Entrepreneurial Mela 2.0 : ಬೆಂಗಳೂರಲ್ಲಿ 70+ ಮಹಿಳಾ ಉದ್ಯಮಿಗಳ ಕನಸುಗಳ ಅನಾವರಣ, 2 ದಿನ ನಾರಿಶಕ್ತಿಯ ಸಂಭ್ರಮ!

Published : Dec 02, 2025, 10:47 AM ISTUpdated : Dec 02, 2025, 10:48 AM IST
Entrepreneurial Mela 2 0 Dreams of 70 plus Women Entrepreneurs Celebrating Nari Shakti

ಸಾರಾಂಶ

ಬೆಂಗಳೂರು ಮೊದಲ ಬಾರಿಗೆ ಎಂಟರ್‌ಪ್ರೆನಾರಿ ಮೇಳ 2.0  ಆಯೋಜಿಸುತ್ತಿದೆ. ಆಸ್ಪೈರ್ ಫಾರ್ ಹರ್ ಮತ್ತು ಪ್ರಾಜೆಕ್ಟ್ ನವೇಲಿ ಸಹಭಾಗಿತ್ವದಲ್ಲಿ ನಡೆಯುವ ಈ ಕಾರ್ಯಕ್ರಮ, 70ಕ್ಕೂ ಹೆಚ್ಚು ಮಹಿಳa ನೇತೃತ್ವದ ಬ್ರ್ಯಾಂಡ್‌ಗಳಿಗೆ ವೇದಿಕೆ ಕಲ್ಪಿಸಲಿದ್ದು, ಮಹಿಳಾ ಉದ್ಯಮಶೀಲತೆ ಆರ್ಥಿಕ ಸಬಲೀಕರಣ ಸಂಭ್ರಮಿಸಲಿದೆ..

ಬೆಂಗಳೂರು, (ಡಿ.2) : ರಾಜಧಾನಿ ಬೆಂಗಳೂರು ಇದೇ ಮೊದಲ ಬಾರಿಗೆ ಎಂಟರ್‌ಪ್ರೆನಾರಿ ಮೇಳ 2.0 ಅನ್ನು ಆಯೋಜಿಸಲು ಸಜ್ಜಾಗಿದೆ. ಮಹಿಳೆಯರ ನೇತೃತ್ವದ ಉದ್ಯಮ, ಸೃಜನಶೀಲತೆ ಮತ್ತು ಆರ್ಥಿಕ ಸಬಲೀಕರಣದ ಸಂಭ್ರಮಕ್ಕೆ ವೈಟ್‌ಫೀಲ್ಡ್‌ನ ಕೆಡಿಪಿಒ ಮೈದಾನ ಸಾಕ್ಷಿಯಾಗಲಿದೆ. ಡಿಸೆಂಬರ್ 3 ಮತ್ತು 4 ರಂದು ನಡೆಯುವ ಕಾರ್ಯಕ್ರಮವನ್ನು ನವ್ಯಾ ನವೇಲಿ ನಂದಾ ಅವರ ಪ್ರಾಜೆಕ್ಟ್ ನವೇಲಿ ಸಹಭಾಗಿತ್ವದಲ್ಲಿ ಆಸ್ಪೈರ್ ಫಾರ್ ಹರ್ ಆಯೋಜಿಸುತ್ತಿದೆ.

ಪ್ರತಿಷ್ಠಿತ ಗ್ರೇಸ್ ಹಾಪರ್ ಸೆಲೆಬ್ರೇಷನ್ ಇಂಡಿಯಾ 2025ರ ಜೊತೆಗೆ ಈ ಎಂಟರ್‌ಪ್ರೆನಾರಿ ಮೇಳ 2.0 ಆಯೋಜನೆಗೊಳ್ಳುತ್ತಿದೆ. ಇದು ಫ್ಯಾಷನ್, ಜೀವನಶೈಲಿ, ಕರಕುಶಲ ವಸ್ತುಗಳು, ಸ್ವಾಸ್ಥ್ಯ, ಗೌರ್ಮೆಟ್ ಆಹಾರ, ಗೃಹಾಲಂಕಾರ ಮತ್ತು ಸೃಜನಶೀಲ ಚಿಲ್ಲರೆ ವ್ಯಾಪಾರವನ್ನು ಪ್ರಸ್ತುತಪಡಿಸುವ ದೇಶದ 70ಕ್ಕೂ ಹೆಚ್ಚು ಮಹಿಳಾ ನೇತೃತ್ವದ ಬ್ರ್ಯಾಂಡ್‌ಗಳನ್ನು ಒಟ್ಟುಗೂಡಿಸುತ್ತದೆ. ಖರೀದಿಸಿ, ಬೆಂಬಲಿಸಿ, ಉನ್ನತೀಕರಿಸಿ ಎಂಬ ಕರೆಯೊಂದಿಗೆ ಮಹಿಳೆಯರ ಮಾಲೀಕತ್ವದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬೆಳವಣಿಗೆಗೆ ನೇರವಾಗಿ ನೆರವಾಗಲು ಹಾಗೂ ಶಾಪಿಂಗ್‌ ಮಾಡಲು ಈ ಕಾರ್ಯಕ್ರಮವು ಬೆಂಗಳೂರಿಗರನ್ನು ಪ್ರೇರೆಪಿಸುತ್ತದೆ.

ವಿವಿಧ ರಾಜ್ಯಗಳು, ಸಣ್ಣಪಟ್ಟಣಗಳು ಹಾಗೂ ಗ್ರಾಮೀಣ ಸಮುದಾಯಗಳಿಂದ ಬಂದಿರುವ ಉದ್ಯಮಿಗಳು ಈ ಕಾರ್ಯಕ್ರಮದ ಭಾಗವಾಗಲಿದ್ದು, ಜೀವನೋಪಾಯವನ್ನು ಸೃಷ್ಟಿಸುವ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಉದ್ಯಮಗಳನ್ನು ಕಟ್ಟುತ್ತಿದ್ದಾರೆ. ಎಂಟರ್‌ಪ್ರೆನಾರಿ ಮೇಳ 2.0 ಕೇವಲ ಒಂದು ಮಾರುಕಟ್ಟೆಯಲ್ಲ. ಬದಲಿಗೆ ಇದು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರಚಾರ, ಆದಾಯ ಮತ್ತು ನೈಜ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯಾಗಿದೆ. ಪ್ರತಿ ಮಳಿಗೆಗಳು ಕೂಡ ವರ್ಷಗಳ ದೃಢನಿರ್ಧಾರ, ನಾವೀನ್ಯತೆ ಮತ್ತು ಮಹಿಳೆಯರ ಮಾನಸಿಕ ಶಕ್ತಿಯನ್ನು ಪ್ರತಿನಿಧಿಸುತ್ತವೆ.

ಎಂಟರ್‌ಪ್ರನಾರಿ ಮೇಳ 2.0ದ ವಿಶೇಷತೆಗಳು

*ದೇಶ್: ಶೋಭಿತಮ್ ಪ್ರಸ್ತುತಪಡಿಸುವ ಫ್ಯಾಷನ್ ಶೋ ಇದಾಗಿದ್ದು, ಇದರಲ್ಲಿ ಎಂಟರ್‌ಪ್ರೆನಾರಿಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಭಾರತೀಯ ಪರಂಪರೆಯ ನೇಯ್ಗೆಗಳನ್ನು ಮತ್ತು ಅವುಗಳನ್ನು ನೇಯುವ ಗ್ರಾಮೀಣ ಮಹಿಳಾ ಕುಶಲಕರ್ಮಿಗಳನ್ನು ಸಂಭ್ರಮಿಸಲಾಗುತ್ತದೆ.

  •  ನವ್ಯಾ ನವೇಲಿ ನಂದಾ, ಜನಪ್ರಿಯ ಹಾಸ್ಯ ಕಲಾವಿದೆ ಮತ್ತು ಕ್ರಿಯೇಟರ್ ಅಯ್ಯೋ ಶ್ರದ್ಧಾ ಸೇರಿ ಅನೇಕ ಕಲಾವಿದರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.
  •  ಶಾಪಿಂಗ್ ವಲಯಗಳು, ಕ್ಯುರೇಟೆಡ್ ಆಹಾರ ಅನುಭವಗಳು, ಲೈವ್ ಮನರಂಜನೆ, ಕಾರ್ಯಾಗಾರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಇರಲಿವೆ.
  •  ಸಮುದಾಯಕ್ಕೆ ಶಕ್ತಿಯ ತುಂಬಿದ ಎಂಟರ್‌ಪ್ರೆನಾರಿಗಳು ಮತ್ತು ನಾಯಕರನ್ನು ಗೌರವಿಸುವ ಸಮಾರಂಭ ಇರಲಿದೆ.
  •  ಮಿಲಿಯನೇರಿ ಆಚರಣೆ: 1 ಮಿಲಿಯನ್ ಮಹಿಳೆಯರ ಪ್ರಬಲ ಸಮುದಾಯವನ್ನು ನಿರ್ಮಿಸುವ ಆಸ್ಪೈರ್ ಫಾರ್ ಹರ್ ಮೈಲಿಗಲ್ಲನ್ನು ಆಚರಿಸುವುದು.
  •  ಭಾರತದ ಮಹಿಳಾ ಉದ್ಯೋಗಿ ಚಳವಳಿಗೆ ಅವಿರತ ಕೊಡುಗೆ ನೀಡಿದ ಮಹಿಳೆಯರು ಮತ್ತು ಮಿತ್ರರನ್ನು ಗುರುತಿಸಿ ವಿಶೇಷ ಗೌರವವನ್ನು ಸಲ್ಲಿಸಲಾಗುವುದು.
  •  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗ್ರೇಸ್ ಹಾಪರ್ ಸೆಲೆಬ್ರೇಷನ್ ಇಂಡಿಯಾ 2025ಕ್ಕೆ ಆಗಮಿಸಲಿದ್ದಾರೆ ಮತ್ತು ಎಂಟರ್‌ಪ್ರೆನಾರಿ ಮೇಳ 2.0ರಲ್ಲಿ ಪಾಲ್ಗೊಂಡು ಎಂಟರ್‌ಪ್ರೆನಾರಿಗಳೊಂದಿಗೆ ಸಂವಾದವನ್ನು ನಡೆಸಲಿದ್ದಾರೆ.
  • ಭಾರತದ ಮಹಿಳಾ ಉದ್ಯಮಿಗಳ ಏಳಿಗೆಗೆ ಅನುಕೂಲ:
  • ಎಂಟರ್‌ಪ್ರೆನಾರಿ ಮೇಳದ ಮೂಲಕ, ಆಸ್ಪೈರ್ ಫಾರ್ ಹರ್ ಈ ಕೆಳಗಿನವುಗಳನ್ನು ಮಹಿಳಾ ಉದ್ಯಮಿಗಳಿಗೆ ಒದಗಿಸುತ್ತದೆ:
  •  ಉಚಿತ ಮಾರ್ಗದರ್ಶನ ಮತ್ತು ತಜ್ಞರಿಂದ ವ್ಯಾಪಾರ ಸಲಹೆ.
  •  ವ್ಯಾಪಾರ ಕಲಿಕಾ ಕಾರ್ಯಕ್ರಮಗಳು ಮತ್ತು ಸಂಪನ್ಮೂಲ ಬೆಂಬಲ.
  •  ಸಮಾನ ಮನಸ್ಕರ ಸಮುದಾಯಕ್ಕೆ ಪ್ರವೇಶ.
  •  ಶಾಪ್‌ ಎಂಟರ್‌ಪ್ರೆನಾರಿ ಮತ್ತು ರಾಷ್ಟ್ರವ್ಯಾಪಿ ಪಾಪ್‌-ಅಪ್‌ಗಳ ಮೂಲಕ ಮಾರಾಟ ಮತ್ತು ಪ್ರಚಾರದ ಅವಕಾಶಗಳನ್ನು ನೀಡಲಿದೆ..
  •  ಕ್ಯುರೇಟೆಡ್ ಬಿಸಿನೆಸ್ ಈವೆಂಟ್‌ಗಳ ಮೂಲಕ ಕಾರ್ಪೊರೇಟ್ ಮತ್ತು ಮಾರುಕಟ್ಟೆ ಪ್ರವೇಶವನ್ನು ಒದಗಿಸಲಿದೆ.
  • ಆರ್ಥಿಕ ಸಮಾನತೆಯಲ್ಲಿನ ಸಾಮೂಹಿಕ ಬೆಂಬಲ ಮತ್ತು ಉದ್ಯಮಶೀಲತೆ ನಂಬಿಕೆಯಿಂದ ಈ ವೇದಿಕೆಯ ವೇಗವಾಗಿ ಬೆಳೆಯುತ್ತಲೇ ಇದೆ.

ಇನ್ನು, ಈ ಎಂಟರ್‌ಪ್ರೆನಾರಿ ಮೇಳಕ್ಕೆ ಆಧಾರವಾಗಿರುವ ಆಸ್ಪೈರ್‌ ಫಾರ್‌ ಹರ್‌ನ ಸಂಸ್ಥಾಪಕರು ಮತ್ತು ಸಿಇಒ ಮಧುರಾ ದಾಸ್‌ಗುಪ್ತಾ ಸಿನ್ಹಾ ಅವರು, ಮಾರ್ಚ್ 2020ರಿಂದ ಇಲ್ಲಿಯವರೆಗೂ 1 ಮಿಲಿಯನ್‌ ಮಹಿಳೆಯರನ್ನು ಉದ್ಯೋಗಕ್ಕೆ ಸೇರಿಸಿದ್ದು, 2030ರ ವೇಳೆಗೆ 10 ಮಿಲಿಯನ್‌ ಮಹಿಳೆಯರನ್ನು ಉದ್ಯೋಗಕ್ಕೆ ಸೇರಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಹೇಳುವಂತೆ ಈಗಾಗಲೇ ಒಂದು ಮಿಲಿಯನ್ ಕನಸುಗಳು ಅನಾವರಣಗೊಂಡಿವೆ. ಆದರೆ, ನಮ್ಮ ಕೆಲಸ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಅವರಿಗೆ ಧೈರ್ಯ ತುಂಬುವ ದೊಡ್ಡ ದನಿಯಾಗಬೇಕಿದೆ. ಅದಕ್ಕಾಗಿಯೇ ಆಸ್ಪೈರ್ ಫಾರ್ ಹರ್, ಎಂಟರ್‌ಪ್ರೆನಾರಿ ಮೇಳ 2.0 ಅನ್ನು ಬೆಂಗಳೂರಿಗೆ ತರುತ್ತಿದೆ. ಕೇವಲ ನಮ್ಮನ್ನು ಅಭಿನಂದಿಸುವುದಕ್ಕಿಂತ, ನಮ್ಮ ಜೊತೆ ಸೇರಿ ನಿಮ್ಮ ಹಣದ ಮೂಲಕ ಬೆಂಬಲಿಸಿ. ಈ ಮೂಲಕ ಪ್ರತಿಯೊಬ್ಬ ಮಹಿಳಾ ಉದ್ಯಮಿಯ ಹಿಂದೆ ಇಡೀ ಸಮುದಾಯವಿದೆ ಎಂದು ತೋರಿಸೋಣ ಎಂದು ಕರೆ ನೀಡಿದ್ದಾರೆ.

ಪ್ರಾಜೆಕ್ಟ್‌ ನವೇಲಿ ಸಂಸ್ಥಾಪಕರಾದ ನವ್ಯಾ ನವೇಲಿ ನಂದಾ ಅವರು ಎಂಟರ್‌ಪ್ರೆನಾರಿ ಮೇಳ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಉದ್ದೇಶ ಮತ್ತು ಉತ್ಸಾಹದೊಂದಿಗೆ ಒಗ್ಗೂಡುವ ಮಹಿಳೆಯರ ಶಕ್ತಿಗೆ ಸಾಕ್ಷಿಯಾಗಿದೆ. ಈ ವೇದಿಕೆಯು ಮಹಿಳಾ ಉದ್ಯಮಿಗಳ ಕನಸುಗಳನ್ನು ಸಂಭ್ರಮಿಸಲು, ಅವರ ಪಯಣವನ್ನು ವಿಸ್ತರಿಸಲು ಮತ್ತು ಅವರಿಗೆ ಅರ್ಹವಾದ ಮನ್ನಣೆಯನ್ನು ನೀಡಲು ಡಿಸೈನ್‌ ಮಾಡಲಾಗಿದೆ. ಇಲ್ಲಿರುವ ಪ್ರತಿಯೊಂದು ಮಳಿಗೆಯೂ ದೃಢನಿಶ್ಚಯದ ಕಥೆಯನ್ನು ಹೇಳುತ್ತದೆ. ಮತ್ತು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರು ಆ ಕಥೆಯ ಭಾಗವಾಗುತ್ತಾರೆ. ಬೆಂಗಳೂರು ಯಾವಾಗಲೂ ನಾವೀನ್ಯತೆ ಮತ್ತು ಹೃದಯವಂತಿಕೆಯನ್ನು ಪೋಷಿಸುವ ನಗರವಾಗಿದೆ. ಆದ್ದರಿಂದ ಪ್ರಗತಿಪರ ಚಿಂತನೆಯ ಸಮುದಾಯವನ್ನು ಹೊಂದಿದ ಬೆಂಗಳೂರಿನಲ್ಲಿ ಈ ಮೇಳದ 2ನೇ ಆವೃತ್ತಿಯನ್ನು ಆಯೋಜಿಸಲು ಖುಷಿಪಡುತ್ತೇವೆ ಎಂದು ಹೇಳಿದ್ದಾರೆ.

ಕಾರ್ಯಕ್ರಮ ಮತ್ತು ಟಿಕೆಟ್ ವಿವರಗಳು

  •  ದಿನಾಂಕ: ಡಿಸೆಂಬರ್ 3 ಮತ್ತು 4, 2025
  •  ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 9 ರವರೆಗೆ
  •  ಸ್ಥಳ: ಕೆಟಿಪಿಒ ಮೈದಾನ, ವೈಟ್‌ಫೀಲ್ಡ್, ಬೆಂಗಳೂರು
  •  ಟಿಕೆಟ್‌ಗಳು: ಡಿಸ್ಟ್ರಿಕ್ಟ್ ಆಪ್‌ನಲ್ಲಿ ಮತ್ತು ಸ್ಥಳದಲ್ಲಿ 199 ರೂ.ಗೆ ಲಭ್ಯ.
  •  5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ.
  • ಮೊದಲ ಆವೃತ್ತಿಯ ಯಶಸ್ಸಿನಿಂದ ಸ್ಫೂರ್ತಿ!

ಇನ್ನು, ಮೊದಲ ಎಂಟರ್‌ಪ್ರೆನಾರಿ ಮೇಳವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೋ ಡ್ರೈವ್-ಇನ್ ಥಿಯೇಟರ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ 120 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ತಮ್ಮ ಬ್ರ್ಯಾಂಡ್‌ಗಳನ್ನು ಪ್ರದರ್ಶಿಸಿದ್ದರು. ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಪ್ರಸಿದ್ಧ ಗುಲಾಬೊ ಫ್ಯಾಷನ್ ಶೋ ಅನ್ನು ಮೊದಲ ಆವೃತ್ತಿ ಒಳಗೊಂಡಿತ್ತು. ವ್ಯಾಪಾರ ಹಾಗೂ ಮನರಂಜನಾ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ಅಲ್ಲಿ ಸಿಕ್ಕ ಅದ್ಭುತ ಸ್ಪಂದನೆಯು ರಾಷ್ಟ್ರೀಯ ವಿಸ್ತರಣೆಗೆ ನಾಂದಿಯಾಡಿ, ಬೆಂಗಳೂರು ಆವೃತ್ತಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು..

ನಮ್ಮ ಜೊತೆ ಸೇರಿ, ಶಾಪಿಂಗ್‌ ಮಾಡಿ, ಮಹಿಳಾ ನೇತೃತ್ವದ ಉದ್ಯಮಶೀಲತೆಯ ಶಕ್ತಿಯನ್ನು ಸಂಭ್ರಮಿಸಿ. ಎಂಟರ್‌ಪ್ರೆನಾರಿ ಮೇಳ 2.0 ಸಮಸ್ತ ಬೆಂಗಳೂರನ್ನು ಸಮುದಾಯ ಆಧಾರಿತ ಪ್ರಗತಿಯನ್ನು ಅನುಭವಿಸಲು ಮತ್ತು ಭಾರತದ ಮಹಿಳಾ ಉದ್ಯಮಿಗಳ ಬೆಂಬಲಕ್ಕೆ ನಿಲ್ಲಲು ಆಹ್ವಾನಿಸುತ್ತದೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಮಂತಾ ಮದುವೆ ದಿನವೇ 'ಆ' ಪೋಸ್ಟ್ ಹಾಕಿ ನರಕಯಾತನೆಗೆ ತುತ್ತಾದ ಮಾಜಿ ಪ್ರಾಣಸ್ನೇಹಿತೆ ಸಾಧನಾ ಸಿಂಗ್!
25ಕ್ಕೆ ಗಂಡನ ಸಾವು: 30ಕ್ಕೆ ಯುವಕನೊಂದಿಗೆ ಪ್ರೇಮ: ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು