
Home Remedy for Washing Machine Smell: ಈಗೆಲ್ಲಾ ಕೈಯ್ಯಲ್ಲಿ ಬಟ್ಟೆ ಒಗೆಯುವವರು ಕಡಿಮೆಯೇ. ಕಡಿಮೆ ಕ್ವಾಲಿಟಿಯದ್ದಾದರೂ ವಾಷಿಂಗ್ ಮಷಿನ್ ಬೇಕೆ ಬೇಕು. ಅಷ್ಟೇ ಏಕೆ, ಈಗೀಗ ಪಿಜಿಗಳಲ್ಲಿಯೂ ವಾಷಿಂಗ್ ಮಷಿನ್ ಸೌಲಭ್ಯವಿದೆ. ಹಾಗಾಗಿ ಬ್ಯಾಚುಲರ್ಸ್ ಕೂಡ ವಾಷಿಂಗ್ ಮಷಿನ್ ಮೇಲೆ ಡಿಪೆಂಡ್ ಆಗಿದ್ದಾರೆ ಅಂತಾಯ್ತು. ಮಷಿನ್ ಬಟ್ಟೆಯನ್ನ ಚೆನ್ನಾಗಿ ತೊಳೆದು ಕೊಡುತ್ತದೆ ಓಕೆ. ಆದ್ರೆ ಅದನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಮಷಿನ್ ಮಾತ್ರವಲ್ಲ, ಕ್ರಮೇಣ ಬಟ್ಟೆಗಳಲ್ಲಿಯೂ ಕೆಟ್ಟ ವಾಸನೆ ಬರಲು ಪ್ರಾರಂಭಿಸಬಹುದು. ಕೆಲವರು ಬಟ್ಟೆ ಒಗೆದ ನಂತರವೂ ಬಟ್ಟೆ ಮತ್ತು ಮಷಿನ್ ಎರಡೂ ಕೆಟ್ಟ ವಾಸನೆ ಬರುತ್ತದೆ ಎಂದು ದೂರುತ್ತಾರೆ. ಇದಕ್ಕೆ ಕಾರಣ ಯಂತ್ರದೊಳಗೆ ಕೊಳಕು, ತೇವಾಂಶ ಮತ್ತು ಡಿಟರ್ಜೆಂಟ್ ಸಂಗ್ರಹವಾಗಿರುತ್ತೆ. ಆಗ ಇಷ್ಟು ಚಿಕ್ಕ ವಿಷಯಕ್ಕೆ ಮಷಿನ್ ರಿಪೇರಿ ಮಾಡೋರನ್ನ ಕರೆಯೋಕೂ ಹಿಂಜರಿಕೆ. ನಿಮಗೂ ಏನ್ ಮಾಡಬೇಕು ಅಂತ ಗೊತ್ತಾಗಲ್ಲ ಅಲ್ವೇ, ಆದ್ರೆ ಅದಕ್ಕೂ ಪರಿಹಾರವಿದೆ. ಹೌದು, ಕೇವಲ 5 ರೂಪಾಯಿಯಲ್ಲಿ ನೀವು ಮಷಿನ್ ಅನ್ನು ಸ್ವಚ್ಛ ಮತ್ತು ಫ್ರೆಶ್ ಆಗಿ ಇಡಬಹುದು. ಹಾಗಾದ್ರೆ ವಾಷಿಂಗ್ ಮಷಿನ್ ಕ್ಲೀನ್ ಮಾಡೋ ಈಸಿಯಾದ ಮನೆಮದ್ದು ಯಾವುದೆಂದು ನೋಡೋಣ ಬನ್ನಿ...
ಯಾವ ವಸ್ತುಗಳನ್ನು ಬಳಸಬೇಕು?
2 ಟೀ ಚಮಚ ಅಡುಗೆ ಸೋಡಾ (5 ರೂ.ಗೆಲ್ಲಾ ಅಂಗಡಿಯಲ್ಲಿ ಲಭ್ಯ)
1 ಕಪ್ ವಿನೆಗರ್ (ಎಲ್ರೂ ಮನೆಯಲ್ಲೂ ಇರುತ್ತೆ)
ಬಿಸಿ ನೀರು
ಇದು ಹೇಗೆ ಕ್ಲೀನ್ ಮಾಡುತ್ತೆ?
ಮೊದಲು ಬಟ್ಟೆಯನ್ನೆಲ್ಲಾ ತೆಗೆದು ವಾಷಿಂಗ್ ಮಷಿನ್ ಖಾಲಿ ಮಾಡಿ.
ಈಗ ಡ್ರಮ್‌ಗೆ ಒಂದು ಕಪ್ ವಿನೆಗರ್ ಹಾಕಿ.
ನಂತರ ಅದರ ಮೇಲೆ 2 ಚಮಚ ಅಡುಗೆ ಸೋಡಾ ಸೇರಿಸಿ.
ನೀವು ಸ್ವಲ್ಪ ಬೆಚ್ಚಗಿನ ನೀರನ್ನು ಕೂಡ ಸೇರಿಸಬಹುದು.
