
ಗೃಹಣಿಯರು ಮನೆಯಲ್ಲಿರ್ತಾರೆ, ಅವರಿಗೇನು ಕೆಲಸ ಎಂದು ಕೇಳುವವರಿದ್ದಾರೆ. ಆದ್ರೆ ಗೃಹಿಣಿಯರ ಕೆಲಸಕ್ಕೆ ರಜೆಯಿಲ್ಲ, ಸಂಬಳವಿಲ್ಲ, ವಿಶ್ರಾಂತಿಯಿಲ್ಲ. ಗೃಹಿಣಿಯರು ಮಕ್ಕಳು ಹಾಗೂ ಮನೆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸ್ತಾರೆ. ಸದಾ ಮನೆ ಮತ್ತು ಮಕ್ಕಳ ಬಗ್ಗೆ ಆಲೋಚನೆ ಮಾಡುವ ಗೃಹಿಣಿಯರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಮಯವಿರುವುದಿಲ್ಲ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ, ಸರಿಯಾದ ವ್ಯಾಯಾಮ ಮಾಡದೆ ಅವರ ತೂಕ ಹೆಚ್ಚಾಗುತ್ತದೆ.
ವಯಸ್ಸು (Age) ಹೆಚ್ಚಾಗ್ತಿದ್ದಂತೆ ಪ್ರತಿಯೊಬ್ಬರ ದೇಹದಲ್ಲಿ ಬದಲಾವಣೆಯಾಗುತ್ತದೆ. ಗೃಹಿಣಿ (Housewife) ಯರ ದೇಹದಲ್ಲೂ ಸಾಕಷ್ಟು ಏರುಪೇರಾಗುತ್ತದೆ. ಗೃಹಿಣಿಯರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ತೂಕ ಹೆಚ್ಚಾಗುತ್ತದೆ. ಸುಸ್ತು, ಒತ್ತಡ ಕಾಡಲು ಶುರುವಾಗುತ್ತದೆ. ಒತ್ತಡ (Stress) ಮತ್ತು ಕೆಲ ಕಾಯಿಲೆಗಳಿಗೆ ವ್ಯಾಯಾಮವನ್ನು ನಿರ್ಲಕ್ಷಿಸುವುದೇ ಮುಖ್ಯ ಕಾರಣವಾಗುತ್ತದೆ.
ವ್ಯಾಯಾಮ ಮಾಡಲು ಮನಸ್ಸಿದ್ದರೂ ಸಮಯವಿಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಯೋಗ, ವ್ಯಾಯಾಮ ತಪ್ಪಿಸಿಕೊಳ್ತಾರೆ. ಜಿಮ್ ಗೆ ಹೋಗಲು ಸಾಧ್ಯವಾಗದ ಹಾಗೂ ದಿನಕ್ಕೆ ಒಂದು ಗಂಟೆ ತಮ್ಮ ಆರೋಗ್ಯಕ್ಕೆ ಸಮಯ ನೀಡಲು ಸಾಧ್ಯವಿಲ್ಲ ಎನ್ನುವ ಮಹಿಳೆಯರು ಕೇವಲ ಐದು ನಿಮಷ ನೀಡಿದ್ರೆ ಸಾಕು. ಕೇವಲ ಐದೇ ಐದು ನಿಮಿಷ ವ್ಯಾಯಾಮ ಮಾಡಿ ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡಬಹುದಾದ ವ್ಯಾಯಾಮಗಳ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
CRAZY ಎಂದೆನಿಸಿದರೂ ಸಂಗಾತಿ ಈ ಗುಣ ಯಾರಿಗೆ ಇಷ್ಟವಾಗೋಲ್ಲ ಹೇಳಿ?
ಕ್ರಾಸ್ ಟೋ ಟಚ್ (Cross Toe Touch): ಮೊದಲು ಎರಡೂ ಕಾಲುಗಳನ್ನು ಅಗಲ ಮಾಡಿ ನಿಂತುಕೊಳ್ಳಿ. ನಂತ್ರ ನಿಮ್ಮ ಕೈಗಳನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆತ್ತಿ. ಉಸಿರನ್ನು ತೆಗೆದುಕೊಂಡು, ಉಸಿರನ್ನು ಬಿಡುತ್ತಾ ಕೆಳಗೆ ಬಾಗಿ. ನಂತರ ನಿಮ್ಮ ಎಡಗೈಯಿಂದ ಬಲ ಪಾದವನ್ನು ಸ್ಪರ್ಶಿಸಿ. ನಂತ್ರ ಬಲ ಕೈನಿಂದ ಎಡ ಪಾದವನ್ನು ಸ್ಪರ್ಶಿಸಿ. ಇದನ್ನು ಅನೇಕ ಬಾರಿ ಪುನರಾವರ್ತಿಸಿ. ಕ್ರಾಸ್ ಟೋ ಟಚ್ ನಿಂದ ಹೊಟ್ಟೆ ಬೊಜ್ಜು ಕರಗುತ್ತದೆ.
