ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅಮೆರಿಕದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರ ಜೊತೆ ಪಾಲ್ಗೊಂಡ ಕ್ಯಾಪ್ಟನ್ ಜೋಯಾ ಹೇಳಿದ್ದೇನು?
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿಯವರು ಅಂತರರಾಷ್ಟ್ರೀಯ ಯೋಗ ದಿನಕ್ಕೆ (International Yoga Day) ಕರೆ ಕೊಟ್ಟ ಬೆನ್ನಲ್ಲೇ ಇಡೀ ವಿಶ್ವವೇ ಇದಕ್ಕೆ ಕೈಜೋಡಿಸಿದೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿಯೇ ಜೂನ್ 21 ಅನ್ನು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿದ್ದರು. ಇದಕ್ಕೆ ಇಡೀ ವಿಶ್ವ ಸ್ಪಂದಿಸಿದೆ. ಬೃಹತ್ ಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದು, ಅವರಿಗೆ ಅಲ್ಲಿ ಅದ್ಭುತ ಸ್ವಾಗತ ಸಿಕ್ಕಿದೆ. ಹಿಂದೆ ಯಾವ ದೇಶದ ಪ್ರಧಾನಿಗೂ ಬೇರೊಂದು ದೇಶದಲ್ಲಿ ಸಿಗದಷ್ಟು ಅದ್ಧೂರಿ, ಅಪೂರ್ವ ಸ್ವಾಗತ ಮೋದಿಯವರಿಗೆ ಸಿಕ್ಕಿದೆ. ಅಮೆರಿಕದ ಜನತೆ, ಅದರಲ್ಲಿಯೂ ಲಕ್ಷಾಂತರ ಮಂದಿ ಅನಿವಾಸಿ ಭಾರತಿಯರು ಮೋದಿಯವರನ್ನು ನೋಡುವುದಕ್ಕಾಗಿ ಅಮೆರಿಕದ ಮೂಲೆ ಮೂಲೆಗಳಿಂದ ಜಮಾಯಿಸಿದ್ದು, ಎಲ್ಲೆಡೆ ಮೋದಿ ಮೋದಿ ಎಂಬ ಘೋಷಣೆ ಮೊಳಗುತ್ತಿದೆ.
ಜೂನ್ 21ರಂದು ಭಾರತೀಯ ಕಾಲಮಾನ ಸಂಜೆ 5.30 ಅಂದರೆ ಅಮೆರಿಕದಲ್ಲಿ ನಸುಕಿನ 5.30 ಗಂಟೆಗೆ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ (Prime Minister) ನೀಡಿದರು. ಅಮೆರಿಕದಲ್ಲಿನ ಗಣ್ಯಾತಿಗಣ್ಯರು ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಮೋದಿಯವರು ನೀಡಿದ್ದ ಕರೆಗೆ 180 ದೇಶಗಳ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಅಮೆರಿಕ ಕೂಡ ಭಾರತಕ್ಕೆ ತಲೆದೂಗಿತು. ಅಂಥ ಇತಿಹಾಸವನ್ನು ಸೃಷ್ಟಿ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಖುದ್ದು ಯೋಗ ಪಟುವಾಗಿಯೂ, ಧ್ಯಾನಾದಿಗಳನ್ನು ಮಾಡುತ್ತಾ 72ರ ಹರೆಯಲ್ಲಿಯೂ ಫಿಟ್ ಆಗಿರುವ ಮೋದಿಯವರನ್ನು ಹೊಗಳದವರೇ ಇಲ್ಲ ಎನ್ನಬಹುದೇನೋ. ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಧುರೀಣರು, ಕ್ರೀಡಾ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಮೋದಿಯವರ ತೇಜಸ್ಸಿಗೆ ಹಾಡಿ ಹೊಗಳುತ್ತಿದ್ದಾರೆ.
