Woman Health: ಕಬ್ಬಿಣಾಂಶ ಕೊರತೆಯಾಗಿರೋದನ್ನ ಗುರುತಿಸೋದು ಹೇಗೆ?

By Suvarna NewsFirst Published Dec 31, 2021, 9:33 PM IST
Highlights

ಆಗಾಗ ಕಾಡುವ ಸುಸ್ತು, ಕಾಲುಗಳಲ್ಲಿ ಸೆಳೆತ, ಸೊಂಟ ನೋವು...ಹೀಗೆ ಒಂದಲ್ಲ, ಎರಡಲ್ಲ, ಮಹಿಳೆಯರ ಗೋಳು ಹೇಳಿ ಮುಗಿಯುವುದಿಲ್ಲ. ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯಾಗುವುದು ಹೆಚ್ಚು. ದೇಹದಲ್ಲಿ ಕಬ್ಬಿಣಾಂಶದ ಕೊರತೆಯಾದಾಗ ಅನೇಕ ಲಕ್ಷಣಗಳು ಗೋಚರಿಸುತ್ತವೆ. ಅವುಗಳ ಬಗ್ಗೆ ಗಮನ ನೀಡುವುದು ಅಗತ್ಯ.
 

ಅನೀಮಿಯಾ (Anemia) ಸಮಸ್ಯೆ ಭಾರತದಲ್ಲಿ ಅಗಾಧವಾಗಿದೆ. ಇಲ್ಲಿನ ಅರ್ಧದಷ್ಟು ಮಹಿಳೆಯರು (Women) ಅನೀಮಿಯಾ ಸಮಸ್ಯೆಗೆ ತುತ್ತಾಗಿದ್ದಾರೆ ಎನ್ನುತ್ತವೆ ದಾಖಲೆಗಳು. ಕಬ್ಬಿಣಾಂಶ ಕೊರತೆ (Iron Deficiency), ಫೊಲೇಟ್(Folate), ವಿಟಮಿನ್ ಬಿ 12(Vitamin B 12), ವಿಟಮಿನ್ ಎ (Vitamin A) ಮುಂತಾದ ಅಂಶಗಳ ಕೊರತೆಯಿಂದ ಅನೀಮಿಯಾ ಉಂಟಾಗುತ್ತದೆ. ಯಾವುದೇ ವ್ಯಕ್ತಿ ಅನೀಮಿಯಾಕ್ಕೆ ತುತ್ತಾದರೆ ದೈಹಿಕ (Physical), ಸಾಮಾಜಿಕ (Social) ಹಾಗೂ ಆರ್ಥಿಕ (Financial) ಸಮಸ್ಯೆಗಳನ್ನು ಎದುರಿಸಬೇಕಾಗಿಬರುತ್ತದೆ. ಸುಸ್ತು (Fatigue), ಒತ್ತಡ (Stress) ತಲೆಸುತ್ತಿದಂತಾಗುವುದು ಇದರ ಪ್ರಮುಖ ಲಕ್ಷಣಗಳು. ಪರಿಣಾಮವಾಗಿ, ಉತ್ಪಾದಕತೆ (Productivity) ಕಡಿಮೆಯಾಗುತ್ತದೆ. ತೀವ್ರ ಅನೀಮಿಯಾದಿಂದ ಹೃದಯಾಘಾತವೂ ಉಂಟಾಗಬಹುದು. ಅನೀಮಿಯಾ ಸಮಸ್ಯೆಗೆ ಕಬ್ಬಿಣಾಂಶದ ಕೊರತೆ ಪ್ರಮುಖವಾಗಿದೆ. ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯಾದಾಗ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಅವುಗಳನ್ನು ಗಮನಿಸಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಹೆಚ್ಚುವರಿ ಸಮಸ್ಯೆಗಳಿಂದ ಬಚಾವಾಗಬಹುದು.
 
