ಬನಾರಸ್ ಕಲಾವಿದರಿಗೆ ಸ್ಲಿಪ್ಪರ್ ಬಿಚ್ಚಿ ನಮಸ್ಕರಿಸಿದ ನೀತಾ ಅಂಬಾನಿ

Published : Jul 03, 2023, 03:39 PM IST
ಬನಾರಸ್ ಕಲಾವಿದರಿಗೆ ಸ್ಲಿಪ್ಪರ್ ಬಿಚ್ಚಿ ನಮಸ್ಕರಿಸಿದ ನೀತಾ ಅಂಬಾನಿ

ಸಾರಾಂಶ

ಮುಕೇಶ್​ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಬನಾರಸ್​ ಸೀರೆ ತಯಾರಕರೊಂದಿಗೆ  ಮಾತನಾಡುವ ಸಂದರ್ಭದಲ್ಲಿ ಚಪ್ಪಲಿ ಬಿಟ್ಟು ಹೋಗಿದ್ದು, ಇದರ ವಿಡಿಯೋ ವೈರಲ್​ ಆಗಿದೆ.   

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಮೆರಿಕ ಮತ್ತು ಈಜಿಪ್ಟ್​ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಮೊದಲು ಅಮೆರಿಕಕ್ಕೆ ಭೇಟಿ ನೀಡಿದ್ದರು.  ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಹಾಗೂ ಅವರ ಪತ್ನಿ  ಜಿಲ್​ ಬೈಡೆನ್​ ಅವರು ಪ್ರಧಾನಿ ಮೋದಿಯವರಿಗೆ ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಿದ್ದರು.  ಈ ಭೋಜನಕೂಟದಲ್ಲಿ ಉದ್ಯಮಿಗಳಾದ  ಮುಕೇಶ್​​ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ಆಗಮಿಸಿದ್ದರು. ಆಗ ಎಲ್ಲರ ಗಮನ ಸೆಳೆದದ್ದು ನೀತಾ ಅಂಬಾನಿ ಅವರ ಧರಿಸಿದ್ದ ಸೀರೆಯತ್ತ. ಅಷ್ಟಕ್ಕೂ ನೀತಾ ಅವರು ಎಲ್ಲಿಯೇ ಹೋದರೂ ಅವರ ದುಬಾರಿ ಎನಿಸುವ ಬಟ್ಟೆ, ಆಭರಣಗಳ ಮೇಲೆ ಸದಾ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಅದೇ ರೀತಿ ಅಂದು ಕೂಡ ಆಗಿತ್ತು. ಆದರೆ ಅಂದು ಸ್ವಲ್ಪ ವಿಶೇಷ ಎನಿಸಿದ್ದು, ಅವರು ಉಟ್ಟಿದ್ದ ಸೀರೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು.  ನೀತಾ ಅಂಬಾನಿ ಅಂದಿನ ಔತಣ ಕೂಟದಲ್ಲಿ ಧರಿಸಿದ್ದ ಸೀರೆ, ಕೈಯಿಂದ ನೇಯ್ದ ಬನಾರಸಿ ಬ್ರೋಕೇಡ್ ಸೀರೆಯಾಗಿತ್ತು. ಇದನ್ನು  ಪೂರ್ಣಗೊಳಿಸಲು ಒಂದು ತಿಂಗಳು ಸಮಯ ತೆಗೆದುಕೊಂಡಿತ್ತು ಎಂದು ಅವರೇ ಹೇಳಿದ್ದರು.  ಭಾರತೀಯ ಕುಶಲಕರ್ಮಿಗಳಾದ ಮೊಹಮ್ಮದ್ ಯಾಸಿನ್ ಮತ್ತು ಜಬ್ಬಾರ್ ಅಹ್ಮದ್ ಕೈಯಿಂದ ಇದನ್ನು ನೇಯ್ದಿದ್ದರು.  ಗೋಲ್ಡನ್ ಬಾರ್ಡರ್​​ನ ಈ ಸುಂದರವಾದ ನೇಯ್ಗೆ ಬನಾರಸ್​​ನ ಕುಶಲತೆಯನ್ನು ತೋರಿಸಿತ್ತು. ರಿಲಯನ್ಸ್ ಫೌಂಡೇಶನ್‌ನ ಸ್ವದೇಶ್ ಪ್ರದರ್ಶನದಲ್ಲಿ ಇದನ್ನು ತಯಾರಿಸಲಾಯಿತು.  ಈ ಸೀರೆಗೆ ಮ್ಯಾಚಿಂಗ್​ ಎನಿಸುವ ಲೇಯರ್ಡ್ ಮುತ್ತಿನ ಹಾರ, ಮುತ್ತು ಮತ್ತು ವಜ್ರದ ಕಿವಿಯೋಲೆಗಳು, ಉಂಗುರ ನೀತಾ ಧರಿಸಿ ಇನ್ನಷ್ಟು ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.  

ಇಂಥ ಬನಾರಸಿ ಸೀರೆಗೆ ಅದರದ್ದೇ ಆದ ಗೌರವವಿದೆ. ತುಸು ದುಬಾರಿ ಎನಿಸಿದರೂ ಈ ಸೀರೆಯನ್ನು ಉಟ್ಟ ನೀರೆಯ ಲುಕ್​ ಆಕರ್ಷಕವಾಗುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಎಷ್ಟೋ ಸಿರಿವಂತರು ಈ ಸೀರೆಯನ್ನು ಧರಿಸುವುದು ಇದೆ. ಸಿರಿವಂತರು ಮಾತ್ರವಲ್ಲದೇ ಬಹುತೇಕ ಮಹಿಳೆಯರು ಈ ಸೀರೆ ಧರಿಸುವುದು ಉಂಟು. ಆದರೆ ಯಾರಾದರೂ ಈ ಸೀರೆಯನ್ನು ತಯಾರು ಮಾಡುವವರ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದಾರಾ ಅಥವಾ ಎಷ್ಟು ಕಷ್ಟಪಟ್ಟು ಇದನ್ನು ಕೈಯಿಂದ ತಯಾರಿಸುತ್ತಿದ್ದಾರೆ ಎನ್ನುವುದನ್ನು ಒಂದು ಕ್ಷಣವೂ ಯೋಚಿಸುವವರು ಕಮ್ಮಿ ಎಂದೇ ಹೇಳಬೇಕು. ಇಂಥ ಕೈಮಗ್ಗದ ಬಟ್ಟೆಗಳು ಕೊಳ್ಳುವಾಗ ದುಬಾರಿ ಎನಿಸುವುದು ಹೌದಾದರೂ ಅದರ ಹಿಂದಿನ ಪರಿಶ್ರಮದ ಬಗ್ಗೆ ಯೋಚನೆ ಮಾಡುವವರು ಕಮ್ಮಿಯೇ. ಆದರೆ ಇದೀಗ ನೀತಾ ಅಂಬಾನಿ (Neeta Ambani) ಈ ವಿಷಯದಲ್ಲಿಯೂ ಸಕತ್​ ಸುದ್ದಿ ಮಾಡುತ್ತಿದ್ದಾರೆ.  

ನೀತಾ ಅಂಬಾನಿ ಬ್ಯೂಟಿ ಸೀಕ್ರೆಟ್‌ ರಿವೀಲ್‌: ಹಾಟ್‌ ಆಗಿ ಕಾಣಲು ಇವರೇ ಕಾರಣ..

ಹೌದು. ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎನಿಸಿರುವ ಮುಕೇಶ್​ ಅಂಬಾನಿ (Mukesh Ambani) ಅವರ ಪತ್ನಿಯಾಗಿರುವ ನೀತಾ ಅಂಬಾನಿಯವರು ಬನಾರಸ್​ ಸೀರೆ ತಯಾರು ಮಾಡುವಲ್ಲಿ ಹೋಗಿದ್ದು, ಅದರ ವಿಡಿಯೋ ಒಂದು ವೈರಲ್​  ಆಗಿದೆ. ಬನಾರಸ್​ ಸೀರೆಯನ್ನು ನೇಯುತ್ತಿರುವ ಕಲಕುಶಲ ಕರ್ಮಿಗಳು ಇದ್ದಲ್ಲಿಗೆ ಹೋಗಿ ಅವರ ಬಗ್ಗೆ ವಿಚಾರಿಸಿರುವ ನೀತಾ ಅಂಬಾನಿಯವರ ಸುದ್ದಿ ಇಷ್ಟೊಂದು ಸದ್ದು ಮಾಡಲು ಕಾರಣ, ಅವರು ಅಲ್ಲಿರುವ ನೇಕಾರರನ್ನು ಮಾತನಾಡಿಸಿದ ಸಂದರ್ಭದಲ್ಲಿ ತಮ್ಮ ಸ್ಲಿಪ್ಪರ್​ ಬಿಟ್ಟು ಹೋಗಿರುವ ಕಾರಣ. ಅಸಲಿಗೆ, ಕೈಯಿಂದಲೇ ತಯಾರಿಸಿರುವ ದೇವರ ಫೋಟೋ ಇರುವ ಕಲಾಕೃತಿ ಒಂದನ್ನು ನೀತಾ ಅವರಿಗೆ ಕೈಮಗ್ಗಕಾರರು ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ನೀತಾ ಅವರು ಚಪ್ಪಲಿಯನ್ನು ಬಿಟ್ಟು ಆ ದೇವರ ಕಲಾಕೃತಿಗೆ ಕೈಮುಗಿದು ಅದನ್ನು ಪಡೆದುಕೊಂಡರು.

ಇದಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದು ಇದಕ್ಕಾಗಿಯೇ ಎಂದು ಹಲವರು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. ಬನಾರಸ್​ ಸೀರೆಯನ್ನು ನೇಯುವವರಲ್ಲಿ ಬಹುತೇಕ ಮುಸ್ಲಿಂ (Muslim)ಸಮುದಾಯದವರೇ ಇರುವುದು. ಇಂಥವರ ಕೈಯಿಂದ ಅರಳಿದ ದೇವರ ಫೋಟೋ ಕಂಡು ನೀತಾ ಅಂಬಾನಿಯವರು ಮೂಕವಿಸ್ಮಿತರಾಗಿರುವುದು ವಿಡಿಯೋದಲ್ಲಿ ನೋಡಬಹುದು. 

Viral Video: ಅಭಿಮಾನಿಯ ಈ ಪ್ರೀತಿಯ ಪರಿಗೆ ನಟಿ ತಮನ್ನಾ ಕಣ್ಣೀರ ಧಾರೆ!

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?