Beauty Tips: ನೀವು ನೀವಾಗಿಯೇ ಇದ್ದು ಕಾನ್ಫಿಡೆನ್ಸ್ ಹೆಚ್ಚಿಸ್ಕೊಳಿ

By Suvarna News  |  First Published Dec 23, 2021, 4:39 PM IST

ಫ್ಯಾಷನ್ ಗಾಗಿ ಯುವ ಸಮುದಾಯ ಅದೆಷ್ಟು ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತದೆ ಎಂದರೆ ಅವರ ಮನೋಸ್ಥಿತಿಯ ಬಗ್ಗೆ ಗಾಬರಿಯಾಗುತ್ತದೆ. ಇಷ್ಟು ದಿನ ಪುಟ್ಟ ಪುಟ್ಟ ಮಕ್ಕಳಾಗಿದ್ದ ಇವರ ತಲೆಯಲ್ಲಿ ಇಂಥವೆಲ್ಲ ಆಲೋಚನೆಗಳು ಯಾವಾಗ ಚಿಗುರೊಡೆದಿರಬಹುದು ಎನ್ನುವ ಚಿಂತೆಯಾಗುತ್ತದೆ. 
 


ಬಾಹ್ಯ ಸೌಂದರ್ಯ (Outer Beauty) ಕ್ಕೆ ಅತಿಯಾದ ಪ್ರಾಶಸ್ತ್ಯ ನೀಡುತ್ತಿರುವ ದಿನಗಳಿವು. ಯುವ ಸಮೂಹ (Youth) ವಂತೂ ಅತಿಯಾದ, ಚಿತ್ರವಿಚಿತ್ರವಾದ ಫ್ಯಾಷನ್ (Fashion) ಮಾಡುವುದು ಮಾಮೂಲು. ಬೆಂಗಳೂರಿನ ಸ್ವಲ್ಪ ಮುಂದುವರಿದ ಪ್ರದೇಶಗಳಿಗೆ ಹೋದರೆ ಅಲ್ಲಿನ ಚಿತ್ರಣ ಸಾಮಾನ್ಯರಿಗೆ ದಿಗಿಲು ಮೂಡಿಸುತ್ತದೆ. ಎಲ್ಲೂ ಕಾಣದ ಫ್ಯಾಷನ್ ಪ್ರಪಂಚವನ್ನು ಅಲ್ಲಿ ಕಾಣಬಹುದು. ಹಾಗೆಯೇ ಅದರ ಪರಿಣಾಮಗಳೂ ಭೀಕರ ಎನ್ನುವುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಹೇರ್ ಸ್ಟ್ರೇಟನಿಂಗ್ ಮಾಡಿಸಿಕೊಳ್ಳಲು ಹೋಗಿ ತಲೆಯೇ ಬೊಕ್ಕವಾದ ಕತೆ, ಕಲರಿಂಗ್ ನಿಂದ ಕೂದಲು ಕಳಾಹೀನವಾಗಿ ಖಿನ್ನತೆ ಮೂಡಿಸಿದ ಕತೆಗಳೂ ಈ ವಿಚಿತ್ರ ಪ್ರಪಂಚದಲ್ಲಿವೆ.

ಬ್ಲೀಚಿಂಗ್ (Bleaching), ಫೇಷಿಯಲ್ Facial), ಹೇರ್ ಕಲರಿಂಗ್ Hair Coloring), ಲೇಸರ್ ಚಿಕಿತ್ಸೆ (Laser Treatment) ಇಂತಹ ಅದೆಷ್ಟೋ ಕಳಪೆ ಪದ್ಧತಿಗಳಿಂದ ಶಾಶ್ವತವಾಗಿ ತಮ್ಮ ಮುಖದ ಸೌಂದರ್ಯ ಕಳೆದುಕೊಂಡಿರುವ ಸಾವಿರಾರು ಜನರಿದ್ದಾರೆ. ತಮ್ಮ ಸಹಜ ಸೌಂದರ್ಯದ ಬಗ್ಗೆ ಕೀಳರಿಮೆ ಹೊಂದಿ, ಅಪಾಯಕಾರಿ ಬ್ಯೂಟಿ ಕಾನ್ಷಿಯಸ್ ನೆಸ್ ಹೊಂದಿರುವ ಯುವ ಸಮುದಾಯ ಇಂಥವರಿಂದ ಪಾಠ ಕಲಿಯಬೇಕಾಗಿದೆ.

