ಮಹಿಳೆಯರಿಗೆ ಹೆದರಿ 55 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿರುವ ವ್ಯಕ್ತಿ

Published : Dec 04, 2025, 02:35 PM IST
Man living alone for 55 years due to fear of women

ಸಾರಾಂಶ

ರುವಾಂಡಾದ 71 ವರ್ಷದ ಕಲಿಸ್ಟೆ ನಝಮವಿಟಾ, ಮಹಿಳೆಯರ ಮೇಲಿನ ತೀವ್ರ ಭಯದಿಂದಾಗಿ ಕಳೆದ 55 ವರ್ಷಗಳಿಂದ ಒಂಟಿಯಾಗಿ ತಮ್ಮನ್ನು ತಾವು ಮನೆಯೊಳಗೆ ಬಂಧಿಸಿಕೊಂಡು ವಾಸ ಮಾಡುತ್ತಿದ್ದಾರೆ. ಈತನ ಈ ಭಯಕ್ಕೆ ಕಾರಣ ಏನು ಇಲ್ಲಿದೆ ಡಿಟೇಲ್ ಸ್ಟೋರಿ. 

ದೇಶದೆಲ್ಲೆಡೆ ಪ್ರತಿದಿನವೂ ಒಂದಲ್ಲ ಒಂದು ಕಡೆ ಪುಟ್ಟ ಮಕ್ಕಳನ್ನು ಕೂಡ ಬಿಡದೇ ಕೆಲ ಕಾಮುಕರು ಪಾತಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳ ಪ್ರಭಾವ ಅಪರಾಧಗಳ ವೈಭವೀಕರಣ, ಕ್ರೈಂ ವೆಬ್ ಸಿರೀಸ್‌ಗಳ ಪ್ರಭಾವದಿಂದಾಗಿ ಮಹಿಳೆಯರ ಮೇಲೆ ಅತ್ಯಾ*ಚಾರ, ಲೈಂಗಿಕ ದೌರ್ಜನ್ಯಗಳ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ಹೆಣ್ಣು ಹೆತ್ತ ಪೋಷಕರು ಬಹಳ ಭಯದಿಂದಲೇ ಜೀವಿಸುವಂತಾಗಿದೆ. ಯಾರು ಕೆಟ್ಟವರು ಯಾರು ಒಳ್ಳೆಯವರು ಎಂಬ ಅರಿವಿಲ್ಲದೇ ಪೋಷಕರು ಕುಟುಂಬದವರು ಮಹಿಳೆಯರನ್ನು ಹೊರಗೆ ಕಳುಹಿಸಲು ಬೆದರುತ್ತಾರೆ. ಇದು ಭಾರತದ ಕತೆ ಆದರೆ ದೂರದ ಆಫ್ರಿಕಾದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಹೆಣ್ಣು ಮಕ್ಕಳಿಗೆ ಹೆದರಿ ವ್ಯಕ್ತಿಯೊಬ್ಬರು ಕಳೆದ 55 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿರುವ ಘಟನೆ ನಡೆದಿದೆ.

ಹೌದು ವಿಚಿತ್ರ ಎನಿಸಿದರು ಇದು ಸತ್ಯ. ದಕ್ಷಿಣ ಆಫ್ರಿಕಾದ ರುವಾಂಡಾದಲ್ಲಿ ಮಹಿಳೆಯರ ಮೇಲಿನ ಭಯದಿಂದಾಗಿ 71 ವರ್ಷದ ಕಲಿಸ್ಟೆ ನಝಮವಿಟಾ ಅವರು ಕಳೆದ 55 ವರ್ಷಗಳಿಂದ ತಮ್ಮನ್ನು ತಾವು ಬಂಧಿಯಾಗಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ಹೀಗೆ ಮಹಿಳೆಯರ ಮೇಲೆ ಭಯ ಬೀಳುವುದಕ್ಕೆ ಈತನಿಗೆ ಮಹಿಳೆಯರೇನಾದರೂ ಮಾಡಿರಬಹುದಾ ಎಂದು ನೀವು ಊಹಿಸಿದರೆ ನಿಮ್ಮ ಊಹೆ ತಪ್ಪು, ಯಾವ ಮಹಿಳೆಯೂ ಈತನಿಗೆ ಏನು ಮಾಡಿಲ್ಲ,ಆದರೂ ಮಹಿಳೆಯರ ಮೇಲೆ ತೀವ್ರ ಭಯದಿಂದಾಗಿ ಈತ ತನ್ನನ್ನು ತಾನು ಬಂಧಿಯಾಗಿಸಿಕೊಂಡು ಒಬ್ಬನೇ ವಾಸಿಸುತ್ತಿದ್ದಾನೆ..

ಕಲಿಸ್ಟೆ ನಝಮವಿಟಾ ತನ್ನ 16ನೇ ವಯಸ್ಸಿನಿಂದ ಆತ ಒಬ್ಬಂಟಿಯಾಗಿ ವಾಸ ಮಾಡ್ತಿದ್ದಾನೆ. ಸಣ್ಣ ಮರದ ಮನೆಯಲ್ಲಿ ಈತ ವಾಸ ಮಾಡುತ್ತಿದ್ದು, ಈತ ತನ್ನ ಮನೆಗೆ ಸುತ್ತಲೂ ಬಟ್ಟೆ ಹಾಗೂ ಇತರ ವಸ್ತುಗಳಿಂದ ಕವರ್ ಮಾಡಿದ್ದಾನೆ. ಇದರಿಂದಾಗಿ ಆತ ಒಳಗಿನಿಂದ ಹೊರಗೆ ನೋಡಬಹುದಾಗಿದೆ. ಆದರೆ ಹೊರಗಿರುವವರಿಗೆ ಅವನನ್ನು ನೋಡುವುದಕ್ಕೆ ಆಗುವುದಿಲ್ಲ.

ಹೆಣ್ಣುಮಕ್ಕಳನ್ನು ನೋಡಿ ಈತ ಹೆದರುತ್ತಿರುವುದು ಏಕೆ?

ಕಲಿಸ್ಟೆ ನಝಮವಿಟಾ ಅವರ ಈ ಪರಿಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಗೈನೋಪೋಬಿಯಾ ಎಂದು ಕರೆಯಲಾಗುತ್ತದೆ. ಇಂತಹ ಸ್ಥಿತಿ ಇದ್ದವರು ಮಹಿಳೆಯರ ಬಗ್ಗೆ ಕಾರಣವಿಲ್ಲದೇ ಹೆದರುತ್ತಾರೆ. ಇದು ಮಹಿಳೆಯರ ವಿರುದ್ಧದ ದ್ವೇಷದ ಸ್ಥಿತಿ ಅಲ್ಲ,ಇದೊಂದು ಕಾರಣವಿಲ್ಲದ ಕೇವಲ ಭಯದ ಸ್ಥಿತಿ ಆಗಿದೆ. ಇಂತಹ ಭಯಗಳು ಕೆಲವೊಮ್ಮೆ ಬಾಲ್ಯದಲ್ಲಿ ಸಂಭವಿಸಿದ ಕೆಲ ಭಯಾನಕ ಘಟನೆಗಳಿಂದಾಗಿ ಮುಂದೆ ಬಹಳ ಆಳವಾಗಿ ಬೆಳವಣಿಗೆಯಾಗುತ್ತವೆ.

ಹೆಣ್ಣಿಗೆ ಹೆದರೋ ಕಲಿಸ್ಟೆ ನಝಮವಿಟಾ ಬದುಕ್ತಿರೋದು ಒಬ್ಬ ಹೆಣ್ಣಿಂದಲೇ..!

ಸದಾ ಹೆಣ್ಣೆಂದರೆ ಹೆದರುತ್ತಾ ಭಯದಿಂದ ವಾಸ ಮಾಡ್ತಿರುವ ಕಲಿಸ್ಟೆ ನಝಮವಿಟಾ ಅವರು ಬದುಕ್ತಿರೋದು ಕೂಡ ಹೆಣ್ಣಿಂದಾಗಿಯೇ ಎಂಬುದು ಮಾತ್ರ ವಿಪರ್ಯಾಸವಾಗಿದೆ. ಹೌದು, ಗ್ರಾಮದ ಮಹಿಳೆಯರೇ ಆತ ಬದುಕುಳಿಯುವುದಕ್ಕೆ ಸಹಾಯ ಮಾಡುತ್ತಿದ್ದಾರೆ. ಅವರು ಆತನಿಗೆ ಆಹಾರ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ತಂದು ನೀಡ್ತಾರೆ. ಮಹಿಳೆಯರು ವಸ್ತುಗಳನ್ನು ತಂದಿಟ್ಟು ಹೊರಟು ಹೋದ ನಂತರವೇ ಈ ಕಲಿಸ್ಟೆ ನಝಮಿವಿಟಾ ಹೊರಗೆ ಬಂದು ಅವುಗಳನ್ನು ತೆಗೆದುಕೊಳ್ಳುತ್ತಾನೆ. ಈ ಸ್ಟೋರಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!
25ಕ್ಕೆ ಗಂಡನ ಸಾವು: 30ಕ್ಕೆ ಯುವಕನೊಂದಿಗೆ ಪ್ರೇಮ: ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು