ಇಂಥಾ ಗಂಡನ ಜೊತೆ ಜೀವನ ಮಾಡುವುದು ತುಂಬಾ ಕಷ್ಟ; ಸುಧಾಮೂರ್ತಿ ಹೀಗೆ ಹೇಳಿದ್ಯಾಕೆ?

By Vinutha Perla  |  First Published Jul 9, 2023, 12:33 PM IST

ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನಾಡಿನ ಹೆಮ್ಮೆ ಸುಧಾಮೂರ್ತಿಯವರ ಜೀವನದ ಘಟನೆಗಳು ಆಗಾಗ ಸುದ್ದಿಯಲ್ಲಿರುತ್ತವೆ. ಎಲ್ಲರಿಗೂ ಪ್ರೇರಣೆಯೆನಿಸುತ್ತದೆ. ಆದರೆ ಸದ್ಯ ಸುಧಾಮೂರ್ತಿ, ಯಶಸ್ವಿ ಗಂಡನ ಹೆಂಡತಿ ಆಗಿರೋದು ತುಂಬಾ ಕಷ್ಟ ಎಂದು ಹೇಳಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.


ನ್ಯಾಶನಲ್ ನಾನಿ ಅಂತಲೇ ಎಲ್ಲರಿಂದ ಕರೆಯಲ್ಪಡುವ ಸುಧಾಮೂರ್ತಿ ತನ್ನ ಹಾಗೂ ನಾರಾಯಣ ಮೂರ್ತಿಯವರ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅಂದರೆ ದೇಶ ಮಾತ್ರ ಅಲ್ಲ ಇದೀಗ ಅವರಿಗೆ ವಿದೇಶಗಳಲ್ಲೂ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಸಾಮಾನ್ಯ ದೃಷ್ಟಿಯಲ್ಲಿ ನೋಡಿದರೆ ಸುಧಾಮೂರ್ತಿ ಅವರದು ಈಗ ಬಂಗಾರದಂಥಾ ಲೈಫು. ಇಂಗ್ಲೆಂಡ್‌ ಪ್ರಧಾನಿಯೇ ಅವರ ಅಳಿಯ, ಮಗನೂ ಉತ್ತಮ ಸ್ಥಾನದಲ್ಲಿದ್ದಾರೆ. ಸುಧಾ ಮಾತ್ರ ಅಲ್ಲ, ಅವರ ಪತಿ ಇನ್‌ಫೋಸಿಸ್ ಮೂಲಕ ದೇಶದಲ್ಲಿ ಐಟಿ ಶಕೆ ಆರಂಭಿಸಿದ ನಾರಾಯಣ ಮೂರ್ತಿ ಅಂದರೆ ಇಡೀ ದೇಶವೇ ಗೌರವಿಸುತ್ತದೆ. ಸುಧಾಮೂರ್ತಿಯವರ ಮಾತುಗಳು ಅದೆಷ್ಟೋ ಮಂದಿಯ ಬದುಕಿಗೆ ಪ್ರೇರಣೆಯಾಗಿದೆ. ಆದರೆ ಸದ್ಯ ಸುಧಾಮೂರ್ತಿ, ಯಶಸ್ವಿ ಗಂಡನ ಹೆಂಡತಿ ಆಗಿರೋದು ತುಂಬಾ ಕಷ್ಟ ಎಂದು ಹೇಳಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾರೆ.

ಹೌದು, ಸುಧಾ ಮೂರ್ತಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಮನಿ ಕಂಟ್ರೋಲ್ ಸ್ಟಾರ್ಟ್ಅಪ್ ಕಾನ್ಕ್ಲೇವ್ 2023ರಲ್ಲಿ ಮಾತನಾಡಿದ ಸಂದರ್ಭ ಈ ಮಾತನ್ನು ಹೇಳಿದ್ದಾರೆ. ಕಾನ್‌ಕ್ಲೇವ್‌ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪುತ್ರ ರೋಹನ್ ಮೂರ್ತಿ ಭಾರತದಲ್ಲಿ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ಇದರಲ್ಲಿ, ನಾರಾಯಣ ಮೂರ್ತಿ ಅವರು ತಮ್ಮ ಜೀವನಪೂರ್ತಿ ಬೆಂಬಲ ನೀಡಿದ್ದಕ್ಕಾಗಿ ತಮ್ಮ ಹೆಂಡತಿಯನ್ನು ಹೊಗಳಿದ್ದಾರೆ.

