Women Health: ಬಲವಂತದ ಸಂಭೋಗ ಬಿಟ್ಟರೆ ಮತ್ತೇನು ಯೋನಿ ಊತಕ್ಕೆ ಆಗಬಹುದು ಕಾರಣ?

By Suvarna News  |  First Published Jun 29, 2023, 11:52 AM IST

ಮಹಿಳೆಯರು ಖಾಸಗಿ ಅಂಗಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸ್ತಾರೆ. ಅದ್ರಲ್ಲಿ ಯೋನಿ ಊತ ಕೂಡ ಸೇರಿದೆ. ಊದಿಕೊಳ್ಳುವ ಯೋನಿಗೆ ಅಲರ್ಜಿ ಸೇರಿದಂತೆ ಅನೇಕ ವಿಷ್ಯಗಳು ಕಾರಣವಾಗುತ್ವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಅಗತ್ಯವಿರುತ್ತದೆ.


ಯೋನಿಯಲ್ಲಿ ಅನೇಕ ಬಾರಿ ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾನಾ ಕಾರಣವಿದೆ. ಯೋನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಯಾವ ಕಾರಣಕ್ಕೆ ಯೋನಿ ಊತ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಿದ್ರೆ ಅದನ್ನು ಗುಣಪಡಿಸುವುದು ಸುಲಭ. ಯೋನಿ ಊತಕ್ಕೆ ಕಾರಣಗಳು ಯಾವ್ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.

ಯೋನಿ (Vagina) ಊತಕ್ಕೆ (Swelling) ಕಾರಣ ಹಾಗೂ ಚಿಕಿತ್ಸೆ : 

Tap to resize

Latest Videos

ಬಲವಂತದ ಸಂಭೋಗ (Intercourse) : ಯೋನಿ ಅಂಗಾಂಶಗಳು ಸೂಕ್ಷ್ಮವಾಗಿರುತ್ತವೆ. ಸಂಭೋಗವನ್ನು ತಪ್ಪಾದ ರೀತಿಯಲ್ಲಿ ಮಾಡಿದರೆ ಯೋನಿ ಊತ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಯೋನಿ ಶುಷ್ಕವಾಗಿರುವ ಸಮಯದಲ್ಲಿ ಲೈಂಗಿಕ ಕ್ರಿಯೆ, ಬಲವಂತದ ಲೈಂಗಿಕ ಕ್ರಿಯೆ ನಂತ್ರ ಯೋನಿ ಊತ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ದೊಡ್ಡ ಲೈಂಗಿಕ ಆಟಿಕೆಗಳ ಬಳಕೆಯೂ ಕಾರಣವಾಗಬಹುದು. ಈ ನೋವು (Pain) ಗಳನ್ನು ತಡೆಯಲು ಯೋನಿ ಮರಗಟ್ಟುವಿಕೆ ಕ್ರೀಮ್ ಬಳಕೆ ಮಾಡಬಹುದು.   

Women Health: ಗರ್ಭಧರಿಸಿದಾಗ ಸೆಕ್ಸ್ ಯಾಕೆ ದೂರ?

ಅಲರ್ಜಿಯಿಂದಲೂ ಊದಿಕೊಳ್ಳುತ್ತೆ ಯೋನಿ : ಯೋನಿ ಸ್ವಚ್ಛತೆ ಸೇರಿದಂತೆ ಅದಕ್ಕೆ ಯಾವುದೇ ಕ್ರೀಂ ಬಳಸುವ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಪರಿಮಳಯುಕ್ತ ಸೋಪ್‌ಗಳು, ಯೋನಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಹೋದ್ರೆ, ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ ಬಳಕೆ, ಚರ್ಮದ ಕ್ರೀಮ್‌ಗಳು ಮತ್ತು ಲೋಷನ್‌ ಬಳಕೆ, ಲೂಬ್ರಿಕಂಟ್‌, ಲ್ಯಾಟೆಕ್ಸ್ ಕಾಂಡೋಮ್‌ಗಳು, ಗರ್ಭನಿರೋಧಕ ಸೇರಿದಂತೆ ಯೋನಿಗೆ ಅರ್ಲಜಿಯಾಗುವ ವಸ್ತುಗಳ ಬಳಕೆಯಿಂದ ಯೋನಿ ಊದಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಇದಕ್ಕೆ ಚಿಕಿತ್ಸೆಯಿದೆ, ಸೌಮ್ಯವಾದ, ಉರಿಯೂತವನ್ನು ಕಡಿಮೆ ಮಾಡಬಹುದಾದ ಸ್ಟೀರಾಯ್ಡ್ ಕ್ರೀಮ್ ಬಳಸಬೇಕು. ನಿಮ್ಮ ಯೋನಿಗೆ ಯಾವುದು ಅಲರ್ಜಿಯಾಗುತ್ತೆ ಎಂಬುದನ್ನು ನೀವು ಪತ್ತೆ ಮಾಡಿ, ಅದ್ರ ಬಳಕೆ ಬಿಡಬೇಕಾಗುತ್ತದೆ. ಹೆಚ್ಚು ರಾಸಾಯನಿಕವಿರುವ ಯಾವುದೇ ಸೋಫ್ ಬಳಕೆಯನ್ನು ಮಾಡಬಾರದು. ಕೆಲ ಪಿರಿಯಡ್ಸ್ ಪ್ಯಾಡ್ ನಿಮ್ಮ ಯೋನಿ ಊತಕ್ಕೆ ಕಾರಣವಾಗಹುದು. ಹಾಗಾಗಿ ಅದ್ರ ಬದಲು ಬೇರೆ ಪ್ಯಾಡ್ ಬಳಕೆ ಹಾಗೂ ಪದೇ ಪದೇ ಪ್ಯಾಡ್ ಬದಲಿಸಲು ನೀವು ಕ್ರಮಕೈಗೊಳ್ಳಬೇಕು.

