ಆರೋಗ್ಯವಂತ ವ್ಯಕ್ತಿ ಪ್ರತಿ ದಿನ 2ರಿಂದ 3 ಲೀಟರ್ ನೀರು ಕುಡಿಯಬೇಕು. ಈ ನೀರು ನಮ್ಮನ್ನು ಬಹುತೇಕ ರೋಗದಿಂದ ದೂರವಿಡುತ್ತದೆ. ಪಿರಿಯಡ್ಸ್ ಆದಾಗ ನೋವು, ತಲೆಸುತ್ತು ಅಂತಾ ದೂರವ ಮಹಿಳೆ ನೀವಾಗಿದ್ದರೆ ಇದನ್ನೋದಿ.
ನಾವು ಆರೋಗ್ಯವಾಗಿರಬೇಕೆಂದ್ರೆ ನಮ್ಮ ದೇಹ ಹೈಡ್ರೇಟ್ ಆಗಿರಬೇಕು. ದೇಹಕ್ಕೆ ಅಗತ್ಯವಿರುವ ನೀರು ನಮ್ಮ ದೇಹವನ್ನು ಸೇರಬೇಕು. ದೇಹ ನಿರ್ಜಲೀಕರಣಗೊಂಡರೆ ಸಮಸ್ಯೆಗಳು ಶುರುವಾಗುತ್ತವೆ. ಬೇಸಿಗೆ ಕಾಲದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಕೆಲಸದ ಒತ್ತಡ ಅಥವಾ ಬೇರೆ ಇನ್ನಾವುದೋ ಕಾರಣಕ್ಕೆ ಜನರು ಸರಿಯಾಗಿ ನೀರು ಕುಡಿಯೋದಿಲ್ಲ. ಪ್ರತಿ ದಿನ ಒಂದೆರಡು ಲೋಟ ನೀರು ಸೇವನೆ ಮಾಡೋರಿದ್ದಾರೆ. ನೀರು ಅಥವಾ ದ್ರವ ಪದಾರ್ಥ ದೇಹವನ್ನು ಸೇರೋದಿಲ್ಲ. ಇದ್ರಿಂದಾಗಿ ಒಂದಲ್ಲ ಒಂದು ಅನಾರೋಗ್ಯ ಅವರನ್ನು ಕಾಡುತ್ತದೆ.
ನಿರ್ಜಲೀಕರಣ (Dehydration) ದಿಂದ ತಲೆತಿರುಗುವಿಕೆ, ತಲೆನೋವು, ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆ, ದೇಹ ದುರ್ಬಲವಾಗುವುದು ಮತ್ತು ಚರ್ಮ ಶುಷ್ಕವಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ. ಇನ್ನು ಮುಟ್ಟಿನ ಸಮಯದಲ್ಲೂ ನೀರು ಮುಖ್ಯವಾಗುತ್ತದೆ. ಮಹಿಳೆ ಪ್ರತಿ ತಿಂಗಳು ಮುಟ್ಟಿ (Periods ) ನ ನೋವನ್ನು ಅನುಭವಿಸ್ತಾಳೆ. ನೀವು ಹೆಚ್ಚಿನ ನೋವನ್ನು ತಿನ್ನುತ್ತಿದ್ದರೆ ಅದಕ್ಕೆ ನೀವು ಕುಡಿಯುವ ನೀರಿ (Water) ನ ಪ್ರಮಾಣ ಕೂಡ ಕಾರಣವಾಗಿರಬಹುದು. ಹೌದು, ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವು ನೇರವಾಗಿ ನಿರ್ಜಲೀಕರಣದ ಜೊತೆ ಸಂಬಂಧ ಹೊಂದಿದೆ.
undefined
ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬಾರದ? ಧರ್ಮಗ್ರಂಥಗಳು ಏನು ಹೇಳುತ್ತವೆ?
ಮುಟ್ಟಿನ ಸಮಯದಲ್ಲಿ ಮಹಿಳೆಯರು ನೀರಿನ ಸೇವನೆಯನ್ನು ಸರಿಯಾದ ಪ್ರಮಾಣದಲ್ಲಿ ಮಾಡ್ಬೇಕು. ಈ ಸಮಯದಲ್ಲಿ ಮಹಿಳೆಯರು ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ನೀರು ಕುಡಿಯದೆ ದೇಹ ಡಿಹೈಡ್ರೇಟ್ ಆದ್ರೆ ಅದು ರಕ್ತದ ಹರಿವು ಮತ್ತು ಮುಟ್ಟಿನ ನೋವಿನ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ಇನ್ನೂ ಅನೇಕ ಸಮಸ್ಯೆ ಮಹಿಳೆಯರನ್ನು ಕಾಡುತ್ತದೆ.
ನಿರ್ಜಲೀಕರಣದಿಂದ ಕಾಡುತ್ತೆ ಈ ಎಲ್ಲ ಸಮಸ್ಯೆ :
ಮುಟ್ಟಿನ ನೋವು : ಮುಟ್ಟಿನ ಸಮಯದಲ್ಲಿ ನೋವು ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತಿದೆ ಎಂದಾದ್ರೆ ನೀವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿದಿಲ್ಲ ಎಂದೇ ಅರ್ಥ. ಸೆಳೆತ ವಿಪರೀತವಾಗಿದ್ದರೆ ನೀವು ದೇಹವನ್ನು ಹೈಡ್ರೇಟ್ ಮಾಡಲು ಮುಂದಾಗಿ. ಕಡಿಮೆ ನೀರು ಸೇವಿಸಿದಾಗ ಗರ್ಭಾಶಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಸೆಳೆತ ಹೆಚ್ಚಾಗುತ್ತದೆ.
ಪಿರಿಯಡ್ಸ್ ಸಮಯದಲ್ಲಿ ಜ್ವರ ಬರುತ್ತಾ? ಹಾಗಿದ್ರೆ ಏನ್ ಮಾಡೋದು?
ಕಾಡುತ್ತೆ ಈ ಎಲ್ಲ ಸಮಸ್ಯೆ : ಬರೀ ನೋವು ಮಾತ್ರವಲ್ಲ ಮೊದಲೇ ಹೇಳಿದಂತೆ ನೀರಿನ ಪ್ರಮಾಣ ದೇಹದಲ್ಲಿ ಕಡಿಮೆಯಾದಾಗ ಮತ್ತೊಂದಿಷ್ಟು ಸಮಸ್ಯೆ ಕಾಡುತ್ತದೆ. ಸಾಮಾನ್ಯವಾಗ ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹ ದುರ್ಬಲವಾಗುತ್ತದೆ. ನೀರಿನ ಪ್ರಮಾಣ ಕಡಿಮೆಯಾದ್ರೆ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಇದಲ್ಲದೆ ಹೊಟ್ಟೆ ಉಬ್ಬರ, ಮೈಗ್ರೇನ್, ತಲೆನೋವು, ಸ್ನಾಯು ನೋವು ಮತ್ತು ತಲೆಸುತ್ತು ಸೇರಿದಂತೆ ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಕ್ಕಿದ್ರೆ ನಿಮ್ಮ ಮುಟ್ಟಿನ ನೋವನ್ನು ಶೇಕಡಾ 50ರಷ್ಟು ಕಡಿಮೆ ಮಾಡ್ಬಹುದು ಎನ್ನುತ್ತಾರೆ ತಜ್ಞರು.
ಮುಟ್ಟಿನ ದಿನಗಳಲ್ಲಿ ಏನು ಮಾಡ್ಬೇಕು? : ಪಿರಿಯಡ್ಸ್ ಸಮಯದಲ್ಲಿ ಮಹಿಳೆ ನೀರು ಕುಡಿಯೋದನ್ನು ಮರೆಯಬಾರದು. ನೀವು ಯಾವೆಲ್ಲ ಕೆಲಸ ಮಾಡ್ತೀರಿ, ದೈಹಿಕ ಶ್ರಮ, ನಿಮ್ಮ ದೇಹ ಮತ್ತು ಮುಟ್ಟನ್ನು ಆಧಾರಿಸಿ ನಿಮ್ಮ ದೇಹಕ್ಕೆ ಎಷ್ಟು ನೀರು ಅಗತ್ಯ ಎಂಬುದನ್ನು ಪತ್ತೆ ಹಚ್ಚಬೇಕಾಗುತ್ತದೆ. ಅದ್ರಂತೆ ನೀವು ನೀರು ಸೇವನೆ ಮಾಡಬೇಕು. ನಿಮ್ಮ ಮೂತ್ರ ಸ್ಪಟಿಕದಂತಿರಬೇಕು. ಅದು ಕೆಂಪು ಅಥವಾ ಹಳದಿ ಬಣ್ಣದಲ್ಲಿದ್ದರೆ ನೀವು ಕುಡಿಯುವ ನೀರು ಸಾಲ್ತಿಲ್ಲ ಎಂದೇ ಅರ್ಥ. ಹಾಗೆಯೇ ಮೂತ್ರ ವಾಸನೆ ಬರ್ತಿದ್ದರೆ ಅದು ಆರೋಗ್ಯಕರ ಲಕ್ಷಣವಲ್ಲ. ಪಿರಿಯಡ್ಸ್ ಸಮಯದಲ್ಲಿ ಪೌಷ್ಟಿಕ ಆಹಾರವನ್ನು ತಿನ್ನಬೇಕಾಗುತ್ತದೆ. ಹಾಗೆಯೇ ನೀರಿನ ಜೊತೆ ನೀವು ದ್ರವ ಪದಾರ್ಥ, ಜ್ಯೂಸ್ ಕುಡಿಯಬೇಕು.