ತಾಯಿ ದುರ್ಗೆ ಪೂಜೆಯನ್ನು ಭಕ್ತರು ಭಕ್ತಿಯಿಂದ ಮಾಡ್ತಿದ್ದಾರೆ. ಭಕ್ತರು ದುರ್ಗೆಯ ಶಕ್ತಿ ಕಥೆಗಳನ್ನು ಓದೋದು, ಉಪವಾಸ ಮಾಡೋದು ಮಾಡಿದ್ರೆ ಸಾಲೋದಿಲ್ಲ. ಮಹಿಳೆಯರು ದುರ್ಗೆ ಜೀವನದಿಂದ ಕಲಿಯೋದು ಸಾಕಷ್ಟಿದೆ.
ಶಿವನ ಅರ್ಧಾಂಗಿ ಪಾರ್ವತಿಯ ಇನ್ನೊಂದು ರೂಪ ದುರ್ಗೆ. ದೇವಿಯ ವಿವಿಧ ರೂಪಗಳಲ್ಲಿ ದುರ್ಗೆ ರೂಪ ಪ್ರಸಿದ್ಧಿ ಪಡೆದಿದೆ. ದುರ್ಗೆ ಶಕ್ತಿ ದೇವತೆ. ಭಕ್ತರಿಗೆ ಪ್ರೀತಿ ಕೊಟ್ಟು ಎಲ್ಲ ಸಮಸ್ಯೆಯನ್ನು ದೂರ ಮಾಡುವ ತಾಯಿ ಆಕೆ. ಇದೇ ಕಾರಣಕ್ಕೆ ಭಾರತದಲ್ಲಿ ತಾಯಿ ದುರ್ಗೆ ಆರಾಧನೆ ಮಾಡುವ ಭಕ್ತರ ಸಂಖ್ಯೆ ಹೆಚ್ಚಿದೆ. ದುರ್ಗಾ ಪೂಜೆ ಭಾರತದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ದುರ್ಗೆಗೆ ಸಂಬಂಧಿಸಿದ ಅನೇಕ ಕಥೆಗಳನ್ನು ಓದುವ ಜನರು ಅದರಲ್ಲಿ ಹೇಳಿದ ಪಾಠಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ. ವಿವಾಹಿತ ಮಹಿಳೆಯರು ಅವಶ್ಯವಾಗಿ ಕೆಲವೊಂದು ವಿಷ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವಿಂದು ದುರ್ಗೆಯ ಯಾವೆಲ್ಲ ಗುಣವನ್ನು ವಿವಾಹಿತ ಮಹಿಳೆಯರು ಪಾಲಿಸಬೇಕು ಎಂಬುದನ್ನು ನಿಮಗೆ ಹೇಳ್ತೇವೆ.
ತಾಳ್ಮೆ (Patience) : ಧ್ಯಾನ ಭಂಗಿಯಲ್ಲಿ ಕುಳಿತ ಶಿವ (Shiva) , ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಘಟನೆಯನ್ನು ನೋಡ್ತಾನೆ. ಅವನ ಜೊತೆ ಇರುವ ತಾಯಿ ದುರ್ಗೆ (Durga) ತಾಳ್ಮೆಯಿಂದ ಎಲ್ಲವನ್ನೂ ವೀಕ್ಷಣೆ ಮಾಡ್ತಾಳೆ. ಈ ತಾಯಿಯ ತಾಳ್ಮೆಯನ್ನು ಎಲ್ಲ ಮಹಿಳೆಯರು ಕಲಿಯಬೇಕು. ಶಿವ ಹಾಗೂ ದುರ್ಗೆಯ ಸಂಬಂಧ ತಾಳ್ಮೆ ಹಾಗೂ ಶಾಂತಿಯ ಅಡಿಪಾಯದಲ್ಲಿ ನಿಂತಿದೆ. ಪ್ರತಿಯೊಂದು ಸಂಬಂಧ ದೀರ್ಘಕಾಲ ಉಳಿಯಬೇಕು ಎಂದಾದ್ರೆ ಅಲ್ಲಿ ತಾಳ್ಮೆ ಮುಖ್ಯವಾಗುತ್ತದೆ. ಮಹಿಳೆ ತನ್ನ ವ್ಯಕ್ತಿತ್ವದಲ್ಲಿ ತಾಳ್ಮೆಯನ್ನು ಅಳವಡಿಸಿಕೊಳ್ಳಬೇಕು. ದಾಂಪತ್ಯ, ಸಂಸಾರವನ್ನು ತೂಗಿಸಿಕೊಂಡು ಹೋಗಲು ಇದು ಮುಖ್ಯವಾಗುತ್ತದೆ. ಚಿಕ್ಕಪುಟ್ಟ ವಿಚಾರಕ್ಕೂ ಆಕೆ ತಾಳ್ಮೆ ಕಳೆದುಕೊಂಡಲ್ಲಿ ಮನೆ ರಣರಂಗವಾಗುತ್ತದೆ.
ಏಪ್ರಿಲ್ ತಿಂಗಳ ಈ ಒಂಬತ್ತು ದಿನಗಳು.. ಗಂಡ ಹೆಂಡತಿ ದೈಹಿಕವಾಗಿ ಸಂಪರ್ಕ ಮಾಡಬಾರದು..ಮಾಡಿದರೆ?