ಲೈಂಗಿಕವಾಗಿ ಹರಡುವ ಸೋಂಕು : ಅನೇಕ ಲೈಂಗಿಕವಾಗಿ ಹರಡುವ ಸೋಂಕುಗಳು ಯೋನಿ ಕಿರಿಕಿರಿ ಮತ್ತು ಉರಿಯೂತವನ್ನು ಉಂಟು ಮಾಡುತ್ತದೆ. ಇವು ದದ್ದು, ಗುಳ್ಳೆ ಅಥವಾ ಹುಣ್ಣುಗಳನ್ನು ಉಂಟುಮಾಡುತ್ತವೆ. ಇದ್ರಿಂದ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜಿಸುವಾಗ ನೋವಾಗುತ್ತದೆ.  ಸಂಭೋಗ ಮಾಡುವಾಗಲೂ ಕಿರಿಕಿರಿ ಅನುಭವಿಸಬೇಕಾಗುತ್ತದೆ.  

Health Tips : ವೈದ್ಯರ ಸಲಹೆ ಇಲ್ಲದೆ ಗರ್ಭಪಾತದ ಮಾತ್ರೆ ಸೇವಿಸ್ಬೇಡಿ

ಗರ್ಭಧಾರಣೆ : ಗರ್ಭಧರಿಸಿದ ಸಮಯದಲ್ಲಿ ಅನೇಕರಿಗೆ ಯೋನಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬೆಳೆಯುತ್ತಿರುವ ಭ್ರೂಣವನ್ನು ಬೆಂಬಲಿಸಲು ಗರ್ಭಾಶಯಕ್ಕೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಯೋನಿಯಲ್ಲಿ ಊತ ಮತ್ತು ಉರಿಯೂತವನ್ನು ಉಂಟುಮಾಡಬಹುದು. ಊತ ಮತ್ತು ನೋವನ್ನು ಕಡಿಮೆ ಮಾಡಲು ಓವರ್-ದಿ-ಕೌಂಟರ್ ನಾನ್ ಸ್ಟೆರೊಯ್ಡೆಲ್ ಉರಿಯೂತದ ಔಷಧಗಳನ್ನು  ಬಳಸಬಹುದು. ಕೋಲ್ಡ್ ಕಂಪ್ರೆಸ್ ಸಹ ಸಹಾಯಕಾರಿಯಾಗಿದೆ.  

ಯೀಸ್ಟ್ ಸೋಂಕು : ಯೀಸ್ಟ್ ಸೋಂಕು ಸಾಮಾನ್ಯವಾಗಿ ಯೋನಿಯಲ್ಲಿ ಕಂಡುಬರುವ ಕ್ಯಾಂಡಿಡಾ ಅಲ್ಬಿಕಾನ್ಸ್ ಯೀಸ್ಟ್ ನ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲಗೊಂಡಾಗ ಶಿಲೀಂಧ್ರವು ಅತಿಯಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಯೋನಿ ಕ್ಯಾಂಡಿಡಿಯಾಸಿಸ್ ಯೋನಿಯಲ್ಲಿ ಊತ ಮತ್ತು ಕೆಂಪು ಬಣ್ಣವನ್ನು ಉಂಟುಮಾಡುತ್ತದೆ. ಮೂತ್ರ ವಿಸರ್ಜಿಸುವಾಗ ನೋವು, ಯೋನಿಯಲ್ಲಿ ತುರಿಕೆ ಮತ್ತು ದುರ್ವಾಸನೆಯೊಂದಿಗೆ ಬಿಳಿ ಸ್ರವಿಸುವಿಕೆಯನ್ನು ಇದು ಉಂಟುಮಾಡುತ್ತದೆ.

ಈ ಯೀಸ್ಟ್ ಸೋಂಕಿಗೆ ಗರ್ಭಾವಸ್ಥೆ ಮತ್ತು ಮುಟ್ಟಿನಲ್ಲಿ ಆಗುವ  ಹಾರ್ಮೋನುಗಳ ಬದಲಾವಣೆ ಕಾರಣವಾಗುತ್ತದೆ. ಇದಲ್ಲದೆ  ಗರ್ಭನಿರೋಧಕಗಳ ಬಳಕೆ ನಂತ್ರ ದೇಹದಲ್ಲಾಗುವ ಹಾರ್ಮೋನುಗಳ ಬದಲಾವಣೆಯಿಂದಲೂ ಇದು ಉಂಟಾಗಬಹುದು. ಯೀಸ್ಟ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆಂಟಿಫಂಗಲ್ ಕ್ರೀಮ್‌ಗಳು ಪರಿಣಾಮಕಾರಿ.  
 

click me!