ಗರ್ಭಾವಸ್ಥೆಯ ಸವಾಲುಗಳು, ಗರ್ಭಿಣಿಯರ ಕುರಿತ ವಂಡರ್ ವುಮೆನ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ನವೆಂಬರ್ 18ರಂದು ಸೋನಿ ಲೈವ್‌ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಚಿತ್ರದಲ್ಲಿ ಆರು ಗರ್ಭಿಣಿಯರ ಜೀವನಕಥೆಯ ಕಥಾಹಂದರವಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಗರ್ಭಾವಸ್ಥೆ ಎಂಬುದು ಅದೆಷ್ಟು ಸಂಕಷ್ಟದ ಸಮಯವೆಂಬುದು ಹೆಣ್ಣಿಗಷ್ಟೇ ಗೊತ್ತು. ಗರ್ಭಿಣಿಯಾದಲ್ಲಿಂದ ಹೆರಿಗೆಯಾಗುವ ವರೆಗೂ ಹೆಣ್ಣು ಪ್ರತಿ ಹಂತದಲ್ಲೂ ದೈಹಿಕವಾಗಿ, ಮಾನಸಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಾಳೆ, ನೋವನ್ನುಣ್ಣುತ್ತಾಳೆ, ಕಣ್ಣೀರು ಹಾಕುತ್ತಾಳೆ. ಇದೆಲ್ಲವನ್ನೂ ಎಳೆಎಳೆಯಾಗಿ ತೆರೆ ಮುಂದೆ ತರಲು ಮಾಲಿವುಡ್ ಸಿದ್ಧವಾಗಿದೆ. ಮಲಯಾಳಂನಲ್ಲಿ ಪ್ರೆಗ್ನೆನ್ಸಿ ಕುರಿತಾದ ಸಿನಿಮಾವೊಂದು ರೆಡಿಯಾಗುತ್ತಿದ್ದು, ಟ್ರೇಲರ್ ಈಗಾಗ್ಲೇ ರಿಲೀಸ್ ಆಗಿದೆ.
undefined
ಬಹುಭಾಷಾ ನಟಿ ಪಾರ್ವತಿ ಮೆನನ್ ಮತ್ತು ನಿತ್ಯಾ ಮೆನನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ವಂಡರ್ ವುಮೆನ್ ಚಿತ್ರದ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಪಾರ್ವತಿ ಹಾಗೂ ನಿತ್ಯ ಮೆನನ್ ಇನ್‌ಸ್ಟಾಗ್ರಾಂನಲ್ಲಿ ಪ್ರೆಗ್ನೆನ್ಸಿ ಪೋಸ್ಟ್ ಹಾಕಿ ಗುಡ್ ನ್ಯೂಸ್ ಎಂದು ಪೋಸ್ಟ್ ಮಾಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಇದು ಇವರಿಬ್ಬರ ಅಭಿನಯದ ಚಿತ್ರದ ಬಗ್ಗೆ ಎಂಬುದು ತಿಳಿದುಬಂದಿದೆ. ಗರ್ಭಾವಸ್ಥೆಯ ಸವಾಲುಗಳು, ಗರ್ಭಿಣಿಯರ ಕುರಿತ ವಂಡರ್ ವುಮೆನ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ನವೆಂಬರ್ 18ರಂದು ಸೋನಿ ಲೈವ್‌ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಚಿತ್ರದಲ್ಲಿ ಆರು ಗರ್ಭಿಣಿಯರ (Preganant) ಜೀವನಕಥೆಯ ಕಥಾಹಂದರವಿದೆ.
ತಾಯಿ ಆಗ್ತಿದ್ದಾರಾ ಪಾರ್ವತಿ, ನಿತ್ಯಾ ಮೆನನ್? ಮದುವೆ ಆಗದೇ ಇದು ಹೇಗೆ ಸಾಧ್ಯ ಅಂದ್ರು ನೆಟ್ಟಿಗರು
ಗರ್ಭಾವಸ್ಥೆಯ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ ಉತ್ತರ 'ವಂಡರ್ ವುಮೆನ್'
ಗರ್ಭಧಾರಣೆ, ಹೆರಿಗೆ, ನೋವು, ಪ್ರಸವ ಮೊದಲಾದ ವಿಚಾರಗಳ ಕುರಿತು ಹಲವು ಗೊಂದಲಗಳಿದ್ದು ಈ ಗರ್ಭಿಣಿಯರು ಪ್ರಸವಪೂರ್ವ ತರಗತಿಗೆ ಆಗಮಿಸುತ್ತಾರೆ. ಗರ್ಭಾವಸ್ಥೆ ಕುರಿತು ತಿಳಿದುಕೊಳ್ಳುವ ಹುಡುಕಾಟದಲ್ಲಿ ಅವರು ತಮ್ಮ ಬಗ್ಗೆಯೇ ಹಲವು ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಹಾಗೆಯೇ ಗರ್ಭಾವಸ್ಥೆಯ ಬಗ್ಗೆ ಇರುವ ಹಲವು ಪ್ರಶ್ನೆಗಳಿಗೆ (Questions) ಉತ್ತರ ಕಂಡುಕೊಳ್ಳುವುದೇ ಚಿತ್ರದ ಕಥೆ. ಚಿತ್ರದಲ್ಲಿ ಪಾರ್ವತಿ ತಿರುವೋತ್, ನಿತ್ಯಾ ಮೆನನ್, ಪದ್ಮಪ್ರಿಯಾ, ನಾಡಿಯಾ ಮೊದಲಾದವರು ನಟಿಸಿದ್ದಾರೆ.
