ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ!

Suvarna News   | Asianet News
Published : Feb 10, 2020, 10:58 AM IST
ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ!

ಸಾರಾಂಶ

ಗೌರಿ ಮದುವೆಯಾದ 8 ವರ್ಷಗಳಲ್ಲಿ 8 ಗರ್ಭ ಕಳೆದುಕೊಂಡಿದ್ದರು. ಮೊದಲ ನಾಲ್ಕು ಗರ್ಭಪಾತವು ಮೊದಲ ತ್ರೈಮಾಸಿಕದಲ್ಲಿ ಮತ್ತು ಉಳಿದ ನಾಲ್ಕು ಗರ್ಭಪಾತವು 7 ರಿಂದ 8 ತಿಂಗಳ ನಡುವೆ ಸಂಭವಿಸಿದ್ದವು. ಹಿಂದಿನ ಗರ್ಭಧಾರಣೆಯಲ್ಲಿ ಆಕೆಗೆ 3-7ತಿಂಗಳ ನಡುವೆ ಗರ್ಭಪಾತವಾದ ಹಿನ್ನಲೆಯಲ್ಲಿ, ಕೊಬ್ಬೊಟ್ಟೆಯ ಮುಖಾಂತರ ಗರ್ಭಕಂಠಕ್ಕೆ ಹೊಲಿಗೆ ಹಾಕಲಾಯಿತು.  

ಡಾ.ದೇವಿಕಾ ಗುಣಶೀಲ
ಸ್ತ್ರೀರೋಗ ಮತ್ತು ಖ್ಯಾತ ಸಂತಾನಫಲ ತಜ್ಞರು

ನಂತರ ಆಕೆಯು 9ನೆಯ ಬಾರಿ ಗರ್ಭಿಣಿಯಾಗಿದ್ದಳು. ಕಿಬ್ಬೊಟ್ಟೆಯ ಮೂಲಕ ಹಾಕಲಾದ ಹೊಲಿಗೆ ಹಾಗೆಯೆ ಇತ್ತು. ಗರ್ಭಾಶಯದಲ್ಲಿ ಭ್ರೂಣವು ನೆಲೆಗೊಳ್ಳುವುದು ನಿಶ್ಚಿತವಾಗುತ್ತದ್ದಂತೆಯೆ ಎಲ್‌ಎಮ್ ಡಬ್ಲ್ಯೂಎಚ್ ಔಷಧಗಳನ್ನು ನೀಡಲು ಆರಂಭಿಸಲಾಯಿತು. ಗರ್ಭಧಾರಣೆಯ 24ನೆಯ ವಾರದಲ್ಲಿ ಆಕೆಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡಿತು. ಆಕೆಗೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವ ಔಷಧಗಳನ್ನು ನೀಡಲಾಯಿತು. ಅಲ್ಲದೇ ಸ್ವಲ್ಪ ಪ್ರಮಾಣದ ಮಧುಮೇಹವು ಪತ್ತೆಯಾಯಿತು.

ಅಪರಾಧಿ ನಾನಲ್ಲ; ಗರ್ಭಪಾತ ನಿರ್ಧಾರದ ಬಗ್ಗೆ ಮಹಿಳೆಗಿಲ್ಲ ಪಶ್ಚತ್ತಾಪ

32ನೆಯ ವಾರದಲ್ಲಿ ನಡು ಮಿದುಳಿನ ಅಪಧಮನಿಯು ಅತಿಯಾದ ರಕ್ತದೊತ್ತಡದ ಕಾರಣದಿಂದ ನಿರೋಧಶಕ್ತಿಯನ್ನು ಕಳೆದುಕೊಳ್ಳುತ್ತಿರುವುದು ತಿಳಿಯಿತು. ಗರ್ಭಿಣಿಗೆ ಸಿಸೇರಿಯನ್ ಕ್ರಿಯೆಯ ಮೂಲಕ ಹೆರಿಗೆ ಮಾಡಿಸಲಾಯಿತು. ಆಕೆ 1.65 ಕೆಜಿ ತೂಕವಿರುವ ಗಂಡು ಮಗುವಿಗೆ ಜನ್ಮನೀಡಿದಳು. ಆಕೆಗೆ ಹಾಕಿದ ಹೊಲಿಗೆಯನ್ನು ಹಾಗೆಯೆ ಬಿಡಲಾಯಿತು. ಮಗು ಮತ್ತು ತಾಯಿ ಆರೋಗ್ಯದಿಂದಿದ್ದಾರೆ. ಗರ್ಭಕಂಠದ ಅಸಮರ್ಥತೆಯಾದರೆ ಗರ್ಭಧಾರಣೆಯ ಸಮಯದಲ್ಲಿ,ಮಗು ಜನಿಸುವ ಸೂಕ್ತ ಸಮಯಕ್ಕಿಂತ ಮೊದಲೇ ಗರ್ಭಕಂಠವು ತೆರೆದುಕೊಳ್ಳಲು ಮತ್ತು ತೆಳುವಾಗಲು ಪ್ರಾರಂಭಿಸುತ್ತದೆ.

ಯಾವಾಗ ದಂಪತಿ IVF ಬಗ್ಗೆ ಯೋಚಿಸಬೇಕು?

ಇದರಿಂದ ಎರಡನೇ ಮತ್ತು ಮೂರನೆ ತ್ರೈಮಾಸಿಕದಲ್ಲಿ ಗರ್ಭಪಾತ ಅಥವಾ ಅವಧಿಮುನ್ನ ಪ್ರಸವಾಗಬಹುದು.ಈ ಸಮಸ್ಯೆ ಇರುವವರಿಗೆ ಗರ್ಭಕಂಠದ ತೆರೆಯುವಿಕೆ ಮತ್ತು ತೆಳ್ಳಗಾಗುವಿಕೆಯು ಯಾವುದೇ ನೋವು ಅಥವಾ ಗರ್ಭಾಶಯದ ಸಂಕೋಚನವಿಲ್ಲದೇ ಆರಂಭವಾಗಬಹುದು. ಗರ್ಭವು ಬೆಳೆದಂತೆ ಮತ್ತು ಭ್ರೂಣದ ತೂಕವು ಹೆಚ್ಚಾದಂತೆಲ್ಲ ಉಂಟಾಗುವ ಅಧಿಕ ಒತ್ತಡದಿಂದ ದುರ್ಬಲವಾದ ಗರ್ಭಕಂಠವು ತೆರೆದುಕೊಳ್ಳುವುದರಿಂದ ಗರ್ಭಕಂಠದ ಅಸಮರ್ಥತೆಯು ಉಂಟಾಗುತ್ತದೆ.

ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

ಈ ಕ್ರಿಯೆಯನ್ನು ತಡೆಗಟ್ಟದಿದ್ದರೆ, ಮಗುವಿನ ಸುತ್ತಲೂ ಇರುವ ನೀರಿನ ಚೀಲವು ಒಡೆದು ಅವಧಿ ಮುನ್ನ ಪ್ರಸವವಾಗಬಹುದು. ಒಮ್ಮೆ ಗರ್ಭಕಂಠದ ಅಸಮರ್ಥತೆ ಪತ್ತೆಯಾದ ನಂತರ ಗರ್ಭಕಂಠದ ಸುತ್ತಲೂ ಅದು ತೆರೆದುಕೊಳ್ಳದಂತೆ ಒಂದು ಅಥವಾ ಹೆಚ್ಚಿನ ಹೊಲಿಗೆ ಹಾಕುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!