ಒಂದು ಸಂಬಂಧ ದೀರ್ಘಕಾಲದವರೆಗೆ ಸಂತೋಷದಿಂದ ಕೂಡಿರಬೇಕೆಂದ್ರೆ ಇಬ್ಬರ ಪ್ರಯತ್ನ ಮುಖ್ಯ. ಒಬ್ಬರು ಮಾತ್ರ ಹೆಗಲ ಮೇಲೆ ಹೊಣೆ ಹೊತ್ತು ನಡೆದ್ರೆ ಸಾಲುವುದಿಲ್ಲ. ಇದಕ್ಕೆ ಮಹಿಳೆ ಉತ್ತಮ ನಿದರ್ಶನ. ಮನೆಯ ಜವಾಬ್ದಾರಿ ಜೊತೆ ಬಾಯ್ ಫ್ರೆಂಡ್ ವರ್ತನೆ ಆಕೆಯನ್ನು ಬೇಸರಗೊಳಿಸಿದೆ.
ಪತಿ –ಪತ್ನಿ ಇರಲಿ ಇಲ್ಲ ಗೆಳೆಯ – ಗೆಳತಿ ಇರಲಿ ಪರಸ್ಪರ ಗೌರವ (Respect) ನೀಡುವುದು ಬಹಳ ಮುಖ್ಯ. ಎಲ್ಲ ಸಂಬಂಧದಲ್ಲೂ ಪ್ರೀತಿ (Love), ಭರವಸೆ ಜೊತೆ ಜೊತೆಗಿರುವವರಿಗೆ ಗೌರವ ನೀಡುವುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಅನೇಕ ಬಾರಿ ಜಗಳಕ್ಕೆ ಮುಖ್ಯ ಕಾರಣವೇ ಅಗೌರವವಾಗಿರುತ್ತದೆ. ಪರಸ್ಪರ ಸಮಾನತೆ, ಸಮ್ಮಾನ ನೀಡದೆ ಇರುವುದ್ರಿಂದ ಗಲಾಟೆ ದೊಡ್ಡದಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆ (woman) ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ಸಂಬಂಧದ ಬಗ್ಗೆ ಮಹಿಳೆಯಲ್ಲಿರುವ ಗೊಂದಲವೇನು ಹಾಗೆ ಈ ಬಗ್ಗೆ ತಜ್ಞರು ಏನು ಹೇಳ್ತಾರೆ ಎಂಬುದನ್ನು ನಾವಿಂದು ಹೇಳ್ತೆವೆ.
ಏನು ಮಹಿಳೆಯ ಕಥೆ ? : ಮಹಿಳೆ ವಯಸ್ಸು 27. ಆಕೆ ಬಾಯ್ ಫ್ರೆಂಡ್ ವಯಸ್ಸು ಕೂಡ 27. ಇಬ್ಬರಿಗೆ ಮೂವರು ಮಕ್ಕಳು. ಆ ಮಕ್ಕಳ ವಯಸ್ಸು ಕೂಡ 6 ವರ್ಷಕ್ಕಿಂತ ಕಡಿಮೆಯಿದೆ. ಬಾಯ್ ಫ್ರೆಂಡ್ ತುಂಬಾ ಕೆಲಸ ಮಾಡ್ತಾನಂತೆ. ಆದ್ರೆ ಮಕ್ಕಳು ತುಂಬಾ ಚಿಕ್ಕವರು. ಮನೆಯಲ್ಲಿ ಒಬ್ಬರು ಮಕ್ಕಳಿದ್ರೆ ಅವರನ್ನು ಸಂಭಾಳಿಸುವುದು ಕಷ್ಟ. ಇನ್ನು ಮೂರು ಮಕ್ಕಳಿದ್ದರೆ ಕೆಲಸ ಎಷ್ಟಾಗುತ್ತದೆ ಎಂಬುದನ್ನು ನೀವೇ ಅಂದಾಜಿಸಬಹುದು. ಮಕ್ಕಳ ಜೊತೆ ಮನೆ ಕೆಲಸದಿಂದಾಗಿ ಮಹಿಳೆ ಸದಾ ಬ್ಯುಸಿಯಿರ್ತಾಳಂತೆ.
ನಾವಿಬ್ಬರೂ ಸ್ನೇಹಿತರಂತೆ ಇದ್ದೇವೆ. ಇಬ್ಬರೂ ಒಟ್ಟಿಗೆ ಇರ್ತೇವೆ. ನಮ್ಮಿಬ್ಬರ ಮಧ್ಯೆ ಅನೇಕ ಸಮಸ್ಯೆಯಿದೆ ಎನ್ನುತ್ತಾಳೆ ಆಕೆ. ಸದ್ಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಆಕೆಯೇ ಕಾರಣ ಎಂದುಕೊಂಡಿದ್ದಾನಂತೆ ಆಕೆಯ ಬಾಯ್ ಫ್ರೆಂಡ್. ಅದಕ್ಕೆ ಕಾರಣವೂ ಇದೆ. ಮಹಿಳೆ ಬಾಯ್ ಫ್ರೆಂಡ್ ಜೊತೆ ಶಾರೀರಿಕ ಸಂಬಂಧ ಬೆಳೆಸ್ತಿಲ್ಲವಂತೆ. ಇದೇ ಎಲ್ಲ ಸಮಸ್ಯೆಗೆ ಕಾರಣ ಎನ್ನುವ ಕೋಪ ತನಿಗಿದೆಯಂತೆ.
ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !
ಇಕ್ಕಟ್ಟಿನಲ್ಲಿದ್ದಾಳೆ ಮಹಿಳೆ : ಬಾಯ್ ಫ್ರೆಂಡ್ ಹಾಗೂ ಮೂವರು ಮಕ್ಕಳನ್ನು ನೋಡಿಕೊಳ್ತಿರುವ ಮಹಿಳೆಗೆ ಸಾಕು ಸಾಕಾಗಿದೆಯಂತೆ. ನನ್ನ ಬಾಯ್ ಫ್ರೆಂಡ್ ಗಿಂತ ನಾನು ಹೆಚ್ಚು ನೋವು ತಿನ್ನುತ್ತಿದ್ದೇನೆ ಎನ್ನುತ್ತಾಳೆ ಆಕೆ. ಬಾಯ್ ಫ್ರೆಂಡ್ ಯಾವುದೇ ಕೆಲಸದಲ್ಲೂ ನೆರವಾಗುವುದಿಲ್ಲವಂತೆ. ಮಕ್ಕಳನ್ನು ನೋಡಿಕೊಳ್ಳುವ ವಿಷ್ಯದಲ್ಲೂ ಮಹಿಳೆಗೆ ಸಹಾಯ ಮಾಡುವುದಿಲ್ಲವಂತೆ. ಮಕ್ಕಳನ್ನು ನೋಡಿಕೊಳ್ಳುವುದು, ಅಡುಗೆ, ಮನೆ ಸ್ವಚ್ಛತೆ ಎಲ್ಲವನ್ನೂ ಮಹಿಳೆಯೊಬ್ಬಳೇ ಮಾಡ್ಬೇಕಂತೆ.
ಮಹಿಳೆ ಮುಂದೆ ಹಣ ಎಸೆಯುತ್ತಾನೆ ಪ್ರೇಮಿ : ಈ ಎಲ್ಲ ಕೆಲಸಕ್ಕೆ ಒಂದು ದಿನವಾದ್ರೂ ರಜೆ ಬೇಕು ಎನ್ನುವುದು ಮಹಿಳೆ ಬಯಕೆ. ಇದೇ ಕಾರಣಕ್ಕೆ ಭಾನುವಾರ ಸ್ವಲ್ಪ ವಿರಾಮ ನೀಡುವಂತೆ ಕೇಳಿದ್ದಾಳೆ. ಭಾನುವಾರ ತಡವಾಗಿ ಏಳ್ತಾಳಂತೆ ಮಹಿಳೆ. ಆದ್ರೆ ಆಕೆ ತಡವಾಗಿ ಏಳುವ ಭಾನುವಾರ ಆಕೆ ಮುಂದೆ 20 ಯುರೋ ಎಸೆದು ಹೋಗ್ತಾನಂತೆ ಬಾಯ್ ಫ್ರೆಂಡ್. ಭಾನುವಾರ ತಡವಾಗಿ ಏಳುವ ಪಾಳಿ ಮಹಿಳೆಯದಿದ್ದಾಗ ಶನಿವಾರ ಸಂಜೆಯೇ ಸ್ನೇಹಿತರ ಜೊತೆ ಪಾರ್ಟಿಗೆ ಹೋಗ್ತಾನಂತೆ ಬಾಯ್ ಫ್ರೆಂಡ್. ಪಾರ್ಟಿ ಹೆಸರು ಹೇಳಿ ಬೆಳಿಗ್ಗೆ ತಡವಾಗಿ ಏಳ್ತಾನಂತೆ. ಮಾನಸಿಕ ತಜ್ಞರನ್ನು ಭೇಟಿಯಾಗುವಂತೆ ಬಾಯ್ ಫ್ರೆಂಡ್ ಗೆ ಸಲಹೆ ನೀಡಿದ್ದಳಂತೆ ಮಹಿಳೆ. ಆದ್ರೆ ಇದಕ್ಕೆ ಕೋಪಗೊಂಡ ಆತ, ಸೆಕ್ಸ್ ಡ್ರೈವ್ ಬಗ್ಗೆ ಗಮನ ನೀಡು ಎಂದಿದ್ದಾನಂತೆ.
ಸಂಭೋಗದ ವೇಳೆ ಕಾಂಡೋಮ್ ಬಳಸುವಾಗ ಈ ತಪ್ಪನ್ನು ಮಾಡದಿರಿ
ತಜ್ಞರ ಸಲಹೆ : ಮಹಿಳೆಯ ಈ ಸಮಸ್ಯೆಗೆ ತಜ್ಞರು ಸೂಕ್ತ ಸಲಹೆ ನೀಡಿದ್ದಾರೆ. ಇಬ್ಬರ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಇದೆ. ಇಬ್ಬರು ಕುಳಿತು ಮಾತನಾಡುವ ಅಗತ್ಯವಿದೆ ಎಂದಿದ್ದಾರೆ. ಇಬ್ಬರ ಆಲೋಚನೆ ಭಿನ್ನವಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಬಾಯ್ ಫ್ರೆಂಡ್ ಸಹಾಯ ಮಾಡಲಿ ಎಂದು ಆಕೆ ಬಯಸ್ತಿದ್ದಾಳೆ. ಆಕೆ ಶಾರೀರಿಕ ಸಂಬಂಧ ಬೆಳೆಸಲಿ ಎಂದು ಆತ ಬಯಸ್ತಿದ್ದಾನೆ. ಹಾಗಾಗಿ ಇಬ್ಬರು ಕುಳಿತು ಸಮಸ್ಯೆ ಹೇಳಿಕೊಳ್ಳಬೇಕು. ಮಕ್ಕಳನ್ನು ಸ್ವಲ್ಪ ಮಟ್ಟಿಗೆ ನೋಡಿಕೊಳ್ಳುವ ಜೊತೆಗೆ ಒಂದು ದಿನ ಆರಾಮ ನೀಡಿದ್ರೆ ನಾನು ಫ್ರೆಶ್ ಆಗ್ತಿನಿ ಎಂಬುದನ್ನು ಅವರಿಗೆ ಅರ್ಥ ಮಾಡಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.