ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ (Age) ಮುಂಚೆಯೇ ಮುಖದ ಮೇಲೆ ಸುಕ್ಕುಗಳು, ಸೂಕ್ಷ್ಮ ರೇಖೆಗಳು ಇತ್ಯಾದಿಗಳನ್ನು ನೋಡುವುದು ತುಂಬಾ ಸಾಮಾನ್ಯ ಸಮಸ್ಯೆ (Problem) ಯಾಗಿದೆ. ಅಕಾಲಿಕವಾಗಿ ಮುಖದ ಮೇಲೆ ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳಲು ನಿಮ್ಮ ಆಹಾರಕ್ರಮವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅಂತಹ ಅನೇಕ ಆಹಾರ (Food) ಪದಾರ್ಥಗಳಿವೆ, ಅದು ನಿಮ್ಮನ್ನು ಬೇಗನೆ ವಯಸ್ಸಾಗುವಂತೆ ಮಾಡುತ್ತದೆ.
ಮನುಷ್ಯ ಆರೋಗ್ಯಕ್ಕೆ (Health) ಆಹಾರಕ್ರಮ ಹೇಗಿರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಉತ್ತಮ ಆಹಾರಪದ್ಧತಿ ಅದೆಷ್ಟೋ ಕಾಯಿಲೆಗಳಿಂದ ದೂರವಿಡುತ್ತದೆ. ಕಳಪೆ ಆಹಾರಕ್ರಮ ಹಲವು ಆರೋಗ್ಯ ಸಮಸ್ಯೆಗೆ ಕಾರಣವೂ ಆಗಬಹುದು. ಆಹಾರ (Food) ಸೇವನೆಯು ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ನಾವು ಏನನ್ನಾದರೂ ತಪ್ಪಾಗಿ ಸೇವಿಸಿದಾಗ, ನಮ್ಮ ಚರ್ಮವು (Skin) ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಮೊಡವೆ (Pimple), ಚರ್ಮದ ಕಿರಿಕಿರಿ ಮತ್ತು ಕೆಂಪಾಗುವಿಕೆಯಂತಹ, ದದ್ದುಗಳು ಸೇರಿದಂತೆ ಅನೇಕ ಸಮಸ್ಯೆಗಳು ತಪ್ಪು ಆಹಾರ ಸೇವನೆಯಿಂದ ಉಂಟಾಗಬಹುದು. ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವ ಅನೇಕ ನಟ, ನಟಿಯರು ಇದ್ದಾರೆ. ಅಷ್ಟೇ ಅಲ್ಲ, ಸೆನೀವು ಏನು ತಿನ್ನುತ್ತೀರೋ ಅದು ನಿಮ್ಮ ಮುಖದ ಮೇಲೆ ಕಾಣುತ್ತದೆ ಎಂದು ಸೆಲೆಬ್ರಿಟಿಗಳು ಕೂಡ ಆಗಾಗ ಹೇಳುತ್ತಿರುತ್ತಾರೆ,
ಆಯಾ ಋತುಮಾನಕ್ಕೆ ತಕ್ಕಂತೆ ನಿಮ್ಮ ತ್ವಚೆಗೆ ಯಾವುದು ತಿಂದರೆ ಸರಿ, ಯಾವುದು ತಿಂದರೆ ತಪ್ಪು ಎಂಬುದರ ಬಗ್ಗೆಯೂ ಕಾಳಜಿ (Care) ವಹಿಸಬೇಕು. ಅನೇಕ ಬಾರಿ ಜನರು ಈ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ, ಇದರಿಂದಾಗಿ ಚರ್ಮದ ಸಮಸ್ಯೆ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲ, ಈ ಕಾರಣದಿಂದ ಮುಖದಲ್ಲಿ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಅನೇಕ ಆಹಾರ ಪದಾರ್ಥಗಳಿವೆ. ಈ ಆಹಾರ ಪದಾರ್ಥಗಳು ರುಚಿಕರವಾಗಿದ್ದರೂ, ಅವು ನಿಮ್ಮ ಚರ್ಮಕ್ಕೆ ಅತ್ಯಂತ ಅಪಾಯಕಾರಿ. ಆದ್ದರಿಂದ, ಈ ಆಹಾರ ಮತ್ತು ಪಾನೀಯಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ಹಾಗಾದರೆ ಈ ಪಟ್ಟಿಯಲ್ಲಿ ಯಾವ ಆಹಾರ ಪದಾರ್ಥಗಳಿವೆ ಎಂದು ತಿಳಿಯೋಣ.
