ಮಕ್ಕಳು ದೊಡ್ಡವರಾದ್ಮೇಲೆ ಮಹಿಳೆಯರು ಫ್ರೀ ಆಗ್ತಾರೆ. ಆ ಸಮಯದಲ್ಲಿ ಟಿವಿ, ಮೊಬೈಲ್ ನೋಡ್ತಾ ಕುಳಿತುಕೊಳ್ಳುವವರ ಮಧ್ಯೆ ಸಾಧಿಸಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಿ ಯಶಸ್ವಿಯಾದ ಮಹಿಳೆಯರು ಕೆಲವರಿದ್ದಾರೆ. ಅವರಲ್ಲಿ ಈ ಮಹಿಳೆ ಕೂಡ ಒಬ್ಬರು.
ಈ ಬಿಸಿ ಬೇಸಿಗೆಯಲ್ಲಿ ಮಜ್ಜಿಗೆ ಜೊತೆ ಫ್ಲೇಟ್ ನಲ್ಲಿ ಎರಡು ಉಪ್ಪಿನಕಾಯಿ ಹೋಳಿದ್ರೆ ಹೊಟ್ಟೆ ತುಂಬಿದಂತೆ. ಬಿಸಿ ಆಹಾರ ಬೇಡ ಎನ್ನುವವರೇ ಹೆಚ್ಚು. ಎಲ್ಲ ಋತುವಿನಲ್ಲೂ ಉಪ್ಪಿನಕಾಯಿ ಬಹುತೇಕ ಎಲ್ಲರ ಫೆವರೆಟ್. ಉಪ್ಪಿನಕಾಯಿ ಇಲ್ಲದೆ ಊಟ ಕಲ್ಪಿಸಿಕೊಳ್ಳೋದು ಕಷ್ಟ ಎನ್ನುವವರಿದ್ದಾರೆ. ಉಪ್ಪಿನಕಾಯಿಯನ್ನು ಎಲ್ಲರಿಗೂ ತಯಾರಿಸೋಕೆ ಬರೋದಿಲ್ಲ. ರುಚಿ ಉಪ್ಪಿನಕಾಯಿ ತಯಾರಿಸೋದು ಕೂಡ ಒಂದು ಕಲೆ. ಹಾಗಾಗಿಯೇ ಅನೇಕರು ಉಪ್ಪಿನಕಾಯಿ ತಯಾರಿಸುವ ಬದಲು ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿ ಖರೀದಿ ಮಾಡ್ತಾರೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ನಾನಾ ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚಿದೆ. ಇದನ್ನೇ ಅನೇಕರು ಬಂಡವಾಳ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಉಪ್ಪಿನಕಾಯಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವವರಿದ್ದಾರೆ.
ಉಪ್ಪಿನಕಾಯಿ (Pickles) ಒಂದು ಒಳ್ಳೆಯ ಬ್ಯುಸಿನೆಸ್ (Business). ಕಡಿಮೆ ಬಂಡವಾಳದಲ್ಲಿ ಹೆಚ್ಚು ಸಂಪಾದನೆ ಮಾಡುವ ವ್ಯಾಪಾರದಲ್ಲಿ ಇದು ಒಂದು. ಮನೆ, ಮದುವೆ, ಮಕ್ಕಳು ಎಂದು ಒಂದು ವಯಸ್ಸಿನಲ್ಲಿ ಮಹಿಳೆಯರು ಬ್ಯುಸಿ ಇರ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅನೇಕ ಮಕ್ಕಳು ಫ್ರೀ ಆಗ್ತಾರೆ. ಅವರಿಗೆ ಅಲ್ಲಿ ಇಲ್ಲಿ ಅಂತ ಒಂದಿಷ್ಟು ಸಮಯ ಸಿಗುತ್ತದೆ. ಈ ಸಮಯವನ್ನು ಹೇಗೆ ಕಳೆಯಬೇಕು ಎಂಬ ಚಿಂತೆ ಕೆಲವರನ್ನು ಕಾಡುವುದಿದೆ. ಸಿಕ್ಕ ಈ ವಯಸ್ಸಿನಲ್ಲಾದ್ರೂ ಏನಾದ್ರೂ ಸಾಧನೆ ಮಾಡಬೇಕು, ಕೈಲಾದಷ್ಟು ಸಂಪಾದನೆ ಮಾಡಬೇಕು ಎನ್ನುವ ಮಹಿಳೆಯರು ಛಲಬಿಡದೆ ಕೆಲಸ ಮಾಡ್ತಾರೆ. ಇದಕ್ಕೆ ಕರ್ನಾಲ್ ನ ಈ ಮಹಿಳೆ ಉತ್ತಮ ನಿದರ್ಶನ.
