ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್ ಗುರು ಪೂರ್ಣಿಮೆಯ ಮಹತ್ವದ ದಿನದಂದು ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಮೃತಿ ಇರಾನಿ ನೆನಪಿಸಿಕೊಂಡ ಏಕ್ತಾ ಗುರುಗಳು ಹೇಳಿದ ಮಾತೊಂದನ್ನು ಎಲ್ಲರ ಮುಂದಿಟ್ಟಿದ್ದಾರೆ.
ಕಿರುತೆರೆಯ ಪ್ರಸಿದ್ಧ ನಿರ್ಮಾಪಕಿ ಏಕ್ತಾ ಕಪೂರ್ ಸಾಕಷ್ಟು ಒಳ್ಳೊಳ್ಳೆ ಕಲಾವಿದರನ್ನು ಉದ್ಯಮಕ್ಕೆ ನೀಡಿದ್ದಾರೆ. ಏಕ್ತಾ ಕಪೂರ್ ನಿರ್ಮಾಣ ಮಾಡಿದ ಬಹಳಷ್ಟು ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಏಕ್ತಾ ಕಪೂರ್ ಗೆ ಈ ದಿನ ಬಹಳ ವಿಶೇಷ. ಯಾಕೆಂದ್ರೆ ಏಕ್ತಾ ಕಪೂರ್, ಮೋಹನ್ ಲಾಲ್ ಪ್ಯಾನ್ ಇಂಡಿಯಾ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೇ ದಿನ ಏಕ್ತಾ ಕಪೂರ್ ಪ್ರಸಿದ್ಧ ಧಾರವಾಹಿ ಕ್ಯೂಂಕಿ ಸಾಸ್ ಭಿ ಕಾಭಿ ಬಹು ತಿ ಧಾರವಾಹಿ ಲಾಂಚ್ ಆಗಿತ್ತು.
ಇಂದು ಗುರು ಪೂರ್ಣಿಮಾ (Guru Purnima). ಈ ಶುಭ ಸಂದರ್ಭದಲ್ಲಿ ಏಕ್ತಾ ಕಪೂರ್ (Ekta Kapoor), ತಮ್ಮ ಕಿರುತೆರೆ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ. ವೃತ್ತಿ ಜೀವನದ ದಾರಿಯುದ್ದಕ್ಕೂ ನೆರವಾದ ಅನೇಕರನ್ನು ಏಕ್ತಾ ನೆನಪಿಸಿಕೊಂಡು, ಧನ್ಯವಾದ ಹೇಳಿದ್ದಾರೆ.
ಇನ್ಸ್ಟಾಗ್ರಾಮ್ (Instagram) ನಲ್ಲಿ ಪೋಸ್ಟ್ ಹಂಚಿಕೊಂಡ ಏಕ್ತಾ ಕಪೂರ್ : ಇನ್ಸ್ಟಾಗ್ರಾಮ್ ನಲ್ಲಿ ಏಕ್ತಾ ಕಪೂರ್, ಕ್ಯೂಂಕಿ ಸಾಸ್ ಭಿ ಕಾಭಿ ಬಹು ತಿ ಧಾರಾವಾಹಿಯ ಪೋಸ್ಟರ್ ಪೋಸ್ಟ್ ಮಾಡಿದ್ದಲ್ಲದೆ, ಪಂಡಿತರೊಬ್ಬರು ಇದ್ರ ಬಗ್ಗೆ ಏನು ಹೇಳಿದ್ದರು ಎಂಬುದನ್ನು ತಿಳಿದಿದ್ದಾರೆ. ಕ್ಯೂಂಕಿ ಸಾಸ್ ಭಿ ಕಾಭಿ ಬಹು ತಿ ಧಾರಾವಾಹಿ, ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಯಂತೆ ಪ್ರಸಿದ್ಧಿ ಪಡೆಯಲಿದೆ ಎಂದು ಪಂಡಿತರು ಹೇಳಿದ್ದರಂತೆ.
ಅಂದು ಸುದೀಪ್- ಪುನೀತ್, ಇಂದು ಅವರ ಮಕ್ಕಳು; ಸಾನ್ವಿ- ಧ್ರುತಿ ಫೋಟೋ ವೈರಲ್!
ಪಂಡಿತರು ಹೇಳಿದ್ರು ಭವಿಷ್ಯವಾಣಿ : 1994ರಲ್ಲಿ ನಡೆದ ಘಟನೆ ಇದು. 1994ರಲ್ಲಿ ನಾನು ನನ್ನ ಸ್ನೇಹಿತೆ ಶಬಿನಾ ಮನೆಯಲ್ಲಿ ಕುಳಿತಿದ್ದೆ. ಪಂಡಿತ್ ಜನಾರ್ದನ್ ನನ್ನನ್ನು ನೋಡಿದ್ರು, ನಿಮ್ಮ ಕಂಪನಿ ಯಾವಾಗ ಶುರುವಾಗುತ್ತೆ ಅಂತಾ ಕೇಳಿದ್ರು. ನಾನು ಆಗಸ್ಟ್ ನಲ್ಲಿ ಶುರು ಮಾಡುವ ಪ್ಲಾನ್ ನಲ್ಲಿ ಇದ್ದೇನೆ ಎಂದು ಹೇಳಿದ್ದೆ. ಆಗ್ಲಿ, ಎಲ್ಲ ಒಳ್ಳೆಯದಾಗುತ್ತದೆ. ಆದ್ರೆ 25 ವರ್ಷಗಳವರೆಗೆ ನೀವು ಕಾಯ್ಲೇಬೇಕು. ಆಗ ಬರುವ ಒಂದು ಧಾರಾವಾಹಿ, ರಾಮಾಯಣ ಮತ್ತು ಮಹಾಭಾರತದಷ್ಟೇ ಪ್ರಸಿದ್ಧಿ ಪಡೆಯುತ್ತದೆ ಎಂದಿದ್ದರು ಎಂದು ಏಕ್ತಾ ಬರೆದಿದ್ದಾರೆ.