ಯಾವಾಗಲೂ ಯಂಗ್ ಆಗಿರಲು ನಮ್ಮ ಹಿರಿಯರು ಇದನ್ನೇ ಬಳಸ್ತಿದ್ರು
ಹೆಚ್ಚಿನ ಉರಿಯಲ್ಲಿ ಬೇಯಿಸಿದ ಆಹಾರ
ಹೆಚ್ಚಿನ ಉರಿಯಲ್ಲಿ ಬೇಯಿಸಿದ ಆಹಾರವು ನಿಮ್ಮ ಚರ್ಮವನ್ನು ಅಕಾಲಿಕವಾಗಿ ವಯಸ್ಸಾಗುವಂತೆ ಮಾಡುತ್ತದೆ. ಕಾರ್ನ್ ಅಥವಾ ಸೂರ್ಯಕಾಂತಿ ಎಣ್ಣೆಯಲ್ಲಿ ಒಮೆಗಾ 6 ಕೊಬ್ಬಿನಾಮ್ಲಗಳು ಅಧಿಕವಾಗಿವೆ ಎಂದು ತಿಳಿದುಬಂದಿದೆ. ಇದು ಉರಿಯೂತ ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದಿನನಿತ್ಯದ ಉರಿಯಲ್ಲಿ ಬೇಯಿಸಿದ ಆಹಾರವನ್ನು ಅಥವಾ ಈ ಎಣ್ಣೆಗಳಲ್ಲಿ ಕರಿದ ಪದಾರ್ಥಗಳನ್ನು ತಿನ್ನುವುದರಿಂದ, ವಯಸ್ಸಿಗೆ ಮುಂಚೆಯೇ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
ಕಾಫಿ ಮತ್ತು ಸೋಡಾ ಕುಡಿಯುವುದು
ಸೋಡಾ ಮತ್ತು ಕಾಫಿ (Coffee) ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಈ ಎರಡೂ ವಸ್ತುಗಳು ಹೆಚ್ಚಿನ ಕೆಫೀನ್ ಅಂಶವನ್ನು ಹೊಂದಿವೆ. ಇದರ ನಿಯಮಿತ ಸೇವನೆಯು ನಿಮ್ಮ ನಿದ್ರೆಯ (Sleep) ದಿನಚರಿಯನ್ನು ತೊಂದರೆಗೊಳಿಸುತ್ತದೆ. ನಿದ್ರೆಯ ಕೊರತೆಯಿಂದಾಗಿ, ಚರ್ಮವು ಯಾವಾಗಲೂ ಆಯಾಸವನ್ನು ಅನುಭವಿಸುತ್ತದೆ. ನಂತರ ಕಣ್ಣಿನ ಸುತ್ತಲೂ ಕಪ್ಪು ವೃತ್ತಗಳು, ವಯಸ್ಸಾದ ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮುಖದ ಮೇಲೆ ವಯಸ್ಸಿನ ಪರಿಣಾಮವನ್ನು ನೀವು ನೋಡಲು ಬಯಸದಿದ್ದರೆ, ಖಂಡಿತವಾಗಿಯೂ ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದನ್ನು ತಪ್ಪಿಸಬೇಡಿ.
