Intimate Health : ಯೋನಿ ಆರೋಗ್ಯಕ್ಕೆ ಸ್ವಯಂ ಪರೀಕ್ಷೆ ಅನಿವಾರ್ಯ

Published : Mar 26, 2024, 04:42 PM IST
Intimate Health : ಯೋನಿ ಆರೋಗ್ಯಕ್ಕೆ ಸ್ವಯಂ ಪರೀಕ್ಷೆ ಅನಿವಾರ್ಯ

ಸಾರಾಂಶ

ಮಹಿಳೆಯರ ಅತ್ಯಂತ ಸೂಕ್ಷ ಅಂಗಗಳಲ್ಲಿ ಯೋನಿ ಒಂದು. ಯೋನಿ ಸ್ಚಚ್ಛತೆ, ಸೋಂಕಿನ ಬಗ್ಗೆ ಮಹಿಳೆಯರು ತಿಳಿಯೋದು ಸಾಕಷ್ಟಿದೆ. ಕೆಲವೊಂದು ಹಂತದ ಮೂಲಕ ಸ್ವಯಂ ಪರೀಕ್ಷೆ ಮಾಡೋದನ್ನು ಮಹಿಳೆಯರು ಕಲಿಯಬೇಕು.   

ಯೋನಿಯು ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಯೋನಿಯ ಒಳಪದರ ಮೃದುವಾಗಿರುತ್ತದೆ.  ಯೋನಿಯು ಗರ್ಭಾಶಯವನ್ನು ಸಂಪರ್ಕಿಸುತ್ತದೆ. ಇದು ಇತರ ಸಂತಾನೋತ್ಪತ್ತಿ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಯೋನಿಯು ಸಂಭೋಗದ ಸಮಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮುಟ್ಟಿನ ಹರಿವನ್ನು ನಿರ್ವಹಿಸುತ್ತದೆ ಮತ್ತು ಹೆರಿಗೆಯಲ್ಲಿ ಅದ್ರ ಪಾತ್ರ ಬಹಳ ಮುಖ್ಯ. ಈ ಎಲ್ಲಾ ಪ್ರಕ್ರಿಯೆಗಳನ್ನು ನಿರ್ವಹಿಸಲು  ಯೋನಿಯು ಸಂಪೂರ್ಣವಾಗಿ ಆರೋಗ್ಯಕರವಾಗಿರಬೇಕು.  ಯೋನಿಯು ತುಂಬಾ ಸೂಕ್ಷ್ಮವಾಗಿರುವ ಕಾರಣ ಮಹಿಳೆಯರ ಸಣ್ಣ ತಪ್ಪು ಕೂಡ ಯೋನಿ ಮೇಲೆ ಪ್ರಭಾವ ಬೀರುತ್ತದೆ. ಯೋನಿಯನ್ನು ಪರೀಕ್ಷಿಸಲು ನೀವು ಪ್ರತಿ ಬಾರಿ ವೈದ್ಯರ ಬಳಿ ಹೋಗ್ಬೇಕಾಗಿಲ್ಲ. ಸ್ವಯಂ ಪರೀಕ್ಷೆ ಮೂಲಕವೂ ಕೆಲ ಅನಾರೋಗ್ಯವನ್ನು ಪತ್ತೆ ಮಾಡಬಹುದು. 

ಅನೇಕ ಮಹಿಳೆಯರು ಯೋನಿ (Vagina) ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡ್ತಾರೆ. ಇದ್ರಿಂದ ಮುಂದೆ ರೋಗ (Disease) ಕ್ಕೆ ತುತ್ತಾಗುತ್ತಾರೆ. ಸ್ವಯಂ ಪರೀಕ್ಷೆ (Examination) ಯ ಮೂಲಕ ಯಾವುದೇ ಸಮಸ್ಯೆಯನ್ನು ಸಮಯಕ್ಕೆ ಅರ್ಥಮಾಡಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ನೀವು ಸಮಸ್ಯೆ ಪತ್ತೆ ಮಾಡಿ ಚಿಕಿತ್ಸೆ ಶುರು ಮಾಡಿದ್ರೆ ಶೀಘ್ರ ಗುಣಮುಖರಾಗಲು ಸಾಧ್ಯ. ಯೋನಿ ಸ್ವಯಂ ಪರೀಕ್ಷೆ ಹೇಗೆ ಎನ್ನುವ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.

ಗರ್ಭ ಧರಿಸೋದಕ್ಕೆ ಸಮಸ್ಯೆ ಆಗ್ತಿದ್ಯಾ? ನಿಮ್ಮ ಆಹಾರದಲ್ಲಿ ಏಲಕ್ಕಿ, ತುಪ್ಪ, ದಾಳಿಂಬೆ ಇರಲಿ!

ಯೋನಿ ಪರೀಕ್ಷೆ ಹಂತಗಳು :
ಯೋನಿ ಸ್ವಯಂ ಪರೀಕ್ಷೆ ಮುನ್ನ ನೀವು ಸಿದ್ಧತೆ ನಡೆಸಬೇಕು. ಯೋನಿಯನ್ನು ಪರೀಕ್ಷೆ ಮಾಡುವ ಮೊದಲು ನೀವು ನೈರ್ಮಲ್ಯದ ಬಗ್ಗೆ ಗಮನ ಹರಿಸಬೇಕು. ನಿಮ್ಮ ಕೈಗಳನ್ನು ಹ್ಯಾಂಡ್ ವಾಶ್ ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಿಮ್ಮ ಕೈನಲ್ಲಿರುವ ಕೊಳಕು ಯೋನಿ ಸೇರಿದ್ರೆ ಸಮಸ್ಯೆ ಶುರುವಾಗುವ ಸಾಧ್ಯತೆ ಇರುತ್ತದೆ. 