Tap to resize

Latest Videos

ಫೇರ್‌ & ಲವ್ಲಿ ಚೆಲುವೆಗೆ ತ್ವಚೆ ಸಮಸ್ಯೆ: ಇದಕ್ಕೆ ಮದ್ದೇ ಇಲ್ಲ

ಸೌಂದರ್ಯವೆಂದರೆ, ನಯವಾದ, ಹೊಳಪಿನ ಬಿಳಿ ಬಣ್ಣ (White Skin) ಹಾಗೂ ತೆಳ್ಳಗಿನ ಮೈಕಟ್ಟು ಎನ್ನುವ ಭಾವನೆ ಇಂದು ಸಾರ್ವತ್ರಿಕವಾಗಿದೆ. ಈ ಭಾವನೆ ಸಾಮೂಹಿಕವಾಗಲು ದೃಶ್ಯ ಮಾಧ್ಯಮಗಳ ಪಾತ್ರ ಅತಿ ಮಹತ್ವದ್ದು ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಮಹಿಳೆ ಆತ್ಮವಿಶ್ವಾಸದಿಂದ ಇರಲು ಆಕೆಯ ಮುಖ, ಮೈಕೈಗಳ ಮೇಲೆ ಕೂದಲು ಇರಬಾರದು, ಅಷ್ಟೇ ಏಕೆ? ಆಕೆಯಿಂದ ಬೆವರು ವಾಸನೆ ಬರಲೇಬಾರದು...ಇಂಥವೆಲ್ಲ ಚಿತ್ರಣ ಕಟ್ಟಿಕೊಟ್ಟಿರುವುದು ಜಾಹೀರಾತುಗಳು.

ಮೊದಲೇ ನಾಲ್ಕು ಜನರಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಯುವಜನತೆಯಲ್ಲಿ ಹೆಚ್ಚಾಗಿರುತ್ತದೆ. ಅದನ್ನು ಐಡೆಂಟಿಟಿ ಕ್ರೈಸಿಸ್ (Identity Crisis) ಎನ್ನಲಾಗುತ್ತದೆ. ಹೀಗಾಗಿ, ವಿಭಿನ್ನ ಸೌಂದರ್ಯದೊಂದಿಗೆ ಗುರುತಿಸಿಕೊಳ್ಳಬೇಕೆಂದು ರಿಸ್ಕ್ ತೆಗೆದುಕೊಳ್ಳುತ್ತಾರೆ. ಹಾಗಾಗದಿರಲು ಪಾಲಕರ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ.

ಎಲ್ಲಕ್ಕಿಂತ ಮೊದಲಾಗಿ, “ನಾವಂತು ಕಷ್ಟಪಟ್ಟಿದ್ದೇವೆ, ನಮ್ಮ ಮಕ್ಕಳಾದರೂ ಖುಷಿ ಕಾಣಲಿ’ ಎನ್ನುವ ಧೋರಣೆಯನ್ನು ಪಾಲಕರು ಮೊಟ್ಟಮೊದಲು ಕೈಬಿಡಬೇಕು. ಆಗಲೇ ಮಕ್ಕಳಿಗೆ ಜೀವನದರ್ಶನ ಮಾಡಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಅವರನ್ನು ಕಂಫರ್ಟ್ ಝೋನ್ ನಲ್ಲಿರಿಸಲು ಪಾಲಕರು ಜೀವನಪೂರ್ತಿ ಸರ್ಕಸ್ ಮಾಡುತ್ತಲೇ ಇರಬೇಕಾಗುತ್ತದೆ.

