50 ವರ್ಷವಾದರೂ ಮಲೈಕಾ ಸೌಂದರ್ಯ ಡಬಲ್ ಮಾಡಿದ್ದೇ ಈ ವಿಟಮಿನ್ ಸಿ ಡ್ರಿಂಕ್ಸ್ !

By Roopa Hegde  |  First Published Jun 24, 2024, 10:32 AM IST

ಮಲೈಕಾ ಅರೋರಾ ನೋಡಿದ್ರೆ ಅವರಿಗೆ 50 ವರ್ಷವಾಯ್ತು ಎನ್ನಲು ಸಾಧ್ಯವೇ ಇಲ್ಲ. ತಮ್ಮ ಫಿಟ್ನೆಸ್, ಹೊಳಪು ಮೈಬಣ್ಣದ ಮೂಲಕ ಮಲೈಕಾ ಎಲ್ಲರನ್ನು ಸೆಳೆಯುತ್ತಿದ್ದಾರೆ. ಅದಕ್ಕೆ ಈ ಒಂದು ಡ್ರಿಂಕ್ಸ್ ಕೂಡ ಕಾರಣ.
 


ಬಾಲಿವುಡ್‌ನ ಪ್ರಸಿದ್ಧ ನಟಿ ಮತ್ತು ಡ್ಯಾನ್ಸಿಂಗ್ ಕ್ವೀನ್ ಮಲೈಕಾ ಅರೋರಾ  (Bollywood Known Actress and Dancing Queen Malaika Arora) ಸಿಜ್ಲಿಂಗ್ ವೀಡಿಯೊಗಳು ಮತ್ತು ಜಿಮ್ ವೇರ್ ಫೋಟೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರ್ತಾರೆ. 50ರ ಹರೆಯದಲ್ಲೂ 20ರ ಹರೆಯದ ಫಿಟ್ನೆಸ್ ಮತ್ತು ಸೌಂದರ್ಯವನ್ನು (Fintenss and Beauty) ಅವರು ಹೊಂದಿದ್ದಾರೆ. ಅರ್ಹಾನ್ ಖಾನ್ ಅವರ ಹಾಟ್ ತಾಯಿ ಈ ವಯಸ್ಸಿನಲ್ಲೂ ಜನರನ್ನು ಆಕರ್ಷಿಸುತ್ತಿದ್ದಾರೆ. ಫಿಟ್ನೆಸ್ ವಿಷ್ಯದಲ್ಲಿ ಮಾತ್ರವಲ್ಲ ಚರ್ಮ ಸೌಂದರ್ಯ ಕೂಡ 20 ವರ್ಷದ ಹುಡುಗಿಯರಂತೆ ಹೊಳೆಯುತ್ತಿದೆ. ಮಲೈಕಾ ಈ ಚರ್ಮ ಕಾಂತಿಗೆ ಕಾರಣವೇನು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಮಲೈಕಾ ಅರೋರಾ ಆಗಾಗ ಜಿಮ್ ಮುಂದೆ ಕಾಣಿಸಿಕೊಳ್ತಿರುತ್ತಾರೆ. ಯೋಗ ಹಾಗೂ ಜಿಮ್ ಗೆ ಹೆಚ್ಚು ಆದ್ಯತೆ ನೀಡುವ ಅವರು, ಇವೆರಡನ್ನು ದಿನದ ರುಟೀನ್ ಮಾಡ್ಕೊಂಡಿದ್ದಾರೆ. ಇದಲ್ಲದೆ ಅವರು ಮನೆ ಮದ್ದಿಗೆ ಆದ್ಯತೆ ನೀಡ್ತಾರೆ. ಪ್ರತಿ ದಿನ ಬೆಳಿಗ್ಗೆ ಮಲೈಕಾ ಒಂದು ಪಾನೀಯ ಕುಡಿಯುತ್ತಾರೆ. ಅದ್ರಿಂದ್ಲೇ ಅವರ ಮುಖ ಇಷ್ಟು ಗ್ಲೋ ಪಡೆದಿದ್ದು. ಚರ್ಮಗಳು ಸುಕ್ಕುಗಟ್ಟದೆ ಹೊಳೆಯುತ್ತಿರೋದು.

ಮಲೈಕಾ ಅರೋರಾ (Malaika Arora) ತಾವು ಬೆಳಿಗ್ಗೆ ಯಾವ ಡ್ರಿಂಕ್ಸ್ ಕುಡಿಯುತ್ತೇನೆ ಹಾಗೆ ಅದನ್ನು ತಯಾರಿಸೋದು ಹೇಗೆ ಎಂಬ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. 

Tap to resize

Latest Videos

ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಮದುವೆ; ರಿಸೆಪ್ಶನ್‌ನಲ್ಲಿ ಸಿಂಧೂರ, ಕೆಂಪು ಬಿಂದಿ ಇಟ್ಟು ಪೋಸ್ ಕೊಟ್ಟ ನಟಿ

ಬೆಳಿಗ್ಗೆ ಮಲೈಕಾ ಸೇವನೆ ಮಾಡ್ತಾರೆ ಈ ಜ್ಯೂಸ್ (Juice) : ಮಲೈಕಾ ಅರೋರ ಜ್ಯೂಸ್ ಗೆ ಒಂದು ನೆಲ್ಲಿಕಾಯಿ, ಸಣ್ಣ ಹಸಿ ಅರಿಶಿನ ಹಾಗೂ ಸಣ್ಣ ಗಾತ್ರದ ಹಸಿ ಶುಂಠಿ (Ginger) ಯನ್ನು ಬಳಸಿದ್ದಾರೆ.  ಅಲ್ಲದೆ ನಾಲ್ಕೈದು ಕಾಳು ಮೆಣಸನ್ನು ಅವರು ತಮ್ಮ ಜ್ಯೂಸ್ ಗೆ ಹಾಕಿದ್ದಾರೆ. 

ಮಿಕ್ಸಿ ಜಾರಿಗೆ ಕತ್ತರಿಸಿದ ನೆಲ್ಲಿ ಕಾಯಿ, ಹಸಿ ಶುಂಠಿ, ಹಸಿ ಅರಿಶಿನ ಹಾಗೂ ಕಾಳು ಮೆಣಸನ್ನು ಹಾಕಿ ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಮಿಕ್ಸಿ ಮಾಡಬೇಕು. ನಂತ್ರ ಅದನ್ನು ಸೋಸಿ ಕುಡಿಯಬೇಕು. ಇದು ಪ್ರತಿ ದಿನ ತಮ್ಮ ವಿಟಮಿನ್ ಸಿ ಡ್ರಿಂಕ್ ಎಂದು ಮಲೈಕಾ ಅರೋರ ಹೇಳಿದ್ದಾರೆ.

ಮಲೈಕಾ ಅರೋರಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವು ಎಷ್ಟೇ ದುಬಾರಿ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸಿದರೂ ಅಥವಾ ಪ್ಲಾಸ್ಟಿಕ್ ಸರ್ಜರಿ ಅಥವಾ ಇಂಗ್ಲಿಷ್ ಔಷಧಗಳನ್ನು ಸೇವಿಸಿದರೂ ಆಯುರ್ವೇದವು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಯಾವಾಗಲೂ ಸಹಾಯ ಮಾಡುತ್ತದೆ. ಹಾಗಾಗಿ ನೀವು ರಾಸಾಯನಿಕಗಳಿಂದ ದೂರವಿರಿ ಮತ್ತು ಯಾವಾಗಲೂ ರಾತ್ರಿ ಬೇಗನೆ ನಿದ್ದೆ ಮಾಡಿ, ಬೆಳಿಗ್ಗೆ ಬೇಗ ಎದ್ದು, ವ್ಯಾಯಾಮ ಮತ್ತು ಪ್ರಾಣಾಯಾಮ ಮಾಡಿ, ತಾಜಾ ಮತ್ತು ಸಾತ್ವಿಕ ಆಹಾರವನ್ನು ಸೇವಿಸಿ ಮತ್ತು ಒತ್ತಡದ ಜೀವನದಲ್ಲೂ ಸಂತೋಷವಾಗಿರಲು ಪ್ರಯತ್ನಿಸಿ ಎಂದು ಕಮೆಂಟ್ ಮಾಡಿದ್ದಾರೆ. 

ಈ ಜ್ಯೂಸ್ ಪ್ರತಿ ದಿನ ಕುಡಿಯೋದು ಎಲ್ಲರಿಗೂ ಯೋಗ್ಯವಲ್ಲ ಎನ್ನುವ ಕಮೆಂಟ್ ಕೂಡ ಕೇಳಿ ಬಂದಿದೆ. ಅರಿಶಿನ ಹಾಗೂ ಶುಂಠಿ ದೇಹದ ಉಷ್ಣತೆಯನ್ನು ಹೆಚ್ಚು ಮಾಡುವ ಕಾರಣ ಎಲ್ಲರೂ ಇದನ್ನು ಬಳಸಬೇಡಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಮುದ್ದಾದ ಫೋಟೋ ಶೇರ್ ಮಾಡಿದ ತನಿಷಾ… ಪಕ್ಕದಲ್ಲಿ ವರ್ತೂರ್ ಇದ್ದಿದ್ರೆ ಇನ್ನೂ ಚೆಂದ ಎಂದ ಫ್ಯಾನ್ಸ್

ಮಲೈಕಾ ಅರೋರಾ ತಮ್ಮ ಆರೋಗ್ಯಕರ ಡಯಟ್ ಬಗ್ಗೆ ಆಗಾಗ ಮಾಹಿತಿ ನೀಡ್ತಿರುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡುವ ಅವರು ಲಘು ಉಪಹಾರ ಸೇವನೆ ಮಾಡ್ತಾರೆ. ಹಣ್ಣುಗಳು, ಪೋಹಾ, ಇಡ್ಲಿ, ಮಲ್ಟಿಗ್ರೇನ್ ಟೋಸ್ಟ್, ಉಪ್ಮಾ ತಿನ್ನುತ್ತಾರೆ. ಜ್ಯೂಸ್, ಬ್ರೌನ್ ಬ್ರೆಡ್ ಮತ್ತು ಮೊಟ್ಟೆಯ ಬಿಳಿಭಾಗವನ್ನು ಅವರು ಸೇವಿಸುತ್ತಾರೆ. ಅವರು ಡ್ರೈ ಫ್ರೂಟ್ಸ್ ಮತ್ತು ವಾಲ್‌ನಟ್‌ಗಳನ್ನು ತಮ್ಮ ಡಯಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ಮಲೈಕಾ ಅರೋರಾ ಊಟದಲ್ಲಿ ರೊಟ್ಟಿ, ತರಕಾರಿಗಳು ಮತ್ತು ಅನ್ನವನ್ನು ತಿನ್ನುತ್ತಾರೆ.

click me!