ಲಕ್ಷಾಂತರ ರೂ. ಸಂಬಳ ಬರೋ ಕೆಲ್ಸ ಬಿಟ್ಟು, ಇವಳ್ಯಾಕೆ ಹಂದಿ ಸಾಕೋಕೆ ಶುರು ಮಾಡಿದ್ಲು?

By Suvarna News  |  First Published Apr 18, 2024, 11:50 AM IST

ತಿಂಗಳು ತಿಂಗಳು ಬರುವ ಸಂಬಳಕ್ಕೆ ಗಂಟೆ ಲೆಕ್ಕದಲ್ಲಿ ಕೆಲಸ ಮಾಡುವ ಬದಲು ಸಂತೋಷ ಸಿಗುವ ಕೆಲಸವನ್ನು ಇಡೀ ದಿನ ಮಾಡಿದ್ರೂ ತೊಂದ್ರೆ ಇಲ್ಲ ಎನ್ನುವ ಜನರಿದ್ದಾರೆ. ಅಂಥವರು ಲಕ್ಷಾಂತರ ರೂಪಾಯಿ ಪ್ಯಾಕೇಜ್ ಕೆಲಸವನ್ನು ಕ್ಷಣದಲ್ಲಿ ಬಿಡಲು ಸಿದ್ಧವಿರ್ತಾರೆ. ಅದಕ್ಕೆ ಈ ಯುವತಿ ಉದಾಹರಣೆ. 
 


ಪ್ರತಿ ದಿನ ಬೆಳಿಗ್ಗೆ ಎದ್ದು ನಿತ್ಯ ಕೆಲಸ ಮುಗಿಸಿ ಕಚೇರಿಗೆ ಓಡಿ ಅಲ್ಲಿನ ಟೆನ್ಷನ್ ಸಹಿಸಿಕೊಂಡು 8 -9 ಗಂಟೆ ಕೆಲಸ ಮಾಡಿ ಜನರು ಸುಸ್ತಾಗ್ತಾರೆ. ಬೇಕೆಂದಾಗ ರಜೆ ಸಿಕೋದಿಲ್ಲ, ಕುಟುಂಬಸ್ಥರೊಂದಿಗೆ ಎಂಜಾಯ್ ಮಾಡಲು ಸಾಧ್ಯವಿಲ್ಲ, ಕೆಲಸ, ಒತ್ತಡದಲ್ಲಿಯೇ ಜೀವನ ಕಳೆಯುತ್ತದೆ ಎನ್ನುವ ಅನೇಕರಿದ್ದಾರೆ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡೋದು ಅನೇಕರಿಗೆ ಇಷ್ಟವಲ್ಲದ ಕೆಲಸ. ಹಾಗಂತ ಆ ಕೆಲಸ ಬಿಡಲು ಸಾಧ್ಯವಿಲ್ಲ. ಕೆಲಸ ಬಿಟ್ಟರೆ ಮುಂದೆ ಮತ್ತೊಂದು ಉದ್ಯೋಗ ಸಿಗದೆ ಇರಬಹುದು ಅಥವಾ ವ್ಯಾಪಾರದಲ್ಲಿ ನಷ್ಟವಾಗ್ಬಹುದು ಎನ್ನುವ ಭಯದ ಜೊತೆ ತಿಂಗಳು ತಿಂಗಳು ಬರುವ ಸಂಬಳದ ಮುಖ ನೋಡಿ ಕೆಲಸ ಕಷ್ಟವಾದ್ರೂ ಮಾಡ್ತಿರುತ್ತಾರೆ. ಆದ್ರೆ ಎಲ್ಲರೂ ಈ ಸಂತೋಷವಿಲ್ಲದ ಜೀವನ ನಡೆಸಲು ಇಚ್ಛಿಸೋದಿಲ್ಲ. ಇಷ್ಟವಿಲ್ಲದ ಕೆಲಸ ತೊರೆದು ಪ್ರೀತಿಯ ಉದ್ಯೋಗವನ್ನು ಅಪ್ಪಿಕೊಳ್ತಾರೆ. ಅದ್ರಲ್ಲಿ ಲಾಭವಿರಲಿ, ನಷ್ಟವಿರಲಿ ಹೋರಾಟ ನಡೆಸಿ ಜಯ ಸಾಧಿಸುತ್ತಾರೆ. ಅದಕ್ಕೆ ಈ ಯುವತಿ ಉತ್ತಮ ಉದಾಹರಣೆ.  ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸವನ್ನು ಮುಲಾಜಿಲ್ಲದೆ ತೊರೆದ ಯುವತಿ ಹಂದಿ ಸಾಕಣೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದಾಳೆ. 

ಕೆಲಸ ಬಿಟ್ಟು ಹಂದಿ (Pig) ಸಾಕಣೆ ಶುರು ಮಾಡಿದ ಯುವತಿ: ನೈಋತ್ಯ ಚೀನಾ (China) ದ ಯುನ್ನಾನ್ ಪ್ರಾಂತ್ಯದ ನಿವಾಸಿ ಝೌ ಗೆ 26 ವರ್ಷ ವಯಸ್ಸು. ಕಂಪನಿ (Company) ಯಲ್ಲಿ ಲಕ್ಷಾಂತರ ರೂಪಾಯಿ ಪ್ಯಾಕೇಜ್ ಇತ್ತು. ಕೆಲಸದಲ್ಲಿ ಸಂತೋಷವಿರಲಿಲ್ಲ. ನಾಲ್ಕೈದು ಕೆಲಸ ಬದಲಿಸಿದ್ರೂ ಝೌಗೆ ಬೇಕಾದ ಕೆಲಸ ಸಿಗಲಿಲ್ಲ. ನೆಮ್ಮದಿ ಮುಖ್ಯ ಎಂಬುದನ್ನು ಮನಗಂಡಿದ್ದ ಝೌ ಕೆಲಸ ತೊರದಿದ್ದಾಳೆ. ಮನೆಯಲ್ಲಿ ಖಾಲಿ ಸಮಯ ಕಳೆಯೋದು ಆಕೆಗೆ ಸಾಧ್ಯವಾಗ್ಲಿಲ್ಲ. ಮುಂದೇನು ಎಂಬ ಚಿಂತೆಯಲ್ಲಿರುವಾಗ ಆಕೆ ಸ್ನೇಹಿತೆಯೊಬ್ಬರು ಹಂದಿ ಸಾಕಣೆ ಬಗ್ಗೆ ಸಲಹೆ ನೀಡಿದ್ದಾರೆ. 

Tap to resize

Latest Videos

ಅಡುಗೆ ಮಾಡೋದ ಬಿಟ್ಟರೆ ಬೇರೇನೂ ಗೊತ್ತಿಲ್ಲ ಅನ್ನೋರೂ ಲಕ್ಷಗಟ್ಟಲೆ ದುಡೀಬಹುದು!

ಆರಂಭದಲ್ಲಿ ಝೌಗೆ ಇದು ಮನಸ್ಸಿಗೆ ಬರಲಿಲ್ಲ. ಮನೆಯವರ ಬೆಂಬಲ ಕೂಡ ಇರಲಿಲ್ಲ. ಹಾಗಾಗಿ ಆಲೋಚನೆಯಿಂದ ಹಿಂದೆ ಸರಿದಿದ್ದ ಝೌ ಮತ್ತೊಮ್ಮೆ ದೃಢ ಸಂಕಲ್ಪ ಮಾಡಿ ಹಂದಿ ಸಾಕುವ ಕೆಲಸ ಶುರು ಮಾಡಿದ್ದಳು. ಝೌಗೆ ಆರಂಭದಲ್ಲಿ ತುಂಬಾ ಕಷ್ಟವಾಯ್ತು. ಕೊಳಕು ಪ್ರದೇಶದಲ್ಲಿರಲು ಹಂದಿಗಳು ಬಯಸುತ್ವೆ. ಅವುಗಳ ಹೆರಿಗೆ, ಬ್ಲಡ್ ಎಲ್ಲವನ್ನೂ ನಿಭಾಯಿಸೋದು ಕಷ್ಟವಾಯ್ತು. ಆದ್ರೆ ಝೌ ಯಾವುದಕ್ಕೂ ಕುಗ್ಗಲಿಲ್ಲ. ಹಂದಿ ಸಾಕಣೆ ಮುಂದುವರೆಸುವ ನಿರ್ಧಾರ ಮಾಡಿ ಒಂದೊಂದೇ ಕೆಲಸ ಕಲಿಯಲು ಶುರು ಮಾಡಿದ್ಲು. 

ಈಗ ಝೌ ಹಂದಿ ಸಾಕಣೆಯನ್ನು ಪ್ರೀತಿಸುತ್ತಾಳೆ. ಆಕೆ ಹಂದಿಗಳ ಹೆರಿಗೆ ಮಾಡಿಸ್ತಾಳೆ. ಹಂದಿಗಳಿಗೆ ಇಂಜೆಕ್ಷನ್ ಹಾಕುವ ಕೆಲಸದಿಂದ ಹಿಡಿದು ಎಲ್ಲ ಕೆಲಸವನ್ನು ಖುಷಿಯಿಂದ ಮಾಡ್ತಾಳೆ. ಸಾಮಾಜಿಕ ಜಾಲತಾಣದಲ್ಲಿಯೂ ಝೌ ಪ್ರಸಿದ್ಧಿ ಪಡೆದಿದ್ದಾಳೆ. ಆಕೆಯ ಹಂದಿ ಸಾಕಣೆ ಕೆಲಸವನ್ನು ಜನರು ಮೆಚ್ಚಿದ್ದಾರೆ. ಝೌಳನ್ನು ಜನರು ರೋಲ್ ಮಾಡೆಲ್ ಎಂದು ಕರೆಯುತ್ತಾರೆ.

ಇತ್ತೀಚಿಗಷ್ಟೆ ಝೌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Social Media Video) ಒಂದನ್ನು ಹಂಚಿಕೊಂಡಿದ್ದಾಳೆ. ಈ ಕೆಲಸ ನನ್ನ ಕನಸು. ನನ್ನಂತೆ ನೀವು, ಬಲವಂತದ ಕೆಲಸ ಬಿಟ್ಟು ನಿಮ್ಮ ಆಯ್ಕೆಯ ಕೆಲಸ ಮಾಡಿ, ಬೇರೆಯವರು ಏನು ಹೇಳ್ತಾರೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ಬೇಡಿ ಎಂದು ಸಲಹೆ ನೀಡಿದ್ದಾಳೆ. ಇದು ಅನೇಕರಿಗೆ ಇಷ್ಟವಾಗಿದೆ. ಆಕೆಯನ್ನು ಧೈರ್ಯವಂತೆ ಎಂದು ಕರೆದಿದ್ದಾರೆ.

ದೀಪಿಕಾ ಪಡುಕೋಣೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ 820000 ಕೋಟಿ ಸಂಸ್ಥೆಯ ಒಡತಿ ಇಶಾ ಅಂಬಾನಿ!

ಚೀನಾದಲ್ಲಿ ಯುವಕರ ಕೆಲಸ ಪ್ರವೃತ್ತಿ ಬದಲಾಗಿದೆ. ಅವರು ಸಂಬಳಕ್ಕಿಂತ ಸಂತೋಷದ ಕೆಲಸವನ್ನು ಆಯ್ಕೆ ಮಾಡಿಕೊಳ್ತಿದ್ದಾರೆ. 2022ರಲ್ಲಿ ಯುವಕನೊಬ್ಬ ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟು ಸ್ಮಶಾನದಲ್ಲಿ ಕೆಲಸ ಮಾಡ್ತಿದ್ದ ಸುದ್ದಿ ವೈರಲ್ ಆಗಿತ್ತು. ಇತ್ತೀಚಿಗೆ 30 ವರ್ಷದ ಮಹಿಳೆ ಕಾರ್ಪೋರೇಟ್ ಕೆಲಸ ಬಿಟ್ಟು ಕಲ್ಲಂಗಡಿ ಕೃಷಿ ಮಾಡೋದಾಗಿ ಹೇಳಿದ್ದಳು. 

click me!