
ಇತ್ತೀಚಿನ ದಿನಗಳಲ್ಲಿ ಬ್ಯೂಟಿಫುಲ್ ಆಗಿರಬೇಕೆಂಬ ಗೀಳು ಹುಡುಗಿಯರಲ್ಲಿ ಎಷ್ಟು ಹೆಚ್ಚಿದೆಯೆಂದರೆ ಇದಕ್ಕಾಗಿ ಬರೀ ಮೇಕಪ್ ಮಾತ್ರ ಮಾಡಿಕೊಳ್ಳುತ್ತಿಲ್ಲ. ಮೂಗು, ತುಟಿಗಳ ಸರ್ಜರಿ, ಪಮರ್ನೆಂಟ್ ಹೇರ್ ರಿಮೂವಲ್ ಮೊದಲಾದ ಆಪರೇಷನ್‌ಗಳನ್ನು ಸಹ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಸೆಕ್ಸೀಯಾಗಿ ಕಾಣ್ಬೇಕು ಅಂತ ಸ್ತನಗಳ ಗಾತ್ರ ಹಿಗ್ಗುವಿಕೆಗೂ ಸರ್ಜರಿ ಮಾಡಿಕೊಳ್ಳುತ್ತಿದ್ದಾರೆ. ಸ್ತನದ ರೂಪವನ್ನು ದೊಡ್ಡದಾಗಿ, ಆಕರ್ಷಕವಾಗಿ ಕಾಣುವಂತೆ ಮಾಡುವ ಶಸ್ತ್ರಚಿಕಿತ್ಸೆಯೇ ಸ್ತನ ಎತ್ತುವ ಸೌಂದರ್ಯ. ವಯಸ್ಸು ಹೆಚ್ಚಾಗುವಾಗ, ಸ್ತನ್ಯಪಾನ ಮೊದಲಾದ ಕಾರಣಗಳಿಂದಾಗಿ ಸ್ತನದ ಗಾತ್ರ ಕುಗ್ಗುತ್ತದೆ. ತೂಕ ನಷ್ಟವಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ದೇಹ ಆಕರ್ಷಕವಾಗಿ ಕಾಣುವಂತೆ ಮಾಡಲು ಹಲವರು ಸ್ತನ ವರ್ಧನೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾರೆ.
ಆದರೆ ಈ ರೀತಿ ಸ್ತನವರ್ಧನೆ ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರ ಗಮನಿಸಿಕೊಳ್ಳಬೇಕಾದ ಹಲವು ವಿಷಯಗಳಿವೆ. ಸ್ತನವರ್ಧನೆಯ ಬಳಿಕ ಸಹಜವಾಗಿಯೇ ದಿಢೀರ್ ಎಂದು ದೇಹದ ತೂಕ ಹೆಚ್ಚಳವಾದಂತೆ ಭಾಸವಾಗುತ್ತದೆ. ಹೀಗಾಗಿ ಮನೆಗೆಲಸದಲ್ಲಿ ತೊಡಗಿಕೊಳ್ಳಬಹುದಾ, ವ್ಯಾಯಾಮ ಮಾಡಬಹುದಾ ಮೊದಲಾದ ವಿಷಯಗಳ ಬಗ್ಗೆ ಹಲವರಿಗೆ ಗೊತ್ತಿಲ್ಲ.
ಸಣ್ಣ ವಯಸ್ಸಿನ ಮಹಿಳೆಯರಲ್ಲೂ ಸ್ತನ ಕ್ಯಾನ್ಸರ್
ಸ್ತನ (Breast) ವರ್ಧನೆಗೆ ಒಳಗಾಗುವ ಮಹಿಳೆಯರು ಶಸ್ತ್ರಚಿಕಿತ್ಸೆ (Operation)ಯ ಒಂದು ವಾರದ ನಂತರ ವ್ಯಾಯಾಮಕ್ಕೆ ಮರಳುವುದಕ್ಕೆ ಯಾವುದೇ ತೊಂದರೆ ಇಲ್ಲ. ಅಮೇರಿಕಾದ ಅಧಿಕೃತ ವೈದ್ಯಕೀಯ ಜರ್ನಲ್, ಪ್ಲಾಸ್ಟಿಕ್ ಸರ್ಜರಿಯ ಕುರಿತು ಕ್ಲಿನಿಕಲ್ ಪ್ರಯೋಗವನ್ನು ವರದಿ ಮಾಡಿದೆ. ಅದರಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
ಸ್ತನ ವರ್ಧನೆಯಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಸರ್ಜರಿ ಮಾಡಿಕೊಳ್ಳುವ ಮೊದಲೇ ವ್ಯಾಯಾಮ (Exercise) ಮಾಡುತ್ತಿರುವುದು ಒಳ್ಳೆಯದು. ಆದರೆ, ಸ್ತನ ವರ್ಧನೆಯ ನಂತರ ರೋಗಿ (Patient)ಗಳು ವ್ಯಾಯಾಮವನ್ನು ಪುನರಾರಂಭಿಸಲು ಎಷ್ಟು ಸಮಯ ಕಾಯಬೇಕು ಎಂಬುದರ ಕುರಿತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ, ಶಸ್ತ್ರಚಿಕಿತ್ಸೆಯ ನಂತರ ಕೆಲವು ವಾರಗಳಿಂದ ಕೆಲವು ತಿಂಗಳುಗಳ ವರೆಗೆ ವ್ಯಾಯಾಮ ಮಾಡಬಹುದು, ಮಾಡಬಾರದು ಎಂಬ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಧ್ಯಯನವೊಂದರ ಪ್ರಕಾರ ಸ್ತನವರ್ಧನೆ ಶಸ್ತ್ರಚಿಕಿತ್ಸೆಯ ನಂತರ 12 ವಾರಗಳ ವರೆಗೆ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ. ಆದರೆ ಕೆಲವೊಬ್ಬರು ಸ್ತನ ವರ್ಧನೆ ಶಸ್ತ್ರಚಿಕಿತ್ಸೆಯ ಬಳಿಕ ವ್ಯಾಯಾಮ ಮಾಡುವುದರಿಂದ ದೇಹ ಫಿಟ್ (Fit) ಆಗಿರುತ್ತದೆ ಎಂದು ಹೇಳುತ್ತಾರೆ.
ಮಹಿಳೆಯರು 18ನೇ ವಯಸ್ಸಿನ ಬಳಿಕ ಯಾವಾಗ ಬೇಕಾದರೂ ಈ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬಹುದು. ರೋಗಿಯ ಸ್ತನಗಳ ಗಾತ್ರ, ಹಿಗ್ಗುವಿಸುವಿಕೆಯ ಗಾತ್ರದ ಮೇಲೆ ಈ ಆಪರೇಷನ್‌ಗೆ ಬೆಲೆ ನಿಗದಿ ಪಡಿಸಲಾಗುತ್ತದೆ. ಸ್ತನ ಎತ್ತುವ ಶಸ್ತ್ರಚಿಕಿತ್ಸೆಯ ನಂತರ ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆಯ ನಂತರ ಆಗುವಂತೆಯೇ ಇದರಲ್ಲೂ ಆಪರೇಷನ್ ಮಾಡಿದ ಗುರುತುಗಳು ಉಳಿದುಬಿಡುತ್ತವೆ. ಕಾಲ ಕ್ರಮೇಣ ಈ ಕಲೆ ಮಂಕಾಗುತ್ತಾ ಹೋಗುತ್ತದೆ. ಸ್ತನ ವರ್ಧನೆಯ ಬಳಿಕ 2-3 ದಿನಗಳೊಳಗೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ತನದ ಶಸ್ತ್ರಚಿಕಿತ್ಸೆ ಮಾಡಿಕೊಂಡವರು ಹೆವಿ ಲಿಫ್ಟಿಂಗ್‌ನಿಂದ ದೂರವಿರುವಂತೆ ಸೂಚಿಸಲಾಗುತ್ತದೆ.
ಸೆಕ್ಸ್ ಪವರ್ - ಸ್ತನಗಳ ಗಾತ್ರ ಹೆಚ್ಚಿಸುವವರೆಗೂ ಶತಾವರಿಯಿಂದಿದೆ ಸಾವಿರ ಲಾಭ!
ಮಗು (Baby) ಆದ ಬಳಿಕ ಸ್ತನಗಳ ಸೌಂದರ್ಯ (Beauty)ವನ್ನು ಮರಳಿ ಪಡೆಯಲು ಬಯಸುವವರಿಗೆ ಸ್ತನ ವರ್ಧನೆ ಸರ್ಜರಿ ಉತ್ತಮ ಆಯ್ಕೆಯಾಗಿದೆ. ನೈಸರ್ಗಿಕವಾಗಿ ಸ್ತನ ವರ್ಧನೆ ಮಾಡಲು ಒಂದಷ್ಟು ವಿಧಾನಗಳಿವೆ ಎಂದು ಹೇಳುತ್ತರಾದರೂ ಇದು ದೇಹದಲ್ಲಿ ಬದಲಾವಣೆ (Changes)ಗಳನ್ನು ತರಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಹಾಗೆಂದು ಸ್ತನ ವರ್ಧನೆ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವುದು ಅನಿವಾರ್ಯತೆಯೂ ಇಲ್ಲ. ಸ್ತನಗಳ ಗಾತ್ರ ದೊಡ್ಡದು, ಚಿಕ್ಕದು ಎಂಬುದು ಸೌಂದರ್ಯದ ವಿಷಯಕ್ಕೆ ಬಂದಾಗ ಮಹತ್ವ ಪಡೆದುಕೊಳ್ಳುವುದಿಲ್ಲ. ದೇಹಕ್ಕೆ ತಕ್ಕಂತೆ ಸ್ತನಗಳ ಗಾತ್ರವೂ ರೂಪುಗೊಂಡಿರುತ್ತದೆ. ಹೀಗಾಗಿ ಇಂಥಹಾ ಅನಗತ್ಯ ಶಸ್ತ್ರಚಿಕಿತ್ಸೆ ಮಾಡುವ ಮೊದಲು ಯೋಚಿಸುವುದು ಒಳಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.