Tap to resize

Latest Videos

43 ವರ್ಷಗಳ ಹಿಂದಾದ ಆ ಘಟನೆ ಸುಧಾಮೂರ್ತಿ, ನಾರಾಯಣ ಮೂರ್ತಿ ಬದುಕನ್ನೇ ಬದಲಿಸಿತು!

ಯುವ ಉದ್ಯಮಿಗಳ ಪತ್ನಿಗಳಿಗೆ ಸುಧಾಮೂರ್ತಿ ಕಿವಿಮಾತು
ಆ ನಂತರ ಮಾತನಾಡಿದ ಸುಧಾಮೂರ್ತಿ, 'ಹೆಚ್ಚು ಯಶಸ್ವಿ ವ್ಯಕ್ತಿಯೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ ಎಂದು ನಾನು ಎಲ್ಲಾ ಯುವ ಉದ್ಯಮಿಗಳ ಪತ್ನಿಗಳಿಗೆ (Bussiness mans wife)  ಇದನ್ನು ಹೇಳಲು ಬಯಸುತ್ತೇನೆ. ಅವರು ಸಾಮಾನ್ಯವಾಗಿರುವುದಿಲ್ಲ, ವಿಲಕ್ಷಣವಾಗಿರುತ್ತಾರೆ. ಅವರಿಗೆ ಕಚೇರಿಯಲ್ಲಿ ಮಾತ್ರ ರೂಲ್ಸ್‌ ಇರುತ್ತದೆ' ಎಂದು ಹೇಳಿದರು. ಇದಕ್ಕೆ ಸಭಿಕರೆಲ್ಲರೂ ಮುಗುಳ್ನಗೆ ಬೀರಿದರು. 

'ನಾನು ಯುವ ಉದ್ಯಮಿಗಳಿಗೆ ಹೇಳುವುದು ಇಷ್ಟೆ. ಯಶಸ್ವಿ ಪುರುಷನ ಹೆಂಡತಿ (Wife) ಆಗಿ ಇರುವುದು ತುಂಬಾ ಕಷ್ಟ. ಏಕೆಂದರೆ ಅವರು ತಮ್ಮ ಪತ್ನಿಯನ್ನು ಮ್ಯಾನೇಜರ್, ಸೆಕ್ರೆಟರಿ, ಸಲಹೆಗಾರ್ತಿ, ಫೈನಾನ್ಸರ್ ಹೀಗೆ ಏನೇನೋ ಆಗಿರಬೇಕು ಎಂದು ಬಯಸುತ್ತಾರೆ. ಒಂದರಲ್ಲಿ ಸೋತರೂ ಅವರ ಮೇಲೆಯೇ ತೀವ್ರ ಪರಿಣಾಮ ಬೀರುತ್ತದೆ' ಎಂದು ಸುಧಾಮೂರ್ತಿ ಹೇಳಿದರು. ಯಶಸ್ವಿ ಉದ್ಯಮಿ ಯಾವತ್ತೂ ಮನೆಯಲ್ಲಿ ಸಹಜವಾಗಿ ಇರುವುದೇ ಇಲ್ಲ. ಅವರು ಅತ್ಯಂತ ಕ್ರಿಯಾಶೀಲರಾಗಿ ಕಚೇರಿಯಲ್ಲಿ ಇರುತ್ತಾರೆ. ಆದರೆ ಮನೆಯಲ್ಲಿ ಹಾಗೆ ಇರುವುದಿಲ್ಲ. ಅವರಿಗೆ ಮನೆಯಲ್ಲಿ ಯಾವುದೇ ವಿಷಯ ಇರುವುದಿಲ್ಲ. ಆದರೆ ಕಚೇರಿಯಲ್ಲಿ (Office) ಎಲ್ಲವೂ ಇರುತ್ತದೆ ಎಂದು ಅವರು ಹೇಳಿದರು.

