ಮಧ್ಯಪ್ರದೇಶದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ

By Vinutha Perla  |  First Published Sep 30, 2023, 3:23 PM IST

ಮುಟ್ಟಿನ ಸಮಯದಲ್ಲಿ ಹೆಣ್ಣು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಾಳೆ. ಹೊಟ್ಟೆನೋವು, ಮೈ ಕೈ ನೋವಿನ ಜೊತೆ ಮೂಡ್ ಸ್ವಿಂಗ್ಸ್ ಸಹ ಉಂಟಾಗುತ್ತದೆ. ಇದನ್ನು ಮನಗಂಡ ಜಬಲ್ಪುರದ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (DNLU) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿದೆ.


ಮುಟ್ಟಿನ ಸಮಯದಲ್ಲಿ ಹೆಣ್ಣು ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಾಳೆ. ಹೊಟ್ಟೆನೋವು, ಮೈ ಕೈ ನೋವಿನ ಜೊತೆ ಮೂಡ್ ಸ್ವಿಂಗ್ಸ್ ಸಹ ಉಂಟಾಗುತ್ತದೆ. ಹೀಗಾಗಿ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ಕಾಲೇಜು ಹಾಗೂ ಕಚೇರಿಗಳಲ್ಲಿ ತೊಂದರೆ ಅನುಭವಿಸುತ್ತಾರೆ. ಹೀಗಾಗಿಯೇ ಇತ್ತೀಚಿಗೆ ಹಲವೆಡೆ ಮುಟ್ಟಿನ ರಜೆಯನ್ನು ನೀಡಲಾಗ್ತಿದೆ. ಈ ಹಿಂದೆ ಕೇರಳ ಸರ್ಕಾರ ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಹಾಗೂ ಹೆರಿಗೆ ರಜೆ ಘೋಷಿಸಿತ್ತು. ಸದ್ಯ ಜಬಲ್ಪುರದ ಧರ್ಮಶಾಸ್ತ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (DNLU) ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿದೆ.

ಶಾಲಾ ಆಡಳಿತ ಮಂಡಳಿ ಹೊರಡಿಸಿದ ಸುತ್ತೋಲೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ, ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ಗೆ 36 ಉಪನ್ಯಾಸಗಳಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಹೊಸ ನೀತಿಯೊಂದಿಗೆ, DNLUನ ಮಹಿಳಾ ವಿದ್ಯಾರ್ಥಿಗಳು ಋತುಚಕ್ರದ ಸಮಯದಲ್ಲಿ ಹೆಚ್ಚುವರಿ ರಜೆಯನ್ನು ಪಡೆಯಬಹುದು. ಕಾಲೇಜಿನ ಪ್ರಿನ್ಸಿಪಾಲ್‌ ರಜೆಗಳನ್ನು ಅನುಮೋದಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

Tap to resize

Latest Videos

Menstrual Leave: ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದ ಸುಪ್ರೀಂಕೋರ್ಟ್‌

ಆರಂಭದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಲು ಭಾರೀ ವಿರೋಧ ಕೇಳಿ ಬಂದಿತ್ತು. ಪ್ರತಿಯೊಬ್ಬರು ಮುಟ್ಟಿನ ಬಗ್ಗೆ ಹೆಚ್ಚು ಮುಕ್ತವಾಗಿ ಮಾತನಾಡದ ಕಾರಣ, ವಿದ್ಯಾರ್ಥಿಗಳಲ್ಲಿ ತಾರತಮ್ಯಕ್ಕೆ ಕಾರಣವಾಗುತ್ತದೆ ಅನ್ನೋ ಕಾರಣಕ್ಕೆ ಮುಟ್ಟಿನ ರಜೆ ನೀಡಬಾರದು ಎಂದು ನಿರ್ಧರಿಸಲಾಗಿತ್ತು.

ನಂತರ ಈ ಹಿಂದೆ ಎಸ್‌ಬಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾರ್ತಿಕ್ ಜೈನ್ (2022-23ರಲ್ಲಿ) ಮುಟ್ಟಿನ ರಜೆಯ ನೀತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು. ಡಿಎನ್‌ಎಲ್‌ಯು ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಮಾತ್ರ ಈ ಉಪಕ್ರಮವು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. 

ಉದ್ಯೋಗಸ್ಥ ಮಹಿಳೆಯರಿಗೆ ಪಿರಿಯಡ್ಸ್ ಲೀವ್ ನೀಡಬೇಕೆ? ಬೇಡವೇ? ಏನಂತೀರಿ

ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಈಗ ಆಡಳಿತವು ಜಾರಿಗೆ ತಂದಿದೆ. ವಿದ್ಯಾರ್ಥಿಗಳಿಗೆ ಧ್ವನಿ-ದೃಶ್ಯ ಕಲಿಕೆಯನ್ನು ಪರಿಚಯಿಸುವ ಮೊದಲ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡ ತಿಂಗಳುಗಳ ನಂತರ ಜಬಲ್‌ಪುರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಈ ಹೊಸ ನೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

click me!