ಛೇ... ಛೇ... 'ಮೇಡಂ' ಅಂದ್ರೆ ನಿಜ ಅರ್ಥ ಇದಾ? ಇನ್ನು ಮಹಿಳೆಯರನ್ನು ಹೀಗೆ ಕರೆಯೋದಾದ್ರೂ ಹೇಗೆ?

Published : Mar 14, 2025, 09:58 PM ISTUpdated : Mar 15, 2025, 07:21 AM IST
 ಛೇ... ಛೇ... 'ಮೇಡಂ' ಅಂದ್ರೆ ನಿಜ ಅರ್ಥ ಇದಾ? ಇನ್ನು ಮಹಿಳೆಯರನ್ನು ಹೀಗೆ ಕರೆಯೋದಾದ್ರೂ ಹೇಗೆ?

ಸಾರಾಂಶ

ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದ್ದು, ಕನ್ನಡ ಗೊತ್ತಿಲ್ಲ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ, ಇಂಗ್ಲಿಷ್ ಪದಗಳ ಅರ್ಥ ತಿಳಿದರೆ ಆಶ್ಚರ್ಯವಾಗುತ್ತದೆ. "ಮೇಡಂ" ಪದವನ್ನು ಫ್ರಾನ್ಸ್‌ನಲ್ಲಿ ಬೇರೆ ರೀತಿಯ ಮಹಿಳೆಯರಿಗೆ ಬಳಸಲಾಗುತ್ತಿತ್ತು. ಭಾರತದಲ್ಲಿ ಮಹಿಳೆಯರನ್ನು ಗೌರವದಿಂದ "ದೇವಿಜಿ" ಎಂದು ಕರೆಯಬಹುದು. ಆದರೆ ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಅಸಾಧ್ಯವೆನಿಸುತ್ತದೆ.

ಆಂಗ್ಲರ ಕೊಡುಗೆಯನ್ನು ಇಂದು ಪ್ರಸಾದ ಎಂದು ಸ್ವೀಕರಿಸಿ ಶತಮಾನ ಕಳೆದಿದೆ. ಇಂಗ್ಲಿಷ್​ ಮಾತನಾಡಿದರಷ್ಟೇ ಮಹಾನ್​ ಸಾಧಕರು, ಅವರು ಆಕಾಶದಲ್ಲಿ ತೇಲಾಡುವವರು ಎಂದೋ ಅಂದುಕೊಂಡು ಆಗಿಬಿಟ್ಟಿದೆ. ಕನ್ನಡ ನಾಡಿನಲ್ಲಿಯೇ ಹುಟ್ಟಿ, ಕನ್ನಡದ ಮಣ್ಣಿನಲ್ಲಿಯೇ ಬೆಳೆದು, ಇಲ್ಲಿಯ ಅನ್ನ ತಿನ್ನುತ್ತಾ, ಇಲ್ಲಿಯದ್ದೇ ಹಣವನ್ನು ಸಂಪಾದನೆ ಮಾಡುತ್ತಿದ್ದವರು ಸ್ಟೈಲ್​ ಆಗಿ 'ಕನಡ್​ ಗೊತ್ತಿಲ್​' ಎಂದೋ 'ಸಲಪ ಸಲಪ ಕನಡ ಗೊತು' ಎಂದು ಸ್ಟೈಲ್​ ಆಗಿ ಹೇಳಿಬಿಟ್ಟರೆ ಸಾಕು ಹೆಚ್ಚಿನವರಿಗೆ ಅದು ಹೆಮ್ಮೆಯ ವಿಷಯ. ಇನ್ನು ಕೆಲವು ಅಪ್ಪ-ಅಮ್ಮಂದಿರು ತಮ್ಮ ಮಕ್ಕಳಿಗೆ ಸರಿಯಾಗಿ ಕನ್ನಡ ಓದಲು-ಬರೆಯಲು ಬರಲ್ಲ ಎಂದು ಹೆಮ್ಮೆಯಿಂದ ಹೇಳುವುದು ಉಂಟು. ಆದರೆ ಅದೇ ಇಂಗ್ಲಿಷ್​ ಮಾತನಾಡಲು ಬರುವುದಿಲ್ಲ ಎಂದುಬಿಟ್ಟರೆ ಸಾಕು, ಅವರನ್ನು ಅವಹೇಳನ ಮಾಡುವುದು, ಕಸಕ್ಕಿಂತಲೂ ಕೀಳಾಗಿ ಕಾಣುವವರು ಇದ್ದಾರೆ. ನಮ್ಮ ಶಾಲಾ-ಕಾಲೇಜುಗಳಲ್ಲಿಯೇ ಇಂಥ ಸಂಸ್ಕೃತಿಯೂ ಬಂದು ಬಿಟ್ಟಿದೆ ಅನ್ನಿ. ಅದೆಷ್ಟು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್​  ಮಾತನಾಡುವುದಿಲ್ಲ ಎಂದು ದಂಡ ಕಟ್ಟಿಸಿಕೊಳ್ಳುತ್ತಿಲ್ಲ ಹೇಳಿ! ಬೇರೆ ಭಾಷೆಗಳ ಹೇರಿಕೆ ಹೇರಿಕೆ ಎಂದು ಬೀದಿಗೆ ಇಳಿದು ಹೋರಾಟ ಮಾಡುವವರು ಕೂಡ ಇಂಗ್ಲಿಷ್​ ಅನ್ನು ಅಪ್ಪಿ-ಒಪ್ಪಿ ಆಗಿಬಿಟ್ಟಿದೆ, ಸ್ಥಳೀಯ ಭಾಷೆ ಬರದಿದ್ದರೂ, ಇಂಗ್ಲಿಷ್​ ಅಂತೂ ಬೇಕೇ ಬೇಕು ಎನ್ನುವಂಥ ಅನಿವಾರ್ಯವೂ ಈಗ ಸೃಷ್ಟಿಯಾಗಿದೆ.  

ಆದರೆ ಇದೇ ಇಂಗ್ಲಿಷ್​ನಲ್ಲಿ ಇರುವ ಕೆಲವು ಶಬ್ದಗಳ ನಿಜವಾದ ಅರ್ಥ ತಿಳಿದುಕೊಂಡರೆ ಮಾತ್ರ ಮೂರ್ಛೆ ಹೋಗುವುದು ಗ್ಯಾರೆಂಟಿ! ಪ್ರತಿನಿತ್ಯ ಅದೆಷ್ಟೋ ಬಾರಿ ಶಿಟ್​ ಶಿಟ್​ ಎಂದು ಹೇಳುತ್ತಲೇ ಇರುತ್ತೇವೆ. ಏನಾದರೂ ಎಡವಟ್ಟು ಆದರೆ ಛೇ ಎನ್ನೋ ಬದಲು ಶಿಟ್​ ಎನ್ನುತ್ತೇವೆ. ಆದರೆ ಇದರ ನಿಜವಾದ ಅರ್ಥ ಗೊತ್ತಿರಲಿಕ್ಕೆ ಸಾಕು! ಅದಕ್ಕಿಂತಲೂ ಅಧ್ವಾನ ಆಗಿರುವ ಶಬ್ದ 'ಮೇಡಂ'!  ಮಹಿಳೆಯರಿಗೆ ಮೇಡಂ ಎಂದೂ ಗಂಡಸರಿಗೆ ಸರ್​ ಎಂದು ಹೇಳದೇ ಹೋದರೆ,  ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ವಿಕೋಪಕ್ಕೂ ಹೋಗುವುದು ಉಂಟು. ಮೇಡಂ ಎನ್ನುವುದು ಗೌರವ ಸೂಚಕ ಎಂದು ಇಲ್ಲಿಯವರೆಗೆ ಅಂದುಕೊಂಡೇ ಬಂದದ್ದಾಗಿದೆ. ಇದೇ ಕಾರಣಕ್ಕೆ ಈ ಪದವನ್ನು ನಿತ್ಯವೂ ಕಚೇರಿಯಲ್ಲಿ ಇಲ್ಲವೇ ಬೇರೆ ಮಹಿಳೆಯರಿಗೆ ಸಂಬೋಧಿಸುವಾಗ ಅಥವಾ ಇನ್ನಾವುದೋ ಸ್ಥಳಗಳಲ್ಲಿ ಇದು ಮಹಿಳೆಯರಿಗೆ ಗೌರವ ಸೂಚಿಸುವ ಶಬ್ದವಾಗಿದೆ.  

ಮೂವರು ಫ್ರೆಂಡ್ಸ್​ ಸೇರಿ 80 ಮಾರ್ಕ್ಸ್! ನಟಿ ಶಾನ್ವಿ ಎದುರು ಗೋಲ್ಡನ್​ ಸ್ಟಾರ್​ ಗಣೇಶ್​ ಹೇಳೇಬಿಟ್ರು ಆ ಗುಟ್ಟು-ನಟಿ ಸುಸ್ತು!

ಆದರೆ ಇದೀಗ ಇದರ ನಿಜವಾದ ಅರ್ಥದ ವಿಡಿಯೋ ಇದೀಗ ವೈರಲ್​ ಆಗಿದೆ. ಭಾರತ್​ ಬಚಾವೋ ಆಂದೋಲನ ನಡೆಸುತ್ತಿದ್ದ ರಾಜೀವ್​ ದೀಕ್ಷಿತ್​ ಅವರೂ ನಾವು ಬ್ರಿಟಿಷರಿಂದ ಬಳುವಳಿಯಾಗಿ ಪಡೆದುಕೊಂಡಿರುವ ಇಂಥದ್ದೇ ಎಡವಟ್ಟಿನ ಶಬ್ದಗಳ ಬಗ್ಗೆ ಎಷ್ಟೋ ವರ್ಷಗಳ ಹಿಂದೆಯೇ ಹೇಳಿದ್ದುಂಟು. ಅಷ್ಟಕ್ಕೂ ಮೇಡಂ ನಿಜವಾದ ಅರ್ಥ ಏನು ಗೊತ್ತಾ? ಫ್ರಾನ್ಸ್​ನಲ್ಲಿ ಈ ಶಬ್ದವನ್ನು ಬಳಸುತ್ತಿದ್ದುದು ವೇಶ್ಯೆಯರಿಗೆ! ತಮ್ಮ ದೇಹವನ್ನು ಮಾರಿಕೊಳ್ಳುತ್ತಿದ್ದ ಮಹಿಳೆಯರಿಗೆ ಬಳಸುವ ಶಬ್ದ ಇದು. ಗೂಗಲ್​ನಲ್ಲಿ ಸರ್ಚ್​ ಮಾಡಿದರೂ ಇದರ ಬಗ್ಗೆ ಸಿಗುತ್ತದೆ. ಮೈ ಲೇಡಿ ಅಂದರೆ ನನ್ನ ಹುಡುಗಿ ಇದು ಮೇಡಂ ಆಗಿದೆ. ಇಲ್ಲಿ ನನ್ನ ಹುಡುಗಿ ಎಂದರೆ ಪ್ರೀತಿಯಿಂದ ಹೇಳುವಂಥದ್ದು ಅಲ್ಲ, ಬದಲಿಗೆ ಇಲ್ಲಿ ನನ್ನ ಹುಡುಗಿ ಬೇರೆಯದ್ದೇ ಹುಡುಗಿ ಆಗಿರುತ್ತಾಳೆ! ಹಾಗಿದ್ದರೆ ಯಾರನ್ನಾದರೂ ಮೇಡಂ ಎಂದು ಸಂಬೋಧಿಸಿದರೆ, ಅದು....! 

ಇರಲಿ ಬಿಡಿ. ಹಾಗೆಂದು ಈಗ ಏಕಾಏಕಿ ಏನೂ ಬದಲಾಗಲು ಸಾಧ್ಯವಿಲ್ಲ. ಮೇಡಂ ಹೇಳುವ ಬದಲು ಅಕ್ಕ, ತಂಗಿ, ಆಂಟಿ ಎಂದೆಲ್ಲಾ ಹೇಳಲು ಸಾಧ್ಯವೇ ಇಲ್ಲ ಬಿಡಿ... ಇದೀಗ ಅನಿವಾರ್ಯವಾಗಿದ್ದು, ನಮ್ಮ ದಿನನಿತ್ಯದ ಭಾಗವೇ  ಆಗಿಹೋಗಿದೆ. ಅಷ್ಟಕ್ಕೂ ಮಹಿಳೆಯರನ್ನು ಭಾರತದಲ್ಲಿ  ಗೌರವದಿಂದ ಕರೆಯುವ ಸುಂದರ ಶಬ್ದವೊಂದಿದೆ. ಅದೇ ದೇವಿಜಿ. ಅಮಿತಾಭ್​ ಬಚ್ಚನ್​ ಅವರು ತಮ್ಮ ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಇದನ್ನು ಪ್ರತಿನಿತ್ಯವೂ ಹೇಳುತ್ತಲೇ ಇರುತ್ತಾರೆ. ಆದರೆ ಯಾವುದಾದರೂ ಮಹಿಳೆಯರಿಗೆ ಅದರಲ್ಲಿಯೂ ಸ್ವಲ್ಪ ಹೈಫೈ ಎನ್ನಿಸಿಕೊಂಡವರಿಗೆ ದೇವಿಜಿ ಎಂದು ಕರೆದರೆ, ಪರಿಸ್ಥಿತಿ ಹೇಗೆ ಆಗಬಹುದು ಎನ್ನುವುದು ಬೇರೆ ಹೇಳಬೇಕಾಗಿಲ್ಲ ಬಿಡಿ.  

ರಾಹುಲ್‌ ಗಾಂಧಿ ಜೊತೆ ಕರೀನಾಗೆ ಡೇಟಿಂಗ್‌ ಆಸೆ! ಫೋಟೋ ನೋಡಿ ಫಿದಾ ಆಗಿದ್ದ ನಟಿಯ ಮಾತು ಕೇಳಿ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!