ಹೆಂಡತಿಗೆ ಅಡುಗೆ ಬರಲ್ಲ ಎಂದು ದೂರುವುದು ಕ್ರೌರ್ಯವಲ್ಲ; ಹೈಕೋರ್ಟ್‌

By Vinutha Perla  |  First Published Jan 14, 2024, 4:59 PM IST

ಮಹಿಳೆಯರು ಗಂಡನ ಮನೆಯಲ್ಲಾಗುವ ಕಿರುಕುಳದ ಬಗ್ಗೆ ಆಗಾಗ ದೂರು ಸಲ್ಲಿಸುತ್ತಲೇ ಇರುತ್ತಾರೆ. ಗಂಡನ ಕಿರುಕುಳ, ಅತ್ತೆಯ ಕಾಟ, ನಾದಿನಿಯ ಹಿಂಸೆ ಎಂದೆಲ್ಲಾ ಹೇಳುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ, ಸಂಬಂಧಿಕರು ಅಡುಗೆ ಬರಲ್ಲಾಂತ ಹೀಯಾಳಿಸ್ತಾರೆ ಎಂದು ದೂರು ನೀಡಿದ್ದಾರೆ. ಅದಕ್ಕೆ ಕೋರ್ಟ್ ಹೇಳಿದ್ದೇನು ನೋಡಿ.


ಮುಂಬೈ: ಮಹಿಳೆ ಅಡುಗೆ ಬರಲ್ಲ ಎಂದು ಆಕೆಯ ಗಂಡ ಅಥವಾ ಸಂಬಂಧಿಕರು ಹೇಳುವುದನ್ನು ಕ್ರೌರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಾಂಗ್ಲಿ ನಿವಾಸಿಯಾಗಿರುವ ಅರ್ಜಿದಾರರ ದೂರನ್ನು ಪರಿಶೀಲಿಸುವಾಗ ಮುಂಬೈ ಹೈಕೋರ್ಟ್ ಈ ರೀತಿ ತಿಳಿಸಿತು. ಮಹಿಳೆಯೊಬ್ಬರು, ಗಂಡನ ಸಂಬಂಧಿಕರು ಅಡುಗೆ ಕೆಲಸ ಬರುವುದಿಲ್ಲವೆಂದು ಹೀಯಾಳಿಸುತ್ತಾರೆಂದು ದೂರು ಸಲ್ಲಿಸಿದ್ದರು. ಆದ್ರೆ ಪೀಠವು ಈ ವಿಷಯವನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲವೆಂದು ಹೇಳಿ ಅರ್ಜಿಯನ್ನು ರದ್ದುಗೊಳಿಸಿತು.
 
ತನ್ನ ಸೋದರ ಮಾವ ಸೇರಿದಂತೆ ಅತ್ತೆಯಂದಿರು ತನಗೆ ಅಡುಗೆ ಗೊತ್ತಿಲ್ಲ, ಪೋಷಕರು ತನಗೆ ಏನನ್ನೂ ಕಲಿಸಿಲ್ಲ ಎಂದು ಹೀಯಾಳಿಸಿ ಅವಮಾನಿಸುತ್ತಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಘಟನೆಯನ್ನು 'ಕ್ರೌರ್ಯ' ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ. 

ಪ್ರೇಮ ವಿವಾಹವಾದವರಲ್ಲೇ ಡಿವೋರ್ಸ್‌ ಹೆಚ್ಚು: ಸುಪ್ರೀಂಕೋರ್ಟ್

Tap to resize

Latest Videos

ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಮತ್ತು ನ್ಯಾಯಮೂರ್ತಿ ನಿತಿನ್ ಆರ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠವು, ಸಾಂಗ್ಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ದೂರುದಾರ ಮಹಿಳೆಯ ಸೋದರ ಮಾವ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿ ಈ ವಿಷಯ ತಿಳಿಸಿದ್ದಾರೆ.

ಮಹಿಳೆ ಜುಲೈ 2020 ರಲ್ಲಿ ವಿವಾಹವಾದರು. ಅದೇ ವರ್ಷ ನವೆಂಬರ್‌ನಲ್ಲಿ ಗಂಡನ ಮನೆಯಿಂದ ಹೊರಹಾಕಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿವಾಹವಾದಾಗಿನಿಂದ ತನ್ನ ಪತಿ ತನ್ನೊಂದಿಗೆ ವೈವಾಹಿಕ ಸಂಬಂಧವನ್ನು ತೊಡಗಿಸಲು ಸಾಧ್ಯವಾಗಲ್ಲಿಲ್ಲ. ಅತ್ತೆಯಂದಿರು ತನ್ನನ್ನು ನಿಂದಿಸುತ್ತಾರೆ ಮತ್ತು ಅವಮಾನಿಸುತ್ತಿದ್ದರು ಎಂದು ಮಹಿಳೆ, ಜನವರಿ 2021ರಲ್ಲಿ ದೂರು ದಾಖಲಿಸಿದ್ದಾರೆ.

ಗಂಡನ ಕಿರುಕುಳದ ಬಗ್ಗೆ ಎರಡನೇ ಪತ್ನಿ ದೂರು ನೀಡುವಂತಿಲ್ಲ, ಕರ್ನಾಟಕ ಹೈಕೋರ್ಟ್ ತೀರ್ಪು

click me!