ಯೋನಿ ಪರೀಕ್ಷೆ ವೇಳೆ ನೀವು ನಿಮಗೆ ಸೂಕ್ತವಾದ ಭಂಗಿಯನ್ನು ಆಯ್ಕೆ ಮಾಡಿಕೊಳ್ಳಿ. ಆರಾಮಾಗಿ ಕುಳಿತು ಇಲ್ಲವೆ  ಮಲಗಿ ನೀವು ಪರೀಕ್ಷೆ ಮಾಡಿಕೊಳ್ಳಬಹುದು. ಯೋನಿ ಪರೀಕ್ಷೆಗೆ ನೀವು ಕನ್ನಡಿ ಸಹಾಯ ಪಡೆಯಬಹುದು. 

ನೀವು ಯೋನಿಯ ಬಾಹ್ಯ ಭಾಗದಲ್ಲಿ ಯಾವುದೇ ಬದಲಾವಣೆಯಾಗಿದ್ದರೂ ಅದನ್ನು ಕನ್ನಡಿ ಮೂಲಕ ಪತ್ತೆ ಮಾಡಬಹುದು. ಯೋನಿ, ಯೋನಿಯ ಮಜೋರಾ, ಲ್ಯಾಬಿಯಾ ಮಿನೋರಾ, ಚಂದ್ರನಾಡಿ ಮತ್ತು ಪೆರಿನಿಯಮ್ ಅನ್ನು ಕನ್ನಡಿ ಸಹಾಯದಿಂದ ಪರೀಕ್ಷಿಸಿ. ಅಲ್ಲಿ ಕೆಂಪು ಊತ, ದುದ್ದು, ಬಣ್ಣ ಬದಲಾವಣೆ, ಅಸಮಾನ್ಯ ವಿನ್ಯಾಸ ಕಾಣಿಸಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೀವು ಈ ಪರೀಕೆಯನ್ನು ತಿಂಗಳಿಗೊಮ್ಮೆ ಮಾಡುವುದು ಉತ್ತಮ. 

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೇ ಸ್ತನ ಕ್ಯಾನ್ಸರ್‌ ಸಾವು ಹೆಚ್ಚು!

ಯೋನಿ ಪರೀಕ್ಷೆಗೆ ಮೊದಲೇ ಹೇಳಿದಂತೆ ಸಿದ್ಧತೆ ಅಗತ್ಯ. ಯೋನಿ ಸ್ವಯಂ ಪರೀಕ್ಷೆ ಮಾಡಿಕೊಳ್ಳುವ ಮಹಿಳೆಯರು ಕೆಲವೊಂದು ವಿಷ್ಯವನ್ನು ಟ್ರ್ಯಾಕ್ ಮಾಡಬೇಕು. ನಿಮ್ಮ ಡಿಸ್ಚಾರ್ಜ್ ನಲ್ಲಿ ಬದಲಾವಣೆ ಆಗಿದೆಯೇ ಎಂಬುದನ್ನು ಗಮನಿಸಿ. ಡಿಸ್ಚಾರ್ಜ್ ಸ್ಥಿರವಾಗಿದೆಯೇ, ಬಣ್ಣ ಮತ್ತು ವಾಸನೆಯಲ್ಲಿ ಬದಲಾವಣೆ ಕಾಣಿಸಿದೆಯೇ ಎಂಬುದನ್ನು ಪರೀಕ್ಷೆ ಮಾಡಿ. ಒಂದ್ವೇಳೆ ಅದ್ರಲ್ಲಿ ಬದಲಾವಣೆ ಆಗಿದ್ದರೆ ಪಿಎಚ್ ಮಟ್ಟದಲ್ಲಿ ಏರುಪೇರಾಗಿರುವ ಸಾಧ್ಯತೆ ಇರುತ್ತದೆ. ನೀವು ಸೋಂಕಿಗೆ ಒಳಗಾಗಿರುವ ಸಂಭವ ಇದೆ. ಇಂಥ ಸಮಯದಲ್ಲಿ ನೀವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.   

ಯೋನಿ ಒಳಭಾಗ ಪರೀಕ್ಷೆ ವೇಳೆ ಮತ್ತಷ್ಟು ಎಚ್ಚರಿಕೆ ವಹಿಸಬೇಕು. ನಿಮ್ಮ ಎರಡು ಬೆರಳುಗಳ ಸಹಾಯದಿಂದ ಯೋನಿ ಒಳಭಾಗದಲ್ಲಿ ಯಾವುದಾದ್ರೂ ಬದಲಾವಣೆ ಆಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ನಿಮಗೆ ಇದು ಕಷ್ಟವಾದ್ರೆ ಲೂಬ್ರಿಕಂಟ್ (Lubricant) ಬಳಸಬಹುದು. 

ಯೋನಿ ಪರೀಕ್ಷೆ ವೇಳೆ ಯಾವುದೇ ಬದಲಾವಣೆ ಕಾಣಿಸಿದ್ರೂ ಅದನ್ನು ನೀವು ಬರೆದಿಟ್ಟುಕೊಳ್ಳಬೇಕು. ನಂತ್ರ ವೈದ್ಯರಿಗೆ ನಿಮ್ಮಲ್ಲಾಗಿರುವ ಬದಲಾವಣೆ ವಿವರ ನೀಡಬೇಕು. ಹೆಚ್ಚಿನ ಪರೀಕ್ಷೆ ಅಗತ್ಯವಿದ್ದಲ್ಲಿ ವೈದ್ಯರ ಸೂಚನೆ ಮೇರೆಗೆ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?