ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ನೀಡ್ತಿದೆ. ಇದ್ರ ಲಾಭವನ್ನು ಈಗಾಗ್ಲೇ ನೀವು ಪಡೆದಿದ್ರೆ ಅದನ್ನು ಹಾಗೆ ಬಚ್ಚಿಡಬೇಡಿ. ನಾನಾ ವಿಧದಲ್ಲಿ ಹಣ ಗಳಿಸಲು ಅವಕಾಶವಿದ್ದು, ಸ್ವಾವಲಂಬಿ ಮಹಿಳೆಯಾಗುವತ್ತ ಹೆಜ್ಜೆಯಿಡಿ.
ಮನೆಯಲ್ಲೇ ಕುಳಿತು ಮಹಿಳೆಯರು ಮಾಡುವ ಉದ್ಯೋಗ ಯಾವ್ದು ಅಂತಾ ಕೇಳಿದ್ರೆ ಮೊದಲು ಬರುವ ಉತ್ತರ ಹೊಲಿಗೆ. ಸದಾ ಬೇಡಿಕೆಯಲ್ಲಿರುವ ಬ್ಯುಸಿನೆಸ್ ನಲ್ಲಿ ಇದೂ ಒಂದು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ತುಂಬಾ ಬ್ಯುಸಿಯಾಗಿದ್ದವರ ಪೈಕಿ ಈ ಹೊಲಿಗೆ ಉದ್ಯೋಗಿಗಳು ಸೇರ್ತಾರೆ. ಗ್ರಾಮೀಣ ಪ್ರದೇಶದಿಂದ ಹಿಡಿದು ಮೆಟ್ರೋ ಸಿಟಿಯವರೆಗೆ ಎಲ್ಲ ಕಡೆ ಇವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಅನೇಕ ಮಹಿಳೆಯರಿಗೆ ಹೊಲಿಗೆ ಬರುತ್ತೆ. ಆದ್ರೆ ಹೊಲಿಗೆ ಮಿಷನ್ ಖರೀದಿ ಮಾಡುವ ಸಾಮರ್ಥ್ಯವಿರೋದಿಲ್ಲ.
ಸಾಮಾನ್ಯ ಹೊಲಿಗೆ (Sewing) ಮಷಿನ್ ಬೆಲೆಯೇ 5 ಸಾವಿರ ರೂಪಾಯಿ ಇದೆ. ಇನ್ನು ಸ್ವಲ್ಪ ಅಪ್ಡೇಟ್ ಖರೀದಿ ಮಾಡ್ಬೇಕೆಂದ್ರೆ ಮತ್ತಷ್ಟು ಹಣ ಖರ್ಚು ಮಾಡ್ಬೇಕು. ನಿತ್ಯದ ಕೆಲಸದ ಜೊತೆ ಹೊಲಿಗೆ ಮಾಡಿ ಹಣ (Money) ಸಂಪಾದನೆ ಮಾಡ್ಬೇಕು ಎನ್ನುವ ಮಹಿಳೆಯರಿಗೆ ಈ 5 ಸಾವಿರ ಕೂಡ ದುಬಾರಿಯೇ. ಅಂಥ ಮಹಿಳೆಯರ ನೆರವಿಗಾಗಿಯೇ ಕೇಂದ್ರ ಸರ್ಕಾರ (central government) ಉಚಿತ ಹೊಲಿಗೆ ಯಂತ್ರ ಯೋಜನೆ ಶುರು ಮಾಡಿದೆ. ಬಹುತೇಕ ಎಲ್ಲ ರಾಜ್ಯದಲ್ಲೂ ಈ ಉಚಿತ ಹೊಲಿಗೆ ಯಂತ್ರ ವಿತರಣೆ ಜಾರಿಯಲ್ಲಿದೆ.
ಉಚಿತ ಹೊಲಿಗೆ ಯಂತ್ರ ಪಡೆಯುವ ಮಹಿಳೆಯರು https://www.india.gov.in/ ವೆಬ್ ಸೈಟ್ ಮೂಲಕ ಅಪ್ಲಿಕೇಷನ್ ಸಲ್ಲಿಕೆ ಮಾಡ್ಬಹುದು. ನಿಮಗೆ ಆನ್ಲೈನ್ ಹಾಗೂ ಆಫ್ ಲೈನ್ ಎರಡೂ ವಿಧದಲ್ಲಿ ಅಪ್ಲಿಕೇಷನ್ ಸಲ್ಲಿಸಲು ಅವಕಾಶವಿದೆ. ಅಪ್ಲಿಕೇಷನ್ ಪಿಡಿಎಫ್ ಡೌನ್ಲೋಡ್ ಮಾಡಿ ಅದನ್ನು ಭರ್ತಿ ಮಾಡಿ, ದಾಖಲೆ ಸಮೀತ ಸಲ್ಲಿಕೆ ಮಾಡಬೇಕಾಗುತ್ತದೆ.
Nurse Kathija Bibi: 10 ಸಾವಿರ ಹೆರಿಗೆ, ಒಂದೂ ಸಾವಿಲ್ಲ… ಈ ದಾದಿಗೊಂದು ಸಲಾಂ!
ಎಲ್ಲ ರಾಜ್ಯಗಳು ತಮ್ಮದೇ ಆದ ಕೆಲ ನಿಯಮಗಳ ಅಡಿಯಲ್ಲಿ ಈ ಅರ್ಜಿಯನ್ನು ಸ್ವೀಕರಿಸುತ್ತಿದೆ. ಪ್ರತಿಯೊಬ್ಬ ಫಲಾನುಭವಿ ಮಹಿಳೆಯಾಗಿರ್ತಾರೆ. ಅವರು ಆಯಾ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿರುವುದು ಮುಖ್ಯವಾಗಿರುತ್ತದೆ. ಈ ಯೋಜನೆಯ ಲಾಭವನ್ನು ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ದುರ್ಬಲ ಮಹಿಳೆಯರು ಮತ್ತು ಉದ್ಯೋಗಸ್ಥ ಮಹಿಳೆಯರು ಪಡೆಯಬಹುದು. ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ 2023-24 ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರತಿ ರಾಜ್ಯದಲ್ಲಿ 50,000 ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ಒದಗಿಸುತ್ತದೆ. ಉಚಿತ ಹೊಲಿಗೆ ಯಂತ್ರ ಪಡೆಯಲು ಬಯಸುವ ಮಹಿಳೆಯರ ವಯಸ್ಸು 20 ರಿಂದ 40 ವರ್ಷದೊಳಗಿರಬೇಕು. ಆದಾಯ 12 ಸಾವಿರಕ್ಕಿಂತ ಕಡಿಮೆ ಇರುವ ಮಹಿಳೆ ಮಾತ್ರ ಉಚಿತ ಹೊಲಿಗೆ ಮಷಿನ್ ಪಡೆಯಬಹುದು. ವಿಕಲಾಂಗ ಹಾಗೂ ವಿಧವೆ ಮಹಿಳೆಯರಿಗೂ ಇದನ್ನು ಪಡೆಯುವ ಅವಕಾಶವನ್ನು ಸರ್ಕಾರ ಒದಗಿಸಿದೆ.
ಮಕ್ಕಳಿಗೆ ಓದಿಸೋ ಕೆಲ್ಸ ಬಿಟ್ಟು, ಮತ್ಸ್ಯಕನ್ಯೆಯಾದ ಟೀಚರ್!
ಉಚಿತ ಹೊಲಿಗೆ ಯಂತ್ರ ಯೋಜನೆಯ ಸದುಪಯೋಗ ಹೇಗೆ?:
• ಸರ್ಕಾರ ಉಚಿತವಾಗಿ ನೀಡ್ತಿದೆ ಎನ್ನುವ ಕಾರಣಕ್ಕೆ ಹೊಲಿಗೆ ಯಂತ್ರ ಪಡೆದು ಅದನ್ನು ಮನೆಯಲ್ಲಿಟ್ಟರೆ ಯಾವುದೇ ಪ್ರಯೋಜನವಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರು ಅದನ್ನು ಆದಾಯದ ಮೂಲವಾಗಿಸಿಕೊಳ್ಳಬೇಕು.
