ಕೋಚಿಂಗ್‌ ಇಲ್ಲದೆ ಕೆಎಎಸ್‌ ಪಾಸಾಗಿ ಡಿವೈಎಸ್‌ಪಿ ಆದ ನಿಖಿತಾ!

By Kannadaprabha News  |  First Published Feb 4, 2020, 3:42 PM IST

ನಿಷ್ಛಲ ಗುರಿ, ಆತ್ಮವಿಶ್ವಾಸ, ಮಾಡೇ ತೀರುತ್ತೇವೆ ಎಂಬ ಅಚಲ ಮನೋಬಲ ಹಾಗೂ ಪರಿಶ್ರಮ ಮತ್ತು ಛಲ ಇದ್ದರೆ ಯಾವುದೇ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ. ಇದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ತಮ್ಮ ಮೊದಲ ಪ್ರಯತ್ನದಲ್ಲೇ ಈ ಬಾರಿ ಡಿವೈಎಸ್‌ಪಿ ಹುದ್ದೆಗೆ ಆಯ್ಕೆಯಾದ ಮೈಸೂರಿನ ನಿಖಿತಾ ಅವರು. ನಿಖಿತಾ ಅವರು ನಿಖಿತಾ ಪ್ರಸಕ್ತ ವರ್ಷ ಕೆ.ಎ.ಎಸ್‌ ಪಾಸು ಮಾಡಿ ಪ್ರಸ್ತುತ ಡಿವೈಎಸ್‌ಪಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಯಾವುದೇ ಕೋಚಿಂಗ್‌ ಕ್ಲಾಸ್‌ಗಳ ಮೆಟ್ಟಿಲು ಹತ್ತದೇ ಸ್ವ ಅಧ್ಯಯನ ನಡೆಸಿ ಸತತ ಓದು ಎಷ್ಟೇ ಎಡರು ತೊಡರುಗಳಿದ್ದರು ಗುರಿ ಮುಟ್ಟದೇ ಬಿಡುವುದಿಲ್ಲ ಎಂದು ತಾವು ಮದುವೆಯಾಗಿ ಅದರ ನಂತರವು ಓದು ಮುಂದುವರೆಸಿ ಯಶಸ್ಸು ಗಳಿಸಿದ್ದಾರೆ. ಅವರ ಈ ಅಚಲ ನಂಬಿಕೆ ಕೊನೆಗೂ ಫಲ ನೀಡಿದೆ. ಮನೆ, ಸಂಸಾರ, ಅಪ್ಪ ಅಮ್ಮನ ಆಶೀರ್ವಾದ, ಗಂಡ, ಅತ್ತೆ ಮಾವ ಹಾಗೂ ನಾದಿನಿಯರು ಇವರಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ಮಾಡಿದ್ದಾರೆ.


ಪುನೀತ್‌ ಗೂಟಿ ಬಿ.ಯು.

ಎಂಜಿನಿಯರಿಂಗ್‌ ವಿದ್ಯಾರ್ಥಿ:

Latest Videos

undefined

ನಿಖಿತಾ ಅವರು ಓದಿದ್ದು, ಬಿಇ ಎಲೆಕ್ಟ್ರಾನಿಕ್ಸ್‌ ಅ್ಯಂಡ್‌ ಎಲೆಕ್ಟ್ರಾನಿಕ್ಸ್‌ ಶ್ರೀಜಯಚಾಮರಾಜೇಂದ್ರ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌. ಬಾಲ್ಯದಿಂದಲೂ ಅಪ್ರತಿಮಾ ಪ್ರತಿಭಾವಂತೆಯಾದ ನಿಖಿತಾ ಅವರು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಡಿಸ್ಟಿಂಕಶನ್‌ನಲ್ಲಿ ಪಾಸು ಮಾಡಿ ಸಾಧನೆ ತೋರಿದವರು. ಪದವಿ ಬಳಿಕ ಅವರಿಗೆ ಹೊಳೆದದ್ದೇ ಸಾರ್ವಜನಿಕ ಸೇವಾ ಪರೀಕ್ಷೆಯ ಕನಸು ಅದರ ಗುರಿ ಮುಟ್ಟಲು ಅವರು ಅಪಾರ ಶ್ರಮ ಹಾಕಿದ್ದಾರೆ.

ದಕ್ಷ, ಪ್ರಾಮಾಣಿಕ, ಖಡಕ್ ಅಧಿಕಾರಿ, ಲವಿಂಗ್ ಅಮ್ಮ ರೋಹಿಣಿ ಸಿಂಧೂರಿ

ಮದುವೆ ಆದ ಮೇಲೂ ತಯಾರಿ:

ನಿಖಿತಾ ಅವರು ಪದವಿ ಮುಗಿಸಿ ನಾಗರಿಕ ಸೇವಾ ಪರೀಕ್ಷಗೆ ಓದುವಾಗಲೇ ಮದುವೆಯಾದರು. ಅದರ ನಂತರವೂ ಓದು ಮುಂದುವರೆಸಿದ ಅವರಿಗೆ ಪ್ರೋತ್ಸಾಹ ತೋರಿದವರು ಗಂಡ ಶ್ರೀನಿವಾಸ್‌ ಅವರು ಇಂಡಿಯನ್‌ ರೆವಿನ್ಯೂ ಸರ್ವಿಸ್‌(ಐಆರ್‌ಎಸ್‌) ಅಧಿಕಾರಿ. ಅಲ್ಲದೆ ಅತ್ತೆ ಸ್ವತಃ ಅಮ್ಮನಂತೆ ಮಾವ, ಹಾಗೂ ನಾದಿನಿಯರು ಸಾಕಷ್ಟುಇವರ ಓದಿಗೆ ತಮ್ಮದೇ ಆದ ಪ್ರೊತ್ಸಾಹ ವಾತ್ಸಲ್ಯ ತೋರಿದರು. ಗಂಡನಿಂದ ಅವರಿಗೆ ಉತ್ತಮ ಮಾರ್ಗದರ್ಶನ ದೊರೆಯಿತು. ಇದು ಅವರಿಗೆ ಮತ್ತಷ್ಟುಇಂಬು ನೀಡಿತು. ಇದಕ್ಕೂ ಮುನ್ನ ತನ್ನ ಹಿರಿಯರಿಂದ ಮಾರ್ಗದರ್ಶನವನ್ನು ಪಡೆದಿದ್ದ ನಿಖಿತಾ ಮತ್ತಷ್ಟುಸಾಧಕರು ಗಂಡ ಶ್ರೀನಿವಾಸ ಅವರ ಮೂಲಕ ಪರಿಚಯವಾದರು. ಇದರ ಫಲಿತಂಶ ಅವರು ಪ್ರಥಮ ಪ್ರಯತ್ನದಲ್ಲಿ ಡಿವೈಎಸ್‌ಪಿ ಹುದ್ದೆ ಅಲಂಕರಿಸುವಂತೆ ಮಾಡಿತು.

ದಿನಕ್ಕೆ 8ರಿಂದ 10 ಗಂಟೆ ಓದು:

ನಿಖಿತಾ ಕಠಿಣ ಶ್ರಮ ಹಾಕಿ ಓದುವವರು. ಸಣ್ಣ ವಿಷಯವನ್ನು ಬಿದಡೆ ಆಳವಾಗಿ ಅಧ್ಯಯನ ಮಾಡುವ ಅವರ ಅಧ್ಯಯನ ಕ್ರಮ ನಿಜಕ್ಕೂ ಶ್ಲಾಘನೀಯ. ಎಷ್ಟೇ ಕಷ್ಟಬಂದರು ಅವರ ದಿನಪತ್ರಿಕೆ ಓದುವುದನ್ನು ಮರೆಯುತ್ತಿರಲಿಲ್ಲ. ಅದಕ್ಕಾಗಿಯೇ ಅವರು ದಿನದ 2 ಗಂಟೆ ಮೀಸಲಿರಿಸುತ್ತಿದ್ದರು. 6 ಗಂಟೆ ಹಾಗೂ ಮುಂದುವರಿದ ಅವಧಿಯನ್ನು ಸಾಮಾನ್ಯ ಅಧ್ಯಯನ ಹಾಗೂ ಐಚಿಕ ವಿಷಯದ ಕುರಿತು ಗಂಭೀರ ಓದುತಿದ್ದರು. ದಿನಪತ್ರಿಕೆ ಓದುವಾಗ ನೋಟ್ಸ್‌ ಮಾಡಿಕೊಳ್ಳುವುದು ಅವರ ನಿತ್ಯ ಕಾಯಕ. ದಿನದ ಅಭ್ಯಾಸದ ಕೊನೆಯಲ್ಲಿ ಪುನರ್‌ಮನನ ಮಾಡುವುದು ಕಡ್ಡಾಯವಾಗಿತ್ತು. ಹೀಗೆ ವಾರ ಪೂರ್ತಿ ಓದಿದ್ದನ್ನು ಅಷ್ಟುವಿಷಯಗಳನ್ನು ಕೊನೆಯ 2 ದಿನ ಅಂದರೆ ಶನಿವಾರ ಹಾಗೂ ಭಾನುವಾರ ವಾರದ 5 ದಿನ ಓದಿದ ಅಷ್ಟುವಿಷಯಗಳನ್ನು ರಿವಿಷನ್‌ ಮಾಡುವುದು ಅವರ ಅಭ್ಯಾಸದ ತಂತ್ರ. ಇದರಿಂದಾಗಿಯೇ ಅವರು ಹೆಚ್ಚು ಸಮಯ ಓದಿದ ಅಷ್ಟುವಿಷಯಗಳನ್ನು ದೀರ್ಘಕಾಲಿಕವಾಗಿ ನೆನಪಿನಲ್ಲಿ ಉಳಿಸಿಕೊಳ್ಳಲು ಸಾಧ್ಯವಾಯಿತು.

Photos| ಮೈಂಡ್ ರಿಲಾಕ್ಸೇಷನ್, ಡಿಸಿಪಿಯ ಹೊಸ ಪ್ಲಾನ್ ಪೊಲೀಸ್ ಸಿಬ್ಬಂದಿ ಪುಲ್ ಖುಷ್!

ಗುರಿ ಬಿಡದ ಛಲವತಿ:

ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಇಲ್ಲಿ ಅಧ್ಯಯನ ಕ್ರಮ ತಪ್ಪಬಹುದು. ಇಲ್ಲವೇ ನಿರ್ಧಾರಗಳೇ ಬದಲಾಗಬಹುದು. ಅದಕ್ಕಾಗಿ ತನ್ನ ಆಕಾಂಕ್ಷೆಗಳನ್ನು ಎಲ್ಲರಿಗೂ ಮನದಟ್ಟು ಮಾಡಿದರು. ಆ ದೃಢ ನಿರ್ಧಾರ, ಛಲದಿಂದ ಮುಂದುವರೆದರು. ಮನೆಯ ಶುಭಾ ಕಾರ್ಯ ಸಂಬಂಧಿಕರು, ಗಂಡ ಎಲ್ಲವನ್ನು ನಿಭಾಯಿಸಿಕೊಂಡು ಓದಿಗಾಗಿ ಸಮಯ ಮಾಡಿಕೊಂಡು ನಿಖಿತಾ ಅಧ್ಯಯನ ಮಾಡುತ್ತಿದ್ದರು. ಅವರ ಅಧ್ಯಯನಕ್ಕೆ ಗಂಡ, ಅತ್ತೆ, ಮಾವ ಹೆಚ್ಚು ಒತ್ತು ನೀಡಿದರು. ಇದು ನಿಖಿತಾಗೆ ಸ್ಫೂರ್ತಿಯಾಯಿತು.

ಕೋಚಿಂಗ್‌ ಅಗತ್ಯವಿಲ್ಲ:

ನಿಖಿತಾ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಲು ಯಾವುದೇ ಕೋಚಿಂಗ್‌ ಸೆಂಟರ್‌ಗಳ ಮೆಟ್ಟಿಲು ಹತ್ತದೆ ಸ್ವ ಅಧ್ಯಯನ ಕೈಗೊಂಡರು. ನಾವೇ ಒಂದು ಬಾರಿ ಪೂರ್ಣ ಸಿಲಿಬಸ್‌ ನೋಡಿಕೊಂಡು ನಿಗದಿತ, ನಿರ್ದಿಷ್ಟಸಮಯದಲ್ಲಿ ವೇಳಪಟ್ಟಿಯೊಂದಿಗೆ ಓದಿದರೆ ಕೋಚಿಂಗ್‌ ಅಗತ್ಯ ಇಲ್ಲ ಎನ್ನುತ್ತಾರೆ ನಿಖಿತಾ.

ನಿಖಿತಾ ಅವರ ಸಲಹೆಗಳು:

ವ್ಯಕ್ತಿತ್ವ ಪರೀಕ್ಷೆಗೆ ಭಯ ಬೇಡ ನಿಖಿತಾ ಅವರ ಮೊದಲ ಸಲಹೆ. ಹಲವು ಮಂದಿ ಸಂದರ್ಶನ ಎಂದರೆ ಭಯ ಬೀಳುವುದುಂಟು ಆದರೆ ಯಾವುದಕ್ಕೂ ನಿಖಿತಾ ವಿಚಲತರಾಲಿಲ್ಲವಂತೆ. ಎಂತಹ ಕಠಿಣ ಪ್ರಶ್ನೆಗಳನ್ನು ಗೊತ್ತಿರುವಷ್ಟುಸಮರ್ಪಕ ಉತ್ತರ ನೀಡಿದರೆ ಸಾಕು. ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದೇ ಹೇಳಬೇಕು, ಉತ್ತರ ನೇರ ಹಾಗೂ ಸ್ಪಷ್ಟವಾಗಿ ಇರಬೇಕು. ಸಂದರ್ಶನದಲ್ಲಿ ಹವ್ಯಾಸ, ಓದಿರುವ ವಿಷಯದ ಮೇಲೆ, ಸಾರ್ವಜನಿಕ ಸಮಸ್ಯೆಗಳು ಎದುರಾದಗ ತೆಗೆದುಕೊಳ್ಳುವ ನಿರ್ಧಾರಗಳು ಏನು ಎಂಬುದನ್ನು ಈ ಹಂತದಲ್ಲಿ ಪರೀಕ್ಷೆಗೆ ಒಡ್ಡಲಾಗುತ್ತದೆ. ಇದಕ್ಕೆಲ್ಲಾ ತುಂಬಾ ದೀರ್ಘವೂ ಅಲ್ಲದ ಸಮರ್ಪಕ ಉತ್ತರ ನೀಡಬೇಕು. ನಿಮ್ಮ ನೇರ ಸ್ಪಷ್ಟಉತ್ತರವೇ ಅಂಕ ಗಳಿಸಲು ಉತ್ತಮ ಮಾರ್ಗ ಎನ್ನುತ್ತಾರೆ ನಿಖಿತಾ.

click me!