತು ರೇಷ್ಮೆಯಂತೆ ಕಾಣುವಂತೆ ಮಾಡುತ್ತದೆ. ಮುಖ ತೊಳೆದ ನಂತರ ಯಾವಾಗಲೂ ಮಾಯಿಶ್ಚರೈಸರ್ ಗಳನ್ನು ಬಳಸಿ.
ಬಿಸಿಲಿಗೆ ಹೋಗುವಾಗ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ
ಸನ್‌ಸ್ಕ್ರೀನ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿ. ಸೂರ್ಯನ ಕಿರಣಗಳು ಚರ್ಮವನ್ನು ಹಾನಿಗೊಳಿಸುತ್ತದೆ ಮತ್ತು ಚರ್ಮ ಸುಕ್ಕು ಗಟ್ಟುವಂತೆ ಮಾಡುತ್ತದೆ. ಹೀಗಾಗಿ ಮನೆಯಿಂದ ಹೊರಹೋಗುವ ಬದಲು ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯದಿರಿ.
ಸಮತೋಲಿತ ಆಹಾರವನ್ನು ಸೇವಿಸಿ
ಮುಖದ ಸೌಂದರ್ಯ ಮೇಲೆ ನಾವು ಸೇವಿಸುವ ಆಹಾರ (Food) ಸಹ ಪರಿಣಾಮ ಬೀರುತ್ತದೆ. ಹೀಗಾಗಿ ಸಮತೋಲಿತ ಆಹಾರವನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಸಾಕಷ್ಟು ತಾಜಾ ಹಣ್ಣುಗಳು ಹಾಗೂ ಸೊಪ್ಪು ತರಕಾರಿಗಳಿರಲಿ. ಕರಿದ ತಿಂಡಿ, ಜಂಕ್ ಫುಡ್‌ಗಳನ್ನು ತಿನ್ನುವದರಿಂದ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚೆಚ್ಚು ನೀರು (Water) ಕುಡಿಯವುದು ಚರ್ಮದ ಆರೋಗ್ಯಕ್ಕೆ ಉತ್ತಮ.
ನಿದ್ರೆ ಹಾಗೂ ವಿಶ್ರಾಂತಿ ಪಡೆಯಿರಿ
ಒತ್ತಡದಿಂದ ಬಹಳ ಬೇಗ ವಯಸ್ಸಾಗುವಂತೆ ಕಾಣುವಿರಿ. ಹೀಗಾಗಿ ಒತ್ತಡವನ್ನು ಹೊರಹಾಕಲು ಯೋಗ (Yoga), ಪ್ರಾಣಾಯಾಮ ಮೊದಲಾದ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ. ಸುಂದರವಾಗಿ ಕಾಣಲು ಕನಿಷ್ಠ ಎಂಟು ಗಂಟೆಗಳ ವಿಶ್ರಾಂತಿಯ ಅಗತ್ಯವಿದೆ. ರಾತ್ರಿಯಲ್ಲಿ ನಿಮ್ಮ ದೇಹವು ಚೇತರಿಸಿಕೊಳ್ಳುತ್ತದೆ. ಇದರಿಂದ ಸಹಜವಾಗಿಯೇ ಮುಖದ ಹೊಳಪು ಹೆಚ್ಚುತ್ತದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಸಾಕಷ್ಟು ನಿದ್ರೆ (Sleep) ಹಾಗೂ ವಿಶ್ರಾಂತಿ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.