• ಮಹಿಳೆಯರ ಬ್ಲೌಸ್ ಹಾಗೂ ಸಲ್ವಾರ್ ಸ್ಟಿಚ್ಚಿಂಗ್ ಗೆ ಸದಾ ಬೇಡಿಕೆಯಿದೆ. ಆರಂಭದಲ್ಲಿ ಸ್ನೇಹಿತರು, ಕುಟುಂಬಸ್ಥರ ಬ್ಲೌಸ್ ಸ್ಟಿಚ್ ಮಾಡಿ ನಂತ್ರ ನೀವು ಉಳಿದವರ ಆರ್ಡರ್ ಪಡೆಯಬಹುದು. ಉತ್ತಮ ಡಿಸೈನ್ ನೀವು ಕಲಿತಿದ್ದಲ್ಲಿ ಗಳಿಕೆ ಹೆಚ್ಚಾಗುತ್ತದೆ.
• ಬ್ಲೌಸ್ ಸೇರಿದಂತೆ ಡ್ರೆಸ್ ಸ್ಟಿಚಿಂಗ್ ಬರ್ತಿಲ್ಲವೆಂದ್ರೂ ಚಿಂತೆಯಿಲ್ಲ. ನೀವು ದಿಂಬಿನ ಕವರ್ ಸ್ಟಿಚ್ ಮಾಡಿಯೂ ಹಣ ಗಳಿಸಬಹುದು.
• ಸೀರೆ ಸೇರಿದಂತೆ ಬಟ್ಟೆಗಳನ್ನು ಇಡಲು ಜನರು ಬ್ಯಾಗ್ ಕೇಳ್ತಾರೆ. ನೀವು ಸೀರೆ ಬ್ಯಾಗ್ ತಯಾರಿಸಿಯೇ ಹಣ ಗಳಿಕೆ ಮಾಡಬಹುದು.
• ಸ್ಟಿಚಿಂಗ್ ನಲ್ಲಿ ನಾನಾ ವಿಧಗಳಿವೆ. ಅನೇಕ ಕಂಪನಿಗಳು ನಿಮಗೆ ಸ್ಟಿಚಿಂಗ್ ಕೆಲಸವನ್ನು ನೀಡ್ತಿವೆ. ಅವುಗಳನ್ನು ಸಂಪರ್ಕಿಸಿ ನೀವು ಕೆಲಸ ಪಡೆಯಬಹುದು.
• ಕೆಲ ಆನ್ಲೈನ್ ಕಂಪನಿಗಳಿಗೆ ಟೈಅಪ್ ಆಗಿ ನೀವು ತಯಾರಿಸಿದ ಬಟ್ಟೆ ಅಥವಾ ದಿಂಬಿನ ಕವರ್, ಬ್ಯಾಗ್ ಗಳನ್ನು ಮಾರಾಟ ಮಾಡಿ ನೀವು ಹಣ ಗಳಿಸಬಹುದು.
• ಇಷ್ಟೇ ಅಲ್ಲ ನಿಮ್ಮ ಅಕ್ಕಪಕ್ಕದಲ್ಲಿರುವ ಹೊಲಿಗೆ ಅಂಗಡಿಯವರನ್ನು ಸಂಪರ್ಕಿಸಿ, ಅವರಿಂದ ನೀವು ಕೆಲಸ ಪಡೆದು ಗಳಿಕೆ ಮಾಡ್ಬಹುದು.
ಮನೆಯಲ್ಲಿ ಹೊಲಿಗೆ ಯಂತ್ರವಿದ್ರೆ ಗಳಿಕೆಗೆ ನಾನಾ ದಾರಿಯಿದೆ. ಸರ್ಕಾರ ಉಚಿತವಾಗಿ ನೀಡ್ತಿರುವ ಯೋಜನೆ ಲಾಭಪಡೆದು, ನೀವೂ ಸ್ವಾವಲಂಬಿ ಜೀವನ ನಡೆಸಿ.