
ಕೆಲ ದಿನಗಳ ಹಿಂದಷ್ಟೇ ಅಮೆರಿಕನ್ ಮಹಿಳೆಯೊಬ್ಬರು ಅಮೆರಿಕದವರು ಇಷ್ಟ ಪಡದ ಅಥವಾ ಅಮೆರಿಕನ್ನರಿಗೆ ತೀವ್ರ ಇರಿಸು ಮುರಿಸು ಉಂಟಾಗುವ ಭಾರತೀಯರ ಕೆಲವು ನಟವಳಿಕೆ, ಹವ್ಯಾಸ, ಸಂಪ್ರದಾಯಗಳ ಬಗ್ಗೆ ಹೇಳಿಕೊಂಡಿದ್ದರು. ಅದರಲ್ಲಿ ಮದುವೆಯ ನಂತರ ಅತ್ತೆ ಮಾವನೊಂದಿಗೆ ಇರುವುದರಿಂದ ಹಿಡಿದು ಟಾಯ್ಲೆಟ್‌ನಲ್ಲಿ ಟಿಶ್ಯೂವಿನ ಬದಲು ನೀರನ್ನು ಬಳಸುವುದು ಕೂಡ ಸೇರಿತ್ತು. ಈಗ ಮತ್ತೊಬ್ಬಳು ಅಮೆರಿಕನ್ ಮಹಿಳೆ ಭಾರತದಲ್ಲಿರುವ ಹಾಗೂ ಅವು ಅಮೆರಿಕಾದಲ್ಲಿಯೂ ಕಡ್ಡಾಯವಾಗಿ ಇರಬೇಕು ಎಂದು ಅವರು ಬಯಸುವ 10 ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಮೂರು ಮಕ್ಕಳ ತಾಯಿಯಾಗಿರುವ ಭಾರತದಲ್ಲಿ ವಾಸಿಸುತ್ತಿರುವ ಕ್ರಿಸ್ಟನ್ ಫಿಷರ್ ಎಂಬ ಈ ಅಮೆರಿಕನ್ ಮಹಿಳೆ ಭಾರತದಲ್ಲಿ ಇರುವಂತಹ 10 ವಿಚಾರಗಳು ಅಮೆರಿಕದಲ್ಲೂ ಇರಬೇಕಿತ್ತು ಎಂದು ವಿವರಿಸಿದ್ದಾರೆ. ಆ 10 ವಿಚಾರಗಳು ಯಾವುದು ಎಂದು ನೋಡೋಣ. ಸುಮಾರು 4 ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿರುವ ಕ್ರಿಸ್ಟನ್ ಫಿಷರ್ ಇನ್ಸ್ಟಾಗ್ರಾಮ್‌ನಲ್ಲಿ 10 ವಿಚಾರಗಳ ಉದ್ದನೇಯ ಲಿಸ್ಟ್ ಮಾಡಿದ್ದಾರೆ.
ಯುಪಿಐ ಪೇಮೆಂಟ್
ಭಾರತ ಹಲವು ವರ್ಷಗಳ ಹಿಂದೆಯೇ ಡಿಜಿಟಲ್ ಇಂಡಿಯಾಗೆ ತೆರೆದುಕೊಂಡಿದ್ದು, ಪ್ರತಿಯೊಬ್ಬರು ಅನ್‌ಲೈನ್ ಮೂಲಕವೇ ಪೇಮೆಂಟ್ ಮಾಡುತ್ತಾರೆ. ಪ್ರತಿಯೊಬ್ಬ ಶಾಪ್ ಮಾಲೀಕರ ಬಳಿಯೂ ಇಂದು ಅನ್‌ಲೈನ್ ಪೇಮೆಂಟ್ ಆಯ್ಕೆ ಇದೆ. ಆದರೆ ಮುಂದುವರೆದ ರಾಷ್ಟ್ರವಾದರೂ ಅಮೆರಿಕಾದಲ್ಲಿ ಈ ಸೌಲಭ್ಯವಿಲ್ಲವಂತೆ. ಹೀಗಾಗಿ ಅಮೆರಿಕಾದಲ್ಲೂ ತಾನು ಡಿಜಿಟಲ್ ಐಡಿಗಳು ಮತ್ತು ಯುಪಿಐ ಇರಬೇಕೆಂದು ಬಯಸುತ್ತೇನೆ ಇದರಿಂದ ತಾನು ಕೇವಲ ಮೊಬೈಲ್ ಹಿಡಿದುಕೊಂಡು ಹೊರಗೆ ಹೋಗಬಹುದು ಎಂದು ಆಕೆ ಹೇಳಿದ್ದಾರೆ. ಈ ಯುಪಿಐ ಸೇವೆಯನ್ನು ಇಡೀ ಜಗತ್ತು ಅಳವಡಿಸಿಕೊಳ್ಳಬೇಕು ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅಗ್ಗದ ಆಟೋ ಸೇವೆ
ಹಾಗೆಯೇ ಆಕೆ ಭಾರತದಲ್ಲಿ ಇಷ್ಟ ಪಡುವ ಮತ್ತೊಂದು ವಿಚಾರವೆಂದರೆ ಆಟೋ, ಅಗ್ಗದ, ವೇಗದ ಮತ್ತು ತುಂಬಾ ಅನುಕೂಲಕರ ಮಾರ್ಗ ಆಟೋಗಳು ಮತ್ತು ರಿಕ್ಷಾಗಳ ಲಭ್ಯತೆ. ಅಮೆರಿಕಾದಲ್ಲಿ ಇಷ್ಟೊಂದು ಅಗ್ಗವಾಗಿ ಆಟೋಗಳು ಲಭ್ಯವಿಲ್ಲವಂತೆ.
ವೈದ್ಯರ ಸೇವೆ
ಭಾರತದಲ್ಲಿ ವೈದ್ಯರನ್ನು ಹುಡುಕುವುದು ತುಂಬಾ ಸುಲಭದ ಕೆಲಸವಂತೆ, ಹೆಚ್ಚಿನ ಸಮಯದಲ್ಲಿ ಯಾವುದೇ ಅಪಾಯಿಂಟ್‌ಮೆಂಟ್‌ಗಳು ಇಲ್ಲದೇ ವೈದ್ಯರು ಸಿಗುತ್ತಾರೆ ಮತ್ತು ಔಷಧಿಗಳು ಹಾಗೂ ಯಾವುದೇ ಪ್ರಿಸ್ಕ್ರಿಪ್ಷನ್‌ಗಳ ಅಗತ್ಯವಿಲ್ಲದೇ ಔಷಧಗಳು ಸಿಗುತ್ತವೆ. ಆದರೆ ಅಮೆರಿಕಾದಲ್ಲಿ, ವೈದ್ಯರನ್ನು ನೋಡಲು ನೀವು ವಾರಗಳು ಅಥವಾ ತಿಂಗಳುಗಳ ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ತ್ಯಾಜ್ಯ ವಿಲೇವಾರಿ
ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಸರ್ಕಾರವೇ ತ್ಯಾಜ್ಯ ವಿಲೇವಾರಿ ಮಾಡುತ್ತದೆ ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಅವರು ಅಮೆರಿಕದಲ್ಲಿ ಕಸ ತೆರವಿಗಾಗಿ ತಾವು ಸಾಕಷ್ಟು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಭಾರಿ ಮೊತ್ತಕ್ಕೆ ಸೇಲ್ ಆದ ಅಮೆರಿಕಾ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯ ಚಡ್ಡಿ
ಕಾರ್ಮಿಕರ ಲಭ್ಯತೆ
ಭಾರತದಲ್ಲಿ ಪರಿಣಿತ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಮತ್ತು ಅವರ ಸಹಾಯ ಪಡೆಯುವುದು ತುಂಬಾ ಸುಲಭ. ಆದರೆ ಅಮೆರಿಕಾದಲ್ಲಿ ನಿಮ್ಮ ಕೆಲಸವನ್ನು ನೀವೇ ಮಾಡಬೇಕು ಹಾಗೂ ಅದು ಹೇಗೆ ಮಾಡಬೇಕೆಂದು ನೀವೇ ತಿಳಿದುಕೊಳ್ಳಬೇಕು ಏಕೆಂದರೆ ಅಮೆರಿಕಾದಲ್ಲಿ ಜನರನ್ನು ನೇಮಿಸಿಕೊಳ್ಳುವುದು ತುಂಬಾ ದುವಾರಿ.
ಸಸ್ಯಾಹಾರಿ ಆಹಾರದಲ್ಲಿನ ದೊಡ್ಡ ವೈವಿಧ್ಯತೆ
ಭಾರತದಲ್ಲಿ ಲಭ್ಯವಿರುವ ಆಹಾರಗಳ ವೈವಿಧ್ಯತೆಯನ್ನು ಮತ್ತು ಸಸ್ಯಾಹಾರಿ ಆಹಾರಗಳಲ್ಲಿಯೂ ಇರುವ ದೊಡ್ಡ ವೈವಿಧ್ಯಮಯ ಆಯ್ಕೆಯನ್ನು ಅವರು ಬಹಳ ಇಷ್ಟಪಟ್ಟರು. ಭಾರತದಲ್ಲಿ ಹಲವರು ರೆಸ್ಟೋರೆಂಟ್‌ಗಳಲ್ಲಿ ಕೇವಲ ಸಸ್ಯಹಾರದ ಆಹಾರವನ್ನು ಮಾತ್ರ ನೀಡುತ್ತಾರೆ ಹಾಗೂ ಕೆಲವು ಮಾಂಸಾಹಾರಿ ರೆಸ್ಟೋರೆಂಟ್‌ಗಳಲ್ಲಿ ಸಸ್ಯಾಹಾರದ ಆಯ್ಕೆಯೂ ಇದೆ. ಆದರೆ ಅಮೆರಿಕಾದಲ್ಲಿ ಸಸ್ಯಹಾರಿಗಳಿಗೆ ಆಹಾರದ ಆಯ್ಕೆಗಳೇ ಇಲ್ಲ, ಇದ್ದರೂ ತೀರಾ ಕಡಿಮೆ ಎಂದು ಅವರು ಮಾಹಿತಿ ನೀಡಿದರು.
ಫುಡ್ ಡೆಲಿವರಿ ಆಪ್‌ಗಳು
ಹಾಗೆಯೇ ಡೆಲಿವರಿ ಆಪ್‌ಗಳ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಆಹಾರ ಪೂರೈಕೆ ಆಪ್‌ಗಳು ಭಾರತದಲ್ಲಿರುವ ಅತ್ಯಂತ ಅನುಕೂಲಕರ ವಿಷಯಗಳಲ್ಲಿ ಒಂದಾಗಿದೆ. ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ವಾಸ್ತವಿಕವಾಗಿ ಏನೂ ಬೇಕಾದರೂ ತಲುಪಿಸುವ ಡಜನ್‌ಗಟ್ಟಲೆ ಅಪ್ಲಿಕೇಶನ್‌ಗಳಿವೆ ಎಂದು ಅವರು ಹೇಳಿದ್ದಾರೆ. ಅಮೆರಿಕನ್ ಉದ್ಯಮಿಯಾಗಿ 20 ವರ್ಷಗಳ ಕಾಲ ಭಾರತದಲ್ಲಿ ವಾಸ ಮಾಡಿದ ನಂತರ ಇಲ್ಲಿರುವ ಉತ್ತಮ ಅವಕಾಶಗಳನ್ನು ತಿಳಿದು ಪತಿ ಹಾಗೂ ಮಕ್ಕಳೊಂದಿಗೆ ಭಾರತಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. ಹೀಗಾಗಿ 2017ರಲ್ಲಿ ಭಾರತಕ್ಕೆ ಬಂದಿದ್ದು, ಭಾರತ ತಮ್ಮಿಷ್ಟದ ದೇಶ ಎಂದು ಹೇಳಿದ್ದು, ಈಗ ತಮ್ಮ ಮೂವರು ಮಕ್ಕಳನ್ನೂ ಇಲ್ಲೇ ಬೆಳೆಸುತ್ತಿದ್ದಾರೆ. ಇವರು ವೆಬ್ ಅಭಿವೃದ್ಧಿ ಕಂಪನಿಯನ್ನು ನಡೆಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.