ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಡಬಲ್ ಕಾಳಜಿ ತೆಗೆದುಕೊಳ್ತಾರೆ. ಈ ಸಮಯದಲ್ಲಿ ನಾನಾ ಬದಲಾವಣೆಯಾಗ್ತಿರುತ್ತದೆ. ಕೆಲ ಮಹಿಳೆಯರು ಈ ಸಮಯದಲ್ಲೂ ಸೆಕ್ಸ್ ಬಯಸಿದ್ರೆ ಮತ್ತೆ ಕೆಲವರು ನೋ ಅನ್ನುತ್ತಾರೆ. ಅದಕ್ಕೇನು ಕಾರಣ ಅನ್ನೋದು ಇಲ್ಲಿದೆ.
ತಾಯಿಯಾಗುವ ಕನಸು ಪ್ರತಿಯೊಬ್ಬ ಹೆಣ್ಣಿಗೂ ಇರುತ್ತದೆ. ತನ್ನ ಹೊಟ್ಟೆಯಲ್ಲಿ ಗರ್ಭ ನಿಲ್ಲುವ ಆ ಕ್ಷಣಗಳು ಆಕೆಯ ಜೀವನದ ಮಹತ್ವದ ಘಟ್ಟವಾಗಿದೆ. ಗರ್ಭಧಾರಣೆಯ ಸಮಯದಲ್ಲಿ ಹೆಣ್ಣಿನಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುವುದು ಸಹಜ. ಆಕೆಯ ಶರೀರದಲ್ಲಿ ಉಂಟಾಗುವ ಬದಲಾವಣೆಗಳು ಅನೇಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ ಆಕೆಯ ಸೆಕ್ಸ್ ಡ್ರೈವ್ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಕಂಡುಬಂದರೆ ಇನ್ನು ಕೆಲವರು ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣ ನಿರಾಸಕ್ತಿ ತೋರಿಸುತ್ತಾರೆ.
ಅನೇಕ ಮಹಿಳೆ (Woman) ಯರಿಗೆ ಹೆಚ್ಚಿನ ಪ್ರಮಾಣದ ಈಸ್ಟ್ರೊಜೆನ್ (Estrogen) ಮತ್ತು ಪ್ರೊಜೆಸ್ಟರಾನ್ ಮತ್ತು ಜನನಾಂಗದಲ್ಲಿ ರಕ್ತದ ಹರಿವು ಹೆಚ್ಚಾಗುವುದರಿಂದ ಲೈಂಗಿಕ (Sexual) ಬಯಕೆ ಹೆಚ್ಚುತ್ತದೆ. ನಿದ್ರೆಯ ಸಮಸ್ಯೆ, ನಿದ್ರೆಯ ಭಂಗಿಗಳಲ್ಲೂ ಮಹಿಳೆಯರು ತೊಂದರೆಯನ್ನು ಅನುಭವಿಸುತ್ತಾರೆ. ಕೆಲವು ಮಹಿಳೆಯರಿಗೆ ವಾಕರಿಕೆ, ಆಯಾಸ, ಒತ್ತಡ, ಕಾಲು ನೋವು, ಪಾದಗಳಲ್ಲಿ ಊತ, ಬೆನ್ನುನೋವು ಮುಂತಾದ ದೈಹಿಕ ಹಾಗೂ ಮಾನಸಿಕ ಬದಲಾವಣೆಯಿಂದಾಗಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಗರ್ಭಧಾರಣೆಯ ಯಾವ ಸಮಯದಲ್ಲಿ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ಹೇಗಿರುತ್ತದೆ ಎಂಬುದನ್ನು ನೋಡೋಣ.
Mental Health Tips: ವೃದ್ಧಾಪ್ಯ ಚೆನ್ನಾಗಿರ್ಬೇಕು ಅಂದ್ರೆ ಯವೌನದ ಈ ಗುಣಗಳನ್ನ ಬಿಡ್ಲೇ ಬೇಕು
ಮೊದಲ ಮೂರು ವಾರಗಳು : ಗರ್ಭಧಾರಣೆಯ ಆರಂಭದ ಹಂತದಲ್ಲಿ ಮಹಿಳೆಯರ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಈ ಹಂತದಲ್ಲಿ ಭ್ರೂಣವು ಗರ್ಭದೊಳಗೆ ಸರಿಯಾಗಿ ನೆಲೆ ನಿಲ್ಲುತ್ತದೆ ಮತ್ತು ಬೆಳವಣಿಗೆ ಆಗುತ್ತದೆ. ಹಾರ್ಮೋನ್ ಇಂಬಾಲೆನ್ಸ್, ದೈಹಿಕ ಲಕ್ಷಣ, ಒತ್ತಡ, ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್ (ಎಚ್ ಚಿ ಜಿ) ಸ್ರವಿಸುವಿಕೆ ಮುಂತಾದವುಗಳ ಕಾರಣದಿಂದ ಮೂಡ್ ಸ್ವಿಂಗ್ ಮತ್ತು ವಾಕರಿಕೆಗೆ ಕಾರಣವಾಗುತ್ತದೆ. ಪ್ರೆಗ್ನೆನ್ಸಿ ಪ್ರಾರಂಭಿಕ ಹಂತದಲ್ಲಿ ಜೀರ್ಣಕ್ರಿಯೆಯ ಸಮಸ್ಯೆ, ಸ್ತನಗಳು ಮೆದುವಾಗುವುದರಿಂದಲೂ ಕೂಡ ಕಾಮಾಸಕ್ತಿ ಕುಂದಬಹುದು. ಕೆಲವು ಮಹಿಳೆಯರಲ್ಲಿ ಹಾರ್ಮೋನ್ ವ್ಯತ್ಯಾಸದಿಂದಾಗಿ ಕಾಮಾಸಕ್ತಿ ಹೆಚ್ಚಲೂಬಹುದು. ಈ ಹಂತದಲ್ಲಿ ಆಗಾಗ್ಗೆ ಮೂತ್ರವಿಸರ್ಜನೆ ಮಾಡುವುದು ಕೂಡ ಸಾಮಾನ್ಯ ಸಂಗತಿಯಾಗಿದೆ.