Life Lessons: ಸುಧಾಮೂರ್ತಿಯವರ ಅದ್ಭುತ ಜೀವನ ಪಾಠಗಳು

ಉದ್ಯಮಿಯ ಪತ್ನಿ ತುಂಬಾ ಶಕ್ತಿಶಾಲಿ ಆಗಿರುವುದು ಅವಶ್ಯಕ
ಮಹಿಳೆ ಈ ಎಲ್ಲಾ ಕೆಲಸಗಳನ್ನು ಮಾಡಲು ಪುರುಷರಿಗಿಂತ ಬಲಶಾಲಿಯಾಗಿರಬೇಕು. ನಾರಾಯಣಮೂರ್ತಿ ಕಚೇರಿಯಲ್ಲಿ ತುಂಬಾ ಪ್ರಭಾವಶಾಲಿ ಆಗಿರಬಹುದು. ಆದರೆ ಪ್ರತಿಯೊಬ್ಬ ಉದ್ಯಮಿಯ ಪತ್ನಿ ತುಂಬಾ ಶಕ್ತಿಶಾಲಿ ಆಗಿರುವುದು ಅವಶ್ಯಕ. ಅದರಲ್ಲೂ ಪತಿ (Husband)ಗಿಂತ ಪತ್ನಿ ಹೆಚ್ಚು ಮಾನಸಿಕವಾಗಿ ಶಕ್ತಿಶಾಲಿ ಆಗಿರಬೇಕು ಎಂದು ಸುಧಾಮೂರ್ತಿ ಸಲಹೆ ನೀಡಿದರು. ಯಶಸ್ವಿ ಗಂಡನ ಹೆಂಡತಿ ಆಗಿ ಹೊಂದಿಕೊಂಡು ಬಾಳುವುದು ತುಂಬಾ ಕಷ್ಟ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಬಗ್ಗೆ ಪತ್ನಿ ಸುಧಾಮೂರ್ತಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಿಳೆ ಹೆಚ್ಚು ಅವಧಿ ಕೆಲಸ ಮಾಡುವ ಶಕ್ತಿಯನ್ನು ಸಹಜವಾಗಿ ಹೊಂದಿರುತ್ತಾರೆ. ಆಕೆಗೆ ಅದು ಒಲಿದಿರುವ ಉಡುಗೊರೆ. ಒಬ್ಬ ಮಹಿಳೆ ಯಾವಾಗಲೂ ಉತ್ತಮ ಮ್ಯಾನೇಜರ್ ಮತ್ತು ಸಿಇಒ ಆಗಿರುತ್ತಾಳೆ. ಆಕೆ ಪತಿ ಹೇಳಿದ ಮಾತಿನ ಅರ್ಥವೇನು ಎಂದು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲಳು ಎಂದು ಸುಧಾಮೂರ್ತಿ ವಿವರಿಸಿದರು.

ಸುಧಾಮೂರ್ತಿ ಭಾಷಣಕ್ಕೆ ವೇದಿಕೆಯಲ್ಲಿದ್ದ ನಾರಾಯಣಮೂರ್ತಿ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ಆಕೆಯ ಜೊತೆ ಸ್ನೇಹಮಯವಾಗಿ ಇರುವ ಏಕೈಕ ವ್ಯಕ್ತಿ ಅಂದರೆ ನಾನು ಮಾತ್ರ. ಆಕೆ ನಂಬುವ ಏಕೈಕ ವ್ಯಕ್ತಿ ನಾನೆ. ಆಕೆ ನನಗೆ ನೀಡಿದ ಬೆಂಬಲ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

click me!