ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಕಾರಿಗೆ, ಮಹಿಳೆಯೇ ಸಾರಥಿ; ಇದಲ್ವಾ ಮಹಿಳಾ ಸಬಲೀಕರಣ!

By Sathish Kumar KHFirst Published Mar 25, 2024, 5:11 PM IST
Highlights

ಕರ್ನಾಟಕ ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಅವರ ಕಾರಿನ ಚಾಲಕರು ಕೂಡ ಮಹಿಳೆಯೇ ಆಗಿದ್ದಾರೆ. ಇದನ್ನು ನೋಡಿದ ಜನರು ಇದಲ್ವಾ ನಿಜವಾದ ಮಹಿಳಾ ಸಬಲೀಕರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮಾ.25): ರಾಜ್ಯದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅವರು ಮಹಿಳಾ ಚಾಲಕಿಯನ್ನೇ ನೇಮಿಸಿಕೊಂಡಿದ್ದಾರೆ. ತಮ್ಮ ಸುತ್ತಲೂ ಮಹಿಳೆಯರಿಗೇ ಕೆಲಸ ಕೊಡೋದು ಇವರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಆಗಿರುವ ಸಿ. ಮಂಜುಳಾ ಅವರು, ವಿಶೇಷ ಕಾರಣಕ್ಕೆ ಚರ್ಚೆ ಆಗಿದ್ದಾರೆ. ಸಾಮಾನ್ಯವಾಗಿ ಮಹಿಳೆಯರಿಗೆ ಇರಲಿ, ಪುರುಷರೆ ಆಗಿರಲಿ, ಅವರ ಕಾರನ್ನು ಡ್ರೈ ಮಾಡೋದು ಪುರುಷ ಡ್ರೈವರ್ ಆಗಿರುತ್ತಾರೆ. ಆದ್ರೆ ಮಂಜುಳಾ ಅವರ ಕಾರು ಚಾಲನೆ ಮಾಡೋರು ಪುರುಷ ಡ್ರೈವರ್ ಅಲ್ಲ. ಬದಲಿಗೆ ಕಾರು ಚಾಲಕಿ ಮಹಿಳೆ ಎಂಬುದು ಪ್ರಮುಖ ವಿಚಾರವಾಗಿದೆ.

ಮೂಲತಃ ಬೆಂಗಳೂರಿನವರೆ ಆಗಿರುವ ಕವಿತಾ, ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಅವರ ಕಾರು ಚಾಲನೆ ಮಾಡ್ತಾರೆ. ಈ ಹಿಂದೆ ದುಬೈ ಹಾಗೂ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅವರು, ಕೋವಿಡ್ ಸಮಯದಲ್ಲಿ ಮರಳಿ ಬೆಂಗಳೂರಿಗೆ ಬಂದರು. ನಂತರ, ಎಬಿವಿಪಿ ಕಾರ್ಯಕರ್ತರೂ ಆಗಿರುವ ಕವಿತಾ ಅವರ ಪತಿ ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಅವರ ಕಾರು ಚಾಲನೆ ಮಾಡುವುದಕ್ಕೆ ಪತ್ನಿಗೆ ನೆರವಾಗಿದ್ದಾರೆ.

 ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಡಾ.ಸುಧಾಕರ್ ಪಾರ್ಲಿಮೆಂಟ್‌ಗೆ ಹೋಗಲು ಬಿಡಲ್ಲ; ಶಾಸಕ ಪ್ರದೀಪ್ ಈಶ್ವರ್

ಸಿ.ಮಂಜುಳಾ ಅವರನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ ಬಳಿಕ ಅವರಿಗೆ ಕಾರು ಚಾಲನೆ ಮಾಡಲು ಸೂಕ್ತ ವ್ಯಕ್ತಿ ಅವಶ್ಯಕತೆ ಇತ್ತು. ಇನ್ನು ತುರ್ತು ಸಂದರ್ಭದಲ್ಲಿ ಮಂಜುಳಾ ಅವರ ಕಾರು ಚಾಲನೆಗೆ ಕವಿತಾ ಅವರು ನೆರವಾಗುತ್ತಿದ್ದರಂತೆ. ಹೀಗೆ ಎಮರ್ಜೆನ್ಸಿ ಸಹಾಯಕ್ಕೆ ಬಂದಿದ್ದ ಕವಿತಾ ಅವರು ಈಗ ಮಂಜುಳಾ ಅವರಿಗೆ ಖಾಯಂ ಕಾರ್ ಚಲಾಯಿಸುವ ವ್ಯಕ್ತಿ ಆಗಿದ್ದಾರೆ. ಅವರು ಡ್ರೈವರ್ ಅಲ್ಲ. ನನ್ನ ಫ್ರೆಂಡ್ ಎಂದು ಹೇಳುವ ಮಂಜುಳಾ ಅವರು, ನಾನೇನು ಅವರಿಗೆ ಸಂಬಳಕ್ಕೆ ಎಂದು ಇಟ್ಕೊಂಡು ಇಲ್ಲ‌ ಎಂದು ಹೇಳಿದ್ದಾರೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ವಿರುದ್ಧ ನಟಿ ರಮ್ಯಾ ಪ್ರಚಾರ

ಜೊತೆಗೆ, ಕವಿತಾ ಅವರ ಪತಿ ಕೂಡ ನನಗೆ ಸ್ನೇಹಿತ. ಆ ಬಾಂಧವ್ಯದಲ್ಲಿ ಕವಿತಾ ನನ್ನ ಕಾರು ಚಲಾಯಿಸುತ್ತಾರೆ. ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಇರಬೇಕು ಎಂದು ಬಯಸುವ ಸಮಾಜ ನಮ್ಮದು. ಅದು ಕೇವಲ ಬಾಯಿ ಮಾತಿಗೆ ಮಾತ್ರ ಇರಬಾರದು. ಕೃತಿಯಲ್ಲೂ ಇರಬೇಕು ಎನ್ನುವ ಮಂಜುಳಾ ಅವರು, ಕವಿತಾ ಚೆನ್ನಾಗಿ ಕಾರ್ ಡ್ರೈವ್ ಮಾಡ್ತಾರೆ. ನನಗೆ ತುಂಬಾ ಹೊಂದಾಣಿಕೆ ಆಗುತ್ತಾರೆ. ಹೀಗಾಗಿ, ಅವರನ್ನು ಡ್ರೈವರ್ ರೀತಿ ನೋಡದೆ, ಸ್ನೇಹಿತೆಯಾಗಿ ಜೊತೆಗೆ ಇದ್ದೇವೆ ಎನ್ನುತ್ತಾರೆ. ರಾಜ್ಯದಲ್ಲಿ ಸಿ.ಮಂಜುಳಾ ಅವರು ಎಲ್ಲೆ ಪ್ರವಾಸಕ್ಕೆ ಹೋಗಲಿ, ಕವಿತಾ ಅವರು ಸ್ಟೇರಿಂಗ್ ಹಿಡಿದಿರುತ್ತಾರೆ. ರಾಜಕಾರಣಿಗಳು ಎಂದರೆ ಸುತ್ತಮುತ್ತ ಪಿಎಗಳು, ಆಪ್ತರು ಹಿಂಬಾಲಕರೆ ತುಂಬಿರುವ ಈ ಕಾಲದಲ್ಲಿ ಒಬ್ಬಳು ಸ್ನೇಹಿತೆಯಾಗಿ ಕವಿತಾ ಅವರು ಮಂಜುಳಾಗೆ ನೆರವಾಗುತ್ತಿರೋದು ವಿಶೇಷ...

click me!