
ಮಕ್ಕಳಿಲ್ಲದ ಹಾಗೂ ಭ್ರೂಣದಲ್ಲಿ ವಂಶವಾಹಿ (ವರ್ಣತಂತು) ಸಮಸ್ಯೆಗಳಿದ್ದರೆ ಪತ್ತೆಹಚ್ಚಲು ಬಳಸಲಾಗುವ ನೂತನ ವೈದ್ಯಕೀಯ ಪದ್ಧತಿಯಿದು.
ಏನಿದು?: ಪಿಜಿಎಸ್ ವೈದ್ಯಕೀಯ ಪದ್ಧತಿಯ ಮೂಲಕ ಭ್ರೂಣಗಳಲ್ಲಿ ವಂಶವಾಹಿ ಸಮಸ್ಯೆಗಳೇನಾದರೂ ಇವೆಯೇ ಎಂಬುದನ್ನು ಸಮಗ್ರ ವಂಶವಾಹಿ ಪರೀಕ್ಷೆ ಮೂಲಕ
ಪತ್ತೆಹಚ್ಚಲಾಗುತ್ತದೆ. ಇದರಡಿ ವರ್ಣತಂತುಗಳ ಕರಾರುವಾಕ್ಕಾದ ವಿಶ್ಲೇಷಣೆ ನಡೆಯುವುದರಿಂದ ಆರೋಗ್ಯವಂತ ಮಗು ಜನಿಸಲು ಅನುಕೂಲವಾಗುತ್ತದೆ.
ಹೊಟ್ಟೆಲಿರೋ ಕಂದಮ್ಮನ ಜೊತೆ ಮಾತಾಡೋದು ಹೇಗೆ?
ಲಾಭವೇನು?: ಈ ವಿಧಾನದಿಂದ ಗರ್ಭಪಾತದ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ. ಅಸಹಜ ಗರ್ಭಧಾರಣೆಯ ಅಪಾಯ ಕಡಿಮೆಯಾಗುತ್ತದೆ. ಏಕ ಭ್ರೂಣ ವರ್ಗಾವಣೆ (ಇಎಸ್‌ಇಟಿ)ಯಿಂದಲೇ ಗರ್ಭಧಾರಣೆಯಾಗುವ ಸಾಧ್ಯತೆ ಅಧಿಕವಾಗುತ್ತದೆ. ಪುರುಷ ಸಂತಾನಹೀನತೆ ದೋಷ ನಿವಾರಣೆಯಲ್ಲೂ ಈ ವಿಧಾನ ಹೊಸ ಭರವಸೆ ಮೂಡಿಸಿದೆ. ಈ ಪದ್ಧತಿಯಡಿ ಎಲ್ಲಾ 24 ವರ್ಣತಂತುಗಳನ್ನೂ (22 ಆಟೋಸೋಮ್‌ಗಳು ಮತ್ತು ಎಕ್ಸ್, ವೈ) ಪರೀಕ್ಷೆಗೆ ಒಳಪಡಿಸಿ, ಎನಿಯುಪ್ಲಾಯ್ಡಿ ಎಂದು ಕರೆಯಲಾಗುವ ವರ್ಣತಂತುಗಳ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಇರುವ ಸಮಸ್ಯೆಯನ್ನೂ ಪತ್ತೆಹಚ್ಚಲಾಗುತ್ತದೆ. ಈ ಮೂಲಕ ಐವಿಎಫ್ ಚಿಕಿತ್ಸೆಯ ಯಶಸ್ಸನ್ನು ಶೇ. 10 ರಷ್ಟುಹೆಚ್ಚಿಸಲು ಅನುಕೂಲವಾಗಲಿದೆ.
ಅಪರಾಧಿ ನಾನಲ್ಲ; ಗರ್ಭಪಾತ ನಿರ್ಧಾರದ ಬಗ್ಗೆ ಮಹಿಳೆಗಿಲ್ಲ ಪಶ್ಚತ್ತಾಪ
ಬಂಜೆತನ ನಿವಾರಣೆ ಕೇಂದ್ರವೊಂದು ಎನ್‌ಜಿಎಸ್ ಆಧರಿತ ಪಿಜಿಎಸ್ ಚಿಕಿತ್ಸೆ ನೀಡುವ ಸ್ವಂತ ಜೆನಾಮಿಕ್ಸ್ ಪ್ರಯೋಗಾಲಯವನ್ನು ಹೊಂದಿರುವುದು ಭಾರತದಲ್ಲೇ ಮೊದಲು. ಗುಣಶೀಲ ಜೆನಾಮಿಕ್ಸ್ ಕೇಂದ್ರಕ್ಕೆ ವಿಜ್ಞಾನಿಗಳಾದ ಡಾ ಜಯರಾಮ್ ಎಸ್. ಕದಂಡಲೆ (ವಂಶವಾಹಿ ತಜ್ಞ) ಹಾಗೂ ಡಾ ಸ್ವಾತಿ ಶೆಟ್ಟಿ(ಮಾಲಿಕ್ಯುಲರ್ ಜೆನೆಟಿಸಿಸ್ಟ್) ಅವರು ವೈಜ್ಞಾನಿಕ ಸಲಹೆಗಾರರು. ಇವರ ನಾಯಕತ್ವದಲ್ಲಿ ಗುಣಶೀಲ ಫರ್ಟಿಲಿಟಿ ಕೇಂದ್ರದಲ್ಲಿ ದೇಶದ ಮೊದಲ ಪಿ.ಜಿ.ಎಸ್ ಆಧಾರಿತ ಮಗು ಜನಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.