ಸೂರ್ಯನ ಧಗೆ ಸಾಕಪ್ಪ ಎನ್ನುವಂತಾಗಿದೆ. ಕೂಲ್ ಸಿಟಿ ಬೆಂಗಳೂರೆ ಧಗಧಗಿಸ್ತಾ ಇದೆ. ಇಂಥ ಸಂದರ್ಭದಲ್ಲಿ ಎಸಿ,ಕೂಲರ್ ಇಲ್ಲದೆ ಹೇಗಿರೋದು ಸ್ವಾಮಿ ಅಂತಾ ನೀವು ಕೇಳ್ತಿದ್ದರೆ,ತಣ್ಣಗಿರೋದು ಹೇಗೆ ಅಂತಾ ನಾವು ಹೇಳ್ತೇವೆ.
ಸೂರ್ಯ (Sun) ನ್ನ ಯಾರಾದ್ರೂ ಮುಚ್ಚಿ ಬರಬಾರದಾ ಎನ್ನುವಂತಾಗಿದೆ. ದಿನ ದಿನಕ್ಕೂ ಬಿಸಿಲ (Hot ) ಧಗೆ ಹೆಚ್ಚಾಗ್ತಿದೆ. ಬೇಸಿಗೆ ತನ್ನ ಉತ್ತುಂಗವನ್ನು ತಲುಪುತ್ತಿದೆ. ಎಲ್ಲಿ ತಂಪಾದ ವಾತಾವರಣ (Cool Weather) ವಿದೆ ಎಂದು ಜನರು ಹುಡುಕ್ತಿದ್ದಾರೆ. ಆದಷ್ಟು ಸಮಯ ಮನೆಯಲ್ಲಿರಲು ಬಯಸುವ ಜನರು ಎಸಿ (AC) , ಕೂಲರ್ ಇರುವು ಜಾಗ ಆಶ್ರಯಿಸುತ್ತಾರೆ. ವಿಚಿತ್ರ ಎನ್ನಿಸಬಹುದು ಆದ್ರೆ ಕೆಲವರು ಬಿಸಿಯಿಂದ ರಕ್ಷಣೆ ಪಡೆಯಲು ಸ್ವಲ್ಪ ಸಮಯ ಎಟಿಎಂಗೆ ಹೋಗಿ ಬರುವವರಿದ್ದಾರೆ. ಮನೆಯಿಂದ ಹೊರಗೆ ಇದ್ದಾಗ ಒಂದು ಸಮಸ್ಯೆಯಾದ್ರೆ ಮನೆಯಲ್ಲಿದ್ದಾಗ ಇನ್ನೊಂದು ಸಮಸ್ಯೆ. ಧಗಿಸುವ ಮನೆಯೊಳಗೆ ಕಾಲಿಡೋದೆ ಕಷ್ಟ. 24 ಗಂಟೆ ಫ್ಯಾನ್ (Fan) ಉರಿಯುತ್ತಿರುತ್ತದೆ. ಕೂಲರ್, ಎಸಿ ಇರುವವರು ಅದನ್ನು ಆನ್ ಮಾಡಿರ್ತಾರೆ. ಎಸಿ, ಕೂಲರ್, ಫ್ಯಾನ್ ಗೆ ಬೇಡಿಕೆಯಲ್ಲಿ ಬೇಡಿಕೆ ಕೂಡ ಹೆಚ್ಚು. ಎಲ್ಲರಿಗೂ ಎಸಿ, ಕೂಲರ್ ಖರೀದಿ ಸಾಧ್ಯವಿಲ್ಲ. ಖರೀದಿಸಿದವರು ಕೂಡ ಇಡೀ ದಿನ ಅದ್ರ ಬಳಕೆ ಮಾಡಿದ್ರೆ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತದೆ. ಬೇಸಿಗೆಯಲ್ಲಿ ಎಸಿ ಇಲ್ಲ ಅಂತಾ ಚಿಂತೆ ಮಾಡ್ಬೇಡಿ. ಕೆಲ ಸರಳ ವಿಧಾನದ ಮೂಲಕ ಮನೆಯನ್ನು ಸದಾ ಕೂಲ್ ಆಗಿಡಿ. ಇಂದು ನಾವು ಮನೆಯನ್ನು ಹೇಗೆ ತಂಪಾಗಿಡಬಹುದು ಎಂಬುದನ್ನು ನಿಮಗೆ ಹೇಳ್ತೇವೆ.
ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿಡಿ : ಸಾಮಾನ್ಯವಾಗಿ ನಾವು ಎದ್ದ ತಕ್ಷಣ ಕಿಟಕಿ, ಬಾಗಿಲುಗಳನ್ನು ತೆರೆಯುತ್ತೇವೆ. ಗಾಳಿ ಮನೆಯೊಳಗೆ ಬರಲಿ, ಮನೆ ತಂಪಾಗ್ಲಿ ಎಂದು ಇಡೀ ದಿನ ಬಾಗಿಲು ತೆರೆದಿಡ್ತೇವೆ. ಆದ್ರೆ ಇದು ತಪ್ಪು. ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಬೇಕು. ಮನೆಯ ಕಿಟಕಿ ಬಾಗಿಲುಗಳ ಮೂಲಕ ಮಾತ್ರ ಶಾಖವು ಮನೆಯೊಳಗೆ ಬರುತ್ತದೆ. ಆದ್ದರಿಂದ ನೀವು ಹಗಲಿನ ವೇಳೆಯಲ್ಲಿ ನಿಮ್ಮ ಮನೆಯ ಕಿಟಕಿಗಳನ್ನು ಮುಚ್ಚಿ. ಬೇಸಿಗೆಯಲ್ಲಿ ನಿಮ್ಮ ಕಿಟಕಿಗಳ ಪರದೆಗಳನ್ನು ಸಹ ಬದಲಾಯಿಸಬಹುದು. ಬೇಸಿಗೆಯಲ್ಲಿ ಹತ್ತಿ ಪರದೆಗಳನ್ನು ಬಳಸುವುದು ಉತ್ತಮ.
ಮನೆಯಲ್ಲಿ ಬಳಸಿ ಎಕ್ಸಾಸ್ಟ್ : ಮನೆಯ ಒಳಗಿನಿಂದ ಬಿಸಿ ಗಾಳಿಯನ್ನು ಹೊರ ಹಾಕಲು ಎಕ್ಸಾಸ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯೊಳಗಿನ ಬಿಸಿ ಗಾಳಿಯನ್ನು ಹೊರ ಹಾಕುವ ಮೂಲಕ ಒಳಗಿನ ವಾತಾವರಣವನ್ನು ತಂಪಾಗಿರಿಸಲು ಇದು ಬಹಳಷ್ಟು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಕೆಲಸಕ್ಕೆ ಬಾಯ್ ಫ್ರೆಂಡ್ ನೀಡ್ತಾನೆ ಹಣ..!
ಗಸಗಸೆ ಬೀಜದ ಹಾಳೆ : ಗಸಗಸೆ ಬೀಜಗಳು ನಿಮ್ಮ ಕೋಣೆ ಮತ್ತು ಮನೆಯನ್ನು ತಂಪಾಗಿಸಲು ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದೆ. ನಿಮ್ಮ ಮನೆಯ ಬಾಗಿಲುಗಳ ಮೇಲೆ ಗಸಗಸೆ ಬೀಜಗಳ ಹಾಳೆಯನ್ನು ನೇತುಹಾಕಿ ಮತ್ತು ನಿಯಮಿತವಾಗಿ ನೀರನ್ನು ಅದಕ್ಕೆ ಹಾಕುವ ಮೂಲಕ ತೇವವಾಗಿರಿಸಿಕೊಳ್ಳಿ. ಇದ್ರಿಂದ ಮನೆ ವಾತಾವರಣದ ಬಿಸಿ ಕಡಿಮೆಯಾಗುತ್ತದೆ. ಸದಾ ಮನೆ ತಂಪಾಗಿರುತ್ತದೆ.
ವಿದ್ಯುತ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ : ವಿದ್ಯುತ್ ಉಪಕರಣಗಳು ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಬೇಸಿಗೆಯಲ್ಲಿ ವಿದ್ಯುತ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ. ಅವಶ್ಯಕತೆಯಿಲ್ಲ ಎನ್ನುವ ಸ್ಥಳದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಅಗತ್ಯವಿದೆ ಎನ್ನಿಸಿದ್ರೆ ಮಾತ್ರ ಸ್ವಿಚ್ ಆನ್ ಮಾಡಿ. ಬೇಡ ಎನ್ನಿಸಿದಾಗ ತೆಗೆಯಲು ಮರೆಯಬೇಡಿ.
ಇದನ್ನೂ ಓದಿ: ತೂಕ ಇಳಿಸೋಕೆ ಡಯೆಟ್, ವರ್ಕೌಟ್ ಮಾಡಿ ಸಾಕಾಯ್ತಾ ? ಇಸಾಬ್‌ಗೋಲ್ ಟ್ರೈ ಮಾಡಿ
ಕೋಣೆಯ ಬಲ್ಬ್ ಬದಲಾಯಿಸಿ : ಮೊದಲೇ ಹೇಳಿದಂತೆ ಮನೆಯಲ್ಲಿನ ಬೆಳಕು ಸಹ ಶಾಖವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಹೆಚ್ಚು ವ್ಯಾಟ್ ಬಲ್ಬ್ಗ ಳನ್ನು ಅಳವಡಿಸಿದ್ದರೆ, ನೀವು ಅವುಗಳನ್ನು ಎಲ್‌ಇಡಿ ಬಲ್ಬ್ ಗಳೊಂದಿಗೆ ಬದಲಾಯಿಸಬಹುದು. ಈ ಬಲ್ಬ್ಗಳು ಕಡಿಮೆ ಓಲ್ಟೇಜ್ ಮತ್ತು ಸಾಕಷ್ಟು ಬೆಳಕನ್ನು ನೀಡುತ್ತವೆ.