ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಮಸಾಲೆ ಪದಾರ್ಥಗಳನ್ನು ದೀರ್ಘಕಾಲ ಸಂಗ್ರಹಿಸಿಡುವುದು ಒಂದು ಸವಾಲು. ಯಾಕೆಂದ್ರೆ ಅದಕ್ಕೆ ಹುಳು ಹಿಡಿಯುವ ಚಾನ್ಸ್ ಹೆಚ್ಚಿರುತ್ತದೆ. ಮಸಾಲೆ ಪದಾರ್ಥ ದೀರ್ಘಕಾಲ ಬಾಳಿಕೆ ಬರಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
ಅಡುಗೆ ಮನೆಯಲ್ಲಿ ಸಾಸಿವೆ, ಜೀರಿಗೆ, ಎಳ್ಳು,ಮೆಂತ್ಯ, ಇಂಗು ಹೀಗೆ ಸಾಕಷ್ಟು ಮಸಾಲೆ ಪದಾರ್ಥಗಳು ಇದ್ದೇ ಇರುತ್ವೆ. ಇವುಗಳ ಜೀವಿತಾವಧಿ ಹೆಚ್ಚು. ಇದಕ್ಕೆ ಯಾವುದೇ ಮುಕ್ತಾಯದ ದಿನಾಂಕವಿರೋದಲ್ಲ. ಆದ್ರೆ ಹವಾಮಾನದಲ್ಲಿನ ಬದಲಾವಣೆಯಿಂದ ಕೆಲ ಬಾರಿ ಮಸಾಲೆ ಪದಾರ್ಥಗಳು ಬೇಗ ಹಾಳಾಗುತ್ತವೆ. ಬೇಳೆಗಳಲ್ಲಿ ಹುಳ ಕಾಣಿಸಿಕೊಳ್ಳುತ್ತದೆ. ಸಾಂಬಾರ ಪದಾರ್ಥಗಳ ಬಣ್ಣ ಬದಲಾಗುತ್ತದೆ. ಹಿಂದಿನ ಕಾಲದಲ್ಲಿ ಮಳೆಗಾಲಕ್ಕೆ ಮೊದಲೇ ಮಸಾಲೆ ಪದಾರ್ಥಗಳನ್ನು ತಂದು ಬಿಸಿಲಿನಲ್ಲಿ ಒಣಗಿಸಿ ಅದನ್ನು ಡಬ್ಬದಲ್ಲಿ ಭದ್ರವಾಗಿಡುತ್ತಿದ್ದರು. ಒಂದು ವರ್ಷದವರೆಗೆ ಈ ಮಸಾಲಾ ಪದಾರ್ಥಗಳು ಹಾಳಾಗ್ತಿರಲಿಲ್ಲ. ಆದ್ರೆ ಈಗ ಜನರಿಗೆ ಅಷ್ಟೊಂದು ಸಮಯವಿಲ್ಲ. ಅಂಗಡಿಗಳಿಂದ ತಂದ ಮಸಾಲೆ ಪದಾರ್ಥವನ್ನು ಹಾಗೆಯೆ ಇಡ್ತಾರೆ. ಅದು ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ಮಸಾಲೆ ಪದಾರ್ಥ ಹಾಳಾಗದಂತೆ ಸಂಗ್ರಹಿಸಬೇಕೆಂದ್ರೆ ನೀವು ಕೆಲ ಸುಲಭ ಟಿಪ್ಸ್ ಫಾಲೋ ಮಾಡ್ಬಹುದು. ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೇವೆ.
ಪ್ಯಾಕೆಟ್ ಮೇಲಿರುವ ದಿನಾಂಕ ಗಮನಿಸಿ : ಸೂಪರ್ ಮಾರ್ಕೆಟ್ (Supermarket ) ಗಳಲ್ಲಿ ಮಸಾಲೆ (Spice) ಪದಾರ್ಥಗಳು ಪ್ಯಾಕೆಟ್ ನಲ್ಲಿ ಲಭ್ಯವಿರುತ್ತವೆ. ನೀವು ಪ್ಯಾಕೆಟ್ ಮನೆಗೆ ತಂದ್ಮೇಲೆ ಅದ್ರ ಕೊನೆ ದಿನಾಂಕವನ್ನು ಪರೀಕ್ಷೆ ಮಾಡಿ. ಕೊನೆ ದಿನಾಂಕ (Last Date) ಮುಗಿದ ಮೇಲೆ ಈ ಪದಾರ್ಥವನ್ನು ಬಳಸಲು ಹೋಗ್ಬೇಡಿ. ಯಾಕೆಂದ್ರೆ ಮುಕ್ತಾಯದ ದಿನಾಂಕದ ನಂತ್ರವೂ ನೀವು ಅದನ್ನು ಬಳಸಿದ್ರೆ ಆಹಾರದ ರುಚಿ ಕೆಡುತ್ತದೆ. ಮಸಾಲೆ ಪದಾರ್ಥಗಳ ಬಣ್ಣ ಕೂಡ ಬದಲಾಗಿರುತ್ತದೆ.
