ಹೈವೇಯಲ್ಲಿ ಸಾರಿಯುಟ್ಟ ನಾರಿಯ ಬಿಂದಾಸ್ ಕುಣಿತ: ಸೇತುವೆ ಬಿರುಕು ಬಿಡುತ್ತೆ ಎಂದ ನೆಟ್ಟಿಗ

By Anusha Kb  |  First Published Sep 26, 2024, 10:14 PM IST

ಹೆದ್ದಾರಿಯಲ್ಲಿ ಕಿವಿಗಡಚಿಕ್ಕುವ ಸಂಗೀತಕ್ಕೆ ಮಹಿಳೆಯೊಬ್ಬರು ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.


ಕೆಲವರು ರೀಲ್ಸ್‌ಗಾಗಿ ಏನು ಬೇಕಾದ್ರೂ ಮಾಡ್ತಾರೆ, ಕುಣಿಯುವುದೇನು ಹೆಣದಂತೆ ರಸ್ತೆಯಲ್ಲೇ ಮಲಗ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರು ಹೆದ್ದಾರಿಯಲ್ಲಿ ಕಿವಿಗಡಚಿಕ್ಕುವ ಸಂಗೀತಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದು, ಆಕೆಯ ವೀಡಿಯೋ ನೋಡಿದ ಜನ ಸೇತುವೆ ಬಿರುಕು ಬಿಡೋದು ಪಕ್ಕಾ ಎಂದಿದ್ದಾರೆ. ಹಸಿರು ಸೀರೆಯುಟ್ಟ ಮಹಿಳೆಯೊಬ್ಬರು ಹೈವೇಯಲ್ಲಿ ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡುತ್ತಿದ್ದರೆ, ಆಕೆಯ ಪಕ್ಕದಲ್ಲೇ ಯುವಕನೋರ್ವ ನಿಂತಿದ್ದಾನೆ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಒಬ್ಬರು ಟ್ರೋಲ್ ಮಾಡಿದ್ದಾರೆ. 

@Nishantjournali ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ರೀಲ್ಸ್‌ ಮಾಡುವ ಭರದಲ್ಲಿ ಹೈವೇಯೇ ನಡುಗುತ್ತಿದೆ. ಹಿಂದೆ ಒಬ್ಬ ಬಾಡಿಗಾರ್ಡ್ ನಿಂತಿದ್ದಾನೆ ಎಂದು ಬರೆದಿದ್ದಾರೆ. 68 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. 

Tap to resize

Latest Videos

undefined

ವೈರಲ್‌ ರೀಲ್ಸ್‌ಗಾಗಿ ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಹೆಣದಂತೆ ಮಲಗಿದವನ ಬಂಧನ

ಅಂದಹಾಗೆ ಈಕೆ ಬಾಲಿವುಡ್ ಸಿನಿಮಾ 'ಶಿಶೇ ಕಿ ಉಮರ್‌' ಹಾಡಿಗೆ ಕಿವಿಗಡಚಿಕ್ಕುವ ಡಿಜೆ ಸದ್ದಲ್ಲಿ ಕುಣಿದಿದ್ದಾಳೆ. ಈ ಆಕೆಯ ಡಾನ್ಸ್ ಮೂವ್‌ ಚೆನ್ನಾಗಿಯೇ ಇದ್ದರೂ ಆಕೆಯ ರಿಯಾಕ್ಷನ್ ನಗು ತರಿಸುತ್ತಿದ್ದು, ಅನೇಕರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ, ಒಬ್ಬರಂತು ಸೇತುವೆ ಬಿರುಕು ಬಿಡಲಿದೆ ಎಂದು ಕಾಮೆಂಟ್‌ ಕೂಡ ಮಾಡಿದ್ದಾರೆ. ಟ್ರಕ್‌ನಲ್ಲಿ ಮ್ಯೂಸಿಕ್ ಹಾಕಲಾಗಿದೆ ಎಂದು ವರದಿಯಾಗಿದ್ದು, ಮಹಿಳೆ ಬಿಂದಾಸ್ ಡಾನ್ಸ್‌ನಲ್ಲಿ ಮಗ್ನನಾಗಿದ್ದಾರೆ. ಅತ್ತ ಆಕೆಯ ಹಿಂದೆ ನಿಂತಿರುವ ಯುವಕ ಏನಾಗುವುದೋ ಎಂಬ ಆತಂಕದಲ್ಲಿರುವಂತೆ ಕಾಣುತ್ತಿದೆ. ಯಾಕೆ ಇವರನ್ನು ಬ್ರಿಡ್ಜ್‌ನ ಕೆಳಗೆ ಎಸೆಯಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವರು ಜೈಲಿನಲ್ಲಿ ಡಾನ್ಸ್‌ ಮಾಡುವಂತೆ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್‌ಗಳ ಹಾವಳಿ ಇದೇ ಹೊಸದೇನಲ್ಲ, ದೇವಸ್ಥಾನ, ರೈಲು ನಿಲ್ದಾಣ, ಬಸ್‌ ನಿಲ್ದಾಣ ಹೀಗೆ ಯಾವ ಸಾರ್ವಜನಿಕ ಸ್ಥಳಗಳನ್ನು ಬಿಡದೇ ಇವರು ಹೀಗೆ ವಿಚಿತ್ರ ರೀಲ್ಸ್‌ಗಳನ್ನು ಮಾಡುತ್ತಿದ್ದು,  ಸಾರ್ವಜನಿಕರನ್ನು ಆತಂಕಕ್ಕೀಡು ಮಾಡುತ್ತಾರೆ. ದೆಹಲಿ ಮೆಟ್ರೋದಲ್ಲಂತೂ ಕೇಳುವುದೇ ಬೇಡ, ದಿನವೂ ಒಂದಲ್ಲ ಒಂದು ಅವತಾರಗಳು ಮೆಟ್ರೋ ನಿಲ್ದಾಣಗಳಲ್ಲಿ ಅಥವಾ ಮೆಟ್ರೋದೊಳಗೆ ಡಾನ್ಸ್ ಮಾಡುತ್ತಾ, ನಟನೆ ಮಾಡುತ್ತಾ ಮೆಟ್ರೋ ಪ್ರಯಾಣಿಕರಿಗೆ ಬಿಟ್ಟಿ ಮನೋರಂಜನೆ ನೀಡುತ್ತಾರೆ.

ರೀಲ್ಸ್‌ಗಾಗಿ ಮಗುವನ್ನೇ ಅಪಾಯಕ್ಕೆ ತಳ್ಳಿದ ತಾಯಿ: ವಿಡಿಯೋ ವೈರಲ್


ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಯುವಕನೋರ್ವ ರೀಲ್ಸ್‌ಗಾಗಿ ರಸ್ತೆಯಲ್ಲೇ ಮೂಗಿಗೆ ಹತ್ತಿ ತುಂಬಿಸಿ ಹೆಣದಂತೆ ಮಲಗಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. 

रील बनाने के चक्कर में हाईवे हिला दिया.. पीछे एक बॉडीगार्ड खड़ा कर रखा है pic.twitter.com/FW5VrRl2LP

— निशान्त शर्मा (भारद्वाज) (@Nishantjournali)

 

click me!