ಸೀಸರ್ ಜಂಪ್ (Seaser Jump) : ಸೀಸರ್ ಜಂಪ್ ಮಾಡಲು ಮೊದಲು ನೇರವಾಗಿ ನಿಂತುಕೊಳ್ಳಿ. ಎಡ ಪಾದವನ್ನು ಮುಂದಕ್ಕೆ ಇರಿಸಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿ. ಜಂಪ್ ಮಾಡ್ತಾ ಬಲಗಾಲನ್ನು ಮುಂದೆ ಹಾಕಿ ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ಎಡಗಾಲಿನ ಮೊಣಕಾಲನ್ನು ನೆಲಕ್ಕೆ ತಾಗಿಸಿ. ನಂತ್ರ ಮತ್ತೆ ಜಂಪ್ ಮಾಡ್ತಾ ಎಡಗಾಲನ್ನು ಮುಂದೆ ಹಾಕ್ತಾ ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ಬಲಗಾಲಿನ ಮೊಣಕಾಲನ್ನು ನೆಲಕ್ಕೆ ತಾಗಿಸಿ. ಜಂಪ್ ಮಾಡುವಾಗ ನಿಮಗೆ ಸಾಧ್ಯವಾದಷ್ಟು ಎತ್ತರಕ್ಕೆ ಜಂಪ್ ಮಾಡಿ. ಈ ವ್ಯಾಯಾಮವನ್ನು ಹಲವಾರು ಬಾರಿ ಮಾಡಿದ್ರೆ ಹಾಗೂ ಪ್ರತಿ ದಿನ ಮಾಡಿದ್ರೆ ಲಾಭ ಸಿಗುತ್ತದೆ.
ಸ್ಟ್ಯಾಂಡಿಂಗ್ ಟೋ ಟಚ್ (Standing Toe Touch): ಈ ವ್ಯಾಯಾಮ ಮಾಡಲು ಮೊದಲು ನೇರವಾಗಿ ನಿಂತುಕೊಳ್ಳಿ. ಈಗ ಒಂದು ಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿ. ಇದರ ನಂತರ ಉಸಿರು ತೆಗೆದುಕೊಂಡು ಉಸಿರನ್ನು ಬಿಡುವಾಗ ನಿಮ್ಮ ಎಡಗೈಯಿಂದ ಬಲ ಪಾದವನ್ನು ಸ್ಪರ್ಶಿಸಿ. ನಂತರ ಬಲಗೈಯಿಂದ ಎಡ ಪಾದವನ್ನು ಸ್ಪರ್ಶಿಸಿ. ಈ ವ್ಯಾಯಾಮವನ್ನು ಕೂಡ ಹಲವಾರು ಬಾರಿ ಮಾಡಬೇಕು.
ತೂಕ ಇಳಿಸಲು ಫ್ಯಾಟ್ ಬರ್ನರ್ ಬಳಸ್ತೀರಾ? ಎಚ್ಚರ ತಪ್ಪಿದ್ರೆ ಅಪಾಯ
ಈ ಮೇಲಿನ ಎಲ್ಲ ವ್ಯಾಯಾಮಗಳು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ತೂಕ ಇಳಿಸಲು ನೆರವಾಗುತ್ತದೆ. ಗೃಹಿಣಿಯರು ಈ ವ್ಯಾಯಾಮಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಪ್ರತಿ ವ್ಯಾಯಾಮಕ್ಕೆ 30-40 ಸೆಕೆಂಡು ನೀಡಿದ್ರೆ ಸಾಕಾಗುತ್ತದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮಾಡಬೇಕು. ಹೀಗೆ 4-5 ಸೆಟ್ ಮಾಡಿದ್ರೆ ಸಾಕಾಗುತ್ತದೆ. ವ್ಯಾಯಾಮದ ಜೊತೆ ಆಹಾರದ ಮೇಲೆ ನಿಯಂತ್ರಣವಿಟ್ಟುಕೊಂಡಲ್ಲಿ ತೂಕ ಇಳಿಸುವುದು ಸುಲಭ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.