ವೈದ್ಯೆಯಾಗಿಯೇ ಯುಪಿಎಸ್‌ಸಿ ಪಾಸ್! IAS ಅಧಿಕಾರಿಯನ್ನೇ 2ನೇ ಮದ್ವೆಯಾದ ರೇಣು!

By Roopa HegdeFirst Published Jun 18, 2024, 2:34 PM IST
Highlights

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗ್ಬೇಕು, ಅದ್ರಲ್ಲೂ ಮೊದಲ ಪ್ರಯತ್ನದಲ್ಲಿಯೇ ಪಾಸ್ ಆಗ್ಬೇಕು ಎಂಬ ಕನಸು ಅನೇಕರಿಗಿರುತ್ತೆ. ಆದ್ರೆ ಅದು ಅಷ್ಟು ಸುಲಭವಲ್ಲ. ಒಂದ್ಕಡೆ ಕೆಲಸ ಮಾಡ್ತಾ ಇನ್ನೊಂದು ಕಡೆ ಓದಿ ರ್ಯಾಂಕ್ ಪಡೆಯೋದು ಸಾಮಾನ್ಯರಿಗೆ ಸಾಧ್ಯವಿಲ್ಲ. ಆದ್ರೆ ಇವರು ಮಾಡಿ ತೋರಿಸಿದ್ದಾರೆ. 
 

ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಯುಪಿಎಸ್‌ಸಿ ಪರೀಕ್ಷೆ (India's Toughest Exam UPSC) ಮೊದಲ ಸ್ಥಾನದಲ್ಲಿದೆ. ಈ ಪರೀಕ್ಷೆ ಬರೆದು, ಸಂದರ್ಶನದಲ್ಲಿ ಪಾಸ್ ಆಗೋದು ಸುಲಭದ ಮಾತಲ್ಲವೇ ಅಲ್ಲ. ಅನೇಕರು ವರ್ಷವಿಡಿ, ಹಗಲು- ರಾತ್ರಿ ಎನ್ನದೆ ಓದಿ ಈ ಪರೀಕ್ಷೆ ಪಾಸ್ ಆಗುವ ಪ್ರಯತ್ನ ನಡೆಸುತ್ತಾರೆ. ಕೊನೆ ಛಾನ್ಸ್ ವರೆಗೂ ಪರೀಕ್ಷೆ ಬರೆದು ಪಾಸ್ ಆಗದ ಅನೇಕರಿದ್ದಾರೆ. ಯುಪಿಎಸ್ಸಿ ಲಕ್ಷಾಂತರ ಜನರ ಕನಸು. ಗುರುಗ್ರಾಂನಲ್ಲಿ ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಅವರ ತಾಯಿ ಪ್ರಜ್ಞೆ ತಪ್ಪಿ ಬಿದ್ದ ಘಟನೆಯೊಂದು ನಡೆದಿತ್ತು. ಪರೀಕ್ಷೆ ಎಷ್ಟು ಮಹತ್ವದ್ದು ಹಾಗೆ ಎಷ್ಟು ಕಠಿಣ ಎಂಬುದು ಈ ಒಂದು ಘಟನೆಯಿಂದ ಸಾಭೀತಾಗುತ್ತದೆ. ನಾವಿಂದು ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಬಾರಿ ಪಾಸ್ ಆದ ಸಾಧಕಿಯೊಬ್ಬರ ಮಾಹಿತಿಯನ್ನು ನಿಮಗೆ ನೀಡ್ತೇವೆ. ವೈದ್ಯೆಯಾದ್ರೂ ಐಪಿಎಸ್ ಆಗ್ಬೇಕೆನ್ನುವ ಆಸೆಯಿಂದ ಕಷ್ಟಪಟ್ಟು ಓದಿದ ಮಹಿಳೆಗೆ ಮೊದಲ ಬಾರಿಯೇ ಯಶಸ್ಸು ಸಿಕ್ಕಿದೆ. 

ಯುಪಿಎಸ್ಸಿ (UPSC) ಸಿವಿಲ್ ಸರ್ವಿಸ್  ಪರೀಕ್ಷೆ ಪಾಸ್ ಆದ ರೇಣು ರಾಜ್ (Renu Raj) : ರೇಣು ರಾಜ್, ಕೇರಳ (Kerala) ದ ಕೊಟ್ಟಾಯಂ ನಿವಾಸಿ. ಅವರು ಸೇಂಟ್ ತೆರೇಸಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಇದ್ರ ನಂತ್ರ ರೇಣು ರಾಜ್, ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಪಡೆದು, ವೈದ್ಯಕೀಯ ಶಿಕ್ಷಣ ಪಡೆದ್ರು. ನಂತ್ರ ಸರ್ಜನ್ ಆಗಿ ರೇಣು ರಾಜ್ ಕೆಲಸ ಶುರು ಮಾಡಿದ್ದರು. ವೈದ್ಯೆಯಾಗಿ ಕೆಲಸ ಮಾಡುವ ಜೊತೆಗೆ ಜನ ಸೇವೆ ಮಾಡಬೇಕೆಂಬ ಹಂಬಲ ರೇಣು ರಾಜ್ ಅವರಿಗೆ ಬಲವಾಗಿತ್ತು. ಯುಪಿಎಸ್ಸಿ ಪರೀಕ್ಷೆ ಮೇಲೆ ಒಲವು ಹೆಚ್ಚಿತ್ತು. ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿದ್ದ ರೇಣು ರಾಜ್ ಅದಕ್ಕೆ ಪ್ರಯತ್ನ ಶುರು ಮಾಡಿದ್ರು. ನಿವೃತ್ತ ಸರ್ಕಾರಿ ನೌಕರರಾಗಿರುವ ರೇಣು ರಾಜ್ ತಂದೆ ಹಾಗೂ ಗೃಹಿಣಿ ತಾಯಿಯ ಬೆಂಬಲ ಇದಕ್ಕೆ ಸಂಪೂರ್ಣ ಸಿಕ್ಕಿತ್ತು. 