ಕನ್ನಡದ ಮಿಲನ ಮತ್ತು ಮೈನಾ ಚಿತ್ರದ ನಾಯಕಿಯರಾದ ನಿತ್ಯಾ ಮೆನನ್ ಮತ್ತು ಪಾರ್ವತಿ ಸಾಮಾಜಿಕ ಜಾಲತಾಣದಲ್ಲಿ 'ವಂಡರ್ ವುಮೆನ್ ಚಿತ್ರದ ಬಗ್ಗೆ ಸಖತ್ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಇಬ್ಬರೂ ಪ್ರೆಗ್ನೆನ್ಸಿ ಪೋಸ್ಟ್ ಹಾಕಿದ ಮೇಲಂತೂ ಇವರು ಮದುವೆಯಾಗದೇ ಗರ್ಭಿಣಿಯಾದ್ರಾ ಎಂಬ ಚರ್ಚೆ ಕೂಡ ನಡೆದಿತ್ತು. ಇದೀಗ ಈ ಗಾಸಿಪ್‌ಗೂ ತೆರೆ ಬಿದ್ದಿದೆ. ನಿತ್ಯಾ ಮತ್ತು ಪಾರ್ವತಿ `ವಂಡರ್ ವುಮೆನ್’ ಚಿತ್ರಕ್ಕಾಗಿ (Movie) ಜೊತೆಯಾಗಿದ್ದಾರೆ.
ನಟಿಯರು ಹಂಚಿಕೊಂಡ ಪ್ರೋಮೋದಲ್ಲಿ ಪಾತ್ರ ಪರಿಚಯವನ್ನು ನೋಡಬಹುದು. ನಿತ್ಯಾ ನೋರಾ ಪಾತ್ರದಲ್ಲಿ ನಟಿಸುತ್ತಿದ್ದು ಅವರು ಗರ್ಭಿಣಿಯಾಗಿರುವುದಕ್ಕೆ ಫುಲ್ ಖುಷಿಯಾಗಿರುತ್ತಾರೆ. ಪದ್ಮಪ್ರಿಯಾ ತಮಿಳು ಸಂಪ್ರದಾಯಸ್ಥ ಮನೆತನದ ಪಪ್ಪು ಎಂಬ ಗರ್ಭಿಣಿ ಮಹಿಳೆಯಾಗಿ ನಟಿಸುತ್ತಿದ್ದಾರೆ. ಪಾರ್ವತಿ ಮಿನಿ ಪಾತ್ರದಲ್ಲಿ ನಟಿಸುತ್ತಿದ್ದು, ಮಗುವನ್ನು ಒಬ್ಬಂಟಿಯಾಗಿ ಬೆಳೆಸಬೇಕಾಗಿರುವುದರಿಂದ ಗರ್ಭಿಣಿಯಾಗಿರುವ ಬಗ್ಗೆ ಅಷ್ಟೊಂದು ಖುಷಿಯಾಗಿಲ್ಲ ಎಂದು ವ್ಯಕ್ತವಾಗುತ್ತದೆ. ಗರ್ಭಿಣಿಯರಿಗಾಗಿ ನಡೆಸುವ ಕಾರ್ಯಾಗಾರದಲ್ಲಿ ಎಲ್ಲಾ ಮಹಿಳೆಯರು ಭೇಟಿಯಾಗಿ ಪರಸ್ಪರ ಸ್ನೇಹಿತೆಯರಾಗುವುದನ್ನು ನೋಡಬಹುದು.
regnancy Cravings: ಗರ್ಭಾವಸ್ಥೆಯಲ್ಲಿ ಬಯಕೆ ಆಗದೇ ಇರೋದು ಸಾಮಾನ್ಯವೇ?
ಅಂಜಲಿ ಮೆನನ್ ನಿರ್ದೇಶನದ ಚಿತ್ರ ನವೆಂಬರ್ 18ರಂದು ರಿಲೀಸ್
ಸೂಪರ್ ಹಿಟ್ ಚಿತ್ರ 'ಬೆಂಗಳೂರು ಡೇಸ್' ನಿರ್ದೇಶಿಸಿದ್ದ ಅಂಜಲಿ ಮೆನನ್ `ವಂಡರ್ ವುಮೆನ್’ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಟಚ್‌ನೊಂದಿಗೆ ಚಿತ್ರ ಮೂಡಿಬರಲಿದೆ. ಲಿಟಲ್ ಫಿಲಂಸ್ ಪ್ರೊಡಕ್ಷನ್ ಜೊತೆಗೆ ಆರ್‌ಎಸ್‌ವಿಪಿ ಫ್ಲೈಯಿಂಗ್ ಯೂನಿಕಾರ್ನ್ ಎಂಟರ್‌ಟೈನ್‌ಮೆಂಟ್ ಚಿತ್ರ ನಿರ್ಮಾಣ ಮಾಡಿದೆ.