ಹೆಲನ್… ಹೆಸರು ಕೇಳ್ತಿದ್ದಂತೆ ಒಂದಿಷ್ಟು ಸೂಪರ್ ಹಿಟ್ ಡಾನ್ಸ್ ನೆನಪಾಗುತ್ವೆ. ಹೆಲನ್ ವಿಡಿಯೋ ಒಂದು ವೈರಲ್ ಆಗಿದೆ. ಇಲ್ಲಿ ತನಗೆ ನಶೆ ಏರಿಸುವ ವಿಷ್ಯ ಯಾವುದು ಎಂಬುದನ್ನು ಹೆಲನ್ ಹೇಳಿದ್ದಾರೆ.
ಪಿಯಾ ತು ಅಬ್ ತೋ ಆಜಾ ಹಾಡು ಕೇಳ್ತಿದ್ದಂತೆ ಬಳುಕುವ ಬಳ್ಳಿಯ ಮೈಮಾಟ ಹೊಂದಿದ್ದ ಹೆಲನ್ (Bollywood Actress Helen) ನೆನಪಾಗ್ತಾರೆ. ಈಗಿನ ಮಕ್ಕಳಿಗೆ ಹೆಲನ್ ಅಪರಿಚಿತರಾದ್ರೂಐವತ್ತು – ಅರವತ್ತು ಆಸುಪಾಸಿನ ಜನರಿಗೆ ಹೆಲನ್, ಸ್ವಪ್ನ ಸುಂದರಿ. ಹೆಲನ್ ಹೆಜ್ಜೆ ಹಾಕಿದ ಪ್ರತಿಯೊಂದು ಹಾಡು ಸೂಪರ್ ಹಿಟ್.. ಹೆಲನ್ ಡಾನ್ಸ್ ಮಾಡ್ತಿದ್ರೆ ಇಡೀ ಥಿಯೇಟರ್ ಎದ್ದು ಕುಳಿಯುತ್ತಿತ್ತು. 70 ಮತ್ತು 80 ರ ದಶಕದ ಬಾಲಿವುಡ್‌ನ ಸಾಟಿಯಿಲ್ಲದ ನಟಿ ಹೆಲನ್. ಡಾನ್ ಸಿನಿಮಾದ ಯೇ ಮೇರಾ ದಿಲ್, ಶೋಲೆಯ ಮೆಹಬೂಬಾ ಮೆಹಬೂಬಾ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಹಾಡಿಗೆ ಡಾನ್ಸ್ ಮಾಡಿದ್ದಾರೆ ಹೆಲನ್. ಸಲೀಮ್ ಖಾನ್ ಮದುವೆಯಾದ ಹೆಲನ್ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದ್ರೆ ಇತ್ತೀಚಿಗೆ ಅವರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಹೆಲನ್ ಗೆ ಈಗ 85 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲೂ ಹೆಲನ್ ಯುವಕರು ನಾಚುವಂತಿದ್ದಾರೆ. ಹೆಲನ್ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಿದ್ದ ಫೋಟೋಗಳು ಎಲ್ಲರ ಗಮನ ಸೆಳೆದಿವೆ. ಮತ್ತೆ ಅವರ ಡಾನ್ಸ್ ಕಣ್ಮುಂದೆ ಹಾದುಹೋಗುವಂತೆ ಮಾಡಿದೆ.
ಪ್ರಸಿದ್ಧ ಪೈಲೇಟ್ಸ್ (Pilates) ತರಬೇತುದಾರ ಯಾಸ್ಮಿನ್ ಕರಾಚಿವಾಲಾ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹೆಲನ್ ಜೊತೆಗಿರುವ ವಿಡಿಯೋ ಹಾಗೂ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಪೈಲೇಟ್ಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಹೆಲನ್ (Helen) ಸಾಬೀತುಪಡಿಸಿದ್ದಾರೆ. ಯಾಸ್ಮಿನ್ ಕರಾಚಿವಾಲಾ ಹಂಚಿಕೊಂಡಿರುವ ವಿಡಿಯೋದಲ್ಲಿ ಹೆಲನ್ ಕೆಲವು ಪೈಲೇಟ್ಸ್ ವ್ಯಾಯಾಮ ಮಾಡೋದನ್ನು ನೀವು ನೋಡ್ಬಹುದು. ಇದಾದ್ಮೇಲೆ ಹೆಲನ್ ಕೂಡ ಮಾತನಾಡಿದ್ದಾರೆ.