ಸ್ಮೃತಿ ಕಾಂಟ್ರಾಕ್ಟ್ ಸಿಕ್ಕಿದ್ದು ಹೇಗೆ? : ಇಷ್ಟೇ ಅಲ್ಲ, ಮೈಥಾಲಜಿ ಶೋ ಬಗ್ಗೆ ನನಗೆ ಹೆಚ್ಚು ಜ್ಞಾನವಿಲ್ಲ. ನೋಡೋಣ ಎಂದು ನಾನು ಹೇಳಿದ್ದೆ. 2000ನೇ ಇಸವಿಯಲ್ಲಿ ಹಮ್ ಪಾಂಚ್ ಚಿತ್ರ ನಿರ್ಮಾಣ ಮಾಡಿದೆ. ನಂತ್ರ ಅದೇ ವರ್ಷ ಮಹತ್ವದ ಪಾತ್ರಕ್ಕೆ ಒಬ್ಬ ನಟಿಯ ಹುಡುಕಾಟದಲ್ಲಿದ್ದೆ. ಕೊನೆಗೂ ಒಬ್ಬರು ಸಿಕ್ಕಿದ್ರು. ಅವರ ಟೇಪ್ ನೋಡಿ ನಾನು ಕಾಂಟ್ರೆಕ್ಟ್ ಗೆ ಸಹಿ ಹಾಕಿಸಿದ್ದೆ. ಅವರೇ ಸ್ಮೃತಿ ಇರಾನಿ. ಆ ದಿನ ಅವರ ಹುಟ್ಟುಹಬ್ಬವಾಗಿತ್ತು ಎಂದು ಏಕ್ತಾ ಕಪೂರ್, ಸ್ಮೃತಿ ಇರಾನಿ ನೆನಪು ಮಾಡಿಕೊಂಡಿದ್ದಾರೆ.
ರಿಮ್‌ಜಿಮ್ ಗಿರೇ ಸಾವನ್: ಮಳೆ ಮಧ್ಯೆ ಹಿರಿಯ ಜೋಡಿಯ ಡ್ಯುಯೆಟ್ : ವೀಡಿಯೋ ವೈರಲ್ಅಲ್ಲದೆ ಏಕ್ತಾ ಕಪೂರ್, ಎಲ್ಲರಿಗೂ ಗುರುಪೂರ್ಣಿಮೆ ಶುಭಾಶಯ ಹೇಳಿದ್ದಾರೆ. ಜುಲೈ 2023ರ ಗುರು ಪೂರ್ಣಿಮೆ ದಿನ ನಾನು ನನ್ನ ಮಗನನ್ನು ನೋಡುತ್ತೇನೆ ಮತ್ತು ಯೋಚಿಸುತ್ತೇನೆ, ಆಟಗಾರರು ಕುಳಿತು ನೋಡುತ್ತಾರೆ, ಹೊಸ ಆಟಗಾರರು ಈ ಆಟವನ್ನು ಆಡುತ್ತಾರೆ. ಸಂಬಂಧದ ಬಣ್ಣ ಬದಲಾಯಿತು.. ಸಂಬಂಧ ಬದಲಾಯಿತು, ಕನ್ನಡಿ ಈಗಲೂ ಹಾಗೆಯೇ ಇದೆ. ಇನ್ನೆರಡು ಗಂಟೆಯಲ್ಲಿ ಪ್ಯಾನ್ ಇಂಡಿಯಾ ಜೊತೆಗಿನ ಒಪ್ಪಂದದ ಬಗ್ಗೆ ಘೋಷಣೆಯಾಗಲಿದೆ. ಎಲ್ಲರಿಗೂ ಧನ್ಯವಾದ ಎಂದು ಏಕ್ತಾ ಕಪೂರ್ ಪೋಸ್ಟ್ ಮಾಡಿದ್ದಾರೆ. ಏಕ್ತಾ ಕಪೂರ್ ಕ್ಯೂಂಕಿ ಸಾಸ್ ಭಿ ಕಾಭಿ ಬಹು ತಿ ಧಾರಾವಾಹಿ ಜುಲೈ 3, 2000ರಲ್ಲಿ ಲಾಂಚ್ ಆಗಿತ್ತು. ನವೆಂಬರ್ 6, 2008ರಲ್ಲಿ ಕೊನೆ ಎಪಿಸೋಡ್ ಪ್ರಸಾರವಾಗಿತ್ತು.