Latest Videos

ಸ್ಪೂರ್ತಿ ಕತೆ; ಅಂದು 500 ರೂ. ಸಾಲ ಪಡೆದಿದ್ದ ಈಕೆ ಇಂದು 5 ಕೋಟಿ ವ್ಯವಹಾರ ನಡೆಸುವ ಕಂಪನಿ ಒಡತಿ!

ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಣು ರಾಜ್, ವೈದ್ಯೆಯಾಗಿ 50 -100 ಜನರಿಗೆ ಸಹಾಯ ಮಾಡಬಹುದು. ಅದೇ ಐಎಎಸ್ ಅಧಿಕಾರಿಯಾದ್ರೆ ಸಾವಿರಾರು ಜನರಿಗೆ ಸಹಾಯ ಮಾಡಬಹುದು ಎಂದು ನಾನು ಆಲೋಚನೆ ಮಾಡಿದೆ. ಆ ನಂತ್ರ ಯುಪಿಎಸ್ಸಿ ಪರೀಕ್ಷೆ ಬರೆಯುವ ನಿರ್ಧಾರಕ್ಕೆ ಬಂದೆ ಎಂದಿದ್ದರು. 

ಮೊದಲ ಬಾರಿಯೇ ಯುಪಿಎಸ್ಸಿ ಪರೀಕ್ಷೆ ಪಾಸ್ ಆದ ವೈದ್ಯೆ : ಪರೀಕ್ಷೆಗಾಗಿ ರೇಣು ರಾಜ್, ತಮ್ಮ ಪ್ರಾಕ್ಟೀಸ್ ಬಿಡಲಿಲ್ಲ. ವೈದ್ಯೆಯ ಕೆಲಸ ಹಾಗೂ ಯುಪಿಎಸ್ಸಿ ತಯಾರಿ ಎರಡನ್ನೂ ಮಾಡಿದ್ದರು. ಎನ್‌ಸಿಇಆರ್‌ಟಿ ಮತ್ತು ಪ್ರಮಾಣಿತ ಪುಸ್ತಕಗಳ ಮೂಲಕ ಅಧ್ಯಯನ ಶುರು ಮಾಡಿದ್ದರು. ಇದಕ್ಕಾಗಿ ವೇಳಾಪಟ್ಟಿ ಹಾಕಿಕೊಂಡು ಆರರಿಂದ ಏಳು ಗಂಟೆಗಳ ಕಾಲ ಓದುತ್ತಿದ್ದರು. ಅವರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿತು. ಕೆಲವೇ ಕೆಲವು ತಿಂಗಳು ಓದಿದ ರೇಣು ರಾಜ್. ಮೊದಲ ಪ್ರಯತ್ನದಲ್ಲಿಯೇ ಎರಡನೇ ರ್ಯಾಂಕ್ ಪಡೆದು ಪರೀಕ್ಷೆಯಲ್ಲಿ ಟಾಪರ್ ಆದ್ರು. 

ಗಾಯತ್ರಿಗೂ ಮೊದಲು ಅನಂತ್‌ ನಾಗ್ ಲವ್ ಮಾಡಿದ್ದು ಪ್ರಿಯಾ ತೆಂಡೂಲ್ಕರ್; ಏನ್ ಪ್ರಾಬ್ಲಂ ಆಯ್ತು..?

ಎರಡನೇ ಮದುವೆಯಾಗಿ ಸುದ್ದಿಯಾಗಿದ್ದ ರೇಣು ರಾಜ್ :  ಡಾ.ರೇಣು ರಾಜ್ ಎರಡನೇ ಮದುವೆಯಾಗಿದ್ದಾರೆ. ಆ ಸಮಯದಲ್ಲಿ ಅವರು ಚರ್ಚೆಗೆ ಬಂದಿದ್ದರು. ಡಾ.ರೇಣು ರಾಜ್ 2012ರ ಬ್ಯಾಚ್ ಐಎಎಸ್ ಡಾ.ಶ್ರೀರಾಮ್ ವೆಂಕಟರಮನ್ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಶ್ರೀರಾಮ್ ವೆಂಕಟರಮನ್ ಕೂಡ ವೈದ್ಯಕೀಯ ಪದವೀಧರರಾಗಿದ್ದು, ಕೇರಳದವರು. ಆದರೆ, ವೆಂಕಟರಮನ್ ಅವರಿಗೆ ಇದು ಮೊದಲ ಮದುವೆ. ಶ್ರೀರಾಮ್ ಹಾಗೂ ರೇಣು ರಾಜ್ ಅತ್ಯಂತ ಸರಳವಾಗಿ ಮದುವೆ ಆಗಿದ್ದಾರೆ. 

click me!