Face Yoga For Beauty: ವಯಸ್ಸಾದರೂ ಯಂಗ್ ಆಗಿ ಕಾಣಬೇಕಾದರೆ ಹೀಗೆ ಮಾಡಿ
ಸಂಸ್ಕರಿಸಿದ ಮಾಂಸವನ್ನು ಆಹಾರದಿಂದ ಹೊರಗಿಡಿ
ಸಂಸ್ಕರಿಸಿದ ಮಾಂಸ (Meat)ವನ್ನು ತಿನ್ನುವುದು ದೈಹಿಕ ಸಮಸ್ಯೆಗಳನ್ನು ಹೆಚ್ಚಿಸುವುದು ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಸಹ ಕಾರಣವಾಗಬಹುದು. ಅಂತಹ ಮಾಂಸಗಳಲ್ಲಿ ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬು ಮತ್ತು ಸಲ್ಫೈಟ್‌ಗಳು ಅಧಿಕವಾಗಿರುತ್ತವೆ, ಇದು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಕಾಲಜನ್ ಅನ್ನು ದುರ್ಬಲಗೊಳಿಸುತ್ತದೆ. ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೇ ಕಾಣುತ್ತವೆ. ಅಷ್ಟೇ ಅಲ್ಲ, ಇದರಿಂದ ಉರಿಯೂತವೂ ಹೆಚ್ಚಾಗಬಹುದು. ಬದಲಾಗಿ, ನೀವು ಪ್ರೋಟೀನ್ ಸೇವನೆಗೆ ಆಯ್ಕೆಯಾಗಿ ಮೊಟ್ಟೆ ಅಥವಾ ಬೀನ್ಸ್‌ನಂತಹ ಆಹಾರ ಪದಾರ್ಥಗಳನ್ನು ಆರಿಸಿಕೊಳ್ಳಬಹುದು.
ಸಂಸ್ಕರಿಸಿದ ಸಕ್ಕರೆಯ ಸೇವನೆ
ಸಕ್ಕರೆ ಮಾತ್ರವಲ್ಲ, ಅದರಿಂದ ತಯಾರಿಸಿದ ಯಾವುದನ್ನಾದರೂ ನೀವು ಹೆಚ್ಚು ಸೇವಿಸುತ್ತಿದ್ದರೆ, ನೀವು ನಿಮ್ಮ ಅಭ್ಯಾಸವನ್ನು ಬದಲಾಯಿಸಿಕೊಳ್ಳಬೇಕು. ಆಹಾರದಿಂದ ಸಂಸ್ಕರಿಸಿದ ಸಕ್ಕರೆ (Sugar)ಯನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಅನೇಕ ಬಾಲಿವುಡ್ ಸೆಲೆಬ್ರಿಟೀಸ್ ಇದ್ದಾರೆ. ಸಕ್ಕರೆ ಚರ್ಮದಿಂದ ಕಾಲಜನ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನೀವಿದನ್ನು ಅತಿಯಾಗಿ ಸೇವಿಸಿದರೆ, ಮುಖದ ಮೇಲೆ ಅಕಾಲಿಕ ಸುಕ್ಕುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ನೀವು ದೀರ್ಘಕಾಲದ ವರೆಗೆ ಯೌವ್ವನಭರಿತವಾಗಿ ಮತ್ತು ಸುಂದರವಾಗಿ ಕಾಣಬೇಕೆಂದು ಬಯಸಿದರೆ, ಸಂಸ್ಕರಿಸಿದ ಸಕ್ಕರೆಯ ಸೇವನೆಯನ್ನು ಆಹಾರದಿಂದ ತೆಗೆದುಹಾಕುವುದು ಉತ್ತಮ.
ಉಪ್ಪು ಕೂಡ ಸಮಸ್ಯೆಯನ್ನು ಹೆಚ್ಚಿಸಬಹುದು
ಸಕ್ಕರೆಯ ಹೊರತಾಗಿ, ಅತಿಯಾದ ಉಪ್ಪು ಸಹ ಚರ್ಮಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಲಾಗಿದೆ. ಹೆಚ್ಚು ಸೋಡಿಯಂ ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಅಲ್ಲದೆ, ಇದು ನಿರ್ಜಲೀಕರಣವನ್ನು ಪ್ರಚೋದಿಸುತ್ತದೆ. ಈ ಪ್ರಕ್ರಿಯೆ ವಯಸ್ಸಾದ ವೇಗವನ್ನು ಹೆಚ್ಚಿಸುತ್ತದೆ. ಆದ್ದರಿಂದ ಉಪ್ಪನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು.