ದುಬೈನ ಗೃಹಿಣಿ, ಮಿಲಿಯನೇರ್ ಪತ್ನಿ ಲಿಂಡಾ ಆಂಡ್ರೇಡ್ ತಮ್ಮ ಸಮಸ್ಯೆಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಸದಾಕಾಲ ಸುಂದರವಾಗಿಯೇ ಕಾಣಿಸಿಕೊಳ್ಳಬೇಕು, ಪ್ರವಾಸ ಮಾಡಬೇಕು, ಉತ್ತಮ ಆಹಾರ ತಿನ್ನಬೇಕು, ಪತಿ ತನಗಾಗಿ ಎಷ್ಟೆಲ್ಲ ಖರ್ಚು ಮಾಡುತ್ತಾನೆ ಎಂದೆಲ್ಲ ನೋವುಗಳನ್ನು ಹೇಳಿಕೊಂಡಿದ್ದಾರೆ! ಅದನ್ನು ಕೇಳಿದ ನೆಟ್ಟಿಗರಿಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.
ಸಿಕ್ಕಾಪಟ್ಟೆ ದುಡ್ಡಿದ್ದರೆ ಜೀವನ ಸುಂದರ, ಅದಕ್ಕಿಂತ ಬೇರೊಂದು ಸುಖವಿಲ್ಲ ಎನ್ನುವುದು ಸಾಮಾನ್ಯರ ನಂಬಿಕೆ. ಕೆಲವರು ಅಗತ್ಯಕ್ಕೆ ಬೇಕಾಗುವಷ್ಟು ದುಡ್ಡು ಇರಲೇಬೇಕು. ಆಗ ಜೀವನಕ್ಕೆ ಒಂದು ಅರ್ಥ ಎನ್ನುತ್ತಾರೆ. ದುಡ್ಡಿಲ್ಲದ ಬದುಕು ಬದುಕೇ ಅಲ್ಲ ಎನ್ನುವವರೂ ಇದ್ದಾರೆ. ಹಣದ ಮಹಿಮೆ ನಿರಾಕರಿಸುವವರು ಯಾರೂ ಇಲ್ಲ. ಹಣವಿದ್ದರೆ ಜೀವನದಲ್ಲಿ ಎಲ್ಲವೂ ದಕ್ಕುತ್ತದೆ. ಹೀಗಾಗಿ, ಹುಡುಗಿಯರು ಹಣವಿರುವ ಹುಡುಗನಿಗೆ ಬಹಳ ಬೇಗ ಮನಸೋಲುತ್ತಾರೆ ಎನ್ನುವ ಆರೋಪವೂ ಇದೆ. ಇದು ಕೆಲಮಟ್ಟಿಗೆ ನಿಜವೂ ಹೌದು. ಏಕೆಂದರೆ, ಹಣ ಜೀವನಕ್ಕೆ ಬೇಕಾದ ಕಂಫರ್ಟ್ ನೀಡುವಾಗ ಯಾರಿಗೆ ಬೇಡ? ಸಿರಿವಂತರ ಮನೆಯ ಸೊಸೆಯಾಗುವುದು, ಮಿಲಿಯನೇರ್ ಪುರುಷನ ಪತ್ನಿಯಾಗುವುದು ಹುಡುಗಿಯರ ಕನಸು. ಆದರೆ, ದುಬೈನ ಗೃಹಿಣಿಯೊಬ್ಬರು ಸಿಕ್ಕಾಪಟ್ಟೆ ಹಣವಿರುವ ಪುರುಷನ ಪತ್ನಿಯಾಗುವುದು ಕೆಲವು ವಿಚಾರಗಳಲ್ಲಿ ಎಷ್ಟು ಕಷ್ಟ ಎಂದು ಹೇಳಿಕೊಂಡಿದ್ದಾರೆ!
ಮಿಲಿಯನೇರ್ ಪತ್ನಿಯಾಗಿ ತಮ್ಮ ಜೀವನದ ಅತ್ಯಂತ ಕೆಟ್ಟ ವಿಚಾರಗಳು ಏನು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ಅದನ್ನು ಕೇಳಿದ ನೆಟ್ಟಿಗರು ದಂಗಾಗಿದ್ದಾರೆ. ಆಕೆ ನಿಜಕ್ಕೂ ತಮಾಷೆ ಮಾಡುತ್ತಿದ್ದಾಳಾ ಅಥವಾ ಸತ್ಯವಾಗಿಯೂ ಅನಿಸಿಕೆ ಹಂಚಿಕೊಂಡಿದ್ದಾಳಾ ಎಂದು ಪ್ರಶ್ನಿಸಿದ್ದಾರೆ. ದುಬೈನ ಮಿಲಿಯನೇರ್ ಪತ್ನಿ (Millionaire) ಹಾಗೂ ಲಕ್ಸುರಿ ಇನ್ ಫ್ಲುಯೆನ್ಸರ್ (Luxury Influencer) ಲಿಂಡಾ ಆಂಡ್ರೇಡ್ (Linda Andrade) ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಅತಿ ಶ್ರೀಮಂತ ಪುರುಷನ (Rich Man) ಪತ್ನಿಯಾಗಿ ತಾನು ಎದುರಿಸುವ ಕೆಲವು ಕೆಟ್ಟ ಸಂಗತಿ ಹಂಚಿಕೊಂಡಿದ್ದಾರೆ. ಆದರೆ, ಇದು ಸಿಲ್ಲಿ ಎನಿಸುವಂತಿದೆ. ನೆಟ್ಟಿಗರು ಈ ವಿಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಲ್ಲ, ಬದಲಿಗೆ ಗಡುಸಾದ ಉತ್ತರ ನೀಡಿದ್ದಾರೆ. ಏಕೆಂದರೆ, ಆಕೆಯ ನಿಲುವು ಗಂಭೀರವಾಗಿಲ್ಲ. ಎಳಸು ನೋಟ ಕಂಡುಬರುತ್ತದೆ. ದೂರುಗಳು (Complaints) ಸಿಲ್ಲಿ ಎನಿಸುತ್ತವೆ.
undefined
ಹೈ ಹೀಲ್ಸ್ ತಯಾರಾಗಿದ್ದು, ಮಹಿಳೆಯರಿಗಾಗಿ ಅಲ್ಲ ಪುರುಷರಿಗಾಗಿ!
ಸದಾಕಾಲ ಚೆನ್ನಾಗಿ ಕಾಣಿಸ್ಬೇಕು: ಸದಾಕಾಲ ಚೆನ್ನಾಗಿಯೇ (Smart) ಕಾಣಿಸಿಕೊಳ್ಳಬೇಕು, ಫಸ್ಟ್ ಕ್ಲಾಸ್ ನಲ್ಲೇ ಪ್ರಯಾಣಿಸಬೇಕು, ಅತ್ಯುತ್ತಮ ಆಹಾರವನ್ನೇ (Good Food) ಗರಿಷ್ಠ ಪ್ರಮಾಣದಲ್ಲಿ ಸೇವಿಸಬೇಕು ಹಾಗೂ ಪ್ರವಾಸ ಮಾಡುತ್ತ ಸುಸ್ತಾಗಬೇಕು... ಇತ್ಯಾದಿ ಸಮಸ್ಯೆಗಳನ್ನು ಆಕೆ ಹೇಳಿಕೊಂಡಿದ್ದಾಳೆ. ಇದನ್ನು ಕೇಳಿದರೆ ಫೇರಿಟೇಲ್ ಜೀವನವನ್ನು ಕಂಡಂತೆ ಆಗುತ್ತದೆ. ಆದರೆ, ಆಕೆಯ ಸಮಸ್ಯೆ (Problems) ಕೆಲವರ ಬಯಕೆಯೂ ಆಗಿರುವುದರಿಂದ ಸಾಕಷ್ಟು ಜನ ವಿಡಿಯೋವನ್ನು ಮೆಚ್ಚಿಕೊಂಡಿಲ್ಲ.
ಲಿಂಡಾಗೆ ಈಗ 23 ವರ್ಷ. ಫಾರೆಕ್ಸ್ (Forex) ಮತ್ತು ಕ್ರಿಪ್ಟೊ (Crypto) ವ್ಯಾಪಾರಸ್ಥ ರಿಕ್ಕಿ ಆಂಡ್ರೇಡ್ ಎಂಬುವರನ್ನು ವಿವಾಹವಾಗಿದ್ದಾಳೆ. ತನ್ನನ್ನು ತಾನು “ಒರಿಜಿನಲ್ ದುಬೈ ಹೌಸ್ ವೈಫ್’ ಎಂಬುದಾಗಿ ಕರೆದುಕೊಳ್ಳುವ ಈಕೆ, ಆಗಾಗ ಏನಾದರೊಂದು ವಿಡಿಯೋ ಮಾಡಿ ಟಿಕ್ ಟಾಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಲೇ ಇರುತ್ತಾಳೆ.
ಲಿಂಡಾ ಸಮಸ್ಯೆಗಳು: ತಾವು ಯಾವಾಗಲೂ ಪ್ರಯಾಣ (Travel) ಮಾಡುತ್ತಲೇ ಇರುತ್ತೇವೆ, ಶ್ರೀಮಂತನಾಗಿರುವ ತನ್ನ ಪತಿಯನ್ನು (Husband) ಮಹಿಳೆಯರು ಮುತ್ತಿಕೊಳ್ಳುವಾಗ ಆತಂಕವಾಗುತ್ತದೆ ಎಂದು ಹೇಳಿಕೊಂಡಿದ್ದಾಳೆ. ಕೈಗೆ, ಕುತ್ತಿಗೆಗೆ ದುಬಾರಿ ಆಭರಣ ಧರಿಸುವಾಗ ಯಾರಾದರೂ ದರೋಡೆ ಮಾಡಿಬಿಟ್ಟರೆ ಎನ್ನುವ ಭಯ ಕಾಡುತ್ತದೆ. ಯಾವಾಗಲೂ ಡ್ರೈವ್ (Drive) ಮಾಡಲು ಬಿಡುವುದಿಲ್ಲ, ಪತಿಯೇ ಡ್ರೈವ್ ಮಾಡುತ್ತಾರೆ. ಪತಿ ತನಗಾಗಿ ಸಿಕ್ಕಾಪಟ್ಟೆ ಖರೀದಿ ಮಾಡುತ್ತಾರೆ. ಆಹಾರವಂತೂ ಪ್ರದರ್ಶನದ ರೀತಿ ಭಾಸವಾಗುತ್ತದೆ ಎಂದೆಲ್ಲ ಹೇಳಿಕೊಂಡಿದ್ದಾಳೆ.
ವಧುವಿನಂತೆ ಡ್ರೆಸ್ ಮಾಡಿಕೊಂಡು ಫೋಟೋಶೂಟ್ ಮಾಡಿಸಿದ ಮದುವೆ ಗಂಡು! ಹಿಂಗ್ಯಾಕೆ ಮಾಡಿದ?
ಈ ವಿಡಿಯೋ ನೋಡಿದ ಜನರು ವಿಚಿತ್ರವಾಗಿ ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಹೇಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕೆಲವರು “ಆದರೆ, ನೀವು ಯಾವಾಗಲೂ ಸುಂದರವಾಗಿ ಕಾಣುವುದಿಲ್ಲ’ ಎಂದು ತಿವಿದಿದ್ದಾರೆ. ಒಬ್ಬಾತ, ನಾನೆಷ್ಟು ಬಡವ (Poor) ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ’ ಎಂದು ಹೇಳಿದ್ದರೆ, ಮತ್ತೊಬ್ಬರು “ಕಂಪ್ಲೇಂಟ್ ಮಾಡುವುದನ್ನು ನಿಲ್ಲಿಸಿ. ನಿಮಗೆ ಬೇಡವಾಗಿದ್ದರೆ ನಿಮ್ಮ ಬದುಕನ್ನು (Life) ನನಗೆ ಕೊಡಿ’ ಎಂದು ಕೇಳಿದ್ದಾರೆ!