ಏನೆಲ್ಲ ಲಕ್ಷಣಗಳು?
ಸುಸ್ತೋ ಸುಸ್ತು 
ಕಬ್ಬಿಣಾಂಶ ಕೊರತೆಯ ಮೊದಲ ಲಕ್ಷಣವೆಂದರೆ, ಸುಸ್ತು. ದೈನಂದಿನ ಚಟುವಟಿಕೆಗಳನ್ನೂ ಮಾಡಲು ಸಾಧ್ಯವಾಗದಷ್ಟು ಸುಸ್ತು ಕಂಡುಬರುತ್ತದೆ. ಬೆಳಗ್ಗೆ ತಿಂಡಿ ಮಾಡುವ ಹೊತ್ತಿಗೆ ಸಾಕಾಗಿರುತ್ತದೆ. ಮಧ್ಯಾಹ್ನ ಇನ್ನಷ್ಟು ಸುಸ್ತು, ಊಟವಾದ ಬಳಿಕ ಮಲಗಲೇಬೇಕು. ಸಂಜೆಯೂ ಅಷ್ಟೆ. ಸುಸ್ತಿನಿಂದಾಗಿ ಎಲ್ಲರದಲ್ಲೂ ಉತ್ಸಾಹ ಕಡಿಮೆಯಾಗುತ್ತದೆ. 

ಉಸಿರಾಟದಲ್ಲಿ ವ್ಯತ್ಯಾಸ
ಶ್ವಾಸಕೋಸವು ಸರಿಯಾಗಿ ಕಾರ್ಯನಿರ್ವಹಿಸಲು ಕಬ್ಬಿಣಾಂಶ ಅತ್ಯಗತ್ಯ. ಇದರ ಕೊರತೆಯಾದರೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಬಹುದು. ಅಥವಾ ಕಿರು ಅವಧಿಯ ಉಸಿರಾಟ ಕಂಡುಬರಬಹುದು. ಕಬ್ಬಿಣಾಂಶ ದೇಹದಲ್ಲಿ ಕೆಂಪು ರಕ್ತಕಣ(Red Blood Cells) ಗಳನ್ನು ಉತ್ಪಾದನೆ ಮಾಡುವ ಪ್ರಮುಖ ಖನಿಜವಾಗಿದೆ. ಕೆಂಪು ರಕ್ತಕಣಗಳಿಂದ ದೇಹದ ಎಲ್ಲ ಭಾಗಗಳಿಗೆ ಆಮ್ಲಜನಕ (Oxygen) ದೊರೆಯುತ್ತದೆ. ಆದರೆ, ಕಬ್ಬಿಣಾಂಶದ ಕೊರತೆಯಾದಾಗ ಕೆಂಪು ರಕ್ತಕಣಗಳ ಸಂಖ್ಯೆ ಕುಸಿಯುತ್ತದೆ. ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ದೇಹದ ಭಾಗಗಳಿಗೆ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಗತ್ಯಕ್ಕಿಂತ ಕಡಿಮೆ ಆಮ್ಲಜನಕ ದೊರೆತಾಗ ದೇಹ ಆಮ್ಲಜನಕ ಪಡೆಯಲೋಸುಗ ಹೆಚ್ಚು ಶ್ರಮವಹಿಸುತ್ತದೆ. ಇದರಿಂದ ಉಸಿರಾಟ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗುತ್ತದೆ. 

ಸುಖಾ ಸುಮ್ಮನೆ ಸುಸ್ತು ಆಗುತ್ತಿದ್ಯಾ?

