ಹೆದ್ದಾರಿಯಲ್ಲೇ ಹೆರಿಗೆ, ಫೋನ್ ಚಾರ್ಜರ್‌ನಿಂದ ಹೊಕ್ಕುಳ ಬಳ್ಳಿ ಕಟ್ಟಿದ ತಂದೆ !

By Suvarna News  |  First Published Sep 18, 2022, 10:37 AM IST

ಗರ್ಭಿಣಿಯರಲ್ಲಿ ಹೆರಿಗೆ ನೋವು ಯಾವಾಗ ಕಾಣಿಸಿಕೊಳ್ಳುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಯಾಣಿಸುವಾಗ, ಯಾವುದೇ ಚಟುವಟಿಕೆಯಲ್ಲಿದ್ದಾಗ ಸಂಭವಿಸುತ್ತದೆ. ಹೀಗೆ ಹೆರಿಗೆ ನೋವಿನಿಂದ ನರಳುತ್ತಿದ್ದ ಇಬ್ಬರು ಗರ್ಭಿಣಿಯರು ಸಮಯೋಚಿತ ನೆರವಿನಿಂದ ಮಗುವಿಗೆ ಜನ್ಮ ನೀಡಿ ಆರೋಗ್ಯವಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.


ಗರ್ಭಿಣಿಯೊಬ್ಬರು ಹೆದ್ದಾರಿ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಅಮೇರಿಕಾದಲ್ಲಿ ನಡೆದಿದೆ. ಹೆರಿಗೆಯ ಸಮಯದಲ್ಲಿ ಆಸ್ಪತ್ರೆಗೆ ತಲುಪಲಾಗುವುದಿಲ್ಲ ಎಂಬುದನ್ನು ತಿಳಿದುಕೊಂಡು ಮಹಿಳೆಯ ಪತಿ ಹೆದ್ದಾರಿ ಬದಿಯಲ್ಲಿಯಲ್ಲಿಯೇ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು. ಸ್ಟೀಫನ್ ವಾಡೆಲ್ ಅವರು US ಅಂತರರಾಜ್ಯ ಹೆದ್ದಾರಿ 69 ರಲ್ಲಿ ಎಮಿಲಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರಯ. ಆದ್ರೆ ಮಾರ್ಗ ಮಧ್ಯೆಯೇ ಎಮಿಲಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪತಿ ಸ್ಟೀಫನ್ ವಾಡೆಲ್ ನೆರವಿಗೆ ಧಾವಿಸಿ ಸುಸೂತ್ರವಾಗಿ ಹೆರಿಗೆ ಮಾಡಿಸಿದರು. ಎಮಿಲಿಯ ಫೇಸ್‌ಬುಕ್ ಪೋಸ್ಟ್ ಪ್ರಕಾರ, ರೇಗನ್ ಎಂಬ ಮಗಳು ಹುಟ್ಟುವಾಗ 7 ಪೌಂಡ್ ಮತ್ತು 10 ಔನ್ಸ್ ತೂಗುತ್ತಿದ್ದಳು.

Tap to resize

Latest Videos

ನಾವು ಬೆಳಗ್ಗೆ ಆಸ್ಪತ್ರೆಯತ್ತ ಹೋಗುತ್ತಿದ್ದೆವು. ಈ ಸಂದರ್ಭದಲ್ಲಿ ಹೆರಿಗೆ ನೋವು (Pregnancy pain) ಕಾಣಿಸಿಕೊಂಡಿತ್ತು. ನಾನು ರಸ್ತೆ ಮಧ್ಯೆ ಹೆರಿಗೆಯಾಗಲು ಬಯಸುವುದಿಲ್ಲ ಎಂದು ನಾನು ಭಯವನ್ನು ವ್ಯಕ್ತಪಡಿಸಿದೆ. ಚಿಂತಿಸಬೇಡಿ ಎಂದು ಎಮಿಲಿ ಹೇಳಿದರು. ಆದ್ರೆ ಹೆರಿಗೆ ನೋವು ಹೆಚ್ಚಾದ ಕಾರಣ ಹೆದ್ದಾರಿ (Highway) ಬದಿಯಲ್ಲಿಯೇ ಕಾರು ನಿಲ್ಲಿಸಿ ಮಗುವನ್ನು ಹೊರ ತೆಗೆಯಬೇಕಾಯಿತು. ಮಗುವಿನ ಹೊಕ್ಕುಳಬಳ್ಳಿಯನ್ನು ಕಟ್ಟಲು ಫೋನ್ ಚಾರ್ಜರ್ ಬಳಸಿದರೆಂದು ಹೇಳಲಾಗುತ್ತಿದೆ. 35 ನಿಮಿಷಗಳಲ್ಲಿ, ಎಮಿಲಿ ನಿಖರವಾಗಿ 8 ನಿಮಿಷಗಳ ಅಂತರದಲ್ಲಿಜನ್ಮ ನೀಡಿದರು. ಮಂಗಳವಾರ ಆಸ್ಪತ್ರೆಯಲ್ಲಿ (Hospital) ತಾಯಿ ಮತ್ತು ಮಗಳಿಬ್ಬರೂ ಆರೋಗ್ಯ (Healthy)ವಾಗಿದ್ದಾರೆ ಎಂದು ದೃಢಪಡಿಸಲಾಗಿದೆ.