ಈಗ ಯಂತ್ರವನ್ನು "ಹಾಟ್" ಮೋಡ್‌ನಲ್ಲಿಟ್ಟು, ಆದ ನಂತ್ರ ಆಫ್ ಮಾಡಿ (ಈಗ ಎಲ್ಲಾ ವಾಷಿಂಗ್ ಮಷಿನ್‌ನಲ್ಲೂ ಈ ಆಯ್ಕೆ ಇರುತ್ತೆ)
ರಬ್ಬರ್ ಗ್ಯಾಸ್ಕೆಟ್ ಸ್ವಚ್ಛಗೊಳಿಸಲು
ಡ್ರಮ್ ನಂತರ ವಾಷಿಂಗ್ ಮಷಿನ್ ಬಾಗಿಲಿನ ಸುತ್ತಲಿನ ರಬ್ಬರ್ ಗ್ಯಾಸ್ಕೆಟ್ ಹೆಚ್ಚಾಗಿ ಶಿಲೀಂಧ್ರ ಮತ್ತು ವಾಸನೆಯನ್ನು ಸಂಗ್ರಹಿಸುತ್ತದೆ. ಇದಕ್ಕಾಗಿ ನೀವು ಒಂದು ಬಟ್ಟೆಯ ಮೇಲೆ ಸ್ವಲ್ಪ ವಿನೆಗರ್ ಹಾಕಿ ಹಳೆಯ ಹಲ್ಲುಜ್ಜುವ ಬ್ರಷ್ ನಿಂದ ಉಜ್ಜಿ. ಗ್ಯಾಸ್ಕೆಟ್ ವಾಷಿಂಗ್ ಮಷಿನ್‌ನ ವಿವಿಧ ಭಾಗಗಳನ್ನು ಸಂಪರ್ಕಿಸುತ್ತೆ. ಪ್ರತಿಯೊಂದು ಮಾಡೆಲ್‌ನಲ್ಲೂ ಇದು ವಿಭಿನ್ನವಾಗಿರುತ್ತದೆ.
ಇದು ಹೇಗೆ ವರ್ಕ್ ಆಗುತ್ತೆ?
ಅಡುಗೆ ಸೋಡಾ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ವಾಸನೆಯನ್ನು ನಿವಾರಿಸುತ್ತದೆ.
ವಿನೆಗರ್ ಸಂಗ್ರಹವಾಗಿರುವ ಕೊಳಕು, ಡಿಟರ್ಜೆಂಟ್ ಶೇಖರಣೆ ಮತ್ತು ವಾಸನೆಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಕೊನೆಗೆ ಇವೆಲ್ಲಾ ಒಟ್ಟಾಗಿ ಮಷಿನ್ ಸ್ವಚ್ಛಗೊಳಿಸುತ್ತದೆ ಮತ್ತು ಒಳಗಿನಿಂದ ಉತ್ತಮ ವಾಸನೆಯನ್ನು ಹೊರಸೂಸುವಂತೆ ನೋಡಿಕೊಳ್ಳುತ್ತದೆ.
ಸ್ವಚ್ಛಗೊಳಿಸಿದ ನಂತ್ರ ಏನ್ ಮಾಡ್ಬೇಕು?
ಒಳಗೆ ತೇವಾಂಶ ಇರದಂತೆ ವಾಷಿಂಗ್ ಮಷಿನ್ ತೆರೆದಿಡಿ.
ವಾರಕ್ಕೊಮ್ಮೆಯಾದರೂ ವಾಷಿಂಗ್ ಮಷಿನ್ ಮುಚ್ಚಳವನ್ನು ಸ್ವಲ್ಪ ತೆರೆದಿಡಿ.
ಈ ವಾಷಿಂಗ್ ಮಷಿನ್ ಶುಚಿಗೊಳಿಸುವ ಪ್ರಕ್ರಿಯೆಯನ್ನು ತಿಂಗಳಿಗೊಮ್ಮೆ ಪುನರಾವರ್ತಿಸಿ.
ಈ ವಿಷಯಗಳನ್ನು ನೆನಪಿನಲ್ಲಿಡಿ
ವಾಷಿಂಗ್ ಮಷಿನ್ ಬಳಸುವವರು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ವಾಶ್ ಟಬ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಬಟ್ಟೆಗಳನ್ನು ತುಂಬಬೇಡಿ.
ಆಗಾಗ್ಗೆ ಮಷಿನ್ ಸ್ವಚ್ಛಗೊಳಿಸುತ್ತಿರಬೇಕು ಎಂಬುದನ್ನು ನೆನಪಿನಲ್ಲಿಡಬೇಕು.
ಬ್ಲೀಚ್ ಮತ್ತು ವಿನೆಗರ್ ಅನ್ನು ಒಟ್ಟಿಗೆ ಬಳಸಬೇಡಿ.
ವಾಷಿಂಗ್ ಮಷಿನ್‌ನಲ್ಲಿ "ಡಿಟರ್ಜೆಂಟ್ ಟ್ರೇ" ಇದ್ದರೆ, ಅದನ್ನು ತೆಗೆದು ಪ್ರತ್ಯೇಕವಾಗಿ ಸ್ವಚ್ಛಗೊಳಿಸಿ.
ಬಟ್ಟೆ ಒಗೆದ ನಂತರ ಯಂತ್ರವನ್ನು ತಕ್ಷಣ ಮುಚ್ಚಬೇಡಿ, ಸ್ವಲ್ಪ ತೆರೆದಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.