
ಲೈಂಗಿಕ ಕಿರುಕುಳ ತುಂಬಾ ಗಂಭೀರ ಸಮಸ್ಯೆಯಾಗಿದೆ. ಬಹುತೇಕರು ಅದರ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಎಲ್ಲರೂ ಭಾವಿಸ್ತಾರೆ. ಬಹುತೇಕ ಮಹಿಳೆಯರು ಲೈಂಗಿಕ ಕಿರುಕುಳವನ್ನು ಮುಚ್ಚಿಡುವ ಪ್ರಯತ್ನ ನಡೆಸ್ತಾರೆ. ಇದಕ್ಕೆ ಅನೇಕ ಕಾರಣವಿದೆ. ನಾವಿಂದು ಲೈಂಗಿಕ ಕಿರುಕುಳವನ್ನು ಮಹಿಳೆಯರು ಮುಚ್ಚಿಡಲು ಕಾರಣವೇನು ಎಂಬುದನ್ನು ಹೇಳ್ತೇವೆ.
ಭಾರತ (India) ದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ಅನೇಕ ವರದಿಗಳು ಹೇಳ್ತವೆ. ಮಹಿಳೆಯರ ಮೇಲೆ ಕೌಟುಂಬಿಕ ಹಿಂಸಾಚಾರದ (domestic violence ) ಜೊತೆ ಲೈಂಗಿಕ ಕಿರುಕುಳ (Sexual harassment) ನಡೆಯುತ್ತದೆ. #Metoo ಆಂದೋಲನದಲ್ಲಿ ಅನೇಕ ಮಹಿಳೆಯರು ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿದ್ದರು. ಆದ್ರೆ ಆಗ್ಲೂ ಅನೇಕ ಮಹಿಳೆಯರು ಈ ವಿಷ್ಯವನ್ನು ಮುಚ್ಚಿಟ್ಟಿದ್ದರು.
ಮಹಿಳೆಯರು ಲೈಂಗಿಕ ಕಿರುಕುಳ ಮುಚ್ಚಿಡಲು ಕಾರಣ :
ಅವಮಾನ, ಅಪಪ್ರಚಾರ : ಮಹಿಳೆಯರು ಮರ್ಯಾದೆಗೆ ಅಂಜುತ್ತಾರೆ. ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಗೊತ್ತಾದ್ರೆ ಜನರು ತಮ್ಮ ಬಗ್ಗೆ ನಾನಾ ರೀತಿಯಲ್ಲಿ ಮಾತನಾಡ್ತಾರೆ ಎಂಬ ಭಯ ಮಹಿಳೆಯರನ್ನು ಕಾಡುತ್ತದೆ. ಬಾಲ್ಯದಿಂದಲೂ ಹುಡುಗಿಯರಿಗೆ ರಾತ್ರಿಯಲ್ಲಿ ತಿರುಗಾಡಬೇಡಿ, ಸರಿಯಾದ ಬಟ್ಟೆ ಧರಿಸಿ ಹೀಗೆ ಅನೇಕ ನಿಯಮಗಳನ್ನು ಹೇರುತ್ತಾರೆ. ಹುಡುಗಿಯರು ಬೆಳೆಯುತ್ತಿದ್ದಂತೆ ಅವರ ಮೇಲೆ ಇವೆಲ್ಲ ಪರಿಣಾಮ ಬೀರುತ್ತವೆ. ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿದ್ರೆ ಅವಮಾನವಾಗಬಹುದೆಂದು ಅವರು ಅದನ್ನು ಮರೆಮಾಚಲು ಯತ್ನಿಸುತ್ತಾರೆ.
ಅಪರಾಧಿ ಸ್ಥಾನದಲ್ಲಿ ಆಕೆಯೇ ಕುಳಿತುಕೊಳ್ಬೇಕು : ಹುಡುಗಿ ಯಾವುದೇ ದೌರ್ಜನ್ಯಕ್ಕೆ ಒಳಗಾಗಿದ್ದರೂ ಸಮಾಜ ಆಕೆಯನ್ನೇ ದೋಷಿಯಾಗಿ ನೋಡುತ್ತದೆ. ಹುಡುಗಿ ನಡತೆ ಬಗ್ಗೆ ಸಮಾಜ ಮಾತನಾಡುತ್ತದೆ. ಆಕೆ ಸರಿ ಇದ್ದಿದ್ದರೆ ಹೀಗಾಗ್ತಿರಲಿಲ್ಲ ಎನ್ನುತ್ತದೆ. ಅತ್ಯಾಚಾರ ನಡೆದರೂ ಅದಕ್ಕೆ ಹುಡುಗಿಯನ್ನೇ ಹೊಣೆ ಮಾಡ್ತಾರೆ. ಈ ಭಯಕ್ಕೂ ಹುಡುಗಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡೋದಿಲ್ಲ.
ಮಹಿಳೆಯರು ಸ್ಟ್ರಾಂಗು ಅಂತ ಕಂಡು ಹಿಡಿಯೋದು ಹೇಗೆ?
ಲೈಂಗಿಕ ದೌರ್ಜನ್ಯ ಮುಚ್ಚಿಡಲು ಬೆದರಿಕೆಯೂ (Threat) ಕಾರಣ : ಇದು ಸಾಮಾನ್ಯ ಕಾರಣಗಳಲ್ಲಿ ಒಂದು. ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಗಳು ಪೀಡಿತೆಗೆ ಬೆದರಿಕೆಯೊಡ್ಡುತ್ತಾರೆ. ಕುಟುಂಬಸ್ಥರ (Family) ಮೇಲೆ ಹಲ್ಲೆ, ಕೊಲೆ ಬೆದರಿಕೆ ಹಾಕುತ್ತಾರೆ. ಪ್ರಕರಣ ಮುಚ್ಚಿ ಹಾಕುವಂತೆ ಹೆದರಿಸುತ್ತಾರೆ. ಕುಟುಂಬಸ್ಥರ ಪ್ರಾಣಕ್ಕೆ (Life) ಹಾನಿಯಾಗುತ್ತೆ ಎಂಬ ಭಯಕ್ಕೆ ಕೆಲವರು ಈ ವಿಷ್ಯವನ್ನು ಹೇಳೋದಿಲ್ಲ.
ಕೆಲಸ ಕಳೆದುಕೊಳ್ಳುವ ಭಯ : ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದ್ರೂ ಮಹಿಳೆಯರು ಅದನ್ನು ಮುಚ್ಚಿಡುತ್ತಾರೆ. ಇದಕ್ಕೆ ಕಾರಣ ಕೆಲಸ ಕಳೆದುಕೊಳ್ಳುವ ಭಯ. ಸರ್ವೆ ಒಂದರ ಪ್ರಕಾರ ಶೇಕಡಾ 27ರಷ್ಟು ಮಹಿಳೆಯರು ಕಚೇರಿಯಲ್ಲಿ ಪ್ರತಿದಿನ ಯಾವುದಾದರೊಂದು ರೀತಿಯ ಲೈಂಗಿಕ ಕಿರುಕುಳಕ್ಕೆ ಒಳಗಾಗ್ತಾರೆ. ಅದ್ರಲ್ಲಿ ಶೇಕಡಾ 27ರಷ್ಟು ದೊಡ್ಡ ಹುದ್ದೆಯಲ್ಲಿರುವ ಮಹಿಳೆಯರೇ ಆಗಿರ್ತಾರೆ. ಈ ವಿಷ್ಯವನ್ನು ಸಾರ್ವಜನಿಕಗೊಳಿಸಿದ್ರೆ ಕೆಲಸ ಹೋಗಬಹುದು ಎಂಬ ಭಯ ಮಹಿಳೆಯರನ್ನು ಕಾಡುತ್ತದೆ. ಇದೇ ಕಾರಣಕ್ಕೆ ಅವರು ಈ ವಿಷ್ಯವನ್ನು ಎಲ್ಲಿಯೂ ಬಾಯಿ ಬಿಡೋದಿಲ್ಲ.
ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡದಿರಲು ಕುಟುಂಬದ ಭಯವೂ ಕಾರಣ : ಕುಟುಂಬದ ಹೆಸರು ಹಾಳಾಗುತ್ತದೆ. ಕುಟುಂಬದಲ್ಲಿ ಬೇರೆ ಹೆಣ್ಣು ಮಕ್ಕಳಿದ್ದರೆ ಅವರ ಮದುವೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಕೆಲ ಮಹಿಳೆಯರು ಈ ವಿಷ್ಯವನ್ನು ಯಾರ ಮುಂದೆಯೂ ಹೇಳಲು ಹೋಗುವುದಿಲ್ಲ. ಇನ್ನು ಕೆಲ ಮಹಿಳೆಯರಿಗೆ ಕುಟುಂಬಸ್ಥರಿಂದಲೇ ಬೆಂಬಲ ಸಿಕ್ಕಿರೋದಿಲ್ಲ.
ಬ್ರಾ ಬಗ್ಗೆ ಈಗ್ಲೂ ಇದೆ ಕೆಲವು ವಿಚಿತ್ರ ನಂಬಿಕೆ
ಲೈಂಗಿಕ ದೌರ್ಜನ್ಯವನ್ನು ಮರೆಯುವುದು ಸುಲಭವಲ್ಲ. ಜೀವನ ಪರ್ಯಂತ ಇದು ನೋವು ನೀಡುತ್ತದೆ. ಲೈಂಗಿಕ ದೌರ್ಜನ್ಯವಾದಾಗ ದೂರು ನೀಡಬೇಕು. ಅಪರಾಧಿಗೆ ಶಿಕ್ಷೆ ಕೊಡಿಸುವ ಧೈರ್ಯ ಮಾಡ್ಬೇಕು. ಇಲ್ಲವೆಂದ್ರೆ ಆತನಿಂದ ಮತ್ತಷ್ಟು ಮಹಿಳೆಯರು ತೊಂದರೆ ಅನುಭವಿಸುವ ಸಾಧ್ಯತೆಯಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.