ಎರಡನೇ ತ್ರೈಮಾಸಿಕ (14 ರಿಂದ 27 ನೇ ವಾರ) : ಎರಡನೇ ತ್ರೈಮಾಸಿಕದಲ್ಲಿ ಅಧಿಕಾಂಶ ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಗೆ ಆಗುತ್ತದೆ. ಈ ಹಂತದಲ್ಲಿ ಎಚ್ಸಿಜಿ ಗರಿಷ್ಠ ಮಟ್ಟದಲ್ಲಿ ಇರುತ್ತದೆ ಮತ್ತು ವಾಕರಿಕೆಯ ಅನುಭವವೂ ನಿಂತು ದೇಹದಲ್ಲಿ ಶಕ್ತಿ ಹೆಚ್ಚಿರುತ್ತದೆ.
ಗರ್ಭದಲ್ಲಿರುವ ಮಗು ಬೆಳೆಯುತ್ತಿರುವುದರಿಂದ ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಪ್ರಮಾಣ ಹೆಚ್ಚುತ್ತದೆ. ಈ ಬದಲಾವಣೆಯಿಂದಾಗಿ ಯೋನಿ ನಯಗೊಳ್ಳುತ್ತದೆ ಮತ್ತು ಯೋನಿಯ ರಕ್ತವನ್ನು ಹೆಚ್ಚಿಸುತ್ತದೆ. ಇದರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತದೆ.
ಪುರುಷರಿಗಿಂತ ಮಹಿಳೆಯರಿಗೆ ಸದಾ ಏನನ್ನಾದರೂ ತಿನ್ನಬೇಕು ಅನಿಸೋದು ಯಾಕೆ?
ಮೂರನೇ ತ್ರೈಮಾಸಿಕ (28 ರಿಂದ 40ನೇ ವಾರ): ಮೂರನೇ ತ್ರೈಮಾಸಿಕವು ಗರ್ಭಿಣಿಯರಿಗೆ ಊತ, ತೂಕದಲ್ಲಿ ಏರಿಕೆ, ದೇಹದ ನೋವು, ಆಯಾಸ ಮುಂತಾದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಅಸ್ವಸ್ಥತೆ, ನೋವಿನ ಅನುಭವವಾಗುವುದು ಸಾಮಾನ್ಯವಾಗಿದೆ.
ಗರ್ಭಧಾರಣೆಯ ಈ ಸಮಯದಲ್ಲಿ ಸೆಕ್ಸ್ ಮಾಡಬಾರದು : ಗರ್ಭಿಣಿಯ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಸುರಕ್ಷಿತವಾದ ಹೆರಿಗೆ ಸಾಧ್ಯ. ಆದ್ದರಿಂದ ಮಹಿಳೆಯರು ಗರ್ಭಾವಸ್ಥೆಯ ಕೆಲವು ಸಂದರ್ಭಗಳಲ್ಲಿ ಲೈಂಗಿಕ ಕ್ರಿಯೆ ಅಥವಾ ಹಸ್ತಮೈಥುನದಲ್ಲಿ ತೊಡಗದೇ ಇರುವುದು ಉತ್ತಮ. ಗರ್ಭಪಾತ, ಯೋನಿಯಲ್ಲಿ ರಕ್ತಸ್ರಾವ, ನೀರಿನ ಚೀಲ ಒಡೆಯುವುದು ಅಥವಾ ಆಮ್ನಿಯೋಟಿಕ್ ದ್ರವ ಸೋರಿಕೆ ಮುಂತಾದ ಸಮಯದಲ್ಲಿ ಸೆಕ್ಸ್ ಕ್ರಿಯೆಯಲ್ಲಿ ತೊಡಗಬಾರದು. ಮಹಿಳೆ ಒಮ್ಮೆ ಗರ್ಭವತಿಯಾದ ನಂತರ ಆಕೆಗೆ ಋತುಚಕ್ರವಾಗುವುದಿಲ್ಲ. ಆದರೆ ಕೆಲವೊಮ್ಮೆ ಯೋನಿಯಲ್ಲಿ ಸಣ್ಣ ಪ್ರಮಾಣದ ರಕ್ತಸ್ರಾವ ಸಂಭವಿಸಬಹುದು. ಜರಾಯು ಅಸಹಜವಾಗಿ ರೂಪಗೊಂಡಿದ್ದರೆ ಅಥವಾ ಜರಾಯು ಪ್ರೀವಿಯಾ ಆಗಿದ್ದಲ್ಲಿ ಹಾಗೂ ಅಕಾಲಿಕ ಹೆರಿಗೆಯ ಲಕ್ಷಣಗಳು ಕಂಡುಬಂದಲ್ಲಿ ಲೈಂಗಿಕ ಕ್ರಿಯೆಯಿಂದ ದೂರವಿರಬೇಕು ಇಲ್ಲವೇ ಅಂತಹ ಪರಿಸ್ಥಿತಿಗಳಲ್ಲಿ ವೈದ್ಯರ ಸಲಹೆಯನ್ನು ಪಡೆಯಬೇಕು.