ಅಶ್ಲೀಲ ಫೋಟೊ ತೋರಿಸಿ ಮಾನಸಿಕ ಕಿರುಕುಳ ಪ್ರಕರಣ; ಸೈಕೋ ವಿರುದ್ಧ ದೂರು

By Ravi Janekal  |  First Published May 26, 2023, 11:29 AM IST

ಮಹಿಳೆಯ ಅಶ್ಲೀಲ ಫೋಟೊ ಶೇರ್ ಮಾಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ ಸಂಬಂಧ ಮಹಿಳೆ ವ್ಯಕ್ತಿಯ ವಿರುದ್ಧ ದೂರು  ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾಳೆ.


ಶಿವಮೊಗ್ಗ (ಮೇ.26) : ಮಹಿಳೆಯ ಅಶ್ಲೀಲ ಫೋಟೊ ಶೇರ್ ಮಾಡಿ ಮಾನಸಿಕ ಹಿಂಸೆ ನೀಡಿದ ಪ್ರಕರಣ ಸಂಬಂಧ ಮಹಿಳೆ ವ್ಯಕ್ತಿಯ ವಿರುದ್ಧ ದೂರು  ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾಳೆ.

ಅಶ್ಲೀಲ ಫೋಟೊ ಇಟ್ಟುಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದ ಕಿರಾತಕನ ಮೇಲೆ ಶಿವಮೊಗ್ಗ ನಗರದ ಸಿಇಎಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು.

Tap to resize

Latest Videos

ಇವನೆಂಥಾ ಗಂಡ..ಹೆಂಡ್ತಿಯ ಅಶ್ಲೀಲ ವಿಡಿಯೋ ಗರ್ಲ್‌ಫ್ರೆಂಡ್‌ಗೆ ಶೇರ್‌ ಮಾಡಿದ ಭೂಪ!

ಏನಿದು ಪ್ರಕರಣ:

ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ವ್ಯಕ್ತಿ. ಮೊದಲಿಗೆ ಪರಿಚಯವಾಗಿ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಬಳಿಕ ಮಹಿಳೆಗೆ ಗೊತ್ತಾಗದ ಹಾಗೆ ಅವಳ ಖಾಸಗಿ ಭಾಗಗಳ ಫೋಟೊ ತೆಗೆದುಕೊಂಡಿದ್ದ ಸೈಕೋ. 

ಬೆಂಗಳೂರು ತೊರೆದು ಶಿವಮೊಗ್ಗದಲ್ಲೇ ಕೆಲಸ ಆರಂಭಿಸಿದ್ದ ಮಹಿಳೆ. ಬೆಂಗಳೂರು ಬಿಟ್ಟರೂ ಆಕೆಯ ಬೆನ್ನು ಬಿಡದ ಸೈಕೋ. ಇತ್ತೀಚೆಗೆ ಮಹಿಳೆಗೆ ಅಶ್ಲೀಲ ಫೋಟೊ ಕಳುಹಿಸಿ ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದ. ಅಷ್ಟಕ್ಕೆ ಸಾಲದೆ ಮಹಿಳೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳಿಗೂ, ಸಂಬಂಧಿಕರಿಗೂ ವಾಟ್ಸಪ್ ಮೂಲಕ ಮಹಿಳೆಯ ಅಶ್ಲೀಲ ಫೋಟೊ ಕಳುಹಿಸಿದ್ದ ಸೈಕೋಪಾತ್. ಇದರಿಂದ  ಮಾನಸಿಕ ನೊಂದಿದ್ದ ಮಹಿಳೆ ಶಿವಮೊಗ್ಗದ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

click me!