ಆಪ್ರಿಕಾದ ಮಹಿಳೆಯರಲ್ಲಿ ಸ್ತನಗಳನ್ನು ಚಪ್ಪಟೆಗೊಳಿಸುವ ವಿಚಿತ್ರ ಪದ್ದತಿ ಆಚರಣೆಯಲ್ಲಿದೆ. ಇದನ್ನು ಮಹಿಳೆಯೇ ಸಂಬಂಧಿಕರೇ ಮಾಡುತ್ತಾರೆ. ಹದಿಹರೆಯಕ್ಕೆ ಬಂದಿರುವ ಯುವತಿ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿಸಲು ಈ ರೀತಿ ಮಾಡಲಾಗುತ್ತದೆ.
ಬಾಲಕಿ ಯೌವಾನವಸ್ಥೆಗೆ ಬರುತ್ತಿದ್ದಂತೆ ಆಕೆಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತಿವೆ. ಅವುಗಳಲ್ಲೊಂದು ಸ್ತನಗಳ ಬೆಳವಣಿಗೆಯಾಗಿದೆ. ಆದ್ರೆ ದೂರದ ಆಫ್ರಿಕಾದಲ್ಲಿ ಸ್ತನಗಳ ಅಭಿವೃದ್ಧಿಯನ್ನು ತಡೆಯಲಾಗುತ್ತದೆ. ಇದನ್ನು ಸ್ತನಗಳನ್ನಿ ಇಸ್ತ್ರಿಗೊಳಿಸುವಿಕೆ ಅಥವಾ ಚಪ್ಪಟೆಗೊಳಿಸುವಿಕೆ (Breast Ironing) ಎಂದು ಕರೆಯಲಾಗುತ್ತದೆ. ಆಫ್ರಿಕಾದಲ್ಲಿರುವ ಈ ಸಾಂಪ್ರಾದಾಯಿಕ ಪದ್ಧತಿಗೆ ಇಂದು ಭಾರೀ ವಿರೋಧವಿದೆ. ಈ ರೀತಿ ಮಾಡೋದರಿಂದ ಮಹಿಳೆ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ನೋವಿಗೆ ಒಳಗಾಗುತ್ತಾಳೆ. ಆದರೆ ಸ್ತನಗಳ ಬೆಳವಣಿಗೆಯನ್ನು ನಿಯಂತ್ರಣ ಮಾಡೋದರಿಂದ ಆಕೆ ಪುರುಷರಿಗೆ ಆಕರ್ಷಕವಾಗಿ ಕಾಣಿಸಲ್ಲ. ಹೀಗಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಲ್ಲ. ಈ ರೀತಿ ಮಾಡೋದರಿಂದ ಬಾಲ್ಯದಲ್ಲಿ ಗರ್ಭಧಾರಣೆ, ಒತ್ತಡದ ಮದುವೆಯಿಂದ ಆಕೆ ರಕ್ಷಣೆಗೊಳಗಾಗುತ್ತಾಳೆ ಎಂಬುವುದು ಆಫ್ರಿಕನ್ನರ್ ಪ್ರಬಲವಾದ ವಾದ.
ಆಫ್ರಿಕಾದ ಕ್ಯಾಮರೂನ್ ಪ್ರದೇಶದಲ್ಲಿ ಸ್ತನ ಚಪ್ಪಟೆಗೊಳಿಸುವಿಕೆ ಪದ್ಧತಿ ಜೀವಂತವಾಗಿದೆ. ಈ ಪದ್ದತಿಯಿಂದ ಮಹಿಳೆ ಕಾಮುಕರಿಂದ ರಕ್ಷಣೆ ಸಿಗುತ್ತೆ ಎಂಬುವುದು ಇಲ್ಲಿಯ ಹಿರಿಯರ ಬಲವಾದ ನಂಬಿಕೆ. ಈ ವಿಧಾನದಿಂದ ಸ್ತನದ ಬೆಳವಣಿಗೆಯನ್ನು ತಡೆದು ಆಕೆಯ ದೇಹವನ್ನು ವಿಕಾರಗೊಳಿಸಲಾಗುತ್ತದೆ. ಕಲ್ಲು ಸೇರಿದಂತೆ ಘನ ಸಾಧನಗಳಿಂದ ಸ್ತನಗಳ ಮೇಲೆ ಒತ್ತಡ ಹಾಕಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನುಣುಪಾದ ಕಲ್ಲನ್ನು ಬಿಸಿ ಮಾಡಿ ಮಹಿಳೆಯ ಸ್ತನದ ಮೇಲೆ ಒತ್ತಲಾಗುತ್ತದೆ. ಇದರಿಂದ ಸ್ತನದ ಬೆಳವಣಿಗೆ ಕುಂಠಿತವಾಗುತ್ತದೆ. ನೈಜೀರಿಯಾ, ಟೋಗೊ, ಗಿನಿಯಾ, ಕೋಟ್ ಡಿ'ಐವೊಯಿರ್, ಕೀನ್ಯಾ ಮತ್ತು ಜಿಂಬಾಬ್ವೆಯಲ್ಲಿಯೂ ಈ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ.
ಸಾಮಾನ್ಯವಾಗಿ ಸ್ತನ ಬೆಳವಣಿಗೆ ಕುಂಠಿತಗೊಳಿಸಲು ಮರದ ತುಂಡುಗಳನ್ನು ಬಳಕೆ ಮಾಡಲಾಗುತ್ತದೆ. ಇದರ ಹೊರತಾಗಿ ಬಾಳೆ ಎಳೆ, ತೆಂಗಿನ ಚಿಪ್ಪು, ರುಬ್ಬುವ ಕಲ್ಲು, ಲ್ಯಾಡಲ್ಸ್, ಸ್ಪಾಟುಲಾಗಳನ್ನು ಕಲ್ಲಿದ್ದಿಲಿನ ಮೇಲೆ ಚೆನ್ನಾಗಿ ಕಾಯಿಸಿ ಸ್ತನಗಳ ಮೇಲೆ ಇರಿಸಲಾಗುತ್ತದೆ. ಮನೆಯ ಪುರುಷರು ಗುರುತಿಸದಂತೆ ಮಾಡಲಾಗುತ್ತದೆ. ಕೆಲವರು ಈ ಪದ್ಧತಿಗೆ ವಿರೋಧಪಡಿಸಿದ್ರೆ ಸ್ತನ ಚಪ್ಪಟೆಗೊಳಿಸುವ ಪ್ರಕ್ರಿಯೆ ವಾರಗಟ್ಟಲೇ ನಡೆಯುತ್ತದೆ.
ಇಲ್ಲಿ ಅತಿಥಿಗಳ ಜೊತೆ ಹೆಂಡ್ತಿಯನ್ನು ಮಲಗಿಸಿ, ಗಂಡ ಹೊರಗೆ ಮಲಗ್ತಾನೆ
ಈ ಪದ್ದತಿಯಿಂದ ಮಹಿಳೆ ಆರೋಗ್ಯದ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಮಹಿಳೆ ಸ್ತನ್ಯಪಾನ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇಸ್ತ್ರಿಗೊಳಿಸುವಿಕೆಯಿಂದ ಮಹಿಳೆ ವಿವಿಧ ರೀತಿಯ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ತನ ಕ್ಯಾನ್ಸರ್‌ಗೂ ಮಹಿಳೆ ತುತ್ತಾಗಬಹುದು. ಇಡೀ ಜೀವನ ವಿರೂಪತೆಗೆ ಗುರಿಯಾಗಿ ಮಾನಸಿಕ ನೋವು ಅನುಭವಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಈ ಪದ್ಧತಿಯಿಂದಾಗಿ ಮಹಿಳೆಯರ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬ ವರದಿಗಳು ಪ್ರಕಟವಾಗಿವೆ.
ಈ ಅನಿಷ್ಠ ಪದ್ಧತಿಯ ನಿರ್ಮೂಲನೆಗಾಗಿ GIZ ಮತ್ತು RENATA ನಂತಹ ಸಂಸ್ಥೆಗಳು ವಿಶೇಷ ಅಭಿಯಾನವನ್ನು ಕೈಗೊಂಡಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಈ ಪದ್ಧತಿಗಳನ್ನು ನೈಜಿರಿಯಾ ಸರ್ಕಾರ ನಿಷೇಧ ವಿಧಿಸಿದ್ರೂ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಶಿಕ್ಷಣದ ಅಗತ್ಯವಿದೆ ಎಂದು ಅಭಿಯಾನ ನಡೆಸುತ್ತಿರುವ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತವೆ.
ನೈಜೀರಿಯಾದಲ್ಲಿ ಕ್ಯಾಮರೂನಿಯನ್ ನಿರಾಶ್ರಿತರಾದ ಎಲಿಜಬೆತ್ ಜಾನ್ ಎಂಬವರು ತಮ್ಮನ್ನು ಹೇಗೆ ಬಲವಂತವಾಗಿ ಈ ಪದ್ಧತಿಗೆ ದೂಡಲಾಯ್ತು ಎಂದು ಹೇಳಿಕೊಂಡಿದ್ದಾರೆ. 10ನೇ ವಯಸ್ಸಿನಲ್ಲಿಯೇ ನನಗೆ ಸ್ತನ ಇಸ್ತ್ರಿ ಮಾಡಲಾಯ್ತು. ಇದರಿಂದ ಮಗುವಿಗೆ ಎದೆಹಾಲು ಕುಡಿಸಲು ಸಾಧ್ಯವಾಗದ ಕಾರಣ ಕಂದಮ್ಮನನ್ನು ಕಳೆದುಕೊಂಡೆ. ಸಾಂಪ್ರದಾಯಿಕ ನಂಬಿಕೆಗಳು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರಾಮುಖ್ಯತೆ ನೀಡಲ್ಲ ಎಂದು ಹೇಳುತ್ತಾರೆ.
ದ್ರೌಪದಿ ಮಾಡಿದ ಆ ತಪ್ಪಿನಿಂದಲೇ ಪುನರ್ಜನ್ಮದಲ್ಲಿ ಐವರು ಗಂಡಂದಿರ ಪತ್ನಿಯಾಗಿದ್ದು!
ಭವಿಷ್ಯದ ಪೀಳಿಗೆಯು ಈ ಕ್ರೂರತೆಯಿಂದ ಮುಕ್ತವಾಗಿ ಬೆಳೆಯಲು ಅನುವು ಮಾಡಿಕೊಡಬೇಕು. ಸರ್ಕಾರಗಳು, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ಸಮುದಾಯಗಳು ಜಾಗೃತಿ ಅಭಿಯಾನಗಳನ್ನು ವ್ಯಾಪಕವಾಗಿ ಪ್ರಚಾರಗೊಳಿಸಬೇಕು. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಸಮುದಾಯಗಳು ಇಂತಹ ಅನಿಷ್ಠ ಪದ್ಧತಿಗಳನ್ನು ಬಲವಾಗಿ ನಂಬಿಕೊಂಡಿವೆ ಎಂದು ಎಲಿಜಬೆತ್ ಜಾನ್ ಹೇಳುತ್ತಾರೆ.