ಯಾರೋ ಬಂದು ಏನೇ ಹೇಳಿಕೊಟ್ರು ಕಲಿಯುತ್ತಿದ್ದಾನೆ ಅನ್ನೋ ಭಯ ಶುರುವಾಗಿತ್ತು:ಮಗನ ಬಗ್ಗೆ ಮೇಘನಾ ರಾಜ್ ಟೆನ್ಶನ್
ನಾನು ತುಂಬಾ ಚೈತನ್ಯ ಹೊಂದಿದ್ದು, ಖುಷಿಯಾಗಿದ್ದೇನೆ. ಪ್ರತಿ ದಿನ ಇದನ್ನು ಎದುರು ನೋಡ್ತೇನೆ ಎಂದು ಹೆಲನ್ ಹೇಳಿದ್ದಾರೆ. ಇದು ನನಗೆ ಹೆಚ್ಚು ಸಂತೋಷ ನೀಡಿದೆ. ಮದ್ಯಪಾನ ಮಾಡಿ, ಧೂಮಪಾನ ಮಾಡಿ ನಶೆ ಏರಿಸಿಕೊಳ್ಳಬೇಕಾಗಿಲ್ಲ. ಪೈಲೇಟ್ಸ್ ನಿಂದಲೇ ನನಗೆ ಸಂತೋಷ ಸಿಗ್ತಿದೆ. ನನಗೆ ಇಲ್ಲಿಗೆ ಬರೋದು ಇಷ್ಟದ ವಿಷ್ಯ. ಎಲ್ಲ ತರಬೇತುದಾರರಿಗೆ ಧನ್ಯವಾದ ಹೇಳ್ತೇನೆ ಎಂದ ಹೆಲನ್, ನನಗೆ ಈಗ 85 ವರ್ಷ. ಆದ್ರೂ ನಾನು ಇದನ್ನೆಲ್ಲ ಮಾಡಬಲ್ಲೆ ಎಂದಿದ್ದಾರೆ.
ಮದುವೆ ವಿಷ್ಯಕ್ಕೆ ಸುದ್ದಿಯಾಗಿದ್ದ ಹೆಲನ್ : ಮೊದಲೇ ಹೇಳಿದಂತೆ ಹೆಲನ್, ಸಲೀಂ ಖಾನ್ ಅವರನ್ನು ಮದುವೆ ಆಗಿದ್ದಾರೆ. ಸಲೀಂ ಖಾನ್ ಅವರಿಗೆ ಆಗ್ಲೇ ಮದುವೆ ಆಗಿತ್ತು. ಅವರು ಸಲ್ಮಾ ಖಾನ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಸಲ್ಮಾನ್ ಖಾನ್ ಸೇರಿದಂತೆ ಮೂರು ಮಕ್ಕಳಿದ್ದರು. ಸಲ್ಮಾ ಖಾನ್ ಮೊದಲ ಹೆಸರು ಸುಶೀಲಾ ಚರಕ್ ಆಗಿತ್ತು. 1964ರಲ್ಲಿ ಸುಶೀಲಾ ಕೈ ಹಿಡಿದಿದ್ದ ಸಲೀಂ ಖಾನ್, 1980ರಲ್ಲಿ ಹೆಲನ್ ಪ್ರೀತಿಯಲ್ಲಿ ಬಿದ್ದಿದ್ದರು. ಹೆಲನ್ ಗುಂಗಿನಿಂದ ಹೊರಗೆ ಬರಲಾಗದೆ ಅವರನ್ನು ಮದುವೆಯಾದ್ರು.
ಆ ದಿನವನ್ನು ನೆನಪು ಮಾಡಿಕೊಂಡ ಹೆಲನ್, ಸಂದರ್ಶನವೊಂದರಲ್ಲಿ ಅದ್ರ ಬಗ್ಗೆ ಹೇಳಿದ್ದರು. ಸಲೀಂ ಖಾನ್ ಅವರ ಬಗ್ಗೆ ನಾನು ಮೊದಲು ಗಮನ ಹರಿಸಿರಲಿಲ್ಲ. ನಾನು ಸ್ಟಾರ್ ಎನ್ನುವ ಕಾರಣಕ್ಕಲ್ಲ, ಬ್ಯುಸಿಯಾಗಿದ್ದ ಕಾರಣ. ಒಂದು ದಿನ, ಸಲೀಂ ಖಾನ್ ನನ್ನ ಬಗ್ಗೆ ಅಜೀತ್ ಅವರನ್ನು ಕೇಳಿದ್ರು, ಈ ಮೇಡಂ ಯಾರನ್ನೂ ನೋಡೋದಿಲ್ವಾ ಎಂದು. ಆಗ ಅಜೀತ್, ಅವರು ಎಲ್ಲರನ್ನೂ ಪಿಠೋಪಕರಣದಂತೆ ನೋಡ್ತಾರೆ ಎಂದು ನನ್ನ ಬಗ್ಗೆ ಹೇಳಿದ್ದರು ಎನ್ನುತ್ತಾರೆ ಹೆಲನ್.
ಭರ್ಜರಿ ಪ್ರದರ್ಶನ ಕಾಣುತ್ತಿರುವ ಲವ್ ಲಿ ಸಿನಿಮಾ: ಎಲ್ಲೆಲ್ಲೂ ಥಿಯೇಟರ್‌ಗಳು ಹೌಸ್ ಫುಲ್ !
ಆರಂಭದಲ್ಲಿ ಸಲ್ಮಾ ಹಾಗೂ ಸಲ್ಮಾನ್, ಅರ್ಬಾಜ್ ಮತ್ತು ಸೊಹೈಲ್ ಮತ್ತು ಮಗಳು ಅಲ್ವಿರಾ ವಿರೋಧ ಮಾಡಿದ್ರೂ ಕೊನೆಯಲ್ಲಿ ಹೆಲನ್, ಇವರೆಲ್ಲರ ಅಚ್ಚುಮೆಚ್ಚಾಗಿದ್ದಾರೆ. ತಮ್ಮ ಫಿಟ್ನೆಸ್ ನಿಂದ ಮಾತ್ರವಲ್ಲ ತಮ್ಮ ಸ್ವಭಾವದಿಂದಲೂ ಹೆಲನ್ ಎಲ್ಲರನ್ನು ಸೆಳೆದಿದ್ದಾರೆ.