
ಆಹಾರದಲ್ಲಿ ವ್ಯತ್ಯಾಸವಾಗಬಾರದು, ಹೆಚ್ಚು ದೇಹ ದಣಿಯಬಾರದು, ಕುಳಿತಲ್ಲೇ ತೂಕ ಇಳಿಸಬೇಕು ಎನ್ನುವವರಿದ್ದಾರೆ. ಮತ್ತೆ ಕೆಲವರಿಗೆ ವ್ಯಾಯಾಮ ಅಥವಾ ಯೋಗ ಶುರು ಮಾಡಿದ ನಾಲ್ಕೇ ದಿನದಲ್ಲಿ ತೂಕ ಇಳಿಯಬೇಕು. ನೆನಪಿರಲಿ, ತ್ವರಿತವಾಗಿ ತೂಕ ಇಳಿಯಲು ಯಾವುದೇ ಮಾರ್ಗವಿಲ್ಲ. ಮೂರು ಹೊತ್ತು ಊಟ ಬಿಟ್ಟು ಡಯಟ್ ಅಂದ್ರೆ ಅದು ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ತೂಕ ಇಳಿಕೆ ಮಾತ್ರ ಮುಖ್ಯವಾಗಬಾರದು, ಆಆರೋಗ್ಯಕರವಾಗಿ ತೂಕ ಇಳಿಸುವುದಕ್ಕೆ ನೀವು ಮಹತ್ವ ನೀಡಬೇಕು. ಆಹಾರದಲ್ಲಿ ಸರಿಯಾದ ಬದಲಾವಣೆ ಮಾಡಿದಾಗ, ತೂಕವೂ ಕಡಿಮೆ ಮಾಡಬಹುದು.
ಮಹಿಳೆ (Woman) ಯರಿಗೆ ತೂಕ ಇಳಿಸಿಕೊಳ್ಳಲು ಪ್ರತಿ ದಿನ ಜಿಮ್ ಗೆ ಹೋಗಲು ಸಮಯವಿರುವುದಿಲ್ಲ. ಇಡೀ ದಿನ ಬ್ಯುಸಿಯಿರುವ ಮಹಿಳೆಯರು ಆಹಾರ (Food), ಊಟದಲ್ಲಿ ಬದಲಾವಣೆ ಮಾಡಿಕೊಂಡು ಆರಾಮವಾಗಿ ತೂಕ (Weight) ಇಳಿಸಬಹುದು. ನಾವಿಂದು ತೂಕ ಇಳಿಸುವ ಮಹಿಳೆಯರು ಯಾವ ಆಹಾರ ಕ್ರಮ ಪಾಲನೆ ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಅರೆ ತೆಂಗಿನಕಾಯಿ ಚಿಪ್ಪಿನ ಇದ್ದಿಲ ಪುಡಿಯೂ ಹೆಚ್ಚಿಸುತ್ತೆ ಬ್ಯೂಟಿ? ಬಳಸೋದು ಹೀಗೆ!
ಮೊದಲನೇಯದಾಗಿ ನೀವು 70:30ರ ಸೂತ್ರವನ್ನು ಪಾಲನೆ ಮಾಡಿ. 70:30 ಅಂದ್ರೆ 70 ರಷ್ಟು ಆಹಾರ ಮತ್ತು 30 ರಷ್ಟು ವ್ಯಾಯಾಮ. ಇದು ನಿಮ್ಮ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ. ಆಹಾರದಲ್ಲಿ ಉತ್ತಮ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಇರುವುದು ಮುಖ್ಯವಾಗುತ್ತದೆ. ಪೌಷ್ಟಿಕಾಂಶ ಭರಿತ ಆಹಾರ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಮೂರು ತಿಂಗಳ ಕಾಲ ನೀವು ಕೆಲ ಡಯಟ್ ಪಾಲನೆ ಮಾಡಿದ್ರೆ ಆರಾಮವಾಗಿ ಬೊಜ್ಜನ್ನು ಇಳಿಸಬಹುದು. ನಾವಿಂದು ಅದು ಯಾವುದು ಎಂಬುದನ್ನು ನಿಮಗೆ ಹೇಳ್ತೆವೆ.
ಬೆಳಿಗ್ಗೆ ಎದ್ದ ತಕ್ಷಣ ಮಾಡಿ ಈ ಕೆಲಸ : ಬೆಳಿಗ್ಗೆ ಬೇಗ ಏಳುವುದು ಬಹಳ ಮುಖ್ಯ. ಬೆಳಿಗ್ಗೆ 7 ಗಂಟೆ ಸುಮಾರಿ ನೀವು ನಿಂಬೆ ನೀರನ್ನು ಸೇವನೆ ಮಾಡಬೇಕು. ನಮ್ಮ ದೇಹದಲ್ಲಿ ಸಾಕಷ್ಟು ವಿಷ ಪದಾರ್ಥವಿದ್ದು, ಅದು ಹೋಗ್ಬೇಕೆಂದ್ರೆ ಈ ನಿಂಬೆ ನೀರು ಪರಿಣಾಮಕಾರಿ. ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಸೇವನೆ ಮಾಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದನ್ನು ನೀವು ಬದಲಿಸಬಹುದು. ಒಂದು ದಿನ ನಿಂಬೆ ನೀರು, ಒಂದು ದಿನ ಬೆಚ್ಚಗಿನ ನೀರು, ಇನ್ನೊಂದು ದಿನ ಅಜ್ವೈನ ನೀರು, ಮೆಂತೆ ನೀರು, ಹೀಗೆ ಬೇರೆ ಬೇರೆ ನೀರಿನ ಸೇವನೆ ಮಾಡಬಹುದು.
ಉಪಹಾರ ಮುಖ್ಯ : ಕೆಲವರು ತೂಕ ಇಳಿಸಿಕೊಳ್ಳಲು ಉಪಹಾರ ಸ್ಕಿಪ್ ಮಾಡ್ತಾರೆ. ಅದು ತಪ್ಪು. ಹಾಗೆಯೇ ಸರಿಯಾದ ಸಮಯಕ್ಕೆ ಉಪಹಾರ ಸೇವನೆ ಮಾಡಬೇಕು. ನೀವು ಬೆಳಿಗ್ಗೆ 8.30ರ ಒಳಗೆ ಉಪಹಾರ ತಿನ್ನಿ. ಅದ್ರಲ್ಲಿ ಬಾಟಲ್ ಸೋರೆಕಾಯಿ ಇರುವಂತೆ ನೋಡಿಕೊಳ್ಳಿ. ಚೀಸ್ ನೊಂದಿಗೆ ಅರ್ಧ ಕಪ್ ಮೊಸರು ಮತ್ತು ಒಂದು ಸೇಬು ಹಣ್ಣನ್ನು ನೀವು ತಿನ್ನಬಹುದು. ಇದಲ್ಲದೆ ಬ್ರೌನ್ ಬ್ರೆಡ್ ನ 2 ಸ್ಲೈಸ್, ಸ್ಯಾಂಡ್ವಿಚ್ ಕೂಡ ತಿನ್ನಬಹುದು. ಇದ್ರಲ್ಲಿರುವ ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಉಪಹಾರವನ್ನು ನೀವು ಬದಲಿಸಬಹುದು. 2 ಇಡ್ಲಿ , 2 ಗೋಧಿ ದೋಸೆ ಕೂಡ ನೀವು ತಿನ್ನಬಹುದು. ಉಪಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ನೀವು ಗ್ರೀನ್ ಟೀ ಸೇವನೆ ಮಾಡಿ.
ಮಧ್ಯಾಹ್ನ ಊಟ ಹೀಗಿರಲಿ : ಮಧ್ಯಾಹ್ನದ ಊಟ ಏನು ಮಾಡ್ತೀರಿ ಎನ್ನುವ ಜೊತೆಗೆ ಯಾವ ಸಮಯದಲ್ಲಿ ಮಾಡುತ್ತೀರಿ ಎನ್ನುವುದು ಮುಖ್ಯ. ನೀವು 1.30 ರೊಳಗೆ ಊಟ ಮುಗಿಸಬೇಕು. ಊಟಕ್ಕೆ ಲೆಮನ್ ರೈಸ್, ಸಾಂಬಾರ್ ಬಳಸಬಹುದು. ಮಿಕ್ಸ್ ವೆಜ್ ಜೊತೆಗೆ 2 ರೋಟಿ ಮತ್ತು ಅರ್ಧ ಬೌಲ್ ಬೇಳೆ ಸೇವನೆ ಮಾಡಬಹುದು. ರಾಗಿ ಇಡ್ಲಿ - ಸಾಂಬಾರ್, ಗೋಧಿ ವೆಜ್ ಗಂಜಿ ಮತ್ತು ಅರ್ಧ ಕಪ್ ಮೊಸರು ಕೂಡ ಸೇವನೆ ಮಾಡಬಹುದು. ಒಂದೇ ಊಟ ಬೇಸರವಾದ್ರೆ ಇದನ್ನು ಬದಲಿಸಬೇಕು.
ಮಸಾಲಾ ಟೀ : ನೀವು ನಾಲ್ಕು ಗಂಟೆ ಸುಮಾರಿ ಗ್ರೀನ್ ಟೀ ಅಥವಾ ಮಸಾಲಾ ಟೀ ಸೇವನೆ ಮಾಡಿ. ಮಸಾಲಾ ಟೀ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕೊಬ್ಬನ್ನು ಕರಗಿಸಲು ಇದು ಸಹಾಯಕಾರಿ.
ರಾತ್ರಿ ಊಟ : ರಾತ್ರಿ 7.30ರ ಆಸುಪಾಸಿಗೆ ನೀವು ಊಟ ಮಾಡುವುದು ಒಳ್ಳೆಯದು. ಊಟಕ್ಕೆ 1 ರೊಟ್ಟಿ ಮತ್ತು 1 ತರಕಾರಿ ಸೇವನೆ ಮಾಡಬಹುದು. ಸಲಾಡ್ ಇರಲಿ. ಆದ್ರೆ ರಾತ್ರಿ ಊಟವನ್ನು ಬಿಡಬೇಡಿ.
FITNESS TIPS : ಕಾಲೇಜು ಮುಗಿದ್ಮೇಲೆ ಚೆಂದಗಾಗಬೇಕಂದ್ರೆ ಹೀಗ್ ಮಾಡಿ!
ಊಟದ ನಂತ್ರ ಇದನ್ನು ಸೇವಿಸಿ : ರಾತ್ರಿ 9 ಗಂಟೆ ಸುಮಾರಿಗೆ ಅಂದ್ರೆ ನೀವು ಮಲಗುವ 1 ಗಂಟೆ ಮೊದಲು ದಾಲ್ಚಿನ್ನಿ,ಶುಂಠಿ ಅಥವಾ ನಿಂಬೆ ನೀರು ಇದ್ರಲ್ಲಿ ಯಾವುದನ್ನು ಬೇಕಾದ್ರೂ ಸೇವನೆ ಮಾಡಬಹುದು. ಊಟವಾದ ತಕ್ಷಣ ಕುಳಿತುಕೊಳ್ಳಬೇಡಿ. ಸ್ವಲ್ಪ ವಾಕಿಂಗ್ ಮಾಡಿ ನಂತ್ರ ಮಲಗಿ. ಈ ನಿಯಮವನ್ನು ನೀವು 3 ತಿಂಗಳು ಪಾಲನೆ ಮಾಡಿದ್ರೆ 15 ಕೆಜಿ ಇಳಿಯಬಹುದು ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.