Tips for Pregnants: ಹೆರಿಗೆಯ ನಂತರ ಇವು ಬೇಕೇ ಬೇಕು… ಇಲ್ಲಾಂದ್ರೆ, ನರ್ಸ್ ಸಹ ಸಹಾಯಕ್ಕೆ ಬರೋದಿಲ್ಲ!

ಗರ್ಭಿಣಿಗೆ ರೈಲಿನಲ್ಲೇ ಹೆರಿಗೆ ಮಾಡಿಸಿದ ವೈದ್ಯಕೀಯ ವಿದ್ಯಾರ್ಥಿನಿ    
ಸಿಕಂದರಾಬಾದ್ ಮತ್ತು ವಿಶಾಖಪಟ್ಟಣದ ನಡುವೆ ಚಲಿಸುತ್ತಿದ್ದ ರೈಲಿನಲ್ಲಿ (Train) ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯೊಬ್ಬರಿಗೆ (Preganant) ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಹೆರಿಗೆ ಮಾಡಿಸಿದ್ದಾರೆ. ಗೀತಂ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಸ್ವಾತಿ ರೆಡ್ಡಿ (23) ಗರ್ಭಿಣಿಗೆ ಹೆರಿಗೆ (Delivery) ಮಾಡಿಸಿದ್ದಾರೆ. ಸ್ವಾತಿ ವಿಜಯವಾಡ ಬಳಿ ಸಿಕಂದರಾಬಾದ್ ಮತ್ತು ವಿಶಾಖಪಟ್ಟಣ ಎಕ್ಸ್‌ಪ್ರೆಸ್ ರೈಲು ಹತ್ತಿದ್ದರು.

ಎಸಿ ಕೋಚ್‌ಗೆ ಹೋದಾಗ ಅಲ್ಲಿ ಮಹಿಳೆ (Woman)ಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಗರ್ಭಿಣಿ ಜೊತಿಗಿದ್ದ ಕುಟುಂಬ ಸದಸ್ಯರು ಎಲ್ಲರ ಬಳಿಕ ನೆರವಿಗಾಗಿ ಕೇಳಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಸ್ವಾತಿ, ಗರ್ಭಿಣಿಗೆ ಸಹಾಯ ಮಾಡಿದ್ದಾರೆ. ಆಂಟಿ ಸೆಪ್ಟಿಕ್ ಬಿಟ್ಟು ಯಾವುದೇ ವೈದ್ಯಕೀಯ ಉಪಕರಣಗಳಿಲ್ಲದೆ ಸ್ವಾತಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಲೇಟ್‌ ಪ್ರೆಗ್ರೆನ್ಸಿ ಪ್ಲಾನ್‌ ಮಾಡಿದ್ದೀರಾ ? ಹಾಗಿದ್ರೆ ಈ ಟೆಸ್ಟ್ ಮರೀದೆ ಮಾಡಿಸ್ಕೊಳ್ಳಿ

ಈ ನಡುವೆ ಟಿಕೆಟ್ ಪರೀಕ್ಷಕರು ಮುಂದಿನ ಅನಾಕಪಲ್ಲಿ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆ (Medical test) ಮಾಡಿಸಿದ್ದರು. ರೈಲು ಬರುವ ಮುನ್ನವೇ ಆಗಮಿಸಿದ್ದ ಆಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವನ್ನು ಎನ್‌ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿನಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

click me!