ತಲೆ ಸುತ್ತು ಸಾಮಾನ್ಯ

ಬೆಳಗ್ಗೆ ಎದ್ದಾಕ್ಷಣ ಕೆಲವರು ತಲೆ ಸುತ್ತಿದಂತಾಗುತ್ತದೆ ಎನ್ನುವುದನ್ನು ಕೇಳಿರಬಹುದು. ಪಿತ್ತವೋ ಇನ್ನೇನೋ ಒಂದು ಸಮಸ್ಯೆ ಎಂದುಕೊಂಡರೆ ಅದು ಸಾಮಾನ್ಯವಾಗಿ ಕಬ್ಬಿಣಾಂಶದ ಕೊರತೆಯಾಗಿರುತ್ತದೆ. ಮಿದುಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದರಿಂದ ತಲೆ ಸುತ್ತಿದಂತಾಗುವುದು, ಬವಳಿ ಬೀಳುವುದು, ತಲೆನೋವು ಕಂಡುಬರುವುದು ಈ ಸಮಸ್ಯೆಯ ಸಾಮಾನ್ಯ ಲಕ್ಷಣ. ಮಹಿಳೆಯರಲ್ಲಿ ಈ ಸಮಸ್ಯೆ ಅತಿಯಾಗಿದೆ. ಕಬ್ಬಿಣಾಂಶದ ಕೊರತೆಯಿಂದ ತಲೆನೋವು ಸಹ ಉಂಟಾಗುವುದು ಅಧ್ಯಯನಗಳಿಂದ ದೃಢಪಟ್ಟಿರುವ ಸಂಗತಿ. 

ಹೃದಯದ ಬಡಿತ ಹೆಚ್ಚುತ್ತೆ
ಕಬ್ಬಿಣಾಂಶದ ಕೊರತೆಯಾದಾಗ ಪದೇ ಪದೆ ಕಿರು ಅವಧಿಯ ಉಸಿರಾಟ ಕಂಡುಬರುತ್ತದೆ ಎನ್ನುವುದನ್ನು ಅರಿತಿದ್ದೇವೆ. ದೇಹಕ್ಕೆ ಬೇಕಾದ ಅಗತ್ಯ ಆಮ್ಲಜನಕದ ಪೂರೈಕೆಗಾಗಿ ಹೃದಯವೂ ಹೆಚ್ಚು ಬಾರಿ ಬಡಿದುಕೊಳ್ಳುತ್ತದೆ. ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುವುದು ಹೃದಯದ ಜವಾಬ್ದಾರಿ ಆಗಿರುವುದರಿಂದ ಹೆಚ್ಚು ಶ್ರಮ ಬೇಕಾಗುತ್ತದೆ. ಹೃದಯದ ಬಡಿತ ಹೆಚ್ಚುವುದರ ಜತೆಗೆ, ಕ್ರಮೇಣ ಹೃದಯಕ್ಕೆ ಹಾನಿಯಾಗುತ್ತದೆ. 

ಕಂಗೆಡಿಸುವ ಬಾಯಿ ಹುಣ್ಣು (Mouth Ulcer) 
ಬಾಯಿ ಹುಣ್ಣಿನ ಸಮಸ್ಯೆ ಅನುಭವಿಸಿದವರಿಗಷ್ಟೇ ಗೊತ್ತು. ಕಬ್ಬಿಣಾಂಶದ ಕೊರತೆಯಿಂದ ಬಾಯಿ ಒಣಗುವುದು, ತುಟಿ ಹಾಗೂ ನಾಲಿಗೆಯ ಮೇಲೆಲ್ಲ ಚಿಕ್ಕ ಚಿಕ್ಕ ಹುಣ್ಣುಗಳಾಗುತ್ತಿರುತ್ತವೆ. ಪದೇ ಪದೆ ಹೀಗಾದರೆ ಒಮ್ಮೆ ಕಬ್ಬಿಣಾಂಶದ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. 

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಬೆಲ್ಲ

ಕಳೆಗುಂದುವ ಚರ್ಮ (Skin Problem)
ಕೆಂಪು ರಕ್ತಕಣಗಳ ಕೊರತೆಯಾದರೆ ಸಹಜವಾಗಿ ಚರ್ಮ ಬಿಳಿಚಿಕೊಂಡಂತಾಗುತ್ತದೆ, ಕಳಾಹೀನವಾಗುತ್ತದೆ. ಕಣ್ಣುಗಳ ಕೆಳಗೆ ಕಪ್ಪಾಗುತ್ತದೆ. ಕೈ ಬೆರಳುಗಳು ಸಹ ಬಿಳಿಚಿಕೊಳ್ಳಬಹುದು. 
 

click me!