
ಈಜಿಪ್ಟ್‌ನಲ್ಲಿ ಯೋನಿಛೇದನ ಮಾಡಿಸಿಕೊಂಡ 12 ವರ್ಷದ ಹುಡುಗಿಯೊಬ್ಬಳು ಸತ್ತುಹೋಗಿದ್ದಾಳೆ, ಆಕೆಯ ಹೆತ್ತವರು, ಡಾಕ್ಟರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪತ್ರಿಕೆ, ಟಿವಿ ಮುಂತಾದ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ. ಅಂತಾರಾಷ್ಟ್ರೀಯ ಸಮುದಾಯದಲ್ಲಿ ಬೇರೆ ದೇಶಗಳ ಮುಂದೆ ತನ್ನ ಮರ್ಯಾದೆ ಹೋಗ್ತಾ ಇದೆ ಎಂದು ಈಜಿಪ್ಟ್ ಸರಕಾರಕ್ಕೆ ಮಂಡೆ ಬಿಸಿ ಆಗಿದೆ. ಇಷ್ಟೆಲ್ಲ ಅಲ್ಲೋಲ ಕಲ್ಲೋಲಕ್ಕೆ ಕಾರಣವಾದ ಯೋನಿಛೇದನ ಅಥವಾ ಜೆನೈಟಲ್ ಮ್ಯುಟಿಲೇಷನ್ ಬಗ್ಗೆ ನೀವು ತಿಳಿಯಬೇಕು.
ಇದು ಈಜಿಪ್ಟ್ ಹಾಗೂ ಸುತ್ತಮುತ್ತಲಿನ ಕೆಲವು ಬಡ ಮುಸ್ಲಿಂ ದೇಶಗಳಲ್ಲಿ ಇರುವ ಒಂದು ಕ್ರೂರ ಸಾಂಪ್ರದಾಯಿಕ ಪದ್ಧತಿ. ಮುಸ್ಲಿಂ ಪುರುಷರಲ್ಲಿ ಅವರ ಶಿಶ್ನದ ತುದಿಯ ಚರ್ಮವನ್ನು ಕತ್ತರಿಸಿ ಸುನ್ನತ್ ಮಾಡುವ ಪ್ರಕ್ರಿಯೆಯ ಬಗ್ಗೆ ನಿಮಗೆ ತಿಳಿದೇ ಇದೆ. ಇದು ಆ ಶರೀರಭಾಗದ ಸ್ವಚ್ಛತೆಯನ್ನು ಕಾಪಾಡಲು ನೆರವಾಗುತ್ತೆ ಅನ್ನಲಾಗಿದೆ. ಆದೇ ಥರ ಈ ಯೋನಿಛೇದನ. ಇದರಲ್ಲಿ, ಹೆಣ್ಣು ಮಕ್ಕಳು ಹದಿಹರೆಯಕ್ಕೆ ಕಾಲಿಡುವ ಸಂದರ್ಭದಲ್ಲಿ ಅವರ ಯೋನಿಯಲ್ಲಿರುವ ಭಗಾಂಕುರ (ಕ್ಲಿಟೋರಿಸ್) ಎಂಬ ಪುಟ್ಟ ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಈ ಭಾಗ, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸುಖವನ್ನು ಪಡೆಯಲು ಕಾರಣವಾಗುವ ಅಂಗ. ಇದನ್ನು ಕತ್ತರಿಸಿ ತೆಗೆದುಬಿಟ್ಟರೆ, ಸ್ತ್ರೀಯರ ಲೈಂಗಿಕ ಬಯಕೆಯನ್ನು ಹತ್ತಿಕ್ಕಬಹುದು ಎಂಬುದು ಈ ಕ್ರೂರ ಪದ್ಧತಿಯ ಹಿಂದೆ ಇರುವ ಉದ್ದೇಶ. ಇದನ್ನು ಕತ್ತರಿಸುವಾಗ, ಸಿಕ್ಕಾಪಟ್ಟೆ ರಕ್ತದ ಸೋರಿಕೆಯಿಂದಾಗಿ ಹೆಣ್ಣುಮಕ್ಕಳು ಸಾಯುವ ಸಂದರ್ಭಗಳು ಬಹಳ. ಆಧುನಿಕ ವೈದ್ಯಪದ್ಧತಿ ಬರುವ ಮೊದಲು ಇಂಥ ಸಾವುಗಳು ಸಾಮಾನ್ಯವಾಗಿದ್ದವು.
ಅಪ್ಪನ ವಯಸ್ಸಿನ ಪುರುಷನೊಂದಿಗೆ ಕನ್ಯತ್ವ ಕಳೆದುಕೊಳ್ಳೋ ಬಯಕೆ ಈ ಚೆಲುವೆ
ಎಲ್ಲ ಹೆಣ್ಣುಮಕ್ಕಳ ಭಗಾಂಕುರವೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವರಲ್ಲಿ ಅದು ಹೊರಬದಿಗೆ ಕೈಗೆ ಸಿಗುವಂತೆ ಇರಬಹುದು; ಕೆಲವರಲ್ಲಿ ಸ್ವಲ್ಪ ಒಳಗಿರಬಹುದು. ಇದನ್ನು ಕತ್ತರಿಸಿ ತೆಗೆಯುವಾಗ ಡಾಕ್ಟರ್ ಬಲು ಎಚ್ಚರಿಕೆ ವಹಿಸಬೇಕಾಗುತ್ತದೆ. ದಶಕಗಳ ಮೊದಲು ಇದನ್ನು ಡಾಕ್ಟರ್ ನೆರವಿಲ್ಲದೆ ಸ್ಥಳೀಯರೇ ತುಂಬ ಕಚ್ಚಾ ರೀತಿಯಲ್ಲಿ ನೆರವೇರಿಸುತ್ತಿದ್ದರು. ಆಗ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ನೋವು, ಹಿಂಸೆ ಆ ದೇವರಿಗೇ ಪ್ರೀತಿ. ಪ್ರಸ್ತುತ ಅದು ಆಸ್ಪತ್ರೆಗೆ, ನಾಲ್ಕು ಕೋಣೆಗಳ ನಡುವೆ, ಡಾಕ್ಟರ್ ಸಮ್ಮುಖಕ್ಕೆ ಬಂದಿದೆ, ಆದರೂ ಕೆಲವರಿಗೆ ಯಾತನೆ ಅನುಭವಿಸಿ ಸಾಯುವುದು ತಪ್ಪುವುದಿಲ್ಲ.
ಈ ಪದ್ಧತಿಯನ್ನು ರೂಢಿಗೆ ತಂದವರು ಮುಸ್ಲಿಂ ಮೂಲಭೂತವಾದಿ ಧಾರ್ಮಿಕ ಮುಖಂಡರು ಎಂಬುದನ್ನು ಪುನಃ ಹೇಳಬೇಕಿಲ್ಲ. ಮೊದಲು ಈಜಿಪ್ಟ್ ಹಾಗೂ ಸುತ್ತಮುತ್ತಲಿನ ದೇಶಗಳು ಬುಡಕಟ್ಟು ಸಮುದಾಯಗಳಾಗಿದ್ದಾಗ, ಅವರ ನಡುವೆ ಪರಸ್ಪರ ಹೊಡೆದಾಟ, ಯುದ್ಧ, ಸೋತವರ ಮೇಲಿನ ಆಕ್ರಮಣ, ಲೈಂಗಿಕ ಹಿಂಸೆಗಳು ಸಾಮಾನ್ಯವಾಗಿದ್ದವು. ಸ್ತ್ರೀಗೆ ಲೈಂಗಿಕ ಸುಖದ ಅನುಭವವಿದ್ದರೆ ಆಕೆ ಆಕ್ರಮಣಕಾರರ ಹಿಂದೆ ಹೋಗಬಹುದು ಎಂಬ ಅಂಜಿಕೆ ಇವರಿಗಿತ್ತು. ಹೀಗಾಗಿ, ಆಕೆಯ ಬಯಕೆಗಳನ್ನು ನಿಯಂತ್ರಿಸುವ, ಆ ಮೂಲಕ ಆಕೆಯನ್ನು ನಿಯಂತ್ರಣದಲ್ಲಿ ಇಡುವ ಪುರುಷನ ಹುನ್ನಾರವಾಗಿ ಈ ರೂಢಿ ಬೆಳೆಯಿತು.
ಅಪರಾಧಿ ನಾನಲ್ಲ; ಗರ್ಭಪಾತ ನಿರ್ಧಾರದ ಬಗ್ಗೆ ಮಹಿಳೆಗಿಲ್ಲ ಪಶ್ಚತ್ತಾಪ
1990ರ ದಶಕದಲ್ಲಿ ಈ ಪದ್ಧತಿಯ ಬಗ್ಗೆ ಹೇವರಿಕೆ, ಜಿಗುಪ್ಸೆ ಸಿಟ್ಟುಗಳು ಈಜಿಪ್ಟ್ ಸಮಾಜದಲ್ಲಿ ಕಾಣತೊಡಗಿದವು. ಸ್ತ್ರೀ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಇದನ್ನು ವಿರೋಧಿಸಿದವು. ಅಂತಾರಾಷ್ಟ್ರೀಯ ಸಮುದಾಯವೂ ಖಂಡಿಸಿತು. ಸರಕಾರ ಎಚ್ಚೆತ್ತಿತು. 2008ರಲ್ಲಿ, ಜೆನೈಟಲ್ ಮ್ಯುಟಿಲೇಶನ್ ಅನ್ನು ಶಿಕ್ಷಾರ್ಹ ಅಪರಾಧ ಅಂತ ಘೋಷಿಸುವ ಕಾನೂನು ರೂಪಿಸಲಾಯಿತು. ಇದಕ್ಕೂ ಮೂಲಭೂತವಾದಿಗಳು, ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದರು. ಒಳಗೊಳಗೇ ರಹಸ್ಯವಾಗಿ ಯೋನಿಛೇದನ ನಡೆಸಲಾರಂಭಿಸಿದರು.
ಈಗಲೂ, ಸುಮಾರು 80 ಶೇಕಡ ಹೆಣ್ಣುಮಕ್ಕಳನ್ನು ಯೋನಿಛೇದನ ಮಾಡಲಾಗುತ್ತಿದೆ ಎಂದು ವರದಿಯಿದೆ. ಈಜಿಪ್ಟ್‌ನ ಸರಕಾರ ಕಂಡೂ ಕಾಣದಂತೆ ಸುಮ್ಮನೆ ಇದೆ. ಹಿಂಸೆ ಅನುವಿಸುವ ಹೆಣ್ಣುಮಕ್ಕಳು ಅನುಭವಿಸುತ್ತಲ ಇದ್ದಾರೆ, ಸಾಯುತ್ತಲೂ ಇದ್ದಾರೆ.
ಲೈಂಗಿಕ ದೌರ್ಜನ್ಯ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನೂ ಬಿಟ್ಟಿಲ್ಲ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.