ಸತ್ತ ಮಹಿಳೆ ಬಾಯಲ್ಲಿತ್ತು ಇಟ್ಟಿಗೆ! ಅದು ಸೇರಿದ್ದೇಗೆ? ಅಂತೂ ಪತ್ತೆ ಹಚ್ಚಿದ ವಿಜ್ಞಾನಿಗಳು

By Suvarna News  |  First Published Mar 25, 2024, 3:03 PM IST

ಬಾಯಿಗೆ ಇಟ್ಟಿಗೆ ತುರುಕಿದ್ರೆ ಹಲ್ಲು ಮುರಿಯುತ್ತೆ. ಅಂಗಾಂಗಳಿಗೆ ಹಾನಿಯಾಗುತ್ತೆ ಅಂತ ನಾವು ಅಂದ್ಕೊಂಡಿದ್ದೇವೆ. ಆದ್ರೆ ವಿಜ್ಞಾನಿಗಳು 16 ನೇ ಶತಮಾನದಲ್ಲಿ ಸಿಕ್ಕ ಶವದ ಪರೀಕ್ಷೆ ವೇಳೆ ಆಸಕ್ತಿಕರ ವಿಷ್ಯ ಬಹಿರಂಗಪಡಿಸಿದ್ದಾರೆ. 


ವಿಜ್ಞಾನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿರುತ್ತಾರೆ. ಈಗ ವಿಜ್ಞಾನಿಗಳು ಮತ್ತೊಂದು ಪ್ರಯತ್ನ ನಡೆಸಿದ್ದಾರೆ. 16 ನೇ ಶತಮಾನದ ಮಹಿಳೆಯ ಮುಖವನ್ನು ವಿಜ್ಞಾನಿಗಳು ಮರುಸೃಷ್ಟಿ ಮಾಡಿದ್ದಾರೆ. ಮನೆಯಲ್ಲಿ ಹಳೆ ಬಾಕ್ಸ್ ಸಿಕ್ಕಿದ್ರೂ ನಮಗೆ ವಿಶೇಷ ಕುತೂಹಲವಿರುತ್ತದೆ. ಆ ವಸ್ತು ಯಾರದ್ದು, ಅದರಲ್ಲಿ ಏನಿದೆ ಎಂಬುದನ್ನೆಲ್ಲ ತಿಳಿಯುವ ಪ್ರಯತ್ನ ಮಾಡ್ತೇವೆ. ಪುರಾತನ ವಸ್ತು, ಲೆಟರ್ ಹರಿದಿದ್ದರೆ ಅದನ್ನು ಜೋಡಿಸಿ ಅದ್ರಲ್ಲಿ ಏನಿದೆ ಎಂಬುದನ್ನು ತಿಳಿಯುವ ಆಸಕ್ತಿ ತೋರುತ್ತೇವೆ. ಇನ್ನು ಸಂಶೋಧಕರು, ವಿಜ್ಞಾನಿಗಳದ್ದು ಅದೇ ಕೆಲಸ. ಸಿಕ್ಕ ಹಳೆ ವಸ್ತುಗಳ ಮೂಲ ಪತ್ತೆ ಮಾಡುವ ಪ್ರಯತ್ನ ಮಾಡುತ್ತಾರೆ. ಈಗ ಸಮಾಧಿಯಲ್ಲಿ ಸಿಕ್ಕಿರುವ ಮಹಿಳೆ ಶವದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಮಹಿಳೆ ಶವವನ್ನು ಮರುಸೃಷ್ಟಿ ಮಾಡಿದ್ದಾರೆ. ಈ ಮಹಿಳೆಯ ಮೃತದೇಹದ ಬಾಯಿಯಲ್ಲಿ ಇಟ್ಟಿಗೆಯೊಂದು ಸಿಕ್ಕಿಕೊಂಡಿತ್ತು ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅದು ಹೇಗೆ ಸಿಕ್ಕಿಹಾಕಿಕೊಂಡಿತ್ತು ಎಂಬುದು ಅವರ ದೊಡ್ಡ ಪ್ರಶ್ನೆಯಾಗಿದೆ. ಬಾಯಿಗೆ ಇಟ್ಟಿಗೆ ಹಾಕಿದ್ರೂ ಹಲ್ಲು ಮತ್ತು ಸೂಕ್ಷ್ಮ ಅಂಗಾಂಶಗಳಿಗೆ ಹಾನಿಯಾಗಿಲ್ಲ. ಇದರ ಜೊತೆ  ಮಹಿಳೆ ಬಾಯಿಗೆ ಇಟ್ಟಿಗೆ ಹಾಕುವ ವೇಳೆ ಆಕೆ ಬದುಕಿದ್ದಳೋ ಇಲ್ಲವೋ ಎಂಬ ಪ್ರಶ್ನೆ ಕೂಡ ವಿಜ್ಞಾನಿಗಳನ್ನು ಕಾಡುತ್ತಿದೆ. ಅದಕ್ಕೆಲ್ಲ ಮರುಸೃಷ್ಟಿ ಮೂಲಕ ಪತ್ತೆ ಮಾಡುವ ಯತ್ನ ಯಶಸ್ವಿಯಾಗಿದೆ. 

ಇಟಲಿ (Italy) ಯ ವೆನೆಷಿಯನ್ ದ್ವೀಪದ ಲಝಾರೆಟ್ಟೊ ನುವೊವೊದಲ್ಲಿ ಘಟನೆ ನಡೆದಿದೆ. 2006 ರಲ್ಲಿ ನಡೆಸಿದ ಪುರಾತತ್ತ್ವ ಶಾಸ್ತ್ರದ ಅಧ್ಯಯನ (Study) ಗಳಲ್ಲಿ, ನೂರಾರು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಕೆಲವು ಸಮಾಧಿ ಪತ್ತೆಯಾಗಿದೆ. ಈ ಸಮಾಧಿಗಳು 16 ಮತ್ತು 17 ನೇ ಶತಮಾನದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ಸಮಯದಲ್ಲಿ ಪ್ಲೇಗ್ (Plague) ಅಬ್ಬರಿಸಿತ್ತು. ಈ ಸಮಾಧಿಯಲ್ಲಿ ಮಹಿಳೆ ಸಮಾಧಿ ವಿಜ್ಞಾನಿಗಳ ಗಮನ ಸೆಳೆದಿದೆ. ಅದ್ರ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ.

Tap to resize

Latest Videos

undefined

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೇ ಸ್ತನ ಕ್ಯಾನ್ಸರ್‌ ಸಾವು ಹೆಚ್ಚು!

ಫೋರೆನ್ಸಿಕ್ ಸಂಶೋಧಕ ಸಿಸೆರೊ ಮೊರೇಸ್, ಈ ಆವಿಷ್ಕಾರದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ ಈ ಮಹಿಳೆ ಮಾಟಗಾತಿ ಎಂದು ಸ್ಥಳೀಯರು ನಂಬಿದ್ದರು. ಪ್ಲೇಗ್ ಗೆ ಆಕೆಯೇ ಕಾರಣ ಎಂದು ಅವರು ಭಾವಿಸಿದ್ದರು. ಸುರಕ್ಷತೆಗಾಗಿ, ಪ್ಲೇಗ್ ಹರಡದಂತೆ ಮಾಡಲು ಆಕೆ ಬಾಯಿಗೆ ಇಟ್ಟಿಗೆಯನ್ನು ಇಟ್ಟಿದ್ದಿರಬಹುದು ಎಂದು ಸಿಸೆರೊ ಮೊರೇಸ್ ಹೇಳಿದ್ದಾರೆ. ಮಹಿಳೆ ಬಾಯಿಗೆ ಇಟ್ಟಿಗೆ ಹಾಕಿದ್ದರಿಂದ ಅದು ಬೇರೆಯವರನ್ನು ಬಲಿ ಪಡೆಯುವುದಿಲ್ಲ, ಬೇರೆಯವರಿಗೆ ಸೋಂಕು ತಗಲುವುದಿಲ್ಲ ಎಂದು ಅವರು ಭಾವಿಸಿದ್ದರು.

ಮಹಿಳೆ ಬಾಯಿಗೆ ಜನರು ಹೇಗೆ ಇಟ್ಟಿಗೆ ಹಾಕಿದ್ದರು ಎಂದು ಮೊರೆಸ್ ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಇದೇ ಕಾರಣಕ್ಕೆ ಆಕೆ ಮುಖವನ್ನು ಮರುಸೃಷ್ಟಿ ಮಾಡಿದ್ದಾರೆ. ಮರುಸೃಷ್ಟಿ ವೇಳೆ, ಮಹಿಳೆ ಬದುಕಿದ್ದಾಗಲೇ ಆಕೆ ಬಾಯಿಗೆ ಇಟ್ಟಿಗೆ ಹಾಕಬಹುದು. ಇದ್ರಿಂದ ಆಕೆ ಹಲ್ಲು ಹಾಗೂ ಅಂಗಾಂಗ ನಾಶವಾಗುವುದಿಲ್ಲ ಎಂದು ಮೊರೆಸ್ ಪತ್ತೆ ಮಾಡಿದ್ದರು. 

ಒಂದೇ ಜಾಕೆಟ್‌ನಲ್ಲಿ ನೇಪಾಳ ಟ್ರಿಪ್ ಮುಗಿಸಿ ಇನ್ನೈದು ವರ್ಷ ಇದನ್ನು ಮುಟ್ಟೋಲ್ಲ ಎಂದ ಶ್ರದ್ಧಾ ಶ್ರೀನಾಥ್

ಮರಣದ ನಂತ್ರವೂ ಇಟ್ಟಿಗೆ ಹಾಕುವುದು ಸುಲಭ ಎನ್ನುತ್ತಾರೆ ಮೊರೆಸ್. ಸೋಂಕು ಹರಡದಿರಲಿ ಎನ್ನುವ ಕಾರಣಕ್ಕೆ ಶವದ ಬಾಯಿಗೆ ಇಟ್ಟಿಗೆ ಹಾಕಿರುವ ಸಾಧ್ಯತೆ ಇದೆ ಎಂದು ಮೊರೆಸ್ ಹೇಳಿದ್ದಾರೆ. ಸಿಕ್ಕ ಮೃತದೇಹ 61 ವರ್ಷ ಹಳೆಯದಾಗಿದ್ದು, ಆಕೆ ಯುರೋಪಿಯನ್ ಮಹಿಳೆ ಎಂದು ಅವರು ಹೇಳಿದ್ದಾರೆ. ವಿಜ್ಞಾನಿಗಳು ಸಂಪೂರ್ಣ ತಲೆಬುರುಡೆ ಮತ್ತು ಮುಖವನ್ನು ಸ್ಟೈರೋಫೊಮ್ ಬಳಸಿ ತಯಾರಿಸಿದ್ದಾರೆ. ಬಾಯಿಯೊಳಗೆ ಇಟ್ಟಿಗೆಯನ್ನು ಆರಾಮವಾಗಿ ಹಾಕಬಹುದು. ಇಟ್ಟಿಗೆ ಗಾತ್ರ ಹಾಗೂ ಬಾಯಿಯ ಗಾತ್ರ ಇಲ್ಲಿ ಮುಖ್ಯವಾಗುತ್ತದೆ. 
 

click me!