ಸ್ವಯಂ ಗೌರವ (Self Respect): ಬೇರೆಯವರನ್ನು ಗೌರವಿಸುವುದು ತಪ್ಪಲ್ಲ. ಆದ್ರೆ ನಿಮ್ಮ ಆತ್ಮ ಗೌರವಕ್ಕೆ ಧಕ್ಕೆ ಮಾಡಿಕೊಂಡು ಇನ್ನೊಬ್ಬರಿಗೆ ಗೌರವ ನೀಡುವುದು ತಪ್ಪು. ತಮಗಿಂತ ಬೇರೆಯವರಿಗೆ ಮೊದಲು ಆಧ್ಯತೆ ನೀಡುವ ಪ್ರವೃತ್ತಿ ಮಹಿಳೆಯರಿಗುತ್ತದೆ. ಇದು ಅನೇಕ ಬಾರಿ ಅವರಿಗೆ ನೋವುಂಟು ಮಾಡುತ್ತದೆ. ಸ್ವಾಭಿಮಾನಿಯಲ್ಲದ ವ್ಯಕ್ತಿಯನ್ನು ಜನರು ದುರ್ಬಲ ಎಂದು ಭಾವಿಸುತ್ತಾರೆ. ಅನೇಕ ಕಡೆ ಪಟ್ಟು ತಿನ್ನಬೇಕಾಗುತ್ತದೆ. ನೀವು ನಿಮ್ಮ ಪ್ರೀತಿಪಾತ್ರರಿಗೆ ಗೌರವ ನೀಡಿ. ಹಾಗಂತ ಅವರು ನಿಮಗೆ ಗೌರವ ನೀಡದೆ ಹೋದಲ್ಲಿ, ನಿಮ್ಮನ್ನು ಅವಮಾನಿಸಿದಲ್ಲಿ, ನಿಮ್ಮ ತನಕ್ಕೆ ಮಹತ್ವ ನೀಡದೆ ಹೋದಲ್ಲಿ ಅವರನ್ನು ಎದುರಿಸಲು ಕಲಿಯಿರಿ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದನ್ನು ವಿರೋಧಿಸಲು ಹಿಂಜರಿಯಬೇಡಿ.
ನಿರ್ಭಯ (Be Couragious) : ತಾಯಿ ದುರ್ಗೆ ಧೈರ್ಯವಂತೆ. ಜನರು ಹೇಗೆ ಧೈರ್ಯವಾಗಿರಬೇಕು ಎಂಬುದನ್ನು ಕಲಿಸುತ್ತಾಳೆ. ಮನಸ್ಸಿನಲ್ಲಿರುವ ಭಯವನ್ನು ತೊಡೆದು ಹಾಕಿದ್ರೆ ಪರಿಸ್ಥಿತಿಯನು ಎದುರಿಸೋದು ಸುಲಭ. ಪತಿ, ಮಕ್ಕಳು, ಸಂಬಂಧಿಕರು ಸೇರಿದಂತೆ ಯಾರೇ ನಿಮ್ಮ ಜೊತೆ ಅನುಚಿತವಾಗಿ ವರ್ತಿಸಿದರೂ ಅದಕ್ಕೆ ಭಯಪಟ್ಟು ಹಿಂದೇಟು ಹಾಕ್ಬೇಡಿ. ತಾಯಿಯ ಮಹಾನ್ ಶಕ್ತಿ ನೀವೆಂದು ನಂಬುವ ಜೊತೆಗೆ ಧರ್ಯ ತೆಗೆದುಕೊಂಡು ಅವರನ್ನು ಎದುರಿಸಿ.
ವಾತ್ಸಲ್ಯ – ದಯೆ : ತಾಯಿ ದುರ್ಗೆಯನ್ನು ಶಕ್ತಿ ಸ್ವರೂಪಿಣಿ ಎಂದು ಕರೆದ್ರೂ ದಯೆ (Compassion) ಮತ್ತು ವಾತ್ಸಲ್ಯಕ್ಕೆ (Affection) ಸಂಬಂಧಿಸಿದ ಅನೇಕ ಕಥೆಗಳು ನಮ್ಮಲ್ಲಿವೆ. ಮಹಿಳೆಯಾದವಳು ಧೈರ್ಯವಂತೆ ಮಾತ್ರವಲ್ಲ ದಯೆ – ಕರುಣೆ ಕೂಡ ಬೆಳೆಸಿಕೊಳ್ಳಬೇಕು. ಪುರುಷರಲ್ಲಿ ಈ ಸ್ವಭಾವ ನೋಡಲು ಸಿಗೋದಿಲ್ಲ. ಮಹಿಳೆಯರಿಗೆ ಬಾಲ್ಯದಿಂದಲೇ ಸಹಜವಾಗಿ ದಯೆ, ವಾತ್ಸಲ್ಯದ ಸ್ವಭಾವವಿರುತ್ತದೆ. ಅದಕ್ಕೆ ನೀರೆರೆಯುವ ಕೆಲಸ ಆಗ್ಬೇಕು.
ರಾಶಿಗೂ ಸೂಟ್ ಆಗೋ ತರ ಟೀ ಇರುತ್ತೆ. ಅಷ್ಟಕ್ಕೂ ನೀವು ಯಾವ ಟೀ ಕುಡಿಯಬೇಕು? ಏನಿದು ವಿಚಿತ್ರ?
ಮಮತೆ (Attachment): ತಾಯಿ ದುರ್ಗೆ ಶತ್ರುಗಳನ್ನು ನಾಶ ಮಾಡಿದ್ರೂ ಆಕೆ ಹೃದಯದಲ್ಲಿ ಮಮತೆಯ ಭಾವ ಸದಾ ಇತ್ತು. ಅದೇ ರೀತಿ ಮಹಿಳೆಯರ ಹೃದಯದಲ್ಲೂ ಮಮತೆಯ ಭಾವ ಅಡಗಿರುತ್ತದೆ. ಸಂದರ್ಭ ಯಾವುದೇ ಇರಲಿ ಪ್ರೀತಿ, ಮಮತೆಯನ್ನು ಮರೆತು ಕೆಲಸ ಮಾಡಬೇಡಿ.