undefined
ಅಂತಾರಾಷ್ಟ್ರೀಯ ಯೋಗ ದಿನ: ಸಿಕ್ಕಿಂ, ಲಡಾಖ್, ಅರುಣಾಚಲದ ರಮಣೀಯ ಪರಿಸರದಲ್ಲಿ ಭಾರತೀಯ ಸೇನೆ ಯೋಗಾಭ್ಯಾಸ
ಅದೇ ರೀತಿ, ವಾಷಿಂಗ್ಟನ್ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಯಾಪ್ಟನ್ ಜೋಯಾ (Captain Zoya) ಕೂಡ ಪ್ರಧಾನಿ ನರೇಂದ್ರ ಮೋದಿಯರನ್ನು ಹಾಡಿ ಹೊಗಳಿದ್ದಾರೆ. ಮೋದಿಯವರು ಯೋಗಾಸನ ಭಂಗಿಯಲ್ಲಿ ಕುಳಿತುಕೊಂಡ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಂಡಿರುವ ಜೋಯಾ ಅವರು ಈ ದಿನ ನನಗೆ ತೀವ್ರ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವ ತೇಜಸ್ಸನ್ನು ಕಂಡು ಪ್ರಭಾವಿತಳಾಗಿದ್ದೇನೆ. ನಾನೇ ಧನ್ಯಳು ಎಂದು ಬರೆದುಕೊಂಡಿದ್ದಾರೆ. ಇವರ ಟ್ವಿಟರ್ ಈಗ ವೈರಲ್ ಆಗಿದೆ.
ಅಂದಹಾಗೆ, ಕ್ಯಾಪ್ಟನ್ ಜೋಯಾ, ಏರ್ ಇಂಡಿಯಾದ ಹಿರಿಯ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ಸಿಬ್ಬಂದಿಯೊಂದಿಗೆ ಉತ್ತರ ಧ್ರುವದ ಮೇಲೆ ಬೋಯಿಂಗ್ 777 ಅನ್ನು ಹಾರಿಸುತ್ತಾ ಇತಿಹಾಸ ನಿರ್ಮಿಸಿದವರು ಇವರು. ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಆಗಮಿಸುವ ವಿಮಾನವು ವಿಶ್ವದ ಅತಿ ಉದ್ದದ ತಡೆರಹಿತ ವಿಮಾನ ಮಾರ್ಗಗಳಲ್ಲಿ ಒಂದಾಗಿದೆ. ಇದನ್ನು ಹಾರಿಸಿರುವ ಕೀರ್ತಿ ಕ್ಯಾಪ್ಟನ್ ಜೋಯಾ ಅವರಿಗೆ ಸಲ್ಲುತ್ತದೆ. ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೂಡ ಇವರು ಪಾತ್ರರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಕ್ಷತ್ರಗಳನ್ನು ಹಿಡಿಯುವ ಪಣ ತೊಟ್ಟಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಕ್ಯಾಪ್ಟನ್ ಜೋಯಾ, ಈಗ ನಾನು ನನ್ನ ಕನಸನ್ನು ನನಸುಮಾಡಿಕೊಂಡಿದ್ದೇನೆ ಎಂದಿದ್ದರು. ನಕ್ಷತ್ರಕ್ಕೆ ಕೈಚಾಚಿ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದರು.
ನೀರಿನ ಮೇಲೆ ಮಲಗಿದ ಯೋಗ ಸಾಧಕ: ಜಲಯೋಗ ನೀವು ಪ್ರಯತ್ನಿಸಬೇಡಿ
ಇಂಥ ಧೀಮಂತ ಮಹಿಳೆ ಕ್ಯಾಪ್ಟನ್ ಜೋಯಾ ಪ್ರಧಾನಿ ಮೋದಿಯವರ (Narendra Modi) ಶ್ಲಾಘನೆ ವ್ಯಕ್ತಪಡಿಸಿ, ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Yoga, the essence of unity and
harmony, celebrated with our honorable Prime Minister of India, ji, sharing the same space as him was an honor and words can't capture the magnitude of his presence and his aura .Yoga
" Unity “For one Earth, one family, and one future pic.twitter.com/LmzrtkdqfS