•    ಎಲ್ಲರೂ ಫ್ಯಾಷನ್ ಮಾಡುತ್ತಾರೆ ಎಂದು ನೀವೂ ಮಾಡಬೇಕಿಲ್ಲ. ಮೇಕಪ್ (Makeup) ಮಾಡಿಕೊಳ್ಳಲು ಹಣವಿಲ್ಲ ಎನ್ನುವ ಕೊರಗೂ ಬೇಡ. ಬಾಹ್ಯ ಸೌಂದರ್ಯ ವ್ಯಕ್ತಿತ್ವದ ಅಳತೆಗೋಲಲ್ಲ ಎನ್ನುವುದನ್ನು ಮರೆಯಬೇಡಿ. ಬದಲಿಗೆ, ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳತ್ತ ಗಮನ ಕೊಡಿ.
•    ಈಗಂತೂ ಯುವಜನರೇ ಸೇರಿಕೊಂಡು ನಡೆಸುವ ಎನ್ ಜಿಒಗಳಿವೆ. ಅವುಗಳ ಮೂಲಕ ಬೇರೆಯವರಿಗೆ ಸಹಾಯಹಸ್ತ (Help) ಚಾಚಬಹುದು. ಕಾಲೇಜು ಶಿಕ್ಷಣದ ಕಲಿಕೆಯ ಹೊರತಾಗಿ ಬೇರೆ ಭಾಷೆ ಕಲಿಯಬಹುದು, ಕೌಶಲ್ಯ ನಿಮ್ಮದಾಗಿಸಿಕೊಳ್ಳಬಹುದು. 
•    ಅಕಾಲದಲ್ಲಿ ತಲೆಯ ನಾಲ್ಕು ಕೂದಲು ಬಿಳಿಯಾದ ಮಾತ್ರಕ್ಕೆ ಏನೂ ಆಗುವುದಿಲ್ಲ. ಇದರ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನಗಳನ್ನೇ ಅನುಸರಿಸಿ. ಕ್ಷಣಿಕ ಕೃತಕ ವಿಧಾನದಿಂದ ದೂರವಿರಿ. ಎಲ್ಲರನ್ನೂ ಆಕರ್ಷಿಸಬೇಕೆನ್ನುವ ಬಯಕೆ ಬೇಡ.
•    ಪ್ರತಿ ಹದಿನೈದು ದಿನ ಅಥವಾ ತಿಂಗಳಿಗೆ ಷಾಪಿಂಗ್ ಮಾಲ್ ಸುತ್ತುವ ಅಭ್ಯಾಸಕ್ಕೆ ಬೀಳಬೇಡಿ. ಇದೇ ಸಮಯವನ್ನು ನಿಮ್ಮ ಓದಿಗೆ, ಆಟೋಟಕ್ಕೆ ಅಥವಾ ಲೈಬ್ರರಿ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಇಂತಹುದಕ್ಕೆ ನೀಡಿದರೆ ನಿಮ್ಮ ಮನೋಭೂಮಿಕೆಯೇ ಬದಲಾಗುತ್ತದೆ. 
•    ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಕ್ರೀಡೆಯಿಂದ ಬದುಕಿಗೆ ಆತ್ಮವಿಶ್ವಾಸದ ಸ್ಫೂರ್ತಿ ದೊರೆಯುತ್ತದೆ. 
•    ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ಒಪ್ಪಿಕೊಂಡಾಗ ಅನಗತ್ಯ ಭಾರ, ಒತ್ತಡ ಇರುವುದಿಲ್ಲ. ನಿಮ್ಮ ಚರ್ಮ, ಬಣ್ಣ, ಎತ್ತರ, ದೇಹದ ಗಾತ್ರ ಎಲ್ಲವನ್ನೂ ಸಕಾರಾತ್ಮಕವಾಗಿ ಒಪ್ಪಿಕೊಂಡುಬಿಡಿ. ಕಪ್ಪು ಚರ್ಮ ಎಂದಿಗೂ ಬಿಳಿಯಾಗಲು ಸಾಧ್ಯವಿಲ್ಲ. ತ್ವಚೆಯನ್ನು ಆರೋಗ್ಯಪೂರ್ಣವಾಗಿಟ್ಟುಕೊಳ್ಳುವುದಷ್ಟೇ ನಿಮ್ಮ ಆದ್ಯತೆಯಾಗಬೇಕು, ಬಣ್ಣ ಬದಲಿಸುವುದಲ್ಲ. 
•    ಪೌಷ್ಟಿಕ ಆಹಾರ ಸೇವಿಸಬೇಕು. ಇಂದಿನ ಬಹುತೇಕ ಯುವಜನರು ಮನೆಯ, ಪೌಷ್ಟಿಕ ಆಹಾರ ಸೇವನೆ ಮಾಡುವುದಿಲ್ಲ. ಇದೂ ಸಹ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆ ತಂದೊಡ್ಡುತ್ತದೆ.
 

click me!