ವಿಶ್ವದ ಅತಿ ಕಿರಿಯ ಬಿಲೇನಿಯರ್ ಯಾರು? ಈಕೆ ಇನ್ನೂ ಕಾಲೇಜು ಸ್ಟುಡೆಂಟ್
ಉಪ್ಪಿನಕಾಯಿ – ಚಟ್ನಿ ತಯಾರಿಸಿ ಲಾಭಕಂಡ ಮಹಿಳೆ : ಕರ್ನಾಲ್ ನ ವರ್ಷಾಗೆ ಇಬ್ಬರು ಮಕ್ಕಳು. ಅವರಿಬ್ಬರೂ ವಿದೇಶದಲ್ಲಿ ನೆಲೆಸಿದ್ದಾರೆ. ಹಾಗಾಗಿ ವರ್ಷ ಫ್ರೀ ಇದ್ದರು. ಮನೆಯಲ್ಲಿ ಸಮಯ ಕಳೆಯೋದು ಕಷ್ಟವಾಗಿತ್ತು. ಈ ವೇಳೆ ಮನೆಯಲ್ಲಿಯೇ ಉಪ್ಪಿನಕಾಯಿ ಹಾಗೂ ಚಟ್ನಿ ತಯಾರಿಸುತ್ತಿದ್ದರು. ಅದನ್ನು ವರ್ಷಾ ತನ್ನ ಸಂಬಂಧಿಕರಿಗೆ ನೀಡಿದ್ದಾರೆ. ಸಂಬಂಧಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೆಲವರು ಈ ಉಪ್ಪಿನಕಾಯಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದಾರೆ. ವರ್ಷಾ ಕೂಡ ಇದ್ರಲ್ಲಿ ಆಸಕ್ತಿ ಹೊಂದಿದ್ದ ಕಾರಣ ವರ್ಷಾ, ವರ್ಷಾಸ್ ಕಿಚನ್ ಹೆಸರಿನಲ್ಲಿ ವ್ಯಾಪಾರ ಶುರು ಮಾಡಿದ್ದಾರೆ. ಆರಂಭದಲ್ಲಿ ಒಬ್ಬರೇ ಉಪ್ಪಿನಕಾಯಿ ತಯಾರಿಸುತ್ತಿದ್ದ ವರ್ಷಾ ಈಗ ಇಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ.
ವರ್ಷಾ ಮನೆಯಲ್ಲಿಯೇ ಉಪ್ಪಿನಕಾಯಿ ಹಾಗೂ ಚಟ್ನಿ ತಯಾರಿಸಿ ಮಾರಾಟ ಮಾಡುತ್ತಾರೆ. ಆರಂಭದಲ್ಲಿ ಅಕ್ಕಪಕ್ಕದ ಅಂಗಡಿಗೆ ಮಾರಾಟ ಮಾಡುತ್ತಿದ್ದ ವರ್ಷಾ ಈಗ ಕರ್ನಾಲ್ ಸೇರಿದಂತೆ ಸುತ್ತಮುತ್ತಲಿನ ಪಟ್ಟಣದ ಅಂಗಡಿಗೂ ಮಾರಾಟ ಮಾಡುತ್ತಾರೆ. ಗ್ರಾಹಕರು ಕಂಪನಿ ಹೆಸರು ಕೇಳಿ ಉತ್ಪನ್ನ ಖರೀದಿ ಮಾಡ್ತಾರೆ. ಇದು ಖುಷಿ ನೀಡಿದೆ ಎನ್ನುತ್ತಾರೆ ವರ್ಷಾ.
ಗುಣಮಟ್ಟದ ಹಾಗೂ ರುಚಿಯ ಕಾರಣ ವರ್ಷಾ ಉಪ್ಪಿನಕಾಯಿಗೆ ಹೆಚ್ಚು ಬೇಡಿಕೆ ಇದೆ. ಕಡಿಮೆ ಬಂಡವಾಳದಲ್ಲಿ ವ್ಯಾಪಾರ ಶುರು ಮಾಡಿದ ವರ್ಷಾ ಈಗ ದೊಡ್ಡ ಮಟ್ಟದಲ್ಲಿ ಲಾಭಗಳಿಸುತ್ತಿದ್ದಾರೆ.
ವಿಶ್ವ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಸಹೋದರರು, ಅಣ್ಣನ ಆಸ್ತಿ ತಮ್ಮನಿಗಿಂತ 160 ಕೋಟಿ ಜಾಸ್ತಿ!
ಉಪ್ಪಿನಕಾಯಿ ಬ್ಯುಸಿನೆಸ್ : ಉಪ್ಪಿನಕಾಯಿ ಯಾವಾಗ್ಲೂ ಬೇಡಿಕೆ ಇರುವ ಆಹಾರ. ನೀವೂ ಕೂಡ ಸಣ್ಣ ಮಟ್ಟದಲ್ಲಿ ಇಲ್ಲವೇ ದೊಡ್ಡ ಮಟ್ಟದಲ್ಲಿ ಇದನ್ನು ಶುರು ಮಾಡಬಹುದು. ಹಳ್ಳಿಯಲ್ಲೂ ನೀವು ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಬಹುದು. ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡಿ ನೀವು ವ್ಯಾಪಾರ ಶುರು ಮಾಡಿದ್ರೂ 25 ರಿಂದ 30 ಸಾವಿರ ರೂಪಾಯಿಯನ್ನು ತಿಂಗಳಿಗೆ ಗಳಿಸಬಹುದು. ಉಪ್ಪಿನಕಾಯಿ ವ್ಯಾಪಾರ ಮಾಡಲು ನಿಮಗೆ ಪರವಾನಗಿ ಕೂಡ ಬೇಕು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೀವು ಇದರ ತಯಾರಿ ಮತ್ತು ವ್ಯಾಪಾರ ಶುರು ಮಾಡಬಹುದು.