ಯಾವಾಗ ಮಸಾಲೆ ಪದಾರ್ಥ ಎಸೆಯಬೇಕು ಗೊತ್ತಾ? : ಮಸಾಲೆ ಪದಾರ್ಥಕ್ಕೆ ಮುಕ್ತಾಯದ ದಿನಾಂಕವಿಲ್ಲ. ಹಾಗೆಯೇ ಅದು ಬೇಗ ಹಾಳಾಗುವುದಿಲ್ಲ ಎನ್ನುವ ಕಾರಣಕ್ಕೆ ಅದರ ಬಗ್ಗೆ ಹೆಚ್ಚು ಗಮನ ನೀಡಲು ಹೋಗುವುದಿಲ್ಲ. ಆದ್ರೆ ಮಸಾಲೆ ಪದಾರ್ಥ ಕೂಡ ಹಾಳಾಗುತ್ತದೆ. ಅದರಿಂದ ಭಿನ್ನ ವಾಸನೆ ಬರ್ತಿದ್ದರೆ ಅಥವಾ ಅದರಲ್ಲಿ ಹುಳ ಕಾಣಿಸಿಕೊಂಡರೆ ನೀವು ಅದನ್ನು ಬಳಸಲು ಹೋಗ್ಬೇಡಿ. ಅದನ್ನು ಕಸಕ್ಕೆ ಎಸೆಯುವುದು ಉತ್ತಮ.
ದೀರ್ಘಕಾಲ Mayonnaise ರುಚಿ ಹಾಳಾಗ್ಬಾರದೆಂದ್ರೆ ಹೀಗ್ ಮಾಡಿ
ಮಸಾಲೆಯನ್ನು ದೀರ್ಘಕಾಲ ಸುರಕ್ಷಿತವಾಗಿಡುವುದು ಹೇಗೆ? :
ಪ್ಯಾಕೆಟ್ ನಲ್ಲಿಯೇ ಸಂಗ್ರಹಿಸಿ : ಮಸಾಲೆ ಪದಾರ್ಥವನ್ನು ನೀವು ಪ್ಯಾಕೆಟ್ ನಲ್ಲಿ ಖರೀದಿ ಮಾಡಿದ್ದರೆ, ಮನೆಗೆ ಬಂದ್ಮೇಲೆ ಪ್ಯಾಕೆಟ್ ಬದಲಿಸಬೇಡಿ. ಯಾವ ಪ್ಯಾಕೆಟ್ ನಲ್ಲಿ ಮಸಾಲೆ ತಂದಿದ್ದೀರೋ ಅದರಲ್ಲಿಯೇ ಇಡಿ.
ದೊಡ್ಡ ಪ್ರಮಾಣದಲ್ಲಿ ಮಸಾಲೆ ಖರೀದಿ ಬೇಡ : ನಗರ ಪ್ರದೇಶದ ಜನರು ಅಥವಾ ಪಟ್ಟಣ ಪ್ರದೇಶದ ಜನರು ಮಾತ್ರವಲ್ಲ ಈಗ ಹಳ್ಳಿ ಹಳ್ಳಿಗೂ ಅಂಗಡಿ, ಸಾರಿಗೆ ಸೌಲಭ್ಯವಿದೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ನೀವು ಮಸಾಲೆ ಪದಾರ್ಥ ಸಂಗ್ರಹಿಸುವು ಅಗತ್ಯವಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಸಾಲೆ ವಸ್ತುಗಳನ್ನು ಖರೀದಿಸಿ. ಅಗತ್ಯವೆನ್ನಿಸಿದಾಗ ಖರೀದಿ ಮಾಡಬಹುದು.
ಈ ಜಾರ್ ಗಳನ್ನು ಬಳಸಿ : ಮಸಾಲೆ ಸಂಗ್ರಹಿಸಲು ಗಾಜಿನ ಜಾರ್ (Glass Jar) ಬಹಳ ಒಳ್ಳೆಯದು. ನಿಮ್ಮ ಬಳಿ ಗಾಜಿನ ಜಾರ್ ಇಲ್ಲವೆಂದ್ರೆ ನೀವು ಗಾಳಿಯಾಡದ ಜಾರ್ ಬಳಸಬಹುದು. ಜಾರ್ ಗೆ ನೀರು ಹೋಗದಂತೆ ನೋಡಿಕೊಳ್ಳಿ.
ಈ ಸ್ಥಳದಲ್ಲಿ ಮಸಾಲೆ ಪದಾರ್ಥವನ್ನು ಇಡಿ : ಸೂರ್ಯನ ಬೆಳಕು ನೇರವಾಗಿ ಬೀಳುವ ಜಾಗದಲ್ಲಿ ಮಸಾಲೆ ಪದಾರ್ಥವನ್ನಿಟ್ಟರೆ ಅದರ ಬಣ್ಣ ಮಸುಕಾಗುತ್ತದೆ. ಹಾಗಂತ ತುಂಬಾ ತಂಪಾದ ಜಾಗದಲ್ಲೂ ಇಡಬೇಡಿ. ಮನೆಯ ಶುಷ್ಕ ಜಾಗದಲ್ಲಿ ಮಸಾಲೆ ಪದಾರ್ಥ ಇಡಿ.
Kitchen Tips: ಉಪವಾಸಕ್ಕೆ ಸಾಬೂದಾನ ಖರೀದಿ ಮಾಡ್ತಿದ್ರೆ ಈ ವಿಷ್ಯ ನೆನಪಿಡಿ
ಆಗಾಗ ಪರೀಕ್ಷಿಸುತ್ತಿರಿ : ಮಸಾಲೆ ಪದಾರ್ಥವನ್ನು ದೀರ್ಘಕಾಲ ಸಂಗ್ರಹಿಸಲು ಹೆಚ್ಚಿನ ಪ್ರಮಾಣದಲ್ಲಿ ಮಸಾಲೆ ಪದಾರ್ಥ ತಂದಿದ್ದರೆ ನೀವದನ್ನು ಆಗಾಗ ಪರೀಕ್ಷೆ ಮಾಡ್ತಿರಿ. ಸಾಧ್ಯವಾದ್ರೆ ಬಿಸಿಲಿನಲ್ಲಿ ಸ್ವಲ್ಪ ಸಮಯವಿಟ್ಟು ನಂತ್ರ ಜಾರ್ ಗೆ ಹಾಕಿ.