ಡಾಲ್ಫಿನ್ ಬಗ್ಗೆ ತಿಳಿಯೋದು ಸಾಕಷ್ಟಿದೆ. ಡಾಲ್ಫಿನ್ ಮತ್ತೆ ಮನುಷ್ಯರ ಮಧ್ಯೆ ವಿಶೇಷ ಸಂಬಂಧವಿದೆ. ಅದ್ರಲ್ಲೂ ಗರ್ಭಿಣಿಯರೆಂದ್ರೆ ಡಾಲ್ಫಿನ್ ಗೆ ಆಕರ್ಷಣೆ. ಗರ್ಭಿಣಿ ಬಳಿ ಈಜಿ ಬರುವ ಡಾಲ್ಫಿನ್ ಗಳು, ಅವರ ಹೊಟ್ಟೆಯ ಬಳಿ ಶಿಳ್ಳೆಯಂತ ಶಬ್ದಗಳನ್ನು ಮಾಡುತ್ತವೆ.
ಡಾಲ್ಫಿನ್ ಬುದ್ಧಿವಂತ ಹಾಗೂ ವಿಶೇಷ ಜೀವಿ. ಡಾಲ್ಫಿನ್ (Intelligent and special animal dolphin) ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳಿವೆ. ಅವುಗಳಲ್ಲಿ ಅತ್ಯಂತ ಕುತೂಹಲಕಾರಿ ವಿಷ್ಯವೆಂದ್ರೆ ಮನುಷ್ಯ ಅದ್ರಲ್ಲೂ ಗರ್ಭಿಣಿ ಹಾಗೂ ಡಾಲ್ಫಿನ್ ಮಧ್ಯೆ ಇರುವ ಸಂಬಂಧ. ಡಾಲ್ಫಿನ್ (Dolphin) ಗರ್ಭಿಣಿಯರಿಗೆ ವಿಶೇಷ ಪ್ರೀತಿಯನ್ನು ತೋರುತ್ತದೆ. ಗರ್ಭಿಣಿ (Pregnant) ಬಳಿ ಈಜಿ ಬರುವ ಡಾಲ್ಫಿನ್ ಗಳು, ಅವರ ಹೊಟ್ಟೆಯ ಬಳಿ ಶಿಳ್ಳೆಯಂತ ಶಬ್ದಗಳನ್ನು ಮಾಡುತ್ತವೆ. ಬೆಳವಣಿಗೆಯ ಭ್ರೂಣವನ್ನು ಡಾಲ್ಫಿನ್‌ಗಳು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಡಾಲ್ಫಿನ್‌ಗಳು ಭ್ರೂಣದ ಹೃದಯ (Heart) ಬಡಿತವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮಹಿಳೆಗೆ ತಾನು ಗರ್ಭಿಣಿ ಎಂಬುದು ತಿಳಿಯುವ ಮುನ್ನವೇ ಡಾಲ್ಫಿನ್ ಗೆ ಈ ವಿಷ್ಯ ತಿಳಿದಿರುತ್ತದೆ. ಗರ್ಭಿಣಿಯರ ಬಳಿ ಈಜುವ ಡಾಲ್ಫಿನ್ ಗಳು ಮಾಡುವ ಶಿಳ್ಳೆ ಶಬ್ದಗಳನ್ನು ಅತ್ಯಂತ ಕೇಂದ್ರೀಕೃತ ಎಖೋಲೇಷನ್‌ನ ಒಂದು ರೂಪ ಎನ್ನಲಾಗುತ್ತದೆ. ಶಿಳ್ಳೆ ಶಬ್ದಗಳನ್ನು ಮಾಡುವಾಗ ಡಾಲ್ಫಿನ್ಗಳು ಗರ್ಭಿಣಿಯರ ಹೊಟ್ಟೆ ಮೇಲೆ ತಮ್ಮ ಮುಖವನ್ನು ಇಡುತ್ತವೆ. ಅವು ಮೃದುವಾಗಿ ಸ್ಪರ್ಶಿಸುತ್ತವೆ ಎಂದು ಅನೇಕ ಗರ್ಭಿಣಿಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಮೆರಿಕ ವಿಮಾನವನ್ನೇ ತುರ್ತು ಭೂಸ್ಪರ್ಶ ಮಾಡಿಸಿದ ಮಹಿಳಾ ಪ್ರಯಾಣಿಕೆ ತಲೆಯ ಹೇನು!
undefined
ಡಾಲ್ಫಿನ್ ಮೆದುಳು ಎಖೋಲೇಷನ್ ಮೂಲಕ ಗುರುತಿಸಲಾದ ವಸ್ತುವಿನ ಚಿತ್ರವನ್ನು ರೂಪಿಸುತ್ತದೆ. ಡಾಲ್ಫಿನ್ ಗೆ ಇದು ಅಭಿವೃದ್ಧಿ ಹೊಂದುತ್ತಿರುವ ಮಾನವ ಭ್ರೂಣ ಎಂಬುದು ತಿಳಿದಿರುವುದಿಲ್ಲ. ಅದು ಚಿತ್ರದ ಆಕಾರವನ್ನು ನೋಡುತ್ತದೆ ಎಂದು ನಂಬಲಾಗಿದೆ. ನೀರಿನ ಸಾಂದ್ರತೆ ಮತ್ತು ವಿಶಿಷ್ಟವಾದ ಅಕೌಸ್ಟಿಕ್ ಗುಣಲಕ್ಷಣಗಳಿಂದಾಗಿ ಡಾಲ್ಫಿನ್‌ಗಳಿಂದ ಉತ್ಪತ್ತಿಯಾಗುವ ಶಬ್ದಗಳು ನೀರಿನ ಮೂಲಕ ದೂರದವರೆಗೆ ಚಲಿಸುತ್ತವೆ. ಮಾನವರು ಸ್ವಲ್ಪ ಮಟ್ಟಿಗೆ ನೀರೊಳಗಿನ ಶಬ್ದಗಳನ್ನು ಕೇಳಬಹುದು. ಆದರೆ ಇದು ನೀರಿನ ಆಳ ಸೇರಿದಂತೆ ಕೆಲ ಅಂಶವನ್ನು ಅವಲಂಬಿಸಿರುತ್ತದೆ.
ಡಾಲ್ಫಿನ್‌ಗಳು ವಿವಿಧ ಕಾರಣಗಳಿಗಾಗಿ ಶಿಳ್ಳೆ ಶಬ್ಧ ಮಾಡುತ್ತವೆ. ತಮ್ಮ ಸಂತತಿಯೊಂದಿಗೆ ಸಂವಹನ ನಡೆಸಲು, ಅಪಾಯಕಾರಿ ಸಂದರ್ಭಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಆಹಾರಕ್ಕಾಗಿ ಅಥವಾ ಆಟವಾಡುವ ಸಮಯದಲ್ಲಿ ಶಬ್ಧ ಮಾಡುತ್ತವೆ. ಡಾಲ್ಫಿನ್‌ಗಳು ಪರಸ್ಪರ ಮತ್ತು ಮನುಷ್ಯರೊಂದಿಗೆ ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ವಿಜ್ಞಾನಿಗಳು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ನಮಗೆ ತಿಳಿದಿರುವ ಪ್ರಕಾರ, ಅವು ಮನುಷ್ಯನೊಂದಿಗೆ ಸಾಕಷ್ಟು ವಿಶೇಷ ಸಂಬಂಧವನ್ನು ಹೊಂದಿವೆ.
ಡಾಲ್ಫಿನ್ ಗಳು ಇಂದು ಅಸ್ತಿತ್ವದಲ್ಲಿರುವ ಅತ್ಯಂತ ಆಕರ್ಷಕ ಜೀವಿಗಳಲ್ಲಿ ಒಂದಾಗಿದೆ. ಅವು ನೀರಿನ ಅಡಿಯಲ್ಲಿ 1000 ಅಡಿಗಳಷ್ಟು ಧುಮುಕುತ್ತವೆ. ಅವು 50 ವರ್ಷಗಳವರೆಗೆ ಬದುಕಬಲ್ಲವು. ಬಾಟಲಿನೋಸ್ ಡಾಲ್ಫಿನ್ ಗಳು ಗಂಟೆಗೆ 30 ಮೈಲುಗಳಷ್ಟು ವೇಗವನ್ನು ಈಜುತ್ತವೆ. ಮಿದುಳು ಮತ್ತು ದೇಹದ ಗಾತ್ರದ ಅನುಪಾತದಲ್ಲಿ ಅವು ಮನುಷ್ಯರ ನಂತರ ಎರಡನೇ ಸ್ಥಾನದಲ್ಲಿವೆ. ಆದರೆ ಅವುಗಳ ಮೆದುಳಿನ ಗಾತ್ರ ಮಾತ್ರ ಅವುಗಳನ್ನು ಬುದ್ಧಿವಂತರೆಂದು ಪರಿಗಣಿಸಲು ಕಾರಣವಲ್ಲ. ಮೊದಲೇ ಹೇಳಿದಂತೆ ಅವು ತಮ್ಮದೇ ಆದ ವಿಶೇಷ ಶಿಳ್ಳೆಗಳನ್ನು ಅಭಿವೃದ್ಧಿಪಡಿಸುತ್ತವೆ. ತಮ್ಮದೇ ಆದ ಮತ್ತು ಪರಸ್ಪರರ ಹೆಸರನ್ನು ಗುರುತಿಸಲು ಸಮರ್ಥವಾಗಿರುತ್ತವೆ.
ಇನ್ನೊಂದು ವಿಶೇಷವೆಂದ್ರೆ, ಡಾಲ್ಫಿನ್‌ಗಳು ಮನುಷ್ಯರ ಸಹವಾಸವನ್ನು ಆನಂದಿಸುತ್ತವೆ. ಸಕ್ರಿಯವಾಗಿ ಮಾನವ ಸಂಪರ್ಕವನ್ನು ಹುಡುಕುತ್ತವೆ. ಆದ್ರೆ ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಡಾಲ್ಫಿನ್‌ಗಳು ತಮ್ಮದೇ ಜಾತಿಯ ಸ್ನೇಹಿತರನ್ನು ಹೊಂದಿರದೆ ಇದ್ದ ಸಮಯದಲ್ಲಿ ಮನುಷ್ಯರ ಸಂಪರ್ಕವನ್ನು ಬಯಸುತ್ತವೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
ಅಪ್ಪನ ಕೈಹಿಡಿದೇ ಬೆಳೆದಿದ್ದ ಮಗಳು 'ಕೈ'ಯನನ್ನಷ್ಟೇ ಬಿಟ್ಟು ಹೋದಳು! ವಯನಾಡಿನಲ್ಲಿ ಮನಕಲುಕುವ ಘಟನೆ
ಡಾಲ್ಫಿನ್‌ಗಳು ಹೆರಿಗೆಯಲ್ಲಿ ಮಹಿಳೆಯರಿಗೆ ಸಹಾಯ ಮಾಡುತ್ತವೆ ಎಂದು ಅನೇಕ ಅಧ್ಯಯನ ಹೇಳಿದೆ. ಆದ್ರೆ ವೈದ್ಯಕೀಯ ವೃತ್ತಿಪರರು ಇದನ್ನು ಶಿಫಾರಸು ಮಾಡುವುದಿಲ್ಲ. ಡಾಲ್ಫಿನ್ ಮನುಷ್ಯರೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದೆ. ಯುಎಸ್ ನೌಕಾಪಡೆಯು ಡಾಲ್ಫಿನ್ಗಳೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುವ ವಿಶೇಷ ಯೋಜನೆಯನ್ನು ಸಹ ನಡೆಸಿದೆ.