ಕ್ಯಾನ್ಸರ್‌ಗೆ ಸಾವೇ ಪರಿಹಾರವಲ್ಲ.. ಭಾರತೀಯ ಮಹಿಳೆ ಎಚ್ಚೆತ್ತರೆ ಗೆಲುವು ಸಾಧ್ಯ

By Roopa Hegde  |  First Published Sep 28, 2023, 12:14 PM IST

ಭಾರತದಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಇದ್ರಲ್ಲಿ ಮಹಿಳೆಯರು ಹೆಚ್ಚಿದ್ದಾರೆ ಅಂತಾ ನಾವು ಹೇಳ್ತಿರುತ್ತೇವೆ. ಆದ್ರೆ ಇದಕ್ಕೆ ಕಾರಣವೇನು, ಪರಿಹಾರ ಹೇಗೆ ಎಂಬ ಬಗ್ಗೆ ಆಲೋಚನೆ ನಡೆಸೋದಿಲ್ಲ. ಕ್ಯಾನ್ಸರ್ ಸಾವಿನ ದವಡೆಯಿಂದ ಹೊರಬರಲು ದಾರಿಯಿದೆ.
 


ಕ್ಯಾನರ್, ಗುಣಪಡಿಸಲಾಗದ ಖಾಯಿಲೆ ಎಂದೇ ಜನರು ಪರಿಗಣಿಸಿದ್ದಾರೆ. ಕ್ಯಾನ್ಸರ್ ಹೆಸರು ಕೇಳ್ತಿದ್ದಂತೆ ಬೆಚ್ಚಿ ಬೀಳುವವರೇ ಹೆಚ್ಚು. ಅನೇಕ ಕ್ಯಾನ್ಸರ್ ಕೊನೆ ಹಂತದಲ್ಲಿ ಪತ್ತೆಯಾಗುತ್ತದೆ. ಮತ್ತೆ ಕೆಲ ಕ್ಯಾನ್ಸರ್ ಲಕ್ಷಣ ಮೊದಲೇ ಗೋಚರಿಸಿದ್ರೂ ಅದನ್ನು ನಿರ್ಲಕ್ಷ್ಯ ಮಾಡುವ ಕಾರಣ ಅದು ಸಾವಿನ ಕೊನೆಗೆ ತಂದು ನಿಲ್ಲಿಸುತ್ತೆ. ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅನೇಕ ಸಮೀಕ್ಷೆ, ಸಂಶೋಧನೆ, ಅಧ್ಯಯನಗಳು ನಡೆದಿವೆ. ಈಗ ಲ್ಯಾನ್ಸೆಟ್ ಇದ್ರ ಬಗ್ಗೆ ಅಧ್ಯಯನವೊಂದನ್ನು ನಡೆದಿದೆ. ಅದ್ರ ವರದಿ, ಭಾರತೀಯರು ಯೋಚಿಸುವಂತೆ ಮಾಡಿದೆ.

ಲ್ಯಾನ್ಸೆಟ್ (Lancet) ವರದಿ ಪ್ರಕಾರ, ಏಷ್ಯಾ (Asia)ದಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪುವ ಮಹಿಳೆಯರಲ್ಲಿ ಅತಿ ಹೆಚ್ಚು ಮಹಿಳೆಯರು ಭಾರತೀಯರು ಎಂಬ ವಿಷ್ಯ ಬಹಿರಂಗವಾಗಿದೆ. ಭಾರತದಲ್ಲಿ ಕ್ಯಾನ್ಸರ್ (Cancer) ನಿಂದ ಆಗ್ತಿರುವ ಮಹಿಳೆಯರ ಸಾವಿನಲ್ಲಿ ಶೇಕಡಾ 68ರಷ್ಟು ಸಾವನ್ನು ತಡೆಯಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ವುಮೆನ್ ಪವರ್ ಆಂಡ್ ಕ್ಯಾನ್ಸರ್ ಹೆಸರಿನಲ್ಲಿ ಈ ಅಧ್ಯಯನ ನಡೆದಿದೆ. ಭಾರತದಲ್ಲಿ ಮಹಿಳೆಯರು ಕ್ಯಾನ್ಸರ್ ಬಗ್ಗೆ ಜಾಗೃತರಾದ್ರೆ, ಅದ್ರ ಲಕ್ಷಣಗಳನ್ನು ಅವರು ತಿಳಿದುಕೊಂಡ್ರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆ ಒಳಗಾದ್ರೆ ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ಸಿಕ್ಕಲ್ಲಿ, ಕ್ಯಾನ್ಸರ್ ನಿಂದ ಬಳಲುವ ಅನೇಕ ಮಹಿಳೆಯರ ಜೀವ ಉಳಿಸಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

Tap to resize

Latest Videos

HEALTH TIPS: ಪಿರಿಯಡ್ಸ್ ನಂತರ ದಿನಗಳಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಧಾರಣೆ ಅಪಾಯ ಇಲ್ವಾ?

ಭಾರತದಲ್ಲಿ ಕ್ಯಾನ್ಸರ್ ನಿಂದ ಮಹಿಳೆಯರು ಸಾಯಲು ಇದು ಕಾರಣ : ಕ್ಯಾನ್ಸರ್ ಸಾವಿನ ವಿಷ್ಯದಲ್ಲಿ ಏಷ್ಯಾದಲ್ಲಿಯೇ ಮೊದಲ ಸ್ಥಾನದಲ್ಲಿರುವ ಭಾರತದಲ್ಲಿ ಕ್ಯಾನ್ಸರ್ ಬಗ್ಗೆ ಸರಿಯಾದ ಜಾಗೃತಿ ಮೂಡಿಸಲಾಗ್ತಿಲ್ಲ. ಮಹಿಳೆಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯದ ವಾತಾವರಣವಿದೆ. ಅರಿವಿನ ಕೊರತೆ, ಪ್ರಾಥಮಿಕ ಹಂತದಲ್ಲಿ ಕಾಳಜಿ ಮತ್ತು ಅನುಭವದ ಕೊರತೆಯಿಂದಾಗಿ ಕ್ಯಾನ್ಸರ್‌ನಿಂದಾಗಿ ಮಹಿಳೆಯರ ಸಾವಿನ ಸಂಖ್ಯೆ ಭಯಾನಕ ಮಟ್ಟಕ್ಕೆ ಏರುತ್ತಿದೆ. ಒಂದ್ವೇಳೆ ಮೊದಲೇ ಈ ಎಲ್ಲ ಸಮಸ್ಯೆಗೆ ಪರಿಹಾರ ಸಿಕ್ಕಿದ್ದಲ್ಲಿ ಈ ಸಾವುಗಳಲ್ಲಿ 6.9 ಶತಕೋಟಿ ಸಾವುಗಳನ್ನು ತಡೆಯಬಹುದಿತ್ತು.4.10 ಶತಕೋಟಿ ಮಹಿಳೆಯರಿಗೆ ಸರಿಯಾಗಿ ಚಿಕಿತ್ಸೆ ನೀಡಬಹುದಿತ್ತು ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಲೈಂಗಿಕ ಸ್ವಾತಂತ್ರ್ಯ ಇರೋ ಈ ಮಹಿಳೆಯರು ಜೀವನದಲ್ಲಿ ಒಂದೇ ದಿನ ಸ್ನಾನ ಮಾಡೋದಂತೆ!

ಆರೋಗ್ಯ ವಿಷ್ಯದಲ್ಲಿ ಲಿಂಗ ಅಸಮಾನತೆ ಮುಖ್ಯ ಕಾರಣ : ಲ್ಯಾನ್ಸೆಟ್ ಅಧ್ಯಯನದಲ್ಲಿ ಮುಂಬೈನ ಕ್ಯಾನ್ಸರ್ ಪೀಡಿತ ಮಹಿಳೆ ಕೇಸ್ ಸ್ಟಡಿ ಮಾಡಲಾಗಿದೆ. ಇದ್ರಲ್ಲಿ, ಮಹಿಳೆಯರಲ್ಲಿ ಹೆಚ್ಚು ಕ್ಯಾನ್ಸರ್ ಕಾಣಿಸಿಕೊಳ್ಳಲು ಹಾಗೂ ಸಾವಿಗೆ ಲಿಂಗ ಅಸಮಾನತೆಯೂ ಕಾರಣ ಎನ್ನಲಾಗಿದೆ. ಮಹಿಳೆಯರು ಸ್ವತಃ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ, ಅವರ ಆರೋಗ್ಯವು ಅವರ ಆದ್ಯತೆಯಲ್ಲ. ಅವರು ತಮ್ಮ ಹದಗೆಡುತ್ತಿರುವ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ.  ಇದಲ್ಲದೆ ಕೌಟುಂಬಿಕ ದೌರ್ಜನ್ಯ ಮತ್ತು ಬಡತನ ಕೂಡ ಮಹಿಳೆಯರು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯದೆ ಇರಲು ಕಾರಣವಾಗಿದೆ.

ಮುಂಬೈನ ನಾಲಾ ಸೊಪಾರದ ಮಹಿಳೆಗೆ ಬಹಳ ದಿನಗಳಿಂದ ವಿಪರೀತ ತಲೆನೋವು ಕಾಣಿಸಿಕೊಳ್ತಿತ್ತು. ಅದು ಕ್ಯಾನ್ಸರ್ ಲಕ್ಷಣ ಎಂಬುದು ಮಹಿಳೆಗೆ ತಿಳಿದಿರಲಿಲ್ಲ. ಆಕೆಯ ಮದ್ಯವ್ಯಸನಿ ಪತಿ ಇದ್ರ ಬಗ್ಗೆ ನಿರ್ಲಕ್ಷ್ಯ ತೋರಿದ್ದ. ಮಹಿಳೆ ಅನೇಕ ಬಾರಿ ತನ್ನ ತಲೆನೋವಿನ ಬಗ್ಗೆ ದೂರು ನೀಡಿದ್ರೂ ಆತ ಅದಕ್ಕೆ ಚಿಕಿತ್ಸೆ ಕೊಡಿಸುವ ಪ್ರಯತ್ನ ನಡೆಸಿರಲಿಲ್ಲ. ಸ್ಥಳೀಯ ವೈದ್ಯರು ಕೂಡ ಕಣ್ಣಿನ ಕಾರಣ ಹೇಳಿ ಮಾತ್ರೆ ನೀಡಿದ್ದರು. ಕೊನೆಯಲ್ಲಿ ಆಕೆ ಮಾವ, ಸೂಕ್ತ ವೈದ್ಯರ ಬಳಿ ತೋರಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಮನಿಸಿದ ಲ್ಯಾನ್ಸೆಟ್, ಲಿಂಗ ಅಸಮಾನತೆ ಮುಖ್ಯ ಕಾರಣ ಎಂದಿದೆ. ಭಾರತದ ಮಹಿಳೆಯರು ಹೆಚ್ಚಾಗಿ ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಾರೆ. 
 

click me!