ನಮ್ಮ ಮನೆಗಳಲ್ಲಿ ಅನೇಕ ವಸ್ತುಗಳು ಒಮ್ಮೆ ಬಳಸಿದ ನಂತರ ಮೂಲೆಯಲ್ಲಿ ಬಿದ್ದಿರುತ್ತವೆ ಮತ್ತು ಅವುಗಳನ್ನು ಹೇಗೆ ಮರುಬಳಕೆ ಮಾಡಬೇಕೆಂದು ನಮಗೆ ತಿಳಿದಿರಲ್ಲ. ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಇವುಗಳಲ್ಲಿ ಒಂದು. ಆದರೆ ಬಿಸಾಡಿದ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಲು ಕೆಲವು ಕ್ರಿಯೇಟಿವ್ ಐಡಿಯಾಗಳು ಇಲ್ಲಿವೆ ನೋಡಿ..
ರಂಗೋಲಿ ಬಿಡಲು ದುಬಾರಿ ಉಪಕರಣ ಖರೀದಿಸುವ ಅಥವಾ ಬಳಸುವ ಮೊದಲು ನೀವು ಬಳಸಿ ಬಿಸಾಡುವ ನೀರಿನ ಬಾಟಲಿಯಲ್ಲಿಯೇ ಕೆಲವೇ ನಿಮಿಷದಲ್ಲಿ ರಂಗೋಲಿ ಬಿಡುವ ಉಪಕರಣ ತಯಾರಿಸಬಹುದು. ಈ ವಿಧಾನವನ್ನು ಅಳವಡಿಸಿಕೊಂಡರೆ ಡೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳು ರಂಗೋಲಿ ಹಾಕಲು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಕಲಾತ್ಮಕ ಕೌಶಲ್ಯಗಳನ್ನು ಕಲಿಯಬಹುದು.
ನೀವು ಮಾಡಬೇಕಾಗಿರುವುದು ಇಷ್ಟೇ.. ಖಾಲಿಯಾಗಿರುವ ನೀರಿನ ಪ್ಲಾಸ್ಟಿಕ್ ಬಾಟಲಿಗಳ ಕೆಳಭಾಗದಲ್ಲಿ ವಿಡಿಯೋದಲ್ಲಿ ತೋರಿಸಿರುವ ಹಾಗೆ ಸಣ್ಣ ವೃತ್ತಾಕಾರದ ರಂಧ್ರಗಳನ್ನು ಮಾಡಿ. ರಂಧ್ರದೊಳಗೆ ಪೆನ್ನಿನ ಮೇಲ್ಭಾಗದಲ್ಲಿರುವ ಶಂಕು ಆಕಾರದ ಪಾರ್ಟ್ ಇದಕ್ಕೆ ಜೋಡಿಸಿ. ಈಗ
ಬಾಟಲಿಯೊಳಗೆ ರಂಗೋಲಿ ತುಂಬಿಸಿ. ಈಗ ರಂಗೋಲಿ ಬಿಡುವುದು ಬಹಳ ಸುಲಭ ಮತ್ತು ಹೆಚ್ಚು ಸುಂದರವಾಗಿ ಕಾಣುತ್ತದೆ. ನೀವು ರಂಧ್ರಗಳನ್ನು ಸರಿಯಾದ ಗಾತ್ರದಲ್ಲಿ ಹೋಲ್ ಮಾಡಿದರೆ ಪುಡಿ ಕೂಡ ಸಮವಾಗಿ ಬೀಳುತ್ತದೆ.
ಇಲ್ಲಿದೆ ನೋಡಿ ವಿಡಿಯೋ
ಸಂಗ್ರಹಣೆ ಮತ್ತು ಮರುಬಳಕೆ
ಈ ರೀತಿ ಹಳೆಯ ಬಾಟಲಿಗಳನ್ನು ಮರುಬಳಕೆ ಮಾಡುವುದರಿಂದ ಕಸ ಕಡಿಮೆಯಾಗುತ್ತದೆ. ಇದನ್ನು ದೀರ್ಘಕಾಲದವರೆಗೆ ಬಳಸಬಹುದಾದ್ದರಿಂದ, ಪ್ರತಿ ಬಾರಿಯೂ ರಂಗೋಲಿ ಪುಡಿಯನ್ನು ಪದೇ ಪದೇ ತೆಗೆಯುವ, ಬಳಸುವ ತೊಂದರೆ ಕಡಿಮೆಯಾಗುತ್ತದೆ. ನೀವು ವಿವಿಧ ಬಣ್ಣದ ರಂಗೋಲಿ ಪುಡಿಗೆ ಪ್ರತ್ಯೇಕ ಬಾಟಲಿಗಳನ್ನು ಇಟ್ಟುಕೊಂಡರೆ ಸುಲಭವಾಗಿ ಬಹು ಬಣ್ಣದ ರಂಗೋಲಿ ರಚಿಸಬಹುದು.
ಫ್ರೆಶರ್ಸ್‌ಗೆ ಸಹಕಾರಿ
ಸಾಮಾನ್ಯವಾಗಿ ರಂಗೋಲಿ ಹಾಕುವಾಗ ಹೊಸಬರಿಗೆ ಕೈ ನಿಯಂತ್ರಣ ಸರಿಯಾಗಿ ಇರುವುದಿಲ್ಲ. ಆದ್ದರಿಂದ ರಂಗೋಲಿಯನ್ನು ಬಿಡುವಾಗ ಕಷ್ಟವಾಗಬಹುದು. ಈ ವಿಧಾನವು ಅನೇಕ ಮಂದಿಗೆ ಹೆಚ್ಚಿನ ಸಹಾಯ ಮಾಡುತ್ತದೆ. ಬಾಟಲಿಯನ್ನು ನಿಧಾನವಾಗಿ ಪ್ರೆಸ್ ಮಾಡಿ, ಮೂವ್ ಮಾಡಿದರೆ ಲೈನ್‌ಗಳು ಅಚ್ಚುಕಟ್ಟಾಗಿ ಬರುತ್ತವೆ. ನೀವು ಸುಂದರವಾದ ಡಿಸೈನ್ ನೋಡಬಹುದು.
1. ನೀವು ಪ್ಲಾಸ್ಟಿಕ್ ಬಾಟಲಿಯ ಮೇಲ್ಭಾಗವನ್ನು ಕತ್ತರಿಸಿ ಪೆನ್ನುಗಳು, ಪೆನ್ಸಿಲ್‌ಗಳು ಅಥವಾ ಇತರ ಸ್ಟೇಷನರಿ ವಸ್ತುಗಳನ್ನು ಅದರಲ್ಲಿ ಇಡಲು ನಿಮಗೆ ಬೇಕಾದ ಬಣ್ಣದ ಪೇಪರ್‌ನಿಂದ ಅಲಂಕರಿಸಬಹುದು.
2. ಪ್ಲಾಸ್ಟಿಕ್ ಬಾಟಲಿಗಳನ್ನು ಪಾರದರ್ಶಕ ಪಿಗ್ಗಿ ಬ್ಯಾಂಕ್‌ಗಳಾಗಿಯೂ ಬಳಸಬಹುದು. ಅಥವಾ ನೀವು ಅವುಗಳನ್ನು ವಿವಿಧ ಬಣ್ಣಗಳಲ್ಲಿ ಚಿತ್ರಿಸಿ ಅವುಗಳಿಗೆ ವಿಭಿನ್ನ ಲುಕ್ ಕೊಡಬಹುದು.
3. ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನ ಧಾನ್ಯಗಳು, ಬೇಳೆಕಾಳುಗಳು, ಉಪ್ಪು, ಸಕ್ಕರೆ ಇತ್ಯಾದಿಗಳನ್ನು ಸಂಗ್ರಹಿಸಲು ಸಹ ಬಳಸಬಹುದು.
4. ನೀವು ತೋಟಗಾರಿಕೆಯನ್ನು ಇಷ್ಟಪಡುವವರಾಗಿದ್ದರೆ ಪ್ಲಾಸ್ಟಿಕ್ ಬಾಟಲಿಯ ಮೇಲಿನಿಂದ ಮೂರನೇ ಒಂದು ಭಾಗವನ್ನು ಕತ್ತರಿಸಿ ಅದಕ್ಕೆ ಮಣ್ಣು ತುಂಬಿಸುವ ಮೂಲಕ ನೀವು ಅನೇಕ ಸಸ್ಯಗಳನ್ನು ಬೆಳೆಸಬಹುದು.
5. ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ತೆಗೆದು ಸ್ಪ್ರೇ ಟಾಪ್ ಜೋಡಿಸಿ. ಈಗ ಇದನ್ನು ಗಾಜು, ಟೇಬಲ್‌ವೇರ್ ಸ್ವಚ್ಛಗೊಳಿಸಲು ಅಥವಾ ಸಣ್ಣ ಗಿಡಗಳಿಗೆ ನೀರುಣಿಸಲು ಬಳಸಬಹುದು.
6. ಪ್ಲಾಸ್ಟಿಕ್ ಬಾಟಲ್ ಕೆಳಭಾಗವನ್ನು ಕಟ್ ಮಾಡಿ. ಎರಡೂ ಬದಿಗಳಲ್ಲಿ ರಂಧ್ರಗಳನ್ನು ಮಾಡಿ. ರಂಧ್ರದ ಮೂಲಕ ದಾರವನ್ನು ಕಟ್ಟಿ. ಈ ಹೋಲ್ಡರ್ ಅನ್ನು ಮನೆಯಲ್ಲಿ ಅಥವಾ ಕಾರಿನಲ್ಲಿ ಸಣ್ಣ ವಸ್ತುಗಳು ಅಥವಾ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸಬಹುದು."
7. ನಮ್ಮ ಫೋನ್‌ಗಳನ್ನು ಚಾರ್ಜ್ ಮಾಡಲು ಸ್ಥಳವನ್ನು ಹುಡುಕುವ ಸಮಸ್ಯೆಯನ್ನು ನಾವು ಹೆಚ್ಚಾಗಿ ಎದುರಿಸುತ್ತೇವೆ. ಪ್ಲಾಸ್ಟಿಕ್ ಬಾಟಲಿಯನ್ನು ನೇತಾಡುವ ಮೊಬೈಲ್ ಸ್ಟ್ಯಾಂಡ